ಡಿಲೀಟ್ ಮಾಡಲಾಗದ ಆಪ್ ಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ.?
ಇವುಗಳು ಸುಮ್ಮನೆ ನಿಮ್ಮ ಫೋನಿನ ಬ್ಯಾಟರಿಯನ್ನು ಹೀರುತ್ತವೆ. ಆದರೆ ಹಲವು ಸ್ಮಾರ್ಟ್ ಫೋನ್ ಗಳಲ್ಲಿ ಇವುಗಳನ್ನು ಬ್ಲೋಟ್ ವೇರ್ ಗಳೆಂದು ಕರೆಯುತ್ತದೆ. ನಿಮಗೆ ಬೇಡವೆಂದರೆ ಇದನ್ನು ನೀವು ರಿಮೂವ್ ಮಾಡಬಹುದು.
ಇಂದಿನ ದಿನದಲ್ಲಿ ಮೊಬೈಲ್ ತಯಾರಕ ಕಂಪನಿಗಳು ತಾವು ತಯಾರಿಸುವ ಸ್ಮಾರ್ಟ್ ಫೋನ್ ಗಳಿಗೆ ಹೊಸ ರೂಪ ವನ್ನು ಕೊಡುವ ಸಲುವಾಗಿ ಆಂಡ್ರಾಯ್ಡ್ ಫೋನ್ ಗಳಿಗೆ ತಮ್ಮದೇ ಸ್ವಂತ ಆಪ್ ಗಳನ್ನು ಹಾಕುತ್ತವೆ. ಆದರೆ ಈ ಆಪ್ ಗಳನ್ನು ಹೆಚ್ಚಿನ ಸಮಯದಲ್ಲಿ ನಾವು ಬಳಸುವುದಿಲ್ಲ. ಸುಮ್ಮನೇ ಇವು ಪೋನಿನ ROM ಮತ್ತು RAM ಅನ್ನು ಅಕ್ರಮಿಸುತ್ತವೆ.

ಇವುಗಳು ಸುಮ್ಮನೆ ನಿಮ್ಮ ಫೋನಿನ ಬ್ಯಾಟರಿಯನ್ನು ಹೀರುತ್ತವೆ. ಆದರೆ ಹಲವು ಸ್ಮಾರ್ಟ್ ಫೋನ್ ಗಳಲ್ಲಿ ಇವುಗಳನ್ನು ಬ್ಲೋಟ್ ವೇರ್ ಗಳೆಂದು ಕರೆಯುತ್ತದೆ. ನಿಮಗೆ ಬೇಡವೆಂದರೆ ಇದನ್ನು ನೀವು ರಿಮೂವ್ ಮಾಡಬಹುದು.

ಈ ಆಪ್ ಗಳನ್ನು ಅನ್ ಇನ್ ಸ್ಟಾಲ್ ಮಾಡುವುದರಿಂದ ನಿಮ್ಮ ಮೊಬೈಲ್ ಗಳಿಗೆ ಹಾನಿಯಾಗಬಹುದು. ಇದರ ಬದಲು ಆಪ್ ಡೇಟ್ ಬ್ಲಾಕ್ ಮಾಡುವುದ ಹಾಗೂ ಸೇಫ್ ಡಿಸೆಬಲ್ ಮಾಡುವುದು ಉತ್ತಮ. ಬೇಕೆಂದರೆ ಮುಂದೆ ನೀವು ಅನ್ನು ಎನೆಬಲ್ ಮಾಡಿಕೊಳ್ಳಬಹುದು.
ಇನ್ನು ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಇದನ್ನು ಡಿಲೀಟ್ ಮಾಡಲು ಸಾಧ್ಯವೆ ಆಗುವುದಿಲ್ಲ. ಅಂತಹ ಸಮಯದಲ್ಲಿ ಡಿಸೆಬಲ್ ಮಾಡಬಹುದು. ಹಾಗೂ ಈ ಆಪ್ ಗಳು ಬ್ಯಾಕ್ ಗ್ರೌಂಡಿನಲ್ಲಿ ಕಾರ್ಯನಿರ್ವಹಿಸುವುದು ಬೇರೆ ಎಂದರೆ ಅವುಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು ಹೇಗೆ ಗೊತ್ತಾ..? ಅದು ಹೇಗೆ ಎಂಬುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

ಹಂತ 1: ಸೆಟ್ಟಿಂಗ್ಸ್ ಆಯ್ಕೆಗೆ ಹೋಗಿ
ಹಂತ 2: ಅದರಲ್ಲಿ ಅಪ್ಲೀಕೆಷನ್ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 3: ಇಲ್ಲಿ ನಿಮ್ಮ ಸ್ಮಾರ್ಟ ಫೋನಿನಲ್ಲಿರುವ ಆಪ್ ಗಳ ಪಟ್ಟಿಯನ್ನು ತೋರಿಸಲಿದೆ.
ಹಂತ 4: ನೀವು ಡಿಸೆಬಲ್ ಮಾಡಲು ಮಾಡಬಯಸುವ ಆಪ್ ಆಯ್ಕೆ ಮಾಡಿಕೊಳ್ಳಿ.
ಹಂತ 5: ಅಲ್ಲಿ ನಿಮಗೆ ಎರಡು ಬಟನ್ ದೊರೆಯಲಿದೆ ಒಂದು ಪೋರ್ಸ್ ಸ್ಟಾಪ್ ಮತ್ತು ಡಿಸೆಬಲ್

ಹಂತ 6: ಡಿಸೆಬಲ್ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 7: ಇದಾದ ನಂತರದಲ್ಲಿ ಪಾಪ್ ಅಪ್ ವೊಂದು ಕಾಣಿಸಿಕೊಳ್ಳಲಿದ್ದು ಅಲ್ಲಿಯೂ ಡಿಸೆಬಲ್ ಬಟನ್ ಕ್ಲಿಕ್ ಮಾಡಿ.
ಹಂತ 8: ಮುಂದೆ ಎಂದಾದರು ನಿಮಗೆ ಆ ಆಪ್ ಬೇಕು ಎನ್ನಿಸಿದಲ್ಲಿ ಎನೆಬಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಸಾಕು.


Click it and Unblock the Notifications








