ಮಕ್ಕಳಿಗೆ ಸ್ಮಾರ್ಟ್‌ಪೋನ್ ನೀಡುವ ಪೋಷಕರೆ ಇದನ್ನೊಮ್ಮೆ ಓದಿ!

|

ಕೆಲವು ವರ್ಷಗಳ ಹಿಂದಷ್ಟೆ ಮೊಬೈಲ್‌ ಎಂಬುದು ನಾವು ಸ್ವಾವಲಂಬಿಗಳಾದ ಅನಂತರ ಸ್ವಂತ ಬಳಕೆಗಾಗಿ ಕೊಂಡುಕೊಂಡು ಬಳಸುವ ಕಾಲವಾಗಿತ್ತು. ಆದರೆ, ಈಗ ಐದು ವರ್ಷದ ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನ ಮಕ್ಕಳೂ ಮೊಬೈಲಿಗೆ ಅಂಟಿಕೊಂಡಿದ್ದಾರೆ. ಇನ್ನೂ ಗಂಭೀರವಾದ ಸಂಗತಿಯಂದರೆ ಇಂದು ಮಕ್ಕಳು ಸ್ವಂತ ಮೊಬೈಲನ್ನೇ ಹೊಂದಿರುತ್ತಾರೆ.

ಹೌವು, ಕೇವಲ ಕರೆ ಮತ್ತು ಸಂದೇಶ ರವಾನೆಗಷ್ಟೇ ಸೀಮಿತವಾಗಿದ್ದ ಮೊಬೈಲ್‌ ಇಂದು ಇಂಟರ್ನೆಟ್, ಕ್ಯಾಮರಾ, ಟಿವಿ, ಸಾಮಾಜಿಕ ಮಾಧ್ಯಮಗಳ ಬಳಕೆಗೂ ಉಪಯೋಗವಾಗಬಲ್ಲ ಸ್ಮಾರ್ಟ್‌ಫೊನ್ ಆಗಿ ಬದಲಾಗಿದೆ. ಈ ಸ್ಮಾರ್ಟ್‌ಫೋನ್ ಎಂಬ ಮಾಯಾ ಪೆಟ್ಟಿಗೆ ಮಕ್ಕಳನ್ನು ಎಷ್ಟು ಆಕರ್ಷಿಸುತ್ತಿದೆ ಎಂದರೆ ಮಕ್ಕಳು ಕೆಲವೇ ದಿನಗಳಲ್ಲಿ ಅದಕ್ಕೆ ದಾಸರಾಗುತ್ತಿದ್ದಾರೆ.

ಮಕ್ಕಳಿಗೆ ಸ್ಮಾರ್ಟ್‌ಪೋನ್ ನೀಡುವ ಪೋಷಕರೆ ಇದನ್ನೊಮ್ಮೆ ಓದಿ!

ತಂತ್ರಜ್ಞಾನವು ಆರೋಗ್ಯಕರವಾಗಿ ಬಳಸಲ್ಪಟ್ಟಾಗ ಮಾತ್ರ ಸಮಾಜದ ಸ್ವಾಸ್ಥ್ಯ ಹೆಚ್ಚುತ್ತದೆ. ಇಂಟರ್ನೆಟ್, ಮೊಬೈಲ್‌ ಗೇಮ್‌ ಇನ್ನಿತರ ಅಂತರ್ಜಾಲಗಳ ಬಳಕೆ ಮಕ್ಕಳಲ್ಲಿ ಜ್ಞಾನಾಭಿವೃದ್ಧಿ ಮಾಡಬೇಕೇ ವಿನಾ ಅವರನ್ನು ತಪ್ಪು ದಾರಿಗೆ ಎಳೆಯುವಂತಾಗಬಾರದು. ಹಾಗಾಗಿ, ಮಕ್ಕಳಿಗೆ ಸ್ಮಾರ್ಟ್‌ಪೋನ್ ನೀಡುವ ಮುನ್ನ ಪೋಷಕರಿಗೆ ಇರಬೇಕಾದ ಎಚ್ಚರಿಕೆಗಳನ್ನು ಮುಂದೆ ಓದಿ.

ಮಕ್ಕಳ ಆರೋಗ್ಯ ಹದಗೆಡುತ್ತಿದೆ!

ಮಕ್ಕಳ ಆರೋಗ್ಯ ಹದಗೆಡುತ್ತಿದೆ!

ಮಕ್ಕಳು ಹೊಸ ವಿಷಯಗಳ ಬಗೆಗೆ ಕುತೂಹಲ ಹೊಂದಿರುವುದು ಸಾಮಾನ್ಯವಾದ ಸಂಗತಿ. ಅದರಲ್ಲಿ ಬೇಡದ ಸಂಗತಿಗಳೆಡೆಗೆ ಬೇಗ ಸೆಳೆಯಲ್ಪಡುತ್ತಾರೆ. ಅತಿಯಾದ ಸ್ಮಾರ್ಟ್‌ಪೋನ್ ಬಳಕೆ ಕೇವಲ ದೇಹಾರೋಗ್ಯವನ್ನು ಹಾಳುಗೆಡಹುವುದಲ್ಲದೆ ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತವೆ. ಇದು ಇಂದಿನ ಗಂಭೀರ ಸಮಸ್ಯೆಯಾಗಿ ಬದಲಾಗಿಬಿಟ್ಟಿದೆ.

ರೇಡಿಯೇಶನ್ ಬಗ್ಗೆ ಎಚ್ಚರವಿರಲಿ!

ರೇಡಿಯೇಶನ್ ಬಗ್ಗೆ ಎಚ್ಚರವಿರಲಿ!

ಕೆಲವು ಅಧ್ಯಯನಗಳ ಪ್ರಕಾರ ಮೊಬೈಲುಗಳಿಂದ ಹೊರಹೊಮ್ಮುವ ರೇಡಿಯೇಶನ್‌ ಮಕ್ಕಳ ಮೆದುಳಿನಲ್ಲಿ ವಯಸ್ಕ ಮೆದುಳಿಗೆ ಹೋಲಿಸಿದಾಗ ಶೇ.60ರಷ್ಟು ಬೇಗ ಗ್ರಹಿಸಲ್ಪಡುತ್ತದೆ ಎನ್ನಲಾಗಿದೆ. ಇದರಿಂದ ಮಕ್ಕಳ ಮಾನಸಿಕ ಆರೋಗ್ಯ ಹದಗಡುತ್ತಿರುವ ಉದಾಹರಣೆಗಳು ಇತ್ತೀಚೆಗೆ ಹೆಚ್ಚುತ್ತಿರುವುದನ್ನು ಮಾಧ್ಯಮಗಳಲ್ಲಿ ನೀವು ನೋಡಬಹುದು.

ಪೋಷಕರ ಆದ್ಯ ಕರ್ತವ್ಯವೇನು?

ಪೋಷಕರ ಆದ್ಯ ಕರ್ತವ್ಯವೇನು?

ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್‌ ಬಳಸುವ ಸ್ವಾತಂತ್ರ್ಯವನ್ನು ನೀಡಬೇಕೆಂಬುದರ ಅರಿವು ಪೋಷಕರಿಗಿರುವುದು ಅಗತ್ಯವಾಗಿದೆ. ಬ್ಲೂ ವೇಲ್‌ನಂತಹ ಅಪಾಯಕಾರಿ ಆಟಗಳು ಹೇಗೆ ಚಿಕ್ಕ ಪ್ರಾಯದ ಮಕ್ಕಳನ್ನು ಬಲಿತೆಗೆದುಕೊಳ್ಳುವುದನ್ನು ಎಲ್ಲರೂ ತಿಳಿದಿರುವುದರಿಂದ ಆದಷ್ಟು ಮಕ್ಕಳಲ್ಲಿ ಮೊಬೈಲ್‌ ಬಳಕೆಯನ್ನು ಕಡಿಮೆಗೊಳಸುವುದು ಪೋಷಕರ ಆದ್ಯ ಕರ್ತವ್ಯ.

ಮೊಬೈಲ್‌ಗಾಗಿ ಹಟ ಮಾಡುತ್ತಿದ್ದರೆ?

ಮೊಬೈಲ್‌ಗಾಗಿ ಹಟ ಮಾಡುತ್ತಿದ್ದರೆ?

ಮಕ್ಕಳ ಮೆದುಳು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಮಕ್ಕಳಿಗೆ ಮೊಬೈಲನ್ನು ನೀಡುವುದು ಸಮಂಜಸವಾದುದಲ್ಲ. ಆದ್ದರಿಂದ ಮಕ್ಕಳಿಂದ ಮೊಬೈಲನ್ನು ದೂರವಿಡುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳು ಮೊಬೈಲ್‌ಗಾಗಿ ಹಟ ಮಾಡುತ್ತಿದ್ದರೆ, ಕೋಪವನ್ನು ತೋರಿಸಬೇಡಿ. ಬದಲಾಗಿ, ಪ್ರೀತಿಯಿಂದ ಮಕ್ಕಳಿಗೆ ತಿಳಿಹೇಳುವ ಕೆಲಸವನ್ನು ಪೋಷಕರು ಮಾಡಬೇಕು.

ದೈಹಿಕ ಆಟಗಳಿಗೆ ಉತ್ತೇಜಿಸಿ.

ದೈಹಿಕ ಆಟಗಳಿಗೆ ಉತ್ತೇಜಿಸಿ.

ಪೋಷಕರು ಮಕ್ಕಳೆದುರು ಆದಷ್ಟು ಮೊಬೈಲ್‌ ಬಳಕೆಯನ್ನು ಕಡಿಮೆಗೊಳಿಸಬೇಕು .ಒಳಾಂಗಣ ಕ್ರೀಡೆಗಳಂತೆ ಹೊರಾಂಗಣ ಕ್ರೀಡೆಗಳನ್ನು ಆಡುವಂತಹ ವಾತಾವರಣವನ್ನು ಸೃಷ್ಟಿಸುವುದು ಸೇರಿದಂತೆ ಮೊಬೈಲಿನಲ್ಲಿ ಆಟಗಳನ್ನಾಡದಂತೆ ಅವರನ್ನು ತಡೆಯಬೇಕು. ದೈಹಿಕ ಆಟಗಳಿಗೆ ಅವರನ್ನು ಉತ್ತೇಜಿಸಲು ಅವುಗಳಲ್ಲಿ ಪೋಷಕರೂ ತೊಡಗಿಕೊಳ್ಳುವುದು ಉತ್ತಮ.

ಇನ್ನಿತರ ಸಲಹೆಗಳು!

ಇನ್ನಿತರ ಸಲಹೆಗಳು!

ಮಕ್ಕಳಿಗೆ ಓದು, ಸಂಗೀತ, ಸಾಹಿತ್ಯ, ಚಿತ್ರಕಲೆ ಮೊದಲಾದ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವಂತೆ ಪ್ರೋತ್ಸಾಹಿಸಿ. ಕಾರುಗಳಲ್ಲಿ ಅಥವಾ ಎಲಿವೇಟರುಗಳಲ್ಲಿ ಮಕ್ಕಳು ಫೋನ್‌ ಕರೆಗಳನ್ನು ಮಾಡದಂತೆ ಎಚ್ಚರವಹಿಸಿ. ಯುಟ್ಯೂಬ್, ಗೂಗಲ್‌ ಇನ್ನಿತರ ವೀಡಿಯೋ ಆಕರಗಳನ್ನು ಮಕ್ಕಳೆದುರು ಬಳಸದಿರುವುದು ನಿಮ್ಮ ಮಕ್ಕಳಿಗೆ ಒಳ್ಳೆಯದು.

Best Mobiles in India

English summary
Deciding when to get your child a smartphone has less to do with age .... Don't makeexcuses for yourself, but try to explain your usage to your .to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X