Subscribe to Gizbot

ಓಪ್ಪೋ F3 ಪ್ಲಸ್ ಕ್ಯಾಮೆರಾಕ್ಕೆ ಸರಿಸಾಟಿಯೇ ಇಲ್ಲ..!

Written By:

ಕ್ಯಾಮೆರಾ ಫೋನ್ ಎಂಬ ಟ್ಯಾಗ್ ಲೈನ್ ಹೊಂದಿರುವ ಓಪ್ಪೋ ಹೆಸರಿಗೆ ತಕ್ಕಂತೆ ಉತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಫೋಟೋಗ್ರಫಿ ಮತ್ತು ಸೆಲ್ಪಿ ತೆಗೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಓಪ್ಪೋ ಜನ ಮೆಚ್ಚುವ ಕ್ಯಾಮೆರಾ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಓಪ್ಪೋ F3 ಪ್ಲಸ್ ಕ್ಯಾಮೆರಾಕ್ಕೆ ಸರಿಸಾಟಿಯೇ ಇಲ್ಲ..!

ಓಪ್ಪೋ ಬಿಡುಗಡೆ ಮಾಡಿರುವ ಓಪ್ಪೋ F3 ಪ್ಲಸ್ ಸ್ಮಾರ್ಟ್‌ಫೋನಿನ ಕ್ಯಾಮೆರಾ ಮುಂದೆ ಎಂಮ್ ಎಂಡ್ ಶೂಟ್ ಕ್ಯಾಮೆರಾಗಳು ಏನೇನು ಇಲ್ಲ ಎನ್ನಬಹುದಾಗಿದೆ. ಕ್ಯಾಮೆರಾಗಳನ್ನು ಹೊತ್ತುಕೊಂಡು ತಿರುಗಲು ಸಾಧ್ಯವಾಗದ ಕಾರಣದಿಂದ ಓಪ್ಪೋ F3 ಪ್ಲಸ್ ಫೋನಿನಲ್ಲಿ ಬೆಸ್ಟ್ ಹಿಂಬದಿಯ ಕ್ಯಾಮೆರಾ ಮತ್ತು ಉತ್ತಮ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಓಪ್ಪೋ F3 ಪ್ಲಸ್ ಕ್ಯಾಮೆರಾಕ್ಕೆ ಸರಿಸಾಟಿಯೇ ಇಲ್ಲ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಓಪ್ಪೋ F3 ಪ್ಲಸ್ ಪೋನಿನಲ್ಲಿ ಸೆಲ್ಪಿಗೆ ಹೆಚ್ಚಿನ ಮಹತ್ವ:

ಓಪ್ಪೋ F3 ಪ್ಲಸ್ ಪೋನಿನಲ್ಲಿ ಸೆಲ್ಪಿಗೆ ಹೆಚ್ಚಿನ ಮಹತ್ವ:

ಸದ್ಯ ಜಗತ್ತಿನಲ್ಲಿರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನವು ಸೆಲ್ಪಿ ತೆಗೆದುಕೊಳ್ಳಲೇ ಬಳಕೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ಓಪ್ಪೋ ತನ್ನ ಓಪ್ಪೋ F3 ಪ್ಲಸ್ ಪೋನಿನಲ್ಲಿ ಸೆಲ್ಪಿಗೆ ಹೆಚ್ಚಿನ ಮಹತ್ವವನ್ನು ನೀಡಿದೆ. ಇದರೊಂದಿಗೆ ಹಿಂಬದಿಯ ಕ್ಯಾಮೆರಾವನ್ನು ಉತ್ತಮ ಪಡಿಸಿದ್ದು, ಹೆಚ್ಚಿನ ಆಯ್ಕೆಗಳು ಮತ್ತು ಫಿಲ್ಟರ್‌ಗಳನ್ನು ನೀಡಿದೆ. ಇದರಿಂದಾಗಿ ಓಪ್ಪೋ F3 ಪ್ಲಸ್ ನಲ್ಲಿ ತೆಗೆಯುವ ಫೋಟೋಗಳು ಉತ್ತಮ ಗುಣಮಟ್ಟದಿಂದ ಕೂಡಿರಲಿದೆ.

ಮುಂಭಾಗದಲ್ಲಿ 16 MPಯ ಡ್ಯುಯಲ್ ಕ್ಯಾಮೆರಾ:

ಮುಂಭಾಗದಲ್ಲಿ 16 MPಯ ಡ್ಯುಯಲ್ ಕ್ಯಾಮೆರಾ:

ಸೆಲ್ಫಿಗೆ ಹೆಚ್ಚಿನ ಮಹತ್ವವನ್ನು ಓಪ್ಪೋ F3 ಪ್ಲಸ್ ಫೋನಿನಲ್ಲಿ ನೀಡಲಾಗಿದ್ದು, ಇದಕ್ಕಾಗಿಯೇ ಮುಂಭಾಗದಲ್ಲಿ 16 MPಯ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಿದೆ. 120 ಡಿಗ್ರೀ ವೈಡ್ ಆಗಲ್ ಲೈನ್ಸ್ ಇದರಲ್ಲಿದೆ. ಒಂದು ಗ್ರೂಪ್ ಸೆಲ್ಫಿ ತೆಗೆದುಕೊಳ್ಳಲು ಸಹಾಯಕಾರಿಯಾದರೆ, ಇನ್ನೊಂದು ಸಿಂಗಲ್ ಸೆಲ್ಫಿಗಾಗಿಯೇ ಇದೆ. ಈ ಡ್ಯುಯಲ್ ಕ್ಯಾಮೆರಾಗಳು ಫೋಟೋ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೇ ಕ್ಲಿಯರ್ ಆಗಿ ಮಾಡುತ್ತದೆ.

6 ಇಂಚಿನ ಫುಲ್ HD ಡಿಸ್‌ಪ್ಲೇ:

6 ಇಂಚಿನ ಫುಲ್ HD ಡಿಸ್‌ಪ್ಲೇ:

ಈ ಫೋನಿನಲ್ಲಿರುವ 6 ಇಂಚಿನ ಫುಲ್ HD ಡಿಸ್‌ಪ್ಲೇ ತುಂಬ ಬ್ರೈಟ್ ಆಗಿದ್ದು, ವಿವೀಡ್ ಕಲರ್ ಟೋನ್ ಹೊಂದಿದೆ. ಇದು ಕಂಪ್ಯೂಟರ್ ಪರದೆ ಮಾದರಿಯಲ್ಲಿದ್ದು, ನೀವು ತೆಗೆಯುವ ಚಿತ್ರಗಳನ್ನು ಇದು ಸುಂದರವಾಗಿ ತೋರಿಸಲಿದೆ. ಇದು ನಿಮ್ಮ ಸೆಲ್ಫಿಯಲ್ಲಿ ನಿಮ್ಮನ್ನು ಮತ್ತು ಬ್ಯಾಕ್ಸ್ ಗ್ರೌಂಡ್ ಅನ್ನು ಬೇರ್ಪಡಿಸಿ ತೋರಿಸಲು ಸಹಕಾರಿಯಾಗಿದೆ.

ಬ್ಯೂಟಿಫೈ 4.0:

ಬ್ಯೂಟಿಫೈ 4.0:

ಒಳ್ಳೆಯ ಸೆಲ್ಫಿ ತೆಗೆಯುವ ಸಲುವಾಗಿಯೇ ಬ್ಯೂಟಿಫೈ 4.0 ಸಾಫ್ಟ್‌ವೇರ್ ಅಳವಡಿಸಲಾಗಿದ್ದು, ಇದು ನೀವು ತೆಗೆಯುವ ಸೆಲ್ಫಿಯನ್ನು ಮತ್ತಷ್ಟು ಸುಂದರಗೊಳಿಸಲಿದೆ. ಇದು ಕ್ಲಿಯರ್ ಸ್ಕೀನ್ ತೋರಿಸಲಿದೆ. ಈ ಹೊಸ ಟೆಕ್ನಾಲಜಿಯಲ್ಲಿ ತೆಗೆದ ಚಿತ್ರಗಳು ಸುಂದರವಾಗಿ ಮತ್ತು ಆಕರ್ಷಕವಾಗಿರಲಿದೆ.

16 MP ಹಿಂಬದಿ ಕ್ಯಾಮೆರಾ:

16 MP ಹಿಂಬದಿ ಕ್ಯಾಮೆರಾ:

16 MPಯ ಹಿಂಬದಿಯ ಕ್ಯಾಮೆರಾವೂ ಸಹ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಸೋನಿಯ ಸೆನ್ಸಾರ್‌ಗಳನ್ನು ಹೊಂದಿದೆ. ಅಪರ್ಚರ್ ಹೊಂದಾಣಿಕೆ ಮಾಡಿಕೊಳ್ಳಬಹುದಾಗಿದ್ದು, ಇದು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕಾರಿಯಾಗಿದೆ.

ಡಿಎಸ್‌ಎಲ್ ಆರ್ ಕ್ಯಾಮೆರಾ ಮಾದರಿಯ ಚಿತ್ರಗಳು:

ಡಿಎಸ್‌ಎಲ್ ಆರ್ ಕ್ಯಾಮೆರಾ ಮಾದರಿಯ ಚಿತ್ರಗಳು:

ಡಿಎಸ್‌ಎಲ್ ಆರ್ ಕ್ಯಾಮೆರಾ ಮಾದರಿಯಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ಇದು ಶಕ್ತವಾಗಿದೆ. ಇದರಲ್ಲಿ ಫೋಟೋಗಳನ್ನು ತೆಗೆಯುವ ಸಲುವಾಗಿ ಅನೇಕ ಮೋಡ್ ಗಳನ್ನು ನೀಡಲಾಗಿದೆ. ಇದರಲ್ಲಿ ISO ಸಹ ಬದಲಾವಣೆ ಮಾಡಬಹುದಾಗಿದೆ. ಇದರಲ್ಲಿರುವ ಆಲ್ಟ್ರಾ ಹೆಚ್‌ಡಿ ಮೋಡ್ 50 MP ಚಿತ್ರಗಳನ್ನ ಸೆರೆಹಿಡಿಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
We tested the OPPO F3 Plus camera performance in multiple light conditions and the images come out to be crisp, vibrant with accurate colour tones. Check the camera samples below. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot