ಸ್ನೇಹಿತರಿಗೆ ಸ್ಟಿಕ್ಕರ್ ಕಳುಹಿಸಿ ರೀಚಾರ್ಜ್ ಪಡೆಯಿರಿ

Written By:

ರಕ್ಷಾ ಬಂಧನವನ್ನು ಇನ್ನಷ್ಟು ಮಹತ್ವಪೂರ್ಣವನ್ನಾಗಿಸುವ ನಿಟ್ಟಿನಲ್ಲಿ, ತನ್ನ ಬಳಕೆದಾರರಿಗೆ ವಿಚಾಟ್ "ಫ್ರೆಂಡ್ಸ್ ಎನ್ ರಿವಾರ್ಡ್ಸ್" ಎಂಬ ವೈಶಿಷ್ಟ್ಯಪೂರ್ಣ ಅಂಶವನ್ನು ಪ್ರಾರಂಭಿಸಿದೆ. ಇದರ ಮೂಲಕ ನೀವು 60 ರೂಪಾಯಿಗಳ ರೀಚಾರ್ಜ್ ಅನ್ನು ಪಡೆದುಕೊಳ್ಳಬಹುದಾಗಿದ್ದು, ಇದಕ್ಕೆ ನೀವ ವಿಚಾಟ್‌ನಲ್ಲಿ ನಿಮ್ಮ ಪ್ರೀತಿ ಮತ್ತು ಆತ್ಮೀಯತೆಯನ್ನು ಸ್ನೇಹಿತರು ಮತ್ತು ಕುಟಂಬದವರಿಗೆ ಪ್ರದರ್ಶಿಸಬೇಕು.

ಫ್ರೆಂಡ್ಸ್ ವಿ ಚಾಟ್‌ನ ಅನನ್ಯ ಸ್ಟಿಕ್ಕರ್ ಅನ್ನು ಗುಂಪಿನ ಮೂಲಕ ನೀವು ಕಳುಹಿಸಬೇಕು ಇದರಿಂದ ರೀಚಾರ್ಜ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಫ್ರೆಂಡ್ಸ್ ಎನ್ ರಿವಾರ್ಡ್ಸ್ ನ ಆರಂಭವು ಈಗಾಗಲೇ ಶುರುವಾಗಿದ್ದು ಆಗಸ್ಟ್ 13 ರವರೆಗೆ ನಿಮಗೆ ಲಭ್ಯವಿದೆ. ವಿಚಾಟ್ ತಂಡದ ಅಧಿಕೃತ ಖಾತೆಗೆ ಹೋಗಿ ಇದರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಬಳಕೆದಾರರಿಗೆ ಪಡೆದುಕೊಳ್ಳಬಹುದಾಗಿದೆ.

ವಿ ಚಾಟ್‌ನಿಂದ ಉಚಿತ ರೀಚಾರ್ಜ್ ಅನನ್ಯ ಕೊಡುಗೆ

ತ್ವರಿತ ಸಂದೇಶಿಸುವಿಕೆ ಅಪ್ಲಿಕೇಶನ್‌ನಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿರುವ ವಿ ಚಾಟ್‌ನ ಮೊಬೈಲ್ ಪಠ್ಯ ಹಾಗೂ ಧ್ವನಿ ಸಂದೇಶಿಸುವಿಕೆ ಸಂವಹನ ಸೇವೆಯನ್ನು ಚೀನಾದ ಟೆನ್ಸೆಂಟ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಇದು ತಿಂಗಳ ಸಕ್ರಿಯ ಬಳಕೆದಾರರನ್ನು ಹೊಂದಿದ್ದು ಅತೀ ದೊಡ್ಡದಾಗಿರುವ ತ್ವರಿತ ಸಂದೇಶಿಸುವಿಕೆ ಅಪ್ಲಿಕೇಶನ್ ಆಗಿದೆ.

ಇನ್ನೂ ಹೆಚ್ಚು ಹೇಳಬೇಕೆಂದರೆ ಈ ಅಪ್ಲಿಕೇಶನ್ ಆಂಡ್ರಾಯ್ಡ್, ಐಫೋನ್, ಬ್ಲ್ಯಾಕ್‌ಬೆರ್ರಿ, ವಿಂಡೋಸ್ ಫೋನ್ ಮತ್ತು ಸಿಂಬಿಯನ್ ಫೋನ್‌ಗಳಲ್ಲಿ ಲಭ್ಯವಿದೆ. 2013 ರವರೆಗೆ, ವಿ ಚಾಟ್ 300 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು ಚೀನಾದ ಹೊರಗೆ ಇದರ ಬಳಕೆದಾರರ ಸಂಖ್ಯೆ 70 ಮಿಲಿಯನ್ ಆಗಿದೆ.

ಕಳೆದ ತಿಂಗಳಷ್ಟೇ, ಆಂಡ್ರಾಯ್ಡ್‌ಗಾಗಿ ವಿ ಚಾಟ್ ಸಂದೇಶ ರಿಕಾಲ್ (ಹಿಂಪಡೆ) ಬೆಂಬಲವನ್ನು ಒದಗಿಸಿದ್ದು ಇದರಿಂದ ನೀವು ಕಳಸಿರುವ ಯಾವುದೇ ಸಂದೇಶವನ್ನು ಎರಡು ನಿಮಿಷಗಳ ಒಳಗಾಗಿ ಹಿಂಪಡೆಯಬಹುದಾಗಿದೆ. ಇದು 1GB ಕ್ಲೌಡ್ ಸಂಗ್ರಹಣೆ ಸೇವೆಯನ್ನು ಒದಗಿಸುತ್ತಿದೆ.

<center><iframe width="100%" height="360" src="//www.youtube.com/embed/vbAl_N0Jo4g" frameborder="0" allowfullscreen></iframe></center>

Read more about:
English summary
This article tells about WeChat Offer Get Up To Rs 60 Free Recharge By Sending Stickers to Friends.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot