ಭವಿಷ್ಯದಲ್ಲಿ 1 ರೂಪಾಯಿಗೆ ಸಿಗಲಿದೆ 10GB ಡೇಟಾ!!

|

ನಮ್ಮ ಕಣ್ಣ ಮುಂದೆಯೇ ತಂತ್ರಜ್ಞಾನ ಬದಲಾಗಿ ಓಡುತ್ತಿದ್ದರೂ ಗುರುತಿಸಲಾಗದಷ್ಟು ಹಿಂದೆ ನಾವಿದ್ದೇವೆ. ವಾಟ್ಸ್ಆಪ್ ಬಂದ ನಂತರ ಎಲ್ಲರ ಮೆಚ್ಚಿನ ಎಸ್ಸೆಮ್ಮೆಸ್ ಬಳಕೆ ತೀರಾ ಕಡಿಮೆಯಾದದ್ದು ನಮಗೆಲ್ಲಾ ಗೊತ್ತೇ ಇದೆ. ಹಾಗೆಯೇ, ಜಿಯೋ ಬಂದನಂತರ ಆನ್‌ಲೈನ್ ಕರೆಗಳು ಉಚಿತವಾಗಿಯೂ ಬಂದಿದ್ದನ್ನು ಸಹ ನೀವು ನೋಡಬಹುದು.

ಕೆಲವೇ ವರ್ಷಗಳ ಹಿಂದೆ ಮೊಬೈಲ್‌ನಲ್ಲಿ ಕಾಲ್ ಮಾಡಲು 10 ರಿಂದ 20 ರೂಪಾಯಿಗಳನ್ನು ನಾವು ತೆರಬೆಕಿತ್ತು. ಆದರೆ, ಇಂದು ಡೇಟಾ ರಿಚಾರ್ಜ್ ಮಾಡಿಸಿದರೆ ಸಾಕು ತಿಂಗಳ ಪೂರ್ತಿ ಉಚಿತವಾಗಿ ಕಾಲ್ ಮಾಡಬಹುದು.! ಹೌದಲ್ಲವೇ, ಎಷ್ಟು ಬೇಗ ಟೆಲಿಕಾಂ ಪ್ರಪಂಚ ಬದಲಾಯಿತು? ಹಾಗಾದರೆ, ಭವಿಷ್ಯದ ಟೆಲಿಕಾಂ ಪ್ರಪಂಚ ಇನ್ನು ಹೇಗಿರುತ್ತದೆ.?

ಭವಿಷ್ಯದಲ್ಲಿ 1 ರೂಪಾಯಿಗೆ ಸಿಗಲಿದೆ 10GB ಡೇಟಾ!!

ಇಂತಹದೊಂದು ಪ್ರಶ್ನೆ ಮೂಡಲು ಕಾರಣವಾಗಿರುವುದು ತಂತ್ರಜ್ಞಾನದ ಭಾರಿ ಬೆಳವಣಿಗೆ. ಸಹಸ್ರಮಾನದಲ್ಲಿ ಭೂಮಿ ಆಗಬಹುದಾದ ಬದಲಾವಣೆಯೂ ಕೇವಲ ಹತ್ತಿಪ್ಪತ್ತು ವರ್ಷಗಳಲ್ಲಿ ಬದಲಾಗಿದ್ದನ್ನು ನಾವೇ ನೋಡಿದ್ದೇವೆ.! ಹಾಗಾಗಿ, ಭವಿಷ್ಯದ ಟೆಲಿಕಾಂ ಹೇಗಿರಬಹುದು ಎಂಬ ಕುತೋಹಲ ಅಂಶಗಳನ್ನು ಇಂದಿನ ಲೇಖನದಲ್ಲಿ ಚರ್ಚಿಸೋಣ.

1 ರೂಪಾಯಿಗೆ 10GB ಡೇಟಾ!!

1 ರೂಪಾಯಿಗೆ 10GB ಡೇಟಾ!!

ಹೌದು, ಕೆವಲ ಒಂದು ವರ್ಷದ ಹಿಂದಷ್ಟೆ ಹಿಂದಷ್ಟೆ ನೀವು ಒಂದು ಜಿಬಿ ಡೇಟಾಗೆ 300 ರೂಪಾಯಿಗಳನ್ನು ನೀಡುತ್ತಿದ್ದಿರಿ. ಪ್ರಸ್ತುತ 5 ರೂಪಾಯಿಗೆ ಒಂದು ಜಿಬಿ ಡೇಟಾ ನಿಮಗೆ ಲಭ್ಯವಿದೆ.! 5G ತಂತ್ರಜ್ಞಾನ ಬಂದರೆ ಇನ್ನೆರಡು ವರ್ಷಗಳಲ್ಲಿ ಒಂದು ರೂಪಾಯಿಗೆ 10GB ಡೇಟಾ ಸಿಗಲಿದೆ ಎನ್ನುತ್ತಿವೆ ವರದಿಗಳು.!

ಡೇಟಾ ಸ್ಪೀಡ್ ಎಷ್ಟಿರುತ್ತೆ?

ಡೇಟಾ ಸ್ಪೀಡ್ ಎಷ್ಟಿರುತ್ತೆ?

ಇಲ್ಲಿಯವರೆಗೂ 2G, 3G, 4G ಬಳಕೆ ಮಾಡುತ್ತಿದ್ದ ಕಾಲ ಮುಗಿಯುತ್ತದೆ. ಭವಿಷ್ಯದಲ್ಲಿ 5G ಮತ್ತು ಅದಕ್ಕಿಂತಲೂ ಹೆಚ್ಚಿನ ವೇಗದ ಡೇಟಾ ಸ್ಪೀಡ್ ಜನರಿಗೆ ದೊರೆಯುತ್ತದೆ. ಒಂದು GB ಡೇಟಾ ಒಂದು ಸೆಕೆಂಟ್‌ನಲ್ಲಿಯೇ ಡೌನ್‌ಲೋಡ್ ಆಗಬಹುದಾದ ತಂತ್ರಜ್ಞಾನವನ್ನು ಈಗಾಗಲೇ ಅಭಿವೃದ್ದಿಪಡಿಸಲಾಗಿದೆ.

ಭವಿಷ್ಯದಲ್ಲಿ ಡೇಟಾ(ಇಂಟರ್‌ನೆಟ್) ಮಾತ್ರ!!

ಭವಿಷ್ಯದಲ್ಲಿ ಡೇಟಾ(ಇಂಟರ್‌ನೆಟ್) ಮಾತ್ರ!!

ಈಗಲೂ ಹಣ ನೀಡಿ ಎಸ್‌ಎಮ್‌ಎಸ್, ಮತ್ತು ಕಾಲ್‌ ಸೇವೆಯನ್ನು ಬಳಕೆ ಮಾಡುತ್ತಿರುವವರನ್ನು ನೋಡಬಹುದು. ಆದರೆ, ಇನ್ನೈದು ವರ್ಷಗಳಲ್ಲಿಯೇ ಎಸ್‌ಎಮ್‌ಎಸ್, ಮತ್ತು ಕಾಲ್‌ ಸೇವೆಗೆ ಹಣವನ್ನು ನೀಡಲುವ ಅವಶ್ಯಕತೆ ಇಲ್ಲ. ಬರಿ ಡೇಟಾದಲ್ಲಿಯೇ ಇವೆಲ್ಲವೂ ನಡೆದುಹೋಗುತ್ತದೆ. ಇದನ್ನು ಬಿಡಿ ಮುಂದೆ ನೋಡಿ.!!

ಡೇಟಾ ಟಿವಿ.!!

ಡೇಟಾ ಟಿವಿ.!!

ರೋಡಿನಲ್ಲಿ ಹರಡಿರುವ ಟಿವಿ ಕೇಬಲ್‌ಗಳು, ಮನೆಯ ಅಂದ ಕೆಡಿಸುವ ಡಿಟಿಹೆಚ್ ಬಾಂಡಲಿಗಳು ಭವಿಷ್ಯದಲ್ಲಿ ಮರೆಯಾಗುತ್ತವೆ. ಕೇವಲ ಇಂಟರ್‌ನೆಟ್ ಕನೆಕ್ಷನ್ ಮೂಲಕವೇ ನಿಮ್ಮ ಟಿವಿ ಕಾರ್ಯ ನಿರ್ವಹಿಸುತ್ತವೆ. ಈಗಾಗಲೇ ಮುಂದುವರೆದ ರಾಷ್ಟ್ರಗಳಲ್ಲಿ ಈ ಸೇವೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಭಾರತದಲ್ಲಿ ಇನ್ನೆಡು ವರ್ಷದಲ್ಲಿ ಡೇಟಾ ಟಿವಿಗಳು ಹೆಚ್ಚಲಿವೆ.!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಟೆಲಿಕಾಂಗೊಂದು ಮೊಬೈಲ್!!

ಟೆಲಿಕಾಂಗೊಂದು ಮೊಬೈಲ್!!

ಆನ್‌ಲೈನ್ ಡೇಟಾ ನೀಡಲು ತನ್ನದೇ ಮೊಬೈಲ್‌ಗಳನ್ನು ಹೊರತರಲು ಟೆಲಿಕಾಂ ಕಂಪೆನಿಗಳು ಒಂದರ ಮೇಲೊಂದರಂತೆ ಮುಗಿಬಿದ್ದಿವೆ. ಉದಾಹರಣೆಗೆ ಜಿಯೋ ತನ್ನದೇ ಫೀಚರ್‌ ಫೋನ್ ಬಿಡುಗಡೆ ಮಾಡಿದ ನಂತರ ಇದೀಗ ಏರ್‌ಟೆಲ್ ಮತ್ತು ಐಡಿಯಾ ಕೂಡ ತನ್ನದೇ ಸ್ಮಾರ್ಟ್‌ಫೋನ್ ಹೊರತರಲು ನಿರ್ಧರಿಸಿವೆ.! ಆದರೆ, ಉಪಯೋಗ ಇದೆಯಾ ಗೊತ್ತಿಲ್ಲಾ!!

Best Mobiles in India

English summary
There are six major disruptions that will drive the most change in telecommunications by 2020. Learn more about the external factors that will power the industry.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X