ವಿಂಡೋಸ್ ಫೋನ್‌ಗಳಿಗೂ ಇನ್ನು ಮುಂದೆ ವಾಟ್ಸಾಪ್ ಲಭ್ಯ

Written By:

ಕೊನೆಗೂ ವಿಂಡೋಸ್‌ ಫೋನ್‌ಗಳಲ್ಲಿ ತ್ವರಿತ ಮೆಸೇಜಿಂಗ್ ಆಪ್ ಎಂದೇ ಬಿರುದಾಂಕಿತನಾದ ವಾಟ್ಸಾಪ್ ಅನ್ನು ಪಡೆಯುವ ಸೌಲಭ್ಯ ದೊರಕಿಬಿಟ್ಟಿದೆ. ವಿಂಡೋಸ್ ಫೋನ್‌ಗಳಲ್ಲಿ ಈ ಹಿಂದೆ ಇದ್ದ ವಾಟ್ಸಾಪ್ ಅನ್ನು ಹಲವಾರು ಕಾರಣಗಳಿಗಾಗಿ ಸ್ಥಗಿತಗೊಳಿಸಲಾಗಿತ್ತು. ಕೆಲವೊಂದು ತಪ್ಪು ಫೀಚರ್‌ಗಳು, ಸಂದೇಶ ಕಳುಹಿಸುವುದರಲ್ಲಿ ವಿಳಂಬವಾಗುವುದು, ಸಂದೇಶ ಕಳೆದುಹೋಗುವುದು ಇವೇ ಮುಂತಾದ ಸಮಸ್ಯೆಗಳು ವಿಂಡೋಸ್ ಫೋನ್‌ಗಳಲ್ಲಿ ವಾಟ್ಸಾಪ್‌ನಿಂದ ತಲೆದೋರಿತ್ತು.

ಆದರೆ ಇದೀಗ ಕಂಪೆನಿಯು ವಾಟ್ಸಾಪ್‌ನ ಈ ಎಲ್ಲಾ ತೊಂದರೆಗಳನ್ನು ನಿವಾರಿಸಿದ್ದು ಸ್ಟೋರ್‌ಗಳಲ್ಲಿ ಇನ್ನಷ್ಟು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿದೆ. ವಿಂಡೋಸ್ ಫೋನ್‌ಗಳಲ್ಲಿ ವಾಟ್ಸಾಪ್ ಇನ್ನಷ್ಟು ಜಾದೂಗಳನ್ನು ಮಾಡಲಿದೆ ಎಂಬುದು ಕಂಪೆನಿ ನಿರೀಕ್ಷೆಯಾಗಿದೆ. ಇದರಲ್ಲಿ ಇನ್ನಷ್ಟು ಸೇರ್ಪಡಿತ ಫೀಚರ್‌ಗಳನ್ನು ನಾವು ಕಾಣಬಹುದಾಗಿದೆ.

ವಿಂಡೋಸ್ ಫೋನ್‌ಗಳಿಗೂ ಇನ್ನು ಮುಂದೆ ವಾಟ್ಸಾಪ್ ಲಭ್ಯ

ಚಾಟ್‌ ಬ್ಯಾಕ್‌ಗ್ರೌಂಡ್, ಉತ್ತಮ ಗೌಪ್ಯತೆ ಸೆಟ್ಟಿಂಗ್‌ಗಳು, ಅಧಿಸೂಚನೆ ಟೋನ್‌ಗಳನ್ನು ಕಸ್ಟಮೈಸ್ ಮಾಡುವುದು ಇವೇ ಮುಂತಾದ ಫೀಚರ್‌ಗಳನ್ನು ವಿಂಡೋಸ್ ಫೋನ್‌ನಲ್ಲಿ ವಾಟ್ಸಾಪ್ ಒಳಗೊಂಡಿದೆ. ನಿಮಗೆ ಬ್ಯಾಕ್‌ಗ್ರೌಂಡ್ ಅನ್ನು ಕಸ್ಟಮೈಸ್ ಮಾಡುವ, ನೀವು ಕೊನೆಯ ಬಾರಿಗೆ ವೀಕ್ಷಿಸಿರುವುದನ್ನು, ಪ್ರೊಫೈಲ್ ಫೋಟೋ ಹಾಗೂ ಸ್ಟೇಟಸ್ ಅನ್ನು ಮರೆ ಮಾಡುವ ಸಂವಿಧಾನವನ್ನು ಹೊಸ ಗೌಪ್ಯತಾ ಸೆಟ್ಟಿಂಗ್‌ಗಳು ನಿಮಗೆ ಒದಗಿಸುತ್ತವೆ. ಈ ಎಲ್ಲಾ ಸೌಲಭ್ಯಗಳು ಆಂಡ್ರಾಯ್ಡ್ ಮತ್ತು ಐಫೋನ್ ಅಪ್ಲಿಕೇಶನ್‌ಗಳಿಗೂ ದೊರೆಯಲಿದೆ.

ಅಪ್ಲಿಕೇಶನ್‌ಗೆ ಸೇರಿಸಲಾಗಿರುವ ಇತರ ವೈಶಿಷ್ಟ್ಯಗಳೆಂದರೆ ಪ್ರೈವಸಿ ಸೆಟ್ಟಿಂಗ್ಸ್, ಮೀಡಿಯಾ ಆಟೋ ಡೌನ್‌ಲೋಡ್ ಸೆಟ್ಟಿಂಗ್ಸ್, ಕಸ್ಟಮ್ ನೋಟಿಫಿಕೇಶನ್ ಟೋನ್ಸ್, ವಿವಿಧ ಎನ್‌ಹ್ಯಾನ್ಸ್‌ಮೆಂಟ್‌ಗಳು ಮತ್ತು ಬಗ್ ಫಿಕ್ಸಸ್‌ಗಳಾಗಿವೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot