ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಇದನ್ನೊಮ್ಮೆ ಓದಿಕೊಂಡು ಅಂಗಡಿಗೆ ಹೋಗಿ!!
ಇತ್ತೀಚಿಗೆ ಹತ್ತಾರು ಕಂಪೆನಿಗಳ ನೂರಾರು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಇರುವುದರಿಂದ ಒಂದು ಸ್ಮಾರ್ಟ್‌ಫೋನ್ ಖರೀದಿಸುವುದು ಸುಲಭದ ಮಾತಲ್ಲ. ಅದರಲ್ಲಿಯೂ ಯಾವ್ಯಾವ ಗುಣವಿಶೇಷ ಮತ್ತು ಸಾಮರ್ಥ್ಯವನ್ನು ಹೊಂದಿರಬೇಕು ಎಂದು ಬಹುಪಾಲು ಮಂದಿಗೆ ತಿಳಿದಿರುವುದಿಲ್ಲ.ಇಂತಹ ಸಮಸ್ಯೆಯನ್ನು ಎದುರಿಸುವವರು ಬಹುತೇಕ ಮಧ್ಯಮ ವರ್ಗದವರೇ ಆಗಿದ್ದಾರೆ.
ಮಧ್ಯಮ ವರ್ಗದವರು ಜಾಹೀರಾತುಗಳನ್ನು ನೋಡಿಯೇ ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ. ಟಿವಿ, ಪೇಪರ್‌ನಲ್ಲಿ ದಿನಕ್ಕೆ ಹತ್ತು ಹಲವು ಬಾರಿ ಯಾವ ಸ್ಮಾರ್ಟ್‌ಫೋನಿನ ಜಾಹೀರಾತನ್ನು ಹೆಚ್ಚು ನೋಡುತ್ತಾರೋ ಆ ಸ್ಮಾರ್ಟ್‌ಫೋನ್ ಖರೀದಿಸುವ ಸಾಧ್ಯತೆಗಳೇ ಜಾಸ್ತಿಯಿದೆ. ಆದರೆ ನಿಮಗೆ ಗೊತ್ತಾ, ಜಾಹಿರಾತುಗಳನ್ನು ನಂಬಿ ಖರೀದಿಸಿದ ಆ ಫೋನ್ ಬೆಲೆಗೆ ಯೋಗ್ಯವಾಗದಿರಬಹುದು.

ಚೀನಾ ಮೊಬೈಲ್ ಕಂಪೆನಿಗಳು ಸೇರಿದಂತೆ ಬಹುತೇಕ ಎಲ್ಲಾ ಮೊಬೈಲ್ ಕಂಪೆನಿಗಳು ಕೂಡ ಈ ಜಾಹಿರಾತು ತಂತ್ರದ ಹಿಂದೆ ಬಿದ್ದು ಜನರನ್ನು ಮೂರ್ಖನನ್ನಾಗಿಸುತ್ತಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಯಾವ ಸ್ಮಾರ್ಟ್‌ಫೋನ್ ಖರೀದಿಸಬೇಕು ಅಥವಾ ಯಾವುದೇ ಒಂದು ಸ್ಮಾರ್ಟ್‌ಫೋನ್ ಖರೀದಿಸುವಾಗ ತಿಳಿದಿರಲೇಬೇಕಾದ ಸಂಗತಿಗಳು ಯಾವುವು ಎಂಬುದನ್ನು ತಿಳಿಯೋಣ.

ಸ್ಮಾರ್ಟ್‌ಫೋನ್ ಪೈಪೋಟಿ!
ಮೊಬೈಲ್ ಮಾರುಕಟ್ಟೆಯಲ್ಲಿ ಯಾವಾಗಲೂ ಸ್ಮಾರ್ಟ್‌ಫೋನ್‌ಗಳ ಬೆಲೆಗಳ ಮೇಲೆ ಪೈಪೋಟಿ ಏರ್ಪಡುತ್ತಲೇ ಇರುತ್ತದೆ. ಹಾಗಾಗಿ, ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅತಿ ಹೆಚ್ಚು ಮಾರಾಟವಾಗುತ್ತಿರುವ ಫೋನ್ ನಿಮ್ಮ ಆಯ್ಕೆಯಾಬಹುದು. ಗೂಗಲ್‌ನಲ್ಲಿ ಅತಿ ಹೆಚ್ಚು ಸೇಲ್ ಆಗುತ್ತಿರುವ ಇತ್ತೀಚಿನ ಫೋನ್‌ಗಳ ಪಟ್ಟಿ ನೋಡಿ ಸ್ಮಾರ್ಟ್‌ಫೋನ್ ಖರೀದಿಸುವುದು ಉತ್ತಮ.

ಬೆಲೆ ಮತ್ತು ಗುಣಮಟ್ಟ!
ಕೆಲ ಹೆಸರಾಂತ ಕಂಪೆನಿಗಳು ಗುಣಮಟ್ಟವನ್ನು ಉಳಿಸಿಕೊಂಡಿರುತ್ತವೆ. ಆ ಕಂಪೆನಿಗಳ ಗುಣಮಟ್ಟಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತವೆ. ಆದರೆ, ಇವುಗಳ ಬೆಲೆ ಹೆಚ್ಚಿರುವುದು ಮತ್ತು ಫೀಚರ್ಸ್ ಕಡಿಮೆ ಇರುವುದು ಸಾಧ್ಯ. ಆದರೆ, ಕಡಿಮೆ ಬೆಲೆ ಫೋನ್‌ಗಳು ಕೂಡ ಬೆಲೆಗೆ ತಕ್ಕಂತಹ ಗುಣಮಟ್ಟದವನ್ನು ಹೊಂದಿರುವ ಬಗ್ಗೆ ಆನನ್‌ಲೈನ್ ರಿವ್ಯೂಗಳನ್ನು ನೋಡಿ ನಂತರ ಖರೀದಿಸಿ.

ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್ ರಿವ್ಯೂ !
ಈಗೆಲ್ಲಾ ಮತ್ತು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ಗಳಲ್ಲಿ ಮೊಬೈಲ್‌ಗಳ ಖರೀದಿ ಭರಾಟೆ ಜೋರು. ಅದರಲ್ಲಿ ಗ್ರಾಹಕರು ನಿಮ್ಮ ಇಷ್ಟದ ಫೋನ್ ಬಗ್ಗೆ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಓದಿ. 5ಕ್ಕೆ ಕನಿಷ್ಟ 4 ರೇಟಿಂಗ್ ಇದ್ದರೆ ಮಾತ್ರ ಆ ಮೊಬೈಲ್ ಕೊಳ್ಳಿ. ಹೊಗಳಿಕೆ ಜಾಸ್ತಿ, ಟೀಕೆ ಕಡಿಮೆ ಇರುವ ಮೊಬೈಲ್ ಆರಿಸಿಕೊಂಡರೆ ಒಳ್ಳೆಯದೇ ಆಗಿರುತ್ತದೆ ಎಂದು ಹೇಳಬಹುದು.

ಸ್ಮಾರ್ಟ್‌ಫೋನ್ ಸಾಮರ್ಥ್ಯ!
ನೀವು ಕೊಡುವ ಹಣಕ್ಕೆ ಸರಿಯಾದ ಸಾಮರ್ಥ್ಯದ ಫೋನ್ ಅನ್ನು ಖರೀದಿಸಿ. 2 ಜಿಬಿ RAM ಮತ್ತು 16 ಜಿಬಿ ಆಂತರಿಕ ಮೆಮೊರಿಯ ಫೋನ್ ಖರೀದಿ ವ್ಯರ್ಥ ಎನ್ನಬಹುದು. ಕನಿಷ್ಟ 3 ಜಿಬಿ RAM 32 ಜಿಬಿ ಆಂತರಿಕ ಸಂಗ್ರಹದ ಫೋನ್ ಖರೀದಿಸಿದರೆ ಒಳ್ಳೆಯದು. ಇಂದಿನ ಬೆಲೆಗಳಲ್ಲಿ 10 ಸಾವಿರ ರೂಪಾಯಿಗಳಿಗೆಲ್ಲಾ 4GB RAM ಸ್ಮಾರ್ಟ್‌ಫೋನ್‌ಗಳೇ ನಿಮಗೆ ಖರೀದಿಗೆ ಲಭ್ಯವಿವೆ.

ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆ!
ಪ್ರಸ್ತುತ 2ಜಿಬಿ RAM ಮತ್ತು 16 ಜಿಬಿ ಮೆಮೊರಿ ಫೋನ್ 5 ರಿಂದ 7 ಸಾವಿರ ರೂ.ಗೆ ಸಿಗಲಿವೆ. 3 ಜಿಬಿ RAM ಮತ್ತು 32 ಜಿಬಿ ಮೆಮೊರಿ ಫೋನ್ ಬೆಲೆ 7 ರಿಂದ 11 ಸಾವಿರ, ಹಾಗೂ 4ಜಿಬಿ RAM ಮತ್ತು 32 ಜಿಬಿ ಮೆಮೊರಿ ಫೋನ್ ಬೆಲೆ 1 ಸಾವಿರ ಮೀರಬಾರದು. ಹಾಗಾಗಿ, ಸಾಮರ್ಥ್ಯಕ್ಕೆ ತಕ್ಕಂತೆ ಬೆಲೆ ಹೊಂದಿರುವ ಸ್ಮಾರ್ಟ್‌ಪೋನ್‌ಗಳು ಯಾವುವು ಎಂದು ನೀವು ತಿಳಿಯಲೇಬೇಕು.

ಪ್ರೊಸೆಸರ್ ಬಗ್ಗೆ ಗೊತ್ತಿರಲಿ
ಸ್ನಾಪ್‌ಡ್ರಾಗನ್ 400 ಸಿರೀಸ್ ಪ್ರೊಸೆಸರ್ ಹೊಂದಿರುವ ಫೋನ್‌ಗಳ ಬೆಲೆ 10 ಸಾವಿರದಲ್ಲಿವೆ. ಇವುಗಳಿಗಿಂತ ಸ್ನಾಪ್‌ಡ್ರಾಗನ್ 600 ಸೀರೀಸ್ ಫೋನ್‌ಗಳು ನಿಮಗೆ ಬೆಸ್ಟ್ ಎನ್ನಬಹುದು . 4ಜಿಬಿ RAM ಮತ್ತು ಸ್ನಾಪ್‌ಡ್ರಾಗನ್ 600 ಸೀರೀಸ್ ಪ್ರೊಸೆಸರ್ ಹೊಂದಿರುವ ಮೊಬೈಲ್ ಅನ್ನು 13 ಸಾವಿರದಿಂದ 17 ಸಾವಿರಗಳಿಗೆ ಖರಿದಿಸುವುದು ಪ್ರಸ್ತುತ ಅತ್ಯುತ್ತಮ ಎನ್ನಬಹುದು.

ಬೆಲೆ ಮತ್ತು ಫೀಚರ್ಸ್?
ಈ ಅಂಶ ನಿಮಗೆ ಬಹಳ ಮುಖ್ಯ. ಏಕೆಂದರೆ, ಕ್ಯಾಮೆರಾ ಚೆನ್ನಾಗಿದೆ, ಅದು ಚೆನ್ನಾಗಿದೆ, ಇದು ಚೆನ್ನಾಗಿದೆ ಎಂದು ಹೇಳಿ ಮೋಸ ಮಾಡುವ ಕಂಪೆನಿಗಳು ಹೆಚ್ಚಿವೆ. ಸೆಲ್ಫೀ ಮಾಸ್ಟರ್ ಎಂದು ಹೇಳಿಕೊಂಡಿರುವ 17 ಸಾವಿರ ರೂ.ಬೆಲೆಯ ಫೋನಿನಲ್ಲಿ 2GB RAM ಮತ್ತು ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಹಾಕಿರುತ್ತಾರೆ. ಅದನ್ನು ಖರೀದಿಸಿದರೆ ನೀವು ಗುಂಡಿಗೆ ಬಿದ್ದಂತೆಯೇ ಸರಿ.


Click it and Unblock the Notifications








