ನೀರಿಗೆ ಎಸೆದರೂ ನಿಮ್ಮ ಮೊಬೈಲ್ ಗೆ ಏನೂ ಆಗುವುದಿಲ್ಲ

Posted By: Staff
ನೀರಿಗೆ ಎಸೆದರೂ ನಿಮ್ಮ ಮೊಬೈಲ್ ಗೆ ಏನೂ ಆಗುವುದಿಲ್ಲ

ನೆನ್ನೆಯಷ್ಟೇ ವಾಟರ್ ಪ್ರೂಫ್ ನೈಕಿ ಬ್ಯಾಂಡ್ ಬಗ್ಗೆ ಓದಿದ ನಿಮಗೆ ಮತ್ತೊಂದು ಒಳ್ಳೆಯ ಸುದ್ದಿ. ನಿಮ್ಮ ಮನೆಯ ಮಗು ಮೊಬೈಲ್ ತೆಗೆದು ನೀರಿನಲ್ಲಿ ಹಾಕಿದರೆ ಅಥವಾ ಮರೆತು ನೀವೇ ಮೊಬೈಲನ್ನು ಸ್ನಾನದ ಮನೆಯಲ್ಲಿ ಬಿಟ್ಟು ಬಂದರೆ, ಹಾಳಾಗುತ್ತೆಂದು ಭಯ ಪಡಬೇಕಾದ ಅವಶ್ಯಕತೆ ಇನ್ಮುಂದೆ ಇರುವುದಿಲ್ಲ.

ಏಕೆಂದರೆ, ಹೆಚ್.ಝೆಡ್.ಓ ವಾಟರ್ ಬ್ಲಾಕ್ ತಂತ್ರಜ್ಞಾನ ಬಂದಿರುವುದೇ ನಿಮ್ಮ ಮೊಬೈಲ್ ಫೋನ್ ನ ರಕ್ಷಣೆಗಾಗಿ. ಇತ್ತೀಚೆಗೆ ನಡೆದ ಸಿ.ಈ.ಸಿ  2012 ನಲ್ಲಿ ಇದು ಪ್ರಮುಖ ಆಕರ್ಷಣೆಯಾಗಿತ್ತು. ಒಳಗಿರುವ ಚಿಪ್ ಗೆ ಯಾವುದೇ ಹಾನಿಯಾಗದಂತೆ ತಡೆಯುವ ಸಾಮರ್ಥ್ಯ ಇದರಲ್ಲಿದ್ದು, ಹವಾಮಾನ ಬದಲಾವಣೆಯಿಂದಲೂ ರಕ್ಷಣೆ ಒದಗಿಸುತ್ತದೆ. ಈಗಾಗಲೇ ಆಪಲ್-5 ಮತ್ತು  ಸ್ಯಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ಗಳು ಈ ತಂತ್ರಜ್ಞಾನವನ್ನ ಅಳವಡಿಸಿಕೊಂಡಿವೆ.

ಇನ್ನು ಸ್ವಲ್ಪ ತಿಂಗಳುಗಳಲ್ಲಿಯೇ ಎಲ್ಲ ಮೊಬೈಲ್ ಗಳಿಗೂ ಇದು ಬರಲಿದ್ದು , ನೀವು ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ ಹಾಡನ್ನು ಮಳೆಯಲ್ಲಿ ನೆನೆಯುತ್ತಲೇ ಕೇಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot