ಸ್ಮಾರ್ಟ್ ಫೋನುಗಳಲ್ಲಿ ಇಮೇಜ್ ಸ್ಟೆಬಿಲೈಝೇಷನ್ ಅಂದರೆ ಏನು?

ಇಮೇಜ್ ಸ್ಟೆಬಿಲೈಝೇಷನ್ ಇದ್ದಾಗ ಚಿತ್ರ ಅಥವಾ ವೀಡಿಯೋಗಳಲ್ಲಿ ನಿಮಗೆ ಸಿಗುವ ಗುಣಮಟ್ಟವೇ ಬೇರೆ.

|

ಈ ಮುಂಚೆ ಡಿ.ಎಸ್.ಎಲ್.ಆರ್ ಗಳಲ್ಲಿ ಮಾತ್ರವೇ ಇದ್ದ ಗುಣಗಳನ್ನು ಅಳವಡಿಸಿಕೊಳ್ಳುತ್ತಾ ಸ್ಮಾರ್ಟ್ ಫೋನಿನ ಕ್ಯಾಮೆರಾಗಳು ಉತ್ತಮವಾಗುತ್ತಲೇ ಇವೆ. ಇಮೇಜ್ ಸ್ಟೆಬಿಲೈಝೇಷನ್ ಕೂಡ ಅದರಲ್ಲೊಂದು.

ಸ್ಮಾರ್ಟ್ ಫೋನುಗಳಲ್ಲಿ ಇಮೇಜ್ ಸ್ಟೆಬಿಲೈಝೇಷನ್ ಅಂದರೆ ಏನು?

ಇಮೇಜ್ ಸ್ಟೆಬಿಲೈಝೇಷನ್ ಅಂದರೆ ಕ್ಯಾಮೆರಾದ ಚಿಕ್ಕ ಪುಟ್ಟ ಅಲುಗಾಟಗಳನ್ನು ಸರಿಪಡಿಸಿ ಚಿತ್ರವನ್ನು ಮಬ್ಬಾಗದಂತೆ ಸ್ಪಷ್ಟವಾಗಿ ಮೂಡುವಂತೆ ಮಾಡುವುದು. ಇದು ಹೇಗೆ ಸಹಕಾರಿ ಎಂದು ನೀವು ಕೇಳಬಹುದು.

ಬಿಡುಗಡೆಯಾಗುತ್ತಿದೆ "ಹಾನರ್ 6ಎಕ್ಸ್"!!..ಸ್ಮಾರ್ಟ್‌ಫೋನ್ ಪ್ರಿಯರಿಗೆ ಏಕಿಷ್ಟು ಆತುರ?

ನೀವು ಪರಿಸರದ ಚಿತ್ರವನ್ನೋ ಅಥವಾ ಕಡಿಮೆ ಬೆಳಕಿನಲ್ಲಿ ಒಂದು ಚಿತ್ರವನ್ನು ತೆಗೆಯಲುದ್ದೇಶಿಸಿದ್ದೀರಿ ಎಂದುಕೊಳ್ಳೋಣ. ಫೋಕಸ್ ಅನ್ನು ನಿರ್ಧರಿಸಿ, ಶಟರ್ ಬಟನ್ ಅನ್ನು ಒತ್ತಿ ಚಿತ್ರಗಳನ್ನು ತೆಗೆಯಲು ಪ್ರಾರಂಭಿಸುತ್ತೀರ. ಉತ್ತಮ ಆಕರ್ಷಕ ಚಿತ್ರದ ನಿರೀಕ್ಷೆ ನಿಮ್ಮಲ್ಲಿರುತ್ತದೆ, ಆದರೆ ಚಿತ್ರಗಳು ಮಬ್ಬಾಗಿ ಮೂಡಿಬಿಟ್ಟಿರುತ್ತದೆ.

ಏರ್‌ಟೆಲ್‌ನಿಂದ 12 ತಿಂಗಳ ಫ್ರೀ ಡೇಟಾ ಪಡೆಯುವುದು ಹೇಗೆ? ಕಂಪ್ಲೀಟ್ ಡೀಟೆಲ್ಸ್!!!

ಇದಕ್ಕಿರುವ ಪ್ರಮುಖ ಕಾರಣ, ಕ್ಯಾಮೆರಾದ ಅಲುಗಾಟ. ಇದಕ್ಕೆ ನಿಮ್ಮ ನಡುಗುವ ಕೈಗಳು ಕಾರಣವಿರಬಹುದು ಅಥವಾ ಬಾಹ್ಯ ಕಾರಣಗಳೂ ಇರಬಹುದು. ಈ ಸಮಯದಲ್ಲಿ ಇಮೇಜ್ ಸ್ಟೆಬಿಲೈಝೇಷನ್ ಉಪಯೋಗಕ್ಕೆ ಬರುತ್ತದೆ. ಚಿತ್ರಗಳು ಸ್ಪಷ್ಟವಾಗುತ್ತವೆ.

ಮೇಲೆ ನಾವು ವಿವರಿಸಿದ್ದು ಇಮೇಜ್ ಸ್ಟೆಬಿಲೈಝೇಷನ್ ನ ಮೂಲ ಲಕ್ಷಣಗಳು. ವಿವಿಧ ರೀತಿಯ ಇಮೇಜ್ ಸ್ಟೆಬಿಲೈಝೇಷನ್ ತಂತ್ರಜ್ಞಾನಗಳಿವೆ, ವಿವಿಧ ರೀತಿಯ ವಿಶೇಷತೆಗಳಿವೆ.

ಈ ಲೇಖನದಲ್ಲಿ ಆಪ್ಟಿಕಲ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಝೇಷನ್ ಅಂದರೆ ಏನು ಎಂದು ವಿವರಿಸಲಾಗಿದೆ.

ಆಪ್ಟಿಕಲ್ ಇಮೇಜ್ ಸ್ಟೆಬಿಲೈಝೇಷನ್ .

ಆಪ್ಟಿಕಲ್ ಇಮೇಜ್ ಸ್ಟೆಬಿಲೈಝೇಷನ್ .

ಡಿ.ಎಸ್.ಎಲ್.ಆರ್ ಗೆ ಹೋಲಿಸಿದರೆ ಸ್ಮಾರ್ಟ್ ಫೋನ್ ಕ್ಯಾಮೆರಾಗಳಲ್ಲಿ ಚಿಕ್ಕ ಸಂವೇದಕಗಳಿವೆ. ಅಂದರೆ ಡಿ.ಎಸ್.ಎಲ್.ಆರ್ ಗೆ ಹೋಲಿಸಿದರೆ ಈ ಸಂವೇದಕಗಳು ಹೆಚ್ಚಿನ ಬೆಳಕನ್ನು ಸೆರೆಹಿಡಿಯಲು ಶಕ್ಯವಲ್ಲ. ಉತ್ತಮ ಬೆಳಕು ಬೇಕೆಂದರೆ, ಎಕ್ಸ್ಪೋಷರ್ ಸಮಯವನ್ನು ಹೆಚ್ಚಿಸಬೇಕು, ಇದರಿಂದಾಗಿ ಚಿತ್ರ ಮಬ್ಬಾಗುತ್ತದೆ.

ಆಪ್ಟಿಕಲ್ ಇಮೇಜ್ ಸ್ಟೆಬಿಲೈಝೇಷನ್ ಚಿತ್ರದ ಮೂಡುವಿಕೆಯನ್ನು ನಿಯಂತ್ರಿಸಿ ಕ್ಯಾಮೆರಾದ ಚಿಕ್ಕ ಪುಟ್ಟ ಅಲುಗಾಟವನ್ನು ಸರಿಪಡಿಸುತ್ತದೆ. ಗೈರೋಸ್ಕೋಪ್ ನಂತಹ ಸಂವೇದಕಗಳ ಮೂಲಕ ಕೈಕುಲುಕಾಟವನ್ನು ನಿರ್ಧರಿಸಲಾಗುತ್ತದೆ, ಮತ್ತು ಇದಕ್ಕೆ ಪ್ರತಿಕ್ರಿಯೆಯಾಗಿ ವಿರುದ್ಧ ದಿಕ್ಕಿನಲ್ಲಿ ಲೆನ್ಸ್ ಮಾಡ್ಯೂಲ್ ಚಲಿಸುತ್ತದೆ, ಮಬ್ಬು ಚಿತ್ರಗಳು ಮೂಡುವುದು ತಪ್ಪುತ್ತದೆ. ಸಾಮಾನ್ಯವಾಗಿ ಲೆನ್ಸ್ ಮಾಡ್ಯೂಲ್ ಮೇಲೆ ಕೆಳಗೆ ಅಥವಾ ಅತ್ತಿತ್ತ ಚಲಿಸಿ ಎಲೆಕ್ಟ್ರೋಮ್ಯಾಗ್ನೆಟಿಕ್ ಮೋಟಾರುಗಳ ಸಹಾಯದಿಂದ ಅಲುಗಾಟವನ್ನು ಸರಿಪಡಿಸುತ್ತದೆ.

ಹಾಗಿದ್ರೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಝೇಷನ್ ಎಲ್ಲಾ ರೀತಿಯ ಮಬ್ಬುವಿಕೆಯನ್ನು ಸರಿಪಡಿಸುವುದಿಲ್ಲ ಎನ್ನುವುದನ್ನು ನೆನಪಿಡಿ. ನೀವು ಚಿತ್ರಿಸುತ್ತಿರುವ ವಸ್ತುವಿನ ವೇಗ ಹೆಚ್ಚಿದ್ದರೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಝೇಷನ್ ಏನೂ ಮಾಡಲಾಗದು.

ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಝೇಷನ್ .

ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಝೇಷನ್ .

ಆಪ್ಟಿಕಲ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಝೇಷನ್ ನ ಕಾರ್ಯ ಚಿತ್ರವನ್ನು ಮಬ್ಬಾಗದಂತೆ ತಡೆಯುವುದೇ ಆದರೂ ಎರಡರ ಕಾರ್ಯವಿಧಾನ ಬೇರೆ ಬೇರೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಝೇಷನ್ ಸಂಪೂರ್ಣವಾಗಿ ಯಾಂತ್ರಿಕವಾಗಿದ್ದರೆ, ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಝೇಷನ್ ಸಾಫ್ಟ್ ವೇರ್ ಸಹಾಯದಿಂದ ಅಲುಗಾಟವನ್ನು ಸರಿಪಡಿಸುತ್ತದೆ. ಪ್ಯಾಟರ್ನ್, ಟ್ರಾನ್ಸ್ಲೇಷನ್ ಮತ್ತು ರೊಟೇಷನ್ ಅನ್ನು ಡಿಜಿಟಲ್ ರೂಪದಲ್ಲಿ ಅಭ್ಯಸಿಸಿ ಮಬ್ಬು ರಹಿತ ಚಿತ್ರಗಳು ಮೂಡುತ್ತದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಝೇಷನ್ ಗೆ ಹೋಲಿಸಿದರೆ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಝೇಷನ್ ನಲ್ಲಿ ಹೆಚ್ಚುವರಿ ಹಾರ್ಡ್ ವೇರ್ ನ ಅವಶ್ಯಕತೆಯಿಲ್ಲ. ಪರಿಣಾಮವಾಗಿ ಇದರ ಬೆಲೆಯೂ ಕಮ್ಮಿ, ತೂಕವೂ ಕಡಿಮೆ.

ಆದರೆ, ಆಪ್ಟಿಕಲ್ ಇಮೇಜ್ ಸ್ಟೆಬಿಲೈಝೇಷನ್ ನಲ್ಲಿ ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ; ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಝೇಷನ್ ನಲ್ಲಿ ಚಿತ್ರದ ಗುಣಮಟ್ಟ ಸ್ವಲ್ಪ ಕಡಿಮೆಯಿರುತ್ತದೆ.

ಕೊನೆಯ ಮಾತು.

ಕೊನೆಯ ಮಾತು.

ಆಪ್ಟಿಕಲ್ ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಝೇಷನ್ ಮಬ್ಬು ರಹಿತ ಸ್ಪಷ್ಟ ಚಿತ್ರ ತೆಗೆಯಲು ಸಹಕಾರಿ. ಆದರೆ, ಈ ಎರಡೂ ತಂತ್ರಜ್ಞಾನ ಸಣ್ಣ ಮಟ್ಟದ ಅಲುಗಾಟವನ್ನಷ್ಟೇ ಸರಿಪಡಿಸಬಲ್ಲವು ಎನ್ನುವುದನ್ನು ಓದುಗರು ನೆನಪಿಡಬೇಕು; ಉತ್ತಮ ಚಿತ್ರ ಪಡೆಯಲು ಕ್ಯಾಮೆರಾವನ್ನು ಸ್ಥಿರವಾಗಿಡುವುದೇ ಅಂತಿಮ ಎನ್ನುವುದನ್ನು ಮರೆಯಬಾರದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Find out what is Image Stabilization, what are the different types of IS and how do they work?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X