ವಿಶ್ವದ ನಾಯಕರುಗಳು ಬಳಸುತ್ತಿರುವ ಶಕ್ತಿಶಾಲಿ ಫೋನ್‌ಗಳು

Written By:

ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಇಲ್ಲದೆ ಜೀವನ ನಡೆಸಲು ಸಾಧ್ಯವೇ ಇಲ್ಲ. ವಿಶೇಷವಾಗಿ ಸ್ಮಾರ್ಟ್‌ಫೋನ್ ಇದನ್ನು ಬಿಟ್ಟು ನಾವು ಒಂದಿಂಚೂ ಕದಲಲಾರೆವು. ನಮ್ಮಂತಹ ಸಾಮಾನ್ಯ ಜನರ ಜೀವನ ಈ ರೀತಿಯದ್ದಾಗಿದ್ದರೆ ಇನ್ನು ವಿಶ್ವದ ನಾಯಕರುಗಳು ನಿಜಕ್ಕೂ ಅವರೆಷ್ಟು ಸ್ಮಾರ್ಟ್ ಆಗಿರಬೇಡ ಅಲ್ಲವೇ? ತಮ್ಮ ವೃತ್ತಿಪರ ಬಳಕೆಗಾಗಿ, ಖಾಸಗಿ ಜೀವನಕ್ಕಾಗಿ ಹೀಗೆ ತಮ್ಮ ಪ್ರತಿಯೊಂದು ಅವಶ್ಯಕತೆಗಳಿಗೂ ಇವರುಗಳು ಫೋನ್‌ಗಳನ್ನು ಅವಲಂಬಿಸಿದ್ದಾರೆ.

ಹಾಗಿದ್ದರೆ ವಿಶ್ವ ನಾಯಕರುಗಳು ಬಳಸುತ್ತಿರುವ ಫೋನ್‌ಗಳು ಯಾವುವು ಮತ್ತು ಅವುಗಳ ವಿಶೇಷತೆಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಈ ನಾಯಕರುಗಳ ಫೋನ್‌ಗಳು ಒಂದಿಲ್ಲೊಂದು ವಿಶೇಷತೆಗಳಿಂದ ಕೂಡಿದ್ದು ಅವುಗಳು ಏಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯಾಕ್‌ಬೆರ್ರಿ

ಬ್ಲ್ಯಾಕ್‌ಬೆರ್ರಿ

ಬರಾಕ್ ಒಬಾಮಾ

ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾದ ಬರಾಕ್ ಒಬಾಮಾ ಬ್ಲ್ಯಾಕ್‌ಬೆರ್ರಿ ಫೋನ್ ಅನ್ನು ಬಳಸುತ್ತಾರೆ. ನ್ಯಾಶನಲ್ ಇಂಟಲಿಜೆನ್ಸಿ ಏಜೆನ್ಸಿ ಎನ್‌ಎಸ್‌ಎ ಈ ಫೋನ್‌ನ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದೆ.

ಯಾವುದೇ ಫೋನ್ ಅನ್ನು ಬಳಸುತ್ತಿಲ್ಲ

ಯಾವುದೇ ಫೋನ್ ಅನ್ನು ಬಳಸುತ್ತಿಲ್ಲ

ವ್ಲಾದಿಮರ್ ಪುತಿನ್

ರಷ್ಯಾದ ಅಧ್ಯಕರಾಗಿರುವ ವ್ಲಾದಿಮರ್ ಪುತೀನ್ ಯಾವುದೇ ಫೋನ್ ಅನ್ನು ಬಳಸುತ್ತಿಲ್ಲ ಎಂಬುದು ವರದಿಗಳಿಂದ ತಿಳಿದು ಬಂದಿರುವ ಮಾಹಿತಿಯಾಗಿದೆ. ಮೊಬೈಲ್ ಇದ್ದಲ್ಲಿ ಅದನ್ನು ನಾನು ಆಡಲು ಮಾತ್ರ ಬಳಸುತ್ತೇನೆ ಎಂಬುದು ವ್ಲಾದಿಮರ್ ಹೇಳಿಕೆಯಾಗಿದೆ.

ನೋಕಿಯಾ 6210

ನೋಕಿಯಾ 6210

ಏಂಜಿಲಾ ಮರ್ಕೇಲ್

ಜರ್ಮನ್ ಚಾನ್ಸಲರ್ ಮಾರ್ಕಲ್ ನೋಕಿಯಾ 6210 ಅನ್ನು ಬಳಸುತ್ತಿದ್ದು ಈ ಹಿಂದೆ Z10 ಅನ್ನು ಉಪಯೋಗಿಸುತ್ತಿದ್ದರು.

ಬ್ಲ್ಯಾಕ್‌ಬೆರ್ರಿ

ಬ್ಲ್ಯಾಕ್‌ಬೆರ್ರಿ

ಡೇವಿಡ್ ಕ್ಯಾಮರೂನ್

ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರ ಭದ್ರತಾ ಸಿಬ್ಬಂದಿ ಅವರಿಗೆ ಬ್ಲ್ಯಾಕ್‌ಬೆರ್ರಿ ಫೋನ್ ಅನ್ನು ಬಳಸುವುದು ಬೇಡ ಎಂಬುದಾಗಿ ಸಲಹೆ ನೀಡಿದ್ದರಂತೆ ಏಕೆಂದರೆ ಬರಾಕ್ ಒಬಾಮಾ ಕೂಡ ಇದೇ ಫೋನ್ ಅನ್ನು ಬಳಸುತ್ತಿದ್ದಾರೆಂದು ಅವರು ಸಲಹೆ ನೀಡಿದ್ದರು. ಆದರೆ ಡೇವಿಡ್ ಬ್ಲ್ಯಾಕ್‌ಬೆರ್ರಿಯನ್ನೇ ಬಳಸುತ್ತಿದ್ದಾರೆ.

ಐಫೋನ್

ಐಫೋನ್

ಫ್ರಾಂಕೊಯಿಸ್ ಹೊಲಾಂಡೆ

ಫ್ರಾನ್ಸ್ ಅಧ್ಯಕ್ಷರಾಗಿರುವ ಫ್ರಾಂಕೊಯಿಸ್ ಹೊಲಾಂಡೆ ತನ್ನ ಗೆಳತಿಗೆ ಸಣ್ಣ ಸಂದೇಶಗಳನ್ನು ಐಫೋನ್ ಮೂಲಕ ಕಳುಹಿಸುತ್ತಾರೆ.

ಐಫೋನ್

ಐಫೋನ್

ಮಟ್ಟೆಯೊ ರೆಂಜಿ

ಇಟಲಿಯ ಯುವ ಪ್ರಧಾನಿ ಮಂತ್ರಿಯಾಗಿರುವ ಮಟ್ಟೆಯೊ ರೆಂಜಿ ಐಫೋನ್‌ಗೆ ಹೆಚ್ಚು ಆಕರ್ಷಿತರಾಗಿದ್ದಾರೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್3

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್3

ಶೇಕ್ ಹಸೀನಾ

ಏಷ್ಯಾದ ಹೆಚ್ಚು ಶಕ್ತಿಯುತ ಮಹಿಳೆ ಎಂಬ ಹೆಸರನ್ನು ಪಡೆದುಕೊಂಡವರು ಶೇಕ್ ಹಸೀನಾ. ಇತ್ತೀಚೆಗೆ ಸುದ್ದಿಪತ್ರಿಕೆಯೊಂದು ತಿಳಿಸಿರುವಂತೆ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್3 ಅನ್ನು ಬಳಸುತ್ತಿದ್ದಾರೆ ಎಂಬುದಾಗಿ ತಿಳಿಸಿದೆ.

ಬ್ಲ್ಯಾಕ್‌ಬೆರ್ರಿ

ಬ್ಲ್ಯಾಕ್‌ಬೆರ್ರಿ

ಜಾನ್ ಕೆರ್ರಿ

ಯುಎಸ್‌ನ ವಿದೇಶಿ ಮಂತ್ರಿ ಜಾನ್ ಕೆರ್ರಿ ಬ್ಲ್ಯಾಕ್‌ಬೆರ್ರಿ ಮೊಬೈಲ್ ಫೋನ್ ಅನ್ನು ಬಳಸುತ್ತಿದ್ದಾರೆ.

ಎಚ್‌ಟಿಸಿ

ಎಚ್‌ಟಿಸಿ

ಕಿಮ್ ಜಾಂಗ್

ಉತ್ತರ ಕೊರಿಯಾದ ಸರ್ವಾಧಿಕಾರಿಯಾಗಿರುವ ಕಿಮ್ ಜಾಂಗ್ ಎಚ್‌ಟಿಸಿಯನ್ನು ಬಳಸುತ್ತಿದ್ದಾರೆ. ಥೈವಾನ್‌ನ ಎಚ್‌ಟಿಸಿಯ ಬಳಕೆದಾರರಾಗಿರುವ ಕಿಮ್ ಜಾಂಗ್ ಫೋನ್ ವಿಷಯದಲ್ಲಿ ತಮ್ಮದೇ ಕಟ್ಟುಪಾಡುಗಳನ್ನು ಹೊಂದಿದ್ದಾರೆ. ಮೊಬೈಲ್ ಫೋನ್ ಮೂಲಕ ಇಂಟರ್ನೆಟ್ ಬಳಸುವುದನ್ನು ಈ ದೇಶದಲ್ಲಿ ನಿಷೇಧಿಸಲಾಗಿದೆ. ದೇಶದೊಳಗೆ ಫೋನ್ ಬಳಕೆದಾರರು ಕರೆಗಳನ್ನು ಮಾಡಲು ಮತ್ತು ಪಠ್ಯ ಸಂದೇಶಗಳನ್ನು ಕಳುಹಿಸಲು ಮಾತ್ರವೇ ಫೋನ್ ಬಳಸಬಹುದಾಗಿದೆ.

ಆಪಲ್ ಫೋನ್‌

ಆಪಲ್ ಫೋನ್‌

ನರೇಂದ್ರ ಮೋದಿ

ನರೇಂದ್ರ ಮೋದಿ ಭಾರತದ ಮುಂದಿನ ಪ್ರಧಾನಿ ನರೇಂದ್ರ ಮೋದಿ ಆಪಲ್ ಫೋನ್‌ನ ಪ್ರೇಮಿಗಳು. ಚುನಾವಣೆಯಲ್ಲಿ ಗೆದ್ದ ನಂತರ ತಮ್ಮ ಫೋನ್‌ನಲ್ಲಿ ತಾವೇ ತೆಗೆದ ಸೆಲ್ಫೀಯನ್ನು ಕೂಡ ಅವರು ಅಪ್‌ಲೋಡ್ ಮಾಡಿದ್ದಾರೆ.

ಬ್ಲಾಕ್‌ಬೆರ್ರಿ ಫೋನ್ ಪ್ರಿಯೆ

ಬ್ಲಾಕ್‌ಬೆರ್ರಿ ಫೋನ್ ಪ್ರಿಯೆ

ಹಿಲೆರಿ ಕ್ಲಿಂಟನ್

ಹಿಲೆರಿ ಕ್ಲಿಂಟನ್ ಹೆಚ್ಚಿನ ಬಾರಿ ಈ ಕಂಪೆನಿಯ ಫೋನ್ ಅನ್ನು ಬಳಸುತ್ತಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you information on which phone does obama and other world leaders use, what is the speciality of their phone. Here is the brief information.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot