ಇದೀಗ ನೋಕಿಯಾ ಬನಾನ ಫೋನಿನಲ್ಲಿ ವಾಟ್ಸ್ಆಪ್ ಲಭ್ಯ

|

ನೋಕಿಯಾ ಕಂಪನಿಯ ಬಹು ನಿರೀಕ್ಷೆಯ ನೋಕಿತಾ 8110 4G ಬನಾನ ಫೋನಿನಲ್ಲಿ ವಾಟ್ಸ್ ಆಪ್​ ಕೂಡ ಬಳಸುವ ಆಯ್ಕೆ ಸಿಕ್ಕಿದೆ. 1996ರ ತನ್ನ ಹಳೆಯ ಚಾಂಪಿಯನ್ ಸ್ಲೈಡರ್​ ​ಹ್ಯಾಂಡ್​ಸೆಟ್​​ನ್ನು ಮತ್ತಷ್ಟು ವಿನ್ಯಾಸಗೊಳಿಸಿ ನೋಕಿಯಾ 8110 4Gಯನ್ನು ನಿರ್ಮಿಸಿರುವ ನೋಕಿಯಾ ಕಂಪೆನಿ ಈ ಫೋನಿನಲ್ಲಿ ವಾಟ್ಸ್ ಆಪ್ ಮಾತ್ರವಲ್ಲದೆ, ಗೂಗಲ್​ ಅಸಿಸ್ಟೆಂಟ್​, ಗೂಗಲ್​ ಮ್ಯಾಪ್​, ಗೂಗಲ್​ ಸರ್ಚ್​, ಫೇಸ್​ಬುಕ್​, ಟ್ವಿಟ್ಟರ್​ ಸೇರಿದಂತೆ ಕೆಲ ಆಪ್​ಗಳನ್ನು ಬಳಕೆ ಮಾಡಬಹುದು ಎಂದು ತಿಳಿಸಿದೆ.

ನೋಕಿಯಾ 8110 ಮೊಬೈಲ್​ ಅನ್ನು ಹೊಸ ವಿನ್ಯಾಸದ ಮೂಲಕ ಮಾರುಕಟ್ಟೆಗೆ ಪರಿಚಯಿಸಿದ ನೋಕಿಯಾ 4ಜಿ ತಂತ್ರಜಾನವನ್ನು ಅಳವಡಿಸುದರ ಮೂಲಕ ಜನಮನಗೆದಿತ್ತು. ಕಡಿಮೆ ದರದಲ್ಲಿ ಉತ್ತಮ ಫೀಚರ್​ ನೀಡುವ ಯೋಜನೆ ಮುಂದಿಟ್ಟುಕೊಂಡು ನೋಕಿಯಾ 8110 ಬನಾನ ಮೊಬೈಲ್​ ಅನ್ನು ಬಿಡುಗಡೆ ಮಾಡಿತ್ತು. ಫೋನ್​ನಲ್ಲಿ ಸ್ಲೈಡ್​ಗಳನ್ನು ಬಳಸಿ ಕರೆಗಳನ್ನು ಸ್ವೀಕರಿಸಲು ಮತ್ತು ಕಡಿತ ಮಾಡಬಹುದಾದ ಈ ಫೋನಿನಲ್ಲಿ ಇದೀಗ ವಾಟ್ಸ್ಆಪ್, ಫೇಸ್‌ಬುಕ್ ಅನ್ನು ಬಳಸುವಂತಹ ಫೀಚರ್ಸ್ ನೀಡಿದೆ.

ಇದೀಗ ನೋಕಿಯಾ ಬನಾನ ಫೋನಿನಲ್ಲಿ ವಾಟ್ಸ್ಆಪ್ ಲಭ್ಯ

ಇನ್ನು ಈ ಜಿಯೋ ಫೋನ್​ನಲ್ಲಿ ಬಳಸಲಾಗಿರುವ KaiOS ಅಪರೇಟಿಂಗ್ ಸ್ಟಿಸ್ಟಂ ಇದರಲ್ಲಿದ್ದು, ವಾಟ್ಸಪ್​, ಯೂಟ್ಯೂಬ್ ಮತ್ತು ಗೂಗಲ್ ಅಪ್ಲಿಕೇಶನ್​ಗಳನ್ನು ಈ ಫೋನ್​ನಲ್ಲಿ ಬಳಸಿಕೊಳ್ಳಬಹುದಾಗಿದೆ. ಸ್ನೇಕ್ ಗೇಮ್​ ಅನ್ನು ಈ ಮೊಬೈಲ್​ನಲ್ಲಿ ಹೊಸ ರೀತಿಯಲ್ಲಿ ಸೃಷ್ಟಿಸಿರುವುದು ಮತ್ತೊಂದು ವಿಶೇಷವಾಗಿದೆ. ಹಾಗಾದರೆ, ನೋಕಿಯಾ ಕಂಪೆನಿ ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದ ನೋಕಿಯಾ 8110 ಬನಾನ ಮೊಬೈಲ್​ನ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಕನೆಕ್ಟಿವಿಟಿ

ಕನೆಕ್ಟಿವಿಟಿ

Nokia 8110 4G VoLTE ಕನೆಕ್ಟಿವಿಟಿ ತಂತ್ರಜ್ಞಾನ ಹೊಂದಿದೆ ಮತ್ತು ಇದರಲ್ಲಿ ಡ್ಯುಯೆಲ್ ಸಿಮ್ ಆಯ್ಕೆ ನೀಡಲಾಗಿದೆ.

ಪ್ರೊಸೆಸರ್

ಪ್ರೊಸೆಸರ್

Qualcomm MSM8908 Snapdragon 205 ಪ್ರೊಸೆಸರ್ ಸಾಮರ್ಥ್ಯ ಈ ಫೋನಿನಲ್ಲಿದೆ.

ಮೆಮೊರಿ

ಮೆಮೊರಿ

4GB+512MB ಇನ್​ಬಿಲ್ಟ್​ ಮೆಮೊರಿ ಇದೆ. ಆದರೆ ಮೆಮೊರಿ ಕಾರ್ಡ್​ ಬಳಸುವ ಆಯ್ಕೆ ನೀಡಲಾಗಿಲ್ಲ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

1500 mAh ಬ್ಯಾಟರಿ ಸಾಮರ್ಥ್ಯವನ್ನು ಸಹ ಫೋನ್ ಹೊಂದಿದೆ.

ಕನೆಕ್ಟಿವಿಟಿ ಆಯ್ಕೆ

ಕನೆಕ್ಟಿವಿಟಿ ಆಯ್ಕೆ

HotSpot,Bluetooth,Wi-Fi ಕನೆಕ್ಟಿವಿಟಿ ಆಯ್ಕೆ ಕೂಡ ಇದರಲ್ಲಿದೆ.

ಕ್ಯಾಮೆರಾ

ಕ್ಯಾಮೆರಾ

2 ಮೆಗಾ ಪಿಕ್ಸೆಲ್​ನ ರಿಯರ್​ ಕ್ಯಾಮೆರಾದೊಂದಿಗೆ LED ಫ್ಲಾಶ್​ ನೀಡಲಾಗಿದೆ.

ಪೋರ್ಟ್

ಪೋರ್ಟ್

ರೆಡಿಯೋ, USB ಪೋರ್ಟ್​ ಮತ್ತು ಹೆಡ್​ಫೋನ್​ ಆಯ್ಕೆಗಳಿವೆ.

ಬಣ್ಣಗಳು

ಬಣ್ಣಗಳು

ಬನಾನಾ ಹಳದಿ ಮತ್ತು ಕಪ್ಪು ಬಣ್ಣಗಳಲ್ಲಿ ಈ ಮೊಬೈಲ್ ಲಭ್ಯವಿದೆ.

ಬೆಲೆ

ಬೆಲೆ

4,999 ರೂ.ಗಳು

Best Mobiles in India

English summary
Nokia ‘8110’ gets the messaging app Whatsapp and has made India the first market to receive the update in Nokia’s feature phone, HMD Global, the home of Nokia phones, announced. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X