5೦೦ ಮಿಲಿಯನ್ ಬಳಕೆದಾರರ ಸಂಗಾತಿಯಾದ ವಾಟ್ಸಪ್: ಬಳಕೆಯಲ್ಲಿ ಭಾರತದ್ದೇ ಮೇಲುಗೈ

By Shwetha
|

ತ್ವರಿತ ಸಂದೇಶ ಕಳುಹಿಸುವಿಕೆಯ ಆಪ್ಸ್‌ಗಳು ಈಗೀಗ ವಿಶ್ವದಾದ್ಯಂತ ಸಂಚಲನವನ್ನೇ ಉಂಟುಮಾಡುತ್ತಿದೆ. ಹೌದು ಮೊಬೈಲ್‌ಗಳಲ್ಲಿ ಈ ತರದ ಆಪ್‌ಗಳು ಸಂದೇಶ ರವಾನಿಸುವ ವೇಗವನ್ನು ತ್ವರಿತಗೊಳಿಸಿದೆ ಮತ್ತು ಹೊಸ ಬದಲಾವಣೆಗೆ ಕಾರಣವಾಗಿದೆ. ಫೇಸ್‌ಬುಕ್ ಮೆಸೆಂಜರ್ ಬಿಬಿಎಮ್ ಸೇವೆಯಂತೆಯೇ ಈಗೀಗ ತನ್ನ ಜಾಗೃತಿಯನ್ನು ಬಹುವಾಗಿ ನಿರ್ಮಿಸಿಕೊಳ್ಳುತ್ತಿರುವ ಇನ್ನೊಂದು ಐಎಮ್ ಆಗಿದೆ ವಾಟ್ಸಪ್. ಹೌದು ತ್ವರಿತ ಸಂದೇಶ ವಾಹಕ (ಇನ್‌ಸ್ಟಾಂಟ್ ಮೆಸೆಂಜರ್) ವಾಟ್ಸಪ್ ಬಗ್ಗೆ ತಿಳಿಯದವರು ಯಾರೂ ಇಲ್ಲ ಎಂದೇ ಹೇಳಬಹುದು. ಬಳಸಲು ಸರಳ ಹಾಗೂ ಸುಲಭವಾಗಿರುವ ವಾಟ್ಸಪ್ ಬರಿಯ ಸಂದೇಶ ಕಳುಹಿಸಲು ಮಾತ್ರವಲ್ಲದೆ, ಪೋಟೋ ಶೇರಿಂಗ್, ಉಚಿತ ಕರೆ ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುಲಭವಾಗಿ ಸಂದೇಶವನ್ನು ತಲುಪಿಸುವ ಈ ಆಪ್ಸ್ ಎಲ್ಲರ ಫೇವರೇಟ್ ಎಂದೇ ಹೇಳಬಹುದು.

ಬರೀಯ ವಿದೇಶಗಳಲ್ಲಿ ಮಾತ್ರ ಜನಪ್ರಿಯವಾಗಿರದೇ ಭಾರತದಲ್ಲಿ ನವ ಅಲೆಯನ್ನೇ ಎಬ್ಬಿಸಿರುವ ವಾಟ್ಸಪ್ ಭಾರತೀಯರ ಮೇಚ್ಚುಗೆಗೆ ಪಾತ್ರವಾಗಿದೆ. 500 ಮಿಲಿಯನ್ ವಾಟ್ಸಪ್ ಬಳಕೆದಾರರು ವಿಶ್ವದಾದ್ಯಂತ ಇದ್ದು ಅದರಲ್ಲಿ 40 ಮಿಲಿಯನ್ ಭಾರತೀಯರಾಗಿದ್ದಾರೆ ಎಂಬುದೇ ಇಲ್ಲಿ ಪ್ಲಸ್ ಪಾಯಿಂಟ್. ವಾಟ್ಸಪ್ ಹೆಚ್ಚಾಗಿ ಎಲ್ಲರಿಗೂ ತಿಳಿದಿರುವ ತ್ವರಿತ ಸಂದೇಶಕ. ಯುವಕರು, ಮಧ್ಯವಯಸ್ಸಿನವರು, ಬಿಸಿನೆಸ್ ಮ್ಯಾನ್‌ಗಳು ಹೀಗೆ ಪ್ರತಿಯೊಬ್ಬರ ಸಂಗಾತಿಯಾಗಿದೆ ವಾಟ್ಸಪ್. ಜಗತ್ತಿನಲ್ಲಿ ವಾಟ್ಸಪ್ ಬಗ್ಗೆ ತಿಳಿಯದವರು ಯಾರೂ ಇಲ್ಲವೆಂದೇ ಹೇಳಬಹುದು.

5೦೦ ಮಿಲಿಯನ್ ಬಳಕೆದಾರರ ಸಂಗಾತಿಯಾದ ವಾಟ್ಸಪ್: ಬಳಕೆಯಲ್ಲಿ ಭಾರತದ್ದೇ ಮೇಲುಗೈ

ತನ್ನ ಮೊದಲ ಹೆಜ್ಜೆಯನ್ನು ಸಾಧಾರಣವಾಗಿ ಇಟ್ಟಿದ್ದ ವಾಟ್ಸಪ್ ತನ್ನ ವಿಸ್ತಾರವನ್ನು ಅಲ್ಪಾ ಅವಧಿಯಲ್ಲೇ ನಿರ್ಮಾಣಮಾಡಿಕೊಂಡಿದೆ. ಜಗತ್ತಿನಾದ್ಯಂತ ಈ ಆಪ್ ಅನ್ನು ಬಳಸುವವರ ಸಂಖ್ಯೆ 500 ಮಿಲಿಯನ್ ಎಂದರೆ ನೀವೂ ನಂಬಲೇಬೇಕು. ಅಷ್ಟೊಂದು ಪಾಪ್ಯುಲಾರಿಟಿ ಇದಕ್ಕಿದೆ. ಅದರಲ್ಲೂ 48 ಮಿಲಿಯನ್ ಬಳಕೆದಾರರು ಭಾರತದಲ್ಲಿದ್ದಾರೆ ಎಂಬುದೇ ವಾಟ್ಸಪ್ ಪ್ರಸಿದ್ಧಿಯನ್ನು ಹೇಳುತ್ತದೆ.

ಬ್ರೆಜಿಲ್, ಭಾರತ, ಮೆಕ್ಸಿಕೋ, ರಷ್ಯಾ ಹೀಗೆ ಇತರ ದೇಶಗಳಲ್ಲಿ ತೀವ್ರ ಪ್ರಬಲವಾಗಿ ಬೆಳೆಯುತ್ತಿರುವ ವಾಟ್ಸಪ್ 700 ಕ್ಕಿಂತಲೂ ಹೆಚ್ಚಿನ ಫೋಟೋಗಳು ಹಾಗೂ ೧೦೦ ಕ್ಕಿಂತಲೂ ಹೆಚ್ಚಿನ ವೀಡಿಯೋಗಳನ್ನು ದಿನವೊಂದರಲ್ಲಿ ಬಳಕೆದಾರರು ವಾಟ್ಸಪ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ ಎಂದು ವಾಟ್ಸಪ್ ಸಹ ಸ್ಥಾಪಕ ಜಾನ್ ಕೋಮ್ ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಬದಲಾವಣೆಗಳನ್ನು ತರುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಅವರು ವಾಟ್ಸಪ್ ಅನ್ನು ಇನ್ನಷ್ಟು ಪ್ರಬಲಗೊಳಿಸುವ ಬಗೆಗೆ ಚಿಂತನೆಗಳನ್ನು ತಿಳಿಸಿದ್ದಾರೆ. ಕೇವಲ 500 ಮಿಲಿಯನ್ ಜನರು ಮಾತ್ರ ಇದರಲ್ಲಿ ನೋಂದಾಯಿಸಿಕೊಳ್ಳದೆ ಸಕ್ರಿಯ ಬಳಕೆದಾರರು ಸಹ ಆಗಿದ್ದಾರೆ. ಫೇಸ್‌ಬುಕ್ ಬಾಸ್ ಮಾರ್ಕ್ ಝೂಕರ್‌ಬರ್ಗ್ ಕೂಡ ಸೇವೆಯನ್ನು ಖರೀದಿಸಲು ಯಾಕೆ ಆಸಕ್ತರಾಗಿರುವುದರ ಮಾಹಿತಿಯನ್ನು ಅವರು ಬಹಿರಂಗ ಪಡಿಸಿದ್ದಾರೆ.

ಭಾರತದಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದಿರುವ ವಾಟ್ಸಪ್ ಒಂದು ಜನಪ್ರಿಯ ಐಎಮ್ ಸರ್ವೀಸ್ ಆಗಿದೆ ಎಂಬುದರಲ್ಲಿ ಸಂಶಯವಿಲ್ಲ. ತಿಂಗಳಿನಲ್ಲೇ ವಾಟ್ಸಪ್ ಬಳಕೆದಾರರು 4 ಮಿಲಿಯನ್ ಆಗಿದ್ದು ಮೇ ತಿಂಗಳಿನಲ್ಲಿ ಬಳಕೆದಾರರ ಸಂಖ್ಯೆ 50 ಮಿಲಿಯನ್‌ಗೆ ದಾಟಬಹುದೆಂಬುದು ವಾಟ್ಸಪ್‌ನ ನೀರಜ್ ಆರೋರಾ ತಿಳಿಸಿದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X