Home
ಮೊಬೈಲ್

Vivo X ಫೋಲ್ಡ್‌ 3 ಪ್ರೊ ಮತ್ತು OnePlus ಓಪನ್‌ ಫೀಚರ್ಸ್ ಭಿನ್ನತೆಗಳೇನು? ಯಾವುದು ಬೆಸ್ಟ್‌?

ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ವಿವೋ ಸಂಸ್ಥೆ ಭಾರತದಲ್ಲಿ ತನ್ನ ಮೊದಲ ಮಡಚಬಹುದಾದ (Foldable) ಫೋನ್‌ ಆಗಿರುವ Vivo X Fold 3 Pro ಅನ್ನು ಬಿಡುಗಡೆ ಮಾಡಿದೆ, ಇದು 1,59,999 ರೂ. ಬೆಲೆಯೊಂದಿಗೆ ಲಭ್ಯವಿದೆ. ಈ ಫೋನ್‌ ಮಾರುಕಟ್ಟೆಯಲ್ಲಿ ಗ್ಯಾಲಕ್ಸಿ ಫೋಲ್ಡ್‌ 5 ಹಾಗೂ ಒನ್‌ಪ್ಲಸ್‌ ಓಪೆನ್‌ ಫೋನ್‌ಗಳ ಜೊತೆಗೆ ಪೈಪೋಟಿ ನಡೆಸಲಿದೆ. ಅದಾಗ್ಯೂ, ಬೆಲೆಯನ್ನು ಗಮನಿಸಿದಾಗ ಈ ಮೊಬೈಲ್‌ ಒನ್‌ಪ್ಲಸ್‌ ಓಪೆನ್‌ ಫೋನ್‌ ಜೊತೆಗೆ ನೇರವಾಗಿ ಸ್ಪರ್ಧೆ ಮಾಡುವಂತಿದೆ. ಹಾಗಾದರೇ, ವಿವೋ X ಫೋಲ್ಡ್‌ 3 ಪ್ರೊ ಹಾಗೂ ಒನ್‌ಪ್ಲಸ್‌ ಓಪೆನ್‌ ಈ ಎರಡು ಫೋನ್‌ಗಳ ಫೀಚರ್ಸ್‌ ಏನು? ಭಿನ್ನತೆಗಳು ಏನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ

OnePlus Open ಹಾಗೂ Vivo X Fold 3 Pro ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌:

ಒನ್‌ಪ್ಲಸ್ ಓಪನ್ ಇದು 7.81 ಇಂಚಿನ 2K ಅಮೋಲ್ಡ್‌ LTPO ಪ್ಯಾನೆಲ್, 120Hz ರಿಫ್ರೆಶ್ ರೇಟ್, 2800 nits, 426ppi, 2268×2440 ರೆಸಲ್ಯೂಶನ್, ಅಲ್ಟ್ರಾ ಥಿನ್ ಗ್ಲಾಸ್ ಒಳಗಿನ ಡಿಸ್‌ಪ್ಲೇ ಹೊಂದಿದೆ. 6.31 ಇಂಚಿನ 2K AMOLED LTPO ಪ್ಯಾನೆಲ್, 120Hz ರಿಫ್ರೆಶ್ ರೇಟ್, 2800 nits, 431ppi, 1116×2484 ರೆಸಲ್ಯೂಶನ್ ಹಾಗೂ ಸೆರಾಮಿಕ್ ಗಾರ್ಡ್ ಕವರ್‌ ಡಿಸ್‌ಪ್ಲೇ ಹೊಂದಿದೆ. ಜೊತೆಗೆ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಚಿಪ್‌ಸೆಟ್ ಮೂಲಕ ಕೆಲಸ ನಿರ್ವಹಿಸಲಿದೆ.

ವಿವೋ X ಫೋಳ್ಡ್ 3 PRO ಇದು 8.03 ಇಂಚಿನ 2K ಅಮೋಲ್ಡ್‌ LTPO ಪ್ಯಾನೆಲ್, 120Hz ರಿಫ್ರೆಶ್ ರೇಟ್, 4500 nits, 413ppi, 2200×2480 ರೆಸಲ್ಯೂಶನ್, ಸೂಪರ್ ಟೆನ್ಸಿಲ್ UTG ಒಳಗಿನ ಡಿಸ್‌ಪ್ಲೇ ಹೊಂದಿದ್ದರೆ, 6.53-ಇಂಚಿನ 2K ಅಮೋಲ್ಡ್‌ LTPO ಪ್ಯಾನೆಲ್, 120Hz ರಿಫ್ರೆಶ್ ರೇಟ್, 4500 nits, 457ppi, 1172×2748 ರೆಸಲ್ಯೂಶನ್, ಆರ್ಮರ್ ಗ್ಲಾಸ್ ಹೊಂದಿರುವ ಕವರ್ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 3 SoC ಚಿಪ್‌ಸೆಟ್ ನಿಂದ ಕಾರ್ಯನಿರ್ವಹಿಸಲಿದೆ.

Vivo X ಫೋಲ್ಡ್‌ 3 ಪ್ರೊ ಮತ್ತು OnePlus ಓಪನ್‌ ಫೀಚರ್ಸ್ ಭಿನ್ನತೆಗಳೇನು?

ಒನ್‌ಪ್ಲಸ್ ಓಫನ್ ಇದು ತೆರೆದಾಗ 153.4 x 143.1 x5.8 ಮಿಮೀ ಡೈಮೆನ್ಶನ್‌ ಹೊಂದಿದ್ದರೆ, ಮಡಚಿರುವಾಗ: 153.4 x 73.3 x 11.7 ಮಿಮೀ ಡೈಮೆನ್ಶನ್ ಹೊಂದಿರಲಿದೆ ಹಾಗೂ ವಿವೋ X ಫೋಲ್ಡ್ 3 PRO ಸ್ಮಾರ್ಟ್‌ಫೋನ್ ಓಪನ್‌ ಮಾಡಿದಾಗ 160 x 142.4 x 5.2 ಮಿಮೀ ಹಾಗೂ ಮಡಚಿದ ಸ್ಥಿತಿಯಲ್ಲಿ 160 x 72.6 x 11.2 ಮಿಮೀ ಡೈಮೆನ್ಶನ್ ಹೊಂದಿರಲಿದೆ. ಇನ್ನು ಒನ್‌ಪ್ಲಸ್ ಓಪನ್ ಮೊಬೈಲ್‌ ಇದು 239 ಅಥವ 245 ಗ್ರಾಂ ತೂಕ ಹೊಂದಿದೆ, ಆದರೆ ವಿವೋ X ಫೋಲ್ಡ್ 3 PROಕೇವಲ 236 ಗ್ರಾಂ ತೂಕ ಹೊಂದಿದೆ.

ಕ್ಯಾಮೆರಾ:

ONEPLUS OPEN ಇದು 1/1.43 ಇಂಚಿನ ಸೋನಿLYTIA-T808 ಪಿಕ್ಸೆಲ್ ಸ್ಟ್ಯಾಕ್ಡ್ ಸೆನ್ಸಾರ್ ಜೊತೆಗೆ 48MP OIS ವೈಡ್, 64MP 3x ಟೆಲ್‌ಫೋಟೋ, 48MP ಅಲ್ಟ್ರಾವೈಡ್ ರಿಯರ್ ಕ್ಯಾಮೆರಾ ಹೊಂದಿದೆ, ಸೆಲ್ಫಿಗಾಗಿ ಇದು 20MP ವೈಡ್ ಹಾಗೂ 32MP EIS ಕವರ್ ಕ್ಯಾಮೆರಾ ಹೊಂದಿದೆ. 4K at 60fps ವಿಡಿಯೋ ಶೂಟಿಂಗ್ ಕ್ಯಾಮೆರಾ ಹೊಂದಿದೆ.

Vivo X Fold 3 Pro ಇದು ಮೂರು ZEISS ಆಪ್ಟಿಕ್ಸ್ ಬೆಂಬಲಿತ ಸೆನ್ಸಾರ್‌ ಜೊತೆಗೆ ದೊಡ್ಡ ಕ್ಯಾಮೆರಾ ಮಾಡ್ಯೂಲ್ ಅನ್ನು ಒಳಗೊಂಡಿದೆ. 50MP OIS ವೈಡ್, 64MP 3x ಟೆಲಿಫೋಟೋ, 50MP ಅಲ್ಟ್ರಾವೈಡ್ ರಿಯರ್ ಕ್ಯಾಮೆರಾ ಹೊಂದಿದೆ. ಸೆಲ್ಫಿಗಾಗಿ ಇದು 20MP ವೈಡ್ ಹಾಗೂ 32MP EIS ಕವರ್ ಕ್ಯಾಮೆರಾ ಹೊಂದಿದೆ. 8K at 30fps ವಿಡಿಯೋ ಶೂಟಿಂಗ್‌ ಕ್ಯಾಮೆರಾ ಜೋಡಿಸಲಾಗಿದೆ.

ಬ್ಯಾಟರಿ ಹಾಗೂ ಸ್ಟೋರೇಜ್ ಸಾಮರ್ಥ್ಯ:

ಒನ್‌ಪ್ಲಸ್ ಓಪನ್ ಈ ಸ್ಮಾರ್ಟ್‌ಫೋನ್ 67W ಚಾರ್ಜಿಂಗ್‌ ಬಲದೊಂದಿಗೆ 4,805mAh ಬ್ಯಾಟರಿ ಸೌಲಭ್ಯ ಹೊಂದಿದೆ. ಇನ್ನೂ ವಿವೋ ಫೋಲ್ಡ್‌ ಮೊಬೈಲ್ 100W ವೈಯರ್ಡ್‌ ಹಾಗೂ 50W ವೈಯರ್‌ಲೆಸ್‌ ಚಾರ್ಜರ್‌ ಜೊತೆಗೆ 5,700mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಸ್ಟೋರೇಜ್ ವಿಷಯದಲ್ಲಿ ಎರಡೂ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಕೂಡ 16GB LPDDR5X RAM/ 512GB UFS 4.0 ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿವೆ.

ಬೆಲೆ:

ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಗಮನಿಸುವುದಾದರೆ, OnePlus Open ಇದರ 16GB RAM/ 512GB ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್‌ನ ಬೆಲೆ 1,39,999 ರೂ. ಗಳಾಗಿವೆ. ಇನ್ನೂ Vivo X Fold 3 Pro ಇದರ 16GB RAM/ 512GB ಸ್ಟೋರೇಜ್ ಸಾಮರ್ಥ್ಯದ ವೇರಿಯಂಟ್‌ನ ಬೆಲೆ 1,59,999 ರೂ. ಗಳಾಗಿವೆ.

ಈ ಎರಡು ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳ ಫೀಚರ್ಸ್ ಕ್ಯಾಮೆರಾ ಬೆಲೆಯನ್ನು ಗಮನಿಸಿ ನೋಡುವುದಾದರೆ, Vivo X Fold 3 Pro ಹಾರ್ಡ್‌ವೇರ್ ವಿಶೇಷಣಗಳ ವಿಷಯದಲ್ಲಿ OnePlus ಓಪನ್‌ಗಿಂತ ಸ್ವಲ್ಪ ಎಡ್ಜ್‌ ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಇದರ ಹೊರತಾಗಿಯೂ ಇದು ಸದ್ಯ ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಮಡಚಬಹುದಾದ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. OnePlus Open ಕಡಿಮೆ ಬೆಲೆಯಲ್ಲಿ ಕೊಡುವ ಹಣಕ್ಕೆ ಹೆಚ್ಚು ನ್ಯಾಯ ಒದಗಿಸಲಿದೆ. ಇದು Vivo X Fold 3 Pro ಗಿಂತ ಹೆಚ್ಚಿನ ಸಾಫ್ಟ್‌ವೇರ್ ಅಪ್ಡೇಟ್‌ಗಳನ್ನು ಹೊಂದಿರಲಿದೆ. ಜೊತೆಗೆ ಒನ್‌ಪ್ಲಸ್ ಸೆಲ್ಫಿ ಕ್ಯಾಮೆರಾ ಜೊತೆಗೆ EIS ಅನ್ನು ನೀಡುತ್ತದೆ.

Best Mobiles in India

English summary
Read this article to know which is the best smartphone you can buy between the two foldable smartphones Vivo X Fold 3 Pro and OnePlus Open.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+