ಆಪಲ್ ಡ್ಯುಯಲ್ e-SIM ಕಾರ್ಡ್: ಏನೀದು ಸಿಮ್ ಇಲ್ಲದ ತಂತ್ರಜ್ಞಾನ....!
ಪ್ರತಿ ಬಾರಿ ಮಾರುಕಟ್ಟೆಯಲ್ಲಿ ಲಾಂಚ್ ಆಗುವ ಐಪೋನ್‌ಗಳು ಹೊಸದೊಂದು ವಿಶೇಷತೆಯನ್ನು ಹೊಂದಿರುವುದನ್ನು ನಾವು ನೋಡಬಹುದಾಗಿದೆ. ಇದೇ ಮಾದರಿಯಲ್ಲಿ ಮೊನ್ನೆ ತಾನೆ ಮಾರುಕಟ್ಟೆಗೆ ಕಾಲಿಟ್ಟಿ ಆಪಲ್ ಐಫೋನ್ Xs, ಐಫೋನ್ Xs ಮ್ಯಾಕ್ಸ್ ಹಾಗೂ ಐಫೋನ್ Xr ಗಳು ಡ್ಯುಯಲ್ ಸಿಮ್ ಹಾಕಿಕೊಳ್ಳುವ ಹೊಸ ಅವಕಾಶವನ್ನು ಆಪಲ್ ಬಳಕೆದಾರರಿಗೆ ಮಾಡಿಕೊಟ್ಟಿತ್ತು. ಅದುವೇ ಸದ್ಯ ಆಂಡ್ರಾಯ್ಡ್ ಫೋನ್‌ಗಳಲ್ಲಿ ಇರುವುದಕ್ಕಿಂತ ಭಿನ್ನ ಮಾದರಿಯಲ್ಲಿ.

ಆಪಲ್ ಕಂಪನಿಯು ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮೊದಲ ಬಾರಿಗೆ ಡ್ಯುಯಲ್ ಸಿಮ್ ಐಫೋನ್ ಗಳನ್ನು ಬಿಡುಗಡೆ ಮಾಡಿರುವುದು ಹೊಸ ಕ್ರಾಂತಿಕಾರಕ ಬದಲಾವಣೆ ಎನ್ನಲಾಗಿದೆ. ಆಪಲ್ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಡ್ಯುಯಲ್ ಸಿಮ್ ಕಾರ್ಡ್ ಐಫೋನ್ ಹೊಸ ಮಾದರಿಯ ಕಾನ್ಸೆಪ್ಟ್ ಅನ್ನು ಹೊಂದಿದೆ. ಈ ಕುರಿತ ಮಾಹಿತಿಯೂ ಮುಂದಿದೆ.

ಎರಡು ಮಾದರಿಯ ಡ್ಯುಯಲ್ ಸಿಮ್:
ಆಪಲ್ ಐಫೋನ್ Xs ಮತ್ತು ಐಫೋನ್ Xs ಮ್ಯಾಕ್ಸ್ ನಲ್ಲಿ ಕಾಣಿಸಿಕೊಂಡಿರುವ ಸ್ಮಾರ್ಟ್ ಡ್ಯುಯಲ್ ಸಿಮ್ ಕಾರ್ಡ್ ಎನ್ನಬಹುದಾಗಿದೆ. ಒಟ್ಟು ಎರಡು ಮಾದರಿಯಲ್ಲಿ ಡ್ಯುಯಲ್ ಸಿಮ್ ಹಾಕುವ ಐಫೋನ್ ಲಾಂಚ್ ಆಗಿದ್ದು, ಒಂದು ಚೀನಾದಲ್ಲಿ ಮಾತ್ರವೇ ಮಾರಾಟವಾಗಲಿರುವ ಡ್ಯುಯಲ್ ಸಿಮ್ ಟ್ರೈ ಹೊಂದಿರುವ ಐಫೋನ್ ಹಾಗೂ ಬೇರೆ ಕಡೆಗಳಲ್ಲಿ ಲಾಂಚ್ ಆಗಲಿರುವ e-SIM ಕಾರ್ಡ್ ಐಫೋನ್, ಇವರೆಡರ ಕುರಿತು ಮಾಹಿತಿ ಮುಂದಿದೆ.

ಡಿಜಿಟಲ್ ಸಿಮ್:
ಆಪಲ್ ಐಫೋನ್ Xs, ಐಫೋನ್ Xs ಮ್ಯಾಕ್ಸ್ ಹಾಗೂ ಐಫೋನ್ Xr ಗಳಲ್ಲಿ ನೀವು ಒಂದು ನಾರ್ಮಲ್ ನ್ಯಾನೋ ಸಿಮ್ ಕಾರ್ಡ್ ಮತ್ತು e-SIM ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿದೆ. ಇದರಲ್ಲಿ ಒಂದು ಸಿಮ್ ಕಾರ್ಡ್ ಅನ್ನು ನಾವು ನೋಡಬಹುದು. ಆದರೆ ಇ-ಸಿಮ್ ಕಾರ್ಡ್ ಗಳನ್ನು ನೋಡಲು ಸಾಧ್ಯವಿಲ್ಲ. ಇನ್ನೊಂದು ಡಿಜಿಟಲ್ ಮಾದರಿಯ ಸಿಮ್ ಆಗಿರುತ್ತದೆ.

e-SIM ಕಾರ್ಡ್ ಎಂದರೆ..?
e-SIM ಕಾರ್ಡ: ಎಂಬೆಡೆಡ್ ಸಬ್‍ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್. ಇದು ಮ್ಯಾನುವಲ್ ಸಿಮ್ ರೀತಿಯಂತೆ ಕಾರ್ಯನಿರ್ವಹಿಸಲಿದ್ದು, ಸದ್ಯ ಇದನ್ನು ಆಪಲ್ ಲಾಂಚ್ ಮಾಡಿರುವ ಆಪಲ್ ವಾಚ್ ಗಳಲ್ಲಿ ಬಳಕೆ ಮಾಡಿಕೊಳ್ಳುತ್ತಿದೆ. ಆಪಲ್ ವಾಚ್ 3ರಲ್ಲಿ ಈ ಹೊಸ ಮಾದರಿಯ ಸೇವೆಯನ್ನು ನೀಡಲಾಗಿತ್ತು.

ಸಿಮ್ ಬೇಕಾಗಿಲ್ಲ:
e-SIM ಕಾರ್ಡ್‌ಗೆ ಯಾವುದೇ ಸಿಮ್‍ಗಳ ಅವಶ್ಯಕತೆ ಇರುವುದಿಲ್ಲ. ಬದಲಾಗಿ ಸಿಮ್ ಕಾರ್ಡ್ ನಲ್ಲಿ ಇರುವ ಕೋರ್ಡ್ ವೊಂದನ್ನು ಸ್ಕ್ಯಾನ್ ಮಾಡುವ ಮೂಲಕ ಬಳಕೆ ಮಾಡಬಹುದಾಗಿದೆ. ಒಂದು ಸಾಮಾನ್ಯ ಸಿಮ್ ಸ್ಲಾಟ್ ಇದ್ದೇ ಇರುತ್ತದೆ. ಇದರ ಜೊತೆ e-SIM ಕಾರ್ಡ್ ಇನ್ನೊಂದು ನೆಟ್‍ವರ್ಕ್‍ನ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಜಿಯೋ - ಏರ್‌ಟೆಲ್:
ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ e-SIM ಕಾರ್ಡ್ ನೀಡುವ ಟೆಲಿಕಾಂ ಕಂಪನಿಗಳೇಂದರೆ ಜಿಯೋ ಮತ್ತು ಏರ್ಟೆಲ್ ಮಾತ್ರವೇ, ಹೀಗಾಗಿ ನೀವು ಡ್ಯುಯಲ್ ಸಿಮ್ ಐಫೋನ್ ತೆಗದುಕೊಂಡರೆ ಈ ಎರಡು ನೆಟ್‌ವರ್ಕ್‌ಗಳನ್ನು ಮಾತ್ರವೇ ಎರಡನೇ ಸಿಮ್‌ಗೆ ಸಪೋರ್ಟ್ ಮಾಡಲಿವೆ.

ಸಮಸ್ಯೆ ಇಲ್ಲ:
e-SIM ಕಾರ್ಡ್ ತಂತ್ರಜ್ಞಾನಕ್ಕೆ ಭಾರತದ ಕಂಪೆನಿಗಳು ಕೈಜೋಡಿಸಿದ್ದು, ಈಗಾಗಲೇ ಜಿಯೋ ಹಾಗೂ ಏರ್‌ಟೆಲ್ ಕಂಪೆನಿಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಹೀಗಾಗಿ ಭಾರತದಲ್ಲಿನ e-SIM ಕಾರ್ಡ್ ಫೋನ್‍ಗಳಿಗೆ ಯಾವುದೇ ಸಮಸ್ಯೆ ಇರುವುದಿಲ್ಲ.

ಅಮೇರಿಕಾದಲ್ಲಿ ಮಾತ್ರ:
e-SIM ಕಾರ್ಡ್ ವಿಶೇಷತೆ ಅಮೆರಿಕದಲ್ಲಿ ಮಾತ್ರ ಲಭ್ಯವಿದೆ, ಗೂಗಲ್ ಪಿಕ್ಸೆಲ್ 2 ಮೊದಲ ಬಾರಿಗೆ ಇ-ಸಿಮ್ ವಿಶೇಷತೆಯೊಂದಿಗೆ ಮಾರುಕಟ್ಟೆಗೆ ಬಂದಿತ್ತು.


Click it and Unblock the Notifications








