'ಒನ್‌ಪ್ಲಸ್ 6' ಸ್ಮಾರ್ಟ್‌ಫೋನಿನಲ್ಲಿ ಚಿತ್ರಿಸಿರುವ ಚಿತ್ರಗಳನ್ನೊಮ್ಮೆ ನೀವು ನೋಡಲೇಬೇಕು!!

|

ಆಪಲ್ ಕಂಪೆನಿಯ ಐಫೋನ್ ಒಂದು ಬಿಡುಗಡೆಯಾಗುತ್ತಿದೆ ಎಂದರೆ ಮೊಬೈಲ್ ಪ್ರಪಂಚದ ಬೇರಾವ ಸ್ಮಾರ್ಟ್‌ಪೋನ್ ಬಿಡುಗಡೆಯಾದರೂ ಅದರ ಸುದ್ದಿ ಮೂಲೆಗುಂಪಾಗುತ್ತಿತ್ತು. ಆದರೆ, ಐಫೋನಿಗಳಿಗೂ ಸೆಡ್ಡು ಹೊಡೆದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಒಂದು ಸುದ್ದಿ ಮಾಡುತ್ತಿದೆ ಎಂದರೆ ಅದು 'ಒನ್‌ಪ್ಲಸ್' ಕಂಪೆನಿಯ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಮಾತ್ರ.!!

ಹೌದು, ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಭಾರೀ ಹವಾ ಎಬ್ಬಿಸುತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಇನ್ನೇನು ನಾಲ್ಕೇ ದಿವಸಗಳಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದೆ. ಸ್ಮಾರ್ಟ್‌ಫೋನ್ ಹೊಂದಿರುವ ಫೀಚರ್ಸ್‌ಗಳಿಂದ ಈಗಾಗಲೇ ವಿಶ್ವದೆಲ್ಲೆಡೆ ಸುದ್ದಿ ಮಾಡಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಇದೀಗ ಮತ್ತೆ ಕ್ಯಾಮೆರಾ ತಂತ್ರಜ್ಞಾನದಿಂದ ಸುದ್ದಿಯಾಗಿದೆ.!

 ಒನ್‌ಪ್ಲಸ್ 6  ಚಿತ್ರಿಸಿರುವ ಚಿತ್ರಗಳನ್ನೊಮ್ಮೆ ನೀವು ನೋಡಲೇಬೇಕು!!

'ಬ್ಲೈಂಡ್ ಟೆಸ್ಟ್' ಎಂಬ ಹೆಸರಿನಡಿಯಲ್ಲಿ 'ಒನ್‌ಪ್ಲಸ್ 6' ಸ್ಮಾರ್ಟ್‌ಪೋನ್ ಕ್ಯಾಮೆರಾದಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಒನ್‌ಪ್ಲಸ್ ಕಂಪೆನಿ ಪ್ರಕಟಿಸಿದೆ. ಕ್ಯಾಮೆರಾದಲ್ಲಿ ನೀಡಿರುವ ತಂತ್ರಜ್ಞಾನ ಮಾದರಿಗಳನ್ನು ಬಳಸಿ ಈ ಚಿತ್ರಗಳನ್ನು ಚಿತ್ರಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾಗಿ, 'ಒನ್‌ಪ್ಲಸ್ 6' ಕ್ಯಾಮೆರಾ ಚಿತ್ರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ.

ಒನ್‌ಪ್ಲಸ್ ಕ್ಯಾಮೆರಾ ಚಿತ್ರಗಳು!

ಒನ್‌ಪ್ಲಸ್ ಕ್ಯಾಮೆರಾ ಚಿತ್ರಗಳು!

ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಕ್ಯಾಮೆರಾ ಸಾಮರ್ಥ್ಯವನ್ನು ಈ ಪೋಟೋ ಶೂಟ್ ತೋರಿಸುತ್ತಿದ್ದು, DSLR ಕ್ಯಾಮೆರಾಗೂ ಕಡಿಮೆ ಇಲ್ಲದಂತೆ ಫೋಟೋಗಳನ್ನು ಸೆರೆಹಿಡಿದಿದೆ. ಕ್ಯಾಮೆರಾ ಮೊಬೈಲ್ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಜನಪ್ರಿಯತೆಯನ್ನು ಗಳಿಸಿಕೊಳ್ಳಲು ಇದು ಸಹಾಯ ಮಾಡಲಿದೆ.

ಉತ್ತಮ ಗುಣಮಟ್ಟ ಚಿತ್ರಗಳು!!

ಉತ್ತಮ ಗುಣಮಟ್ಟ ಚಿತ್ರಗಳು!!

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಚಿತ್ರಿಸಿರುವ ಎಲ್ಲಾ ಚಿತ್ರಗಳು ಅದ್ಬುತವಾಗಿ ಮೂಡಿಬಂದಿದೆ. ಲೋ ಲೈಟ್, ಲೋ ಲೈಟ್ ಪೊಟ್ರೆಟ್, ಪೊಟ್ರೆಟ್ಹೀಗೆ ಎಲ್ಲಾ ತೆರನಾದ ಚಿತ್ರಗಳನ್ನು ಒನ್‌ಪ್ಲಾಸ್ 6 ಕ್ಯಾಮೆರಾ ಅತ್ಯುತ್ತಮವಾಗಿ ಚಿತ್ರಿಸಿದೆ. ಒನ್‌ಪ್ಲಸ್ ವೆಬ್‌ಸೈಟ್‌ನಲ್ಲಿ 'ಬ್ಲೈಂಡ್ ಟೆಸ್ಟ್' ಎಂಬ ಹೆಸರಿನಡಿಯಲ್ಲಿ ಈ ಚಿತ್ರಗಳನ್ನು ಒನ್‌ಪ್ಲಸ್ ಪ್ರಕಟಿಸಿದೆ.

ಕೃತಕ ಬುದ್ದಿಮತ್ತೆ!!

ಕೃತಕ ಬುದ್ದಿಮತ್ತೆ!!

ಕೃತಕ ಬುದ್ದಿಮತ್ತೆಯನ್ನು ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಬಳಕೆ ಮಾಡಿಕೊಳ್ಳಲಾಗಿದ್ದು, ಬಳಕೆದಾರರಿಗೆ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯವನ್ನು ಮಾಡಲಿದೆ. ಇದು ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ನಡುವೆ ಸರಿಯಾದ ಸಂಪರ್ಕವನ್ನು ಸಾಧಿಸಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲಿದೆ. ಫ್ಯಾಷನ್ ಮ್ಯಾಗ್‌ಜೀನ್ ವೋಗ್ ಕವರ್ ಪೋಟೋ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಡಿಸ್‌ಪ್ಲೇ ನೋಚ್!!

ಡಿಸ್‌ಪ್ಲೇ ನೋಚ್!!

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ದೊಡ್ಡದಾದ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 6.28 ಇಂಚಿನ ಅಮೊಲೈಡ್ ಡಿಸ್‌ಪ್ಲೇ ಇದಾಗಿದೆ. 19:9 ಅನುಪಾತದಿಂದ ಕೂಡಿರಲಿದ್ದು, FHD+ ಗುಣಮಟ್ಟವನ್ನು ಹೊಂದಿರುವ ಸಾಧ್ಯತೆ ಇದೆ. ಗೇಮ್ ಆಡಲು ಮತ್ತು ಗುಣಮಟ್ಟದ ವಿಡಿಯೋವನ್ನು ನೋಡಲು ಹೇಳಿ ಮಾಡಿಸಿದಂತಿರಲಿದೆ. ಅಲ್ಲದೇ ಬೇರೆ ಸ್ಮಾರ್ಟ್‌ಫೋನಿಗಿಂತ ಭಿನ್ನವಾದ ನೋಚ್ ಅನ್ನು ಮುಂಭಾಗದ ಡಿಸ್‌ಪ್ಲೇಯಲ್ಲಿ ನೀಡಿದೆ.

ಫೇಷಿಯಲ್ ರೆಕಗ್ನಿಷನ್:

ಫೇಷಿಯಲ್ ರೆಕಗ್ನಿಷನ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ನಲ್ಲಿ ಫುಲ್‌ ಸ್ಕ್ರಿನ್ ಡಿಸ್‌ಪ್ಲೇಯಲ್ಲಿ ನೋಚ್ ಸಹ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜೊತೆಗೆ ಫೇಸ್‌ ರೆಕಗ್ನೇಷನ್ ಆಯ್ಕೆಯನ್ನು ನೀಡಲಾಗಿದೆ.

ಸ್ನ್ಯಾಪ್‌ಡ್ರಾಗನ್ 845 ಪ್ರೋಸೆಸರ್:

ಸ್ನ್ಯಾಪ್‌ಡ್ರಾಗನ್ 845 ಪ್ರೋಸೆಸರ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 845 ಚಿಪ್‌ ಸೆಟ್‌ನೊಂದಿಗೆ ಕಾಣಿಸಿಕೊಳ್ಳಲಿದ್ದು, 8GB RAM ಜೊತೆಗೆ ಲಭ್ಯವಿರಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ, ಮುಂಭಾಗದಲ್ಲಿ ಫೇಷಿಯಲ್ ರೆಕಗ್ನೇಷನ್ ನೊಂದಿಗೆ ಸೆಲ್ಫಿ ಕ್ಯಾಮೆರಾವನ್ನು ನೋಡಬಹುದಾಗಿದೆ.

ಡ್ಯಾಶ್ ಚಾರ್ಜಿಂಗ್ :

ಡ್ಯಾಶ್ ಚಾರ್ಜಿಂಗ್ :

ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ ವೇಗದ ಇಂಟರ್ನೆಟ್ ಸೇವೆಗಾಗಿ X30 LTE ಮೊಡಮ್ ಅನ್ನು ಅಳವಡಿಸಲಾಗಿದ್ದು, ಇದು ವೇಗದ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸಹಾಯವನ್ನು ಮಾಡಲಿದೆ. ಅಲ್ಲದೇ 3400mAh ಬ್ಯಾಟರಿಯನ್ನು ಹೊಂದಿದ್ದು, ಆಕ್ಸಿಜನ್ OS ನೊಂದಿಗೆ ಡ್ಯಾಶ್ ಚಾರ್ಜಿಂಗ್ ನೊಂದಿಗೆ ಕಾಣಿಸಿಕೊಳ್ಳಲಿದೆ.

ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ
ಒನ್‌ಪ್ಲಸ್‌ 6 ಬೆಲೆ

ಒನ್‌ಪ್ಲಸ್‌ 6 ಬೆಲೆ

ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದ್ದು, 63GB ಆವೃತ್ತಿಯೂ ರೂ.34,999ಕ್ಕೆ ದೊರೆಯಲಿದ್ದು, ಇದೇ ಮಾದರಿಯಲ್ಲಿ 128GB ಆವೃತ್ತಿ ರೂ.39,999ಕ್ಕೆ ಲಭ್ಯವಿರಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಒನ್‌ಪ್ಲಸ್ 5T ಗಿಂತ ಹೆಚ್ಚಿನ ಬೆಲೆ ಹೊಂದಿದೆ ಎನ್ನಲಾಗಿದೆ.

Best Mobiles in India

English summary
Participate in OnePlus 6 ‘Blind test’ and get a chance to win the upcoming flagship smartphone and exciting OnePlus 6 goodies in the lucky draw. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X