ಕ್ಸಯೋಮಿ Mi3 ಕಮಾಲ್ ಭಾರತದಲ್ಲೂ

By Shwetha
|

ತಾನು ಮಾಡುವ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಹೆಚ್ಚಿನ ಹೆಸರನ್ನು ಗಳಿಸಿರುವ ಚೀನಾ ಮೂಲದ ಕ್ಸಯೋಮಿ ಡಿವೈಸ್ ಭಾರತದ ಮಾರುಕಟ್ಟೆಗೆ ಅಡಿಇಡುವ ಪ್ರಯತ್ನವನ್ನು ಮಾಡುತ್ತಿದೆ.

ಭಾರತದಲ್ಲಿ ಕ್ಸಯೋಮಿ ಫೋನ್ ಪ್ರವೇಶವು ಆಸಕ್ತಿಕರವಾಗಿದ್ದು, ಬಳಕೆದಾರರ ಖರೀದಿಗಾಗಿ ತನ್ನ ಭಾರತೀಯ ಸೈಟ್‌ನಲ್ಲಿ ಕಂಪೆನಿಯು Mi3 ಹ್ಯಾಂಡ್‌ಸೆಟ್ ಅನ್ನು ಪಟ್ಟಿ ಮಾಡಿದೆ. ಇನ್ನೊಮ್ಮೆ ಈ ಹ್ಯಾಂಡ್‌ಸೆಟ್‌ನ ವಿಸ್ತೃತ ರೂಪವನ್ನು ನೋಡ ಹೊರಟಾಗ ಡಿವೈಸ್ 5 ಇಂಚಿನ IPS ಡಿಸ್‌ಪ್ಲೇಯೊಂದಿಗೆ ಪೂರ್ಣ HD ರೆಸಲ್ಯೂಶನ್ ಅನ್ನು ಒದಗಿಸುತ್ತಿದೆ. ಇದು ಗೋರಿಲ್ಲಾ ಗ್ಲಾಸ್ ಅನ್ನು ಹೊಂದಿದೆ ಎಂಬುದು ಈ ಫೋನ್‌ಗಿರುವ ಇನ್ನೊಂದು ವಿಶೇಷತೆಯಾಗಿದೆ. ಇದರಲ್ಲಿ 2.3 GHz ಕ್ವಾಡ್ - ಕೋರ್ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್ ಇದ್ದು 2ಜಿಬಿ DDR3 RAM ಅನ್ನು ಡಿವೈಸ್ ಒಳಗೊಂಡಿದೆ.

ಕ್ಸಯೋಮಿ Mi3 ಲಾಂಚ್ ಈವೆಂಟ್ ನೇರ ಪ್ರದರ್ಶನ

ಇದು ಅತ್ಯುತ್ತಮ ಮಟ್ಟದ ಕ್ಯಾಮೆರಾ ಫೀಚರ್‌ಗಳನ್ನು ಒದಗಿಸುತ್ತಿದ್ದು, 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು LED ಫ್ಲ್ಯಾಶ್ ಅನ್ನು ಈ ಡಿವೈಸ್‌ನಲ್ಲಿ ನಿಮಗೆ ಕಾಣಬಹುದಾಗಿದೆ. Sony Exmor BSI ಸೆನ್ಸಾರ್, f/2.2 aperture, 1080p ಪೂರ್ಣ HD ರೆಕಾರ್ಡ್ ಜೊತೆಗೆ 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಹೊಂದಿದೆ. ಈ ಫೋನ್‌ನ ಅಳತೆಯು 114mm×72mm×8.1mm ಇದ್ದು ತೂಕ 145g ಆಗಿದೆ. ಇದರ ಆಂತರಿಕ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು, ಸಂಪರ್ಕ ವ್ಯಸ್ಥೆಗಳೆಂದರೆ 3ಜಿ, ವೈಫೈ 802.11 a/b/g/n (2.4/5 GHz), ವೈಫೈ ಡೈರೆಕ್ಟ್. ಬ್ಲ್ಯೂಟೂತ್ 4.0, GPS, ಮತ್ತು NFC ಯನ್ನು ಫೋನ್ ಒಳಗೊಂಡಿದೆ. ಫೋನ್‌ನ ಬ್ಯಾಟರಿ ಸಾಮರ್ಥ್ಯ 3050mAh ಆಗಿದ್ದು ಕಂಪೆನಿಯು Xiaomi Mi3 ನೊಂದಿಗೆ, Mi3 ಪ್ಯಾಡ್ ಮತ್ತು ಸ್ಮಾರ್ಟ್‌ಫೋನ್ ರೆಡ್ಮೀ 15 ಅನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿದೆ.

ಇದೀಗ ದೆಹಲಿಯಲ್ಲಿ ಈ ಫೋನ್‌ನ ಲಾಂಚಿಂಗ್ ಈವೆಂಟ್ ನಡೆಯುತ್ತಿದ್ದು ಕೆಳಗೆ ನಾವು ನೀಡಿರುವ ವೀಡಿಯೋದಲ್ಲಿ ಉದ್ಘಾಟನೆಯನ್ನು ನೇರವಾಗಿ ನೋಡಬಹುದಾಗಿದೆ.

Best Mobiles in India

Read more about:
English summary
This article tells about that Watch Xiaomi Mi3 launch event live here Webcast.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X