ಮೋದಿ ಕರೆಯೂ ಕಟ್ ಆಯಿತು..! ಕಾಲ್ ಡ್ರಾಪ್‌ಗೆ ಕಾರಣವಾದರೂ ಏನು..?
ಮಿಲಿಯನ್ ಗಟ್ಟಲೆ ಬಳಕೆದಾರರದ್ದು ಆಗುವಂತೆ ಪ್ರಧಾನ ಮಂತ್ರಿ ಮೋದಿಯ ಕರೆಯೂ ಕಟ್ ಆಗುತ್ತಂತೆ. ಆದರೆ ಈ ವಾಸ್ತವತೆಗೆ ಪರಿಹಾರ ಮಾಡುವುದು ಮಾತ್ರ ಅಷ್ಟು ಸುಲಭದ ಕೆಲಸವಲ್ಲ. ಇಟಿ ಅಧಿಕಾರಿಗಳು ಈ ನಿಟ್ಟಿನಲ್ಲಿ ಟೆಲಿಕಾಂ ಸಂಸ್ಥೆಗಳ ಜೊತೆ ಆಫ್ ದಿ ರೆಕಾರ್ಡ್( ದಾಖಲೆ ರಹಿತ ಸಂಭಾಷಣೆ)ಯನ್ನು ನಡೆಸಿದ್ದಾರೆ.


ಭಾರತೀಯರು ಅತೀ ಹೆಚ್ಚು ಮಾತನಾಡುತ್ತಾರೆ!
ಏರ್ ಟೆಲ್, ವಡಾಫೋನ್-ಐಡಿಯಾ ಮತ್ತು ರಿಲಯನ್ಸ್ ಜಿಯೋ ಇಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಟೆಲ್ಕೋ ಕಾರ್ಯನಿರ್ವಾಹಕ ಅಧಿಕಾರಿಗಳು ಹೇಳುವಂತೆ ಈ ಸಮಸ್ಯೆಗೆ ಮೂಲ ಕಾರಣಗಳು ಹತ್ತು ಹಲವು ಇದೆ. ಕಳೆದೆರಡು ವರ್ಷಗಳಲ್ಲಿ ಭಾರತೀಯರು ಅತೀ ಹೆಚ್ಚು ಮಾತನಾಡುತ್ತಿದ್ದಾರೆ ಅಂದರೆ ಧ್ವನಿ ಕರೆಗಳ ಸೇವೆಯನ್ನು ಬಳಸುವವರ ಸಂಖ್ಯೆಯು ದ್ವಿಗುಣಗೊಂಡಿದೆ. ಈ ನಿಟ್ಟಿನಲ್ಲಿ ವಾಯ್ಸ್ ರೇಟ್ ಕಡಿಮೆ ಪ್ರಮಾಣದಲ್ಲಿದೆ.
ಇನ್ನು ಕೆಲವು ಸಂದರ್ಬಗಳಲ್ಲಿ ಉಚಿತ ಕರೆಗಳ ಸೇವೆಯೂ ಲಭ್ಯವಿದೆ. ಇನ್ನು ಟೆಲಿಕಾಂನ ಮೂಲ ಸೌಕರ್ಯವು ಡಾಟಾಗಳ ಕಡೆಗೆ ಹೆಚ್ಚು ಒಲವು ನೆಟ್ಟಿದೆ. ಸ್ಪರ್ದಾ ಜಗತ್ತಿನಲ್ಲಿ ಈ ಡಾಟಾ ದರಗಳು ಕೂಡ ಭಾರೀ ಮಟ್ಟದಲ್ಲಿ ಇಳಿಮುಖವಾಗುತ್ತಿದೆ. ಹಾಗಾಗಿ ಕಡಿಮೆ ಪ್ರೋತ್ಸಾಹ ಧನದಲ್ಲಿ ಸಂಪನ್ಮೂಲಗಳನ್ನು ನಿರ್ವಹಿಸುವುದು ಮತ್ತು ಮೂಲಭೂತ ಸೌಕರ್ಯವನ್ನು ಬಳಸಿ ಅಪ್ ಗ್ರೇಡ್ ಮಾಡುವುದು ಟೆಲ್ಕೋಗಳಿಗೆ ಕಷ್ಟವಾಗುತ್ತಿದೆ.

ಪಿಎಂ ಸಮಸ್ಯೆಗೆ ಪರಿಹಾರವೇನು?
ಮೋದಿ ತಿಳಿಸಿರುವ ಸಮಸ್ಯೆಯ ಕುರಿತಂತೆ, ಟೆಲಿಕಾಂ ಸೆಕ್ರೆಟರಿ ಆಗಿರುವ ಅರುಣಾ ಸುಂದರಾಜನ್ ಹೇಳಿಕೆ ನೀಡಿದ್ದು ಸಂಬಂಧಪಟ್ಟ ಇಲಾಖೆ ಈ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ ಅವರು ಹೇಳುವಂತೆ ಆಪರೇಟರ್ ಗಳು(ಏರ್ ಟೆಲ್, ವಡಾಫೋನ್-ಐಡಿಯಾ) ಗಳು 2ಜಿ ಟವರ್ ಗಳ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿದ್ದು 4ಜಿ ಟವರ್ ಗಳನ್ನು ನಿರ್ಮಿಸುತ್ತಿದ್ದಾರೆ. ಇದೀಗ 2ಜಿ ಟವರ್ ಗಳ ತಯಾರಿಕೆಯಲ್ಲಿ ಯಾರೂ ಕೂಡ ಬಂಡವಾಳ ಹೂಡುತ್ತಿಲ್ಲ. ಹಾಗಾಗಿ ವಾಯ್ಸ್ ಸ್ಪೆಕ್ಟ್ರಮ್ ನ ನೆಟ್ ವರ್ಕ್ ಗಳಲ್ಲಿ ಕರೆಯ ದಟ್ಟಣೆಯು ಅಧಿಕಗೊಳ್ಳುತ್ತದೆ. ಇನ್ನು ರಿಲಯನ್ಸ್ ಜಿಯೋ ವಾಯ್ಸ್ ಓವರ್ LTE (VoLTE) ಯನ್ನು ತನ್ನ ವಾಯ್ಸ್ ಸೇವೆಗಳಿಗಾಗಿ ಬಳಸುತ್ತಿದೆ.

ಉಚಿತ ಕರೆಗಳ ಪರಿಣಾಮ ಇದು!
ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಜನರಲ್ ಡೈರೆಕ್ಟರ್ ಆಗಿರುವ ರಂಜನ್ ಮ್ಯಾಥ್ಯೂಸ್ ಅವರು ವಾಯ್ಸ್ ಸೇವೆಗಳನ್ನು ಉಚಿತವಾಗಿ ನೀಡುತ್ತಿರುವ ಪರಿಣಾಮವೇ ಇದು ಎಂದು ಹೇಳಿದ್ದಾರೆ.

ಕರೆಗಳಿಗೆ ದರ ನಿಗದಿಯಾದರೆ ಮಾತ್ರ ಪರಿಹಾರ:
ರಿಲಯನ್ಸ್ ಸೆಕ್ಯುರಿಟಿಯ ಸಂಶೋಧನಾ ಮುಖ್ಯಸ್ಥ ಮತ್ತು ಟೆಲಿಕಾಂ ತಜ್ಞರಾಗಿರುವ ನವೀನ್ ಕುಲಕರ್ಣಿ ಅವರು ಹೇಳಿಕೆ ನೀಡಿರುವಂತೆ ತಾರಿಫ್ ಪ್ಲಾನ್ ಗಳ ದರವು ಅಧಿಕವಾದರೆ ಮಾತ್ರ ಕರೆಗಳ ಕಟ್ ಆಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಕರೆಗಳಿಗೆ ದರಗಳು ನಿಗದಿಯಾದಾಗ ಮೊಬೈಲ್ ನೆಟ್ ವರ್ಕ್ ಮೇಲಿನ ಒತ್ತಡವು ಕಡಿಮೆಯಾಗುತ್ತದೆ ಎಂದಿದ್ದಾರೆ.

ಬಿಡುವಿಲ್ಲದೆ ಸೇವೆ ನೀಡುವ ನೆಟ್ ವರ್ಕ್ ಗಳು:
ಭಾರತೀ ಏರ್ ಟೆಲ್ ನ ಮಾಜಿ ಸಿಇಓ ಸಂಜಯ್ ಕಪೂರ್ ತಿಳಿಸುವಂತೆ, ಕಡಿಮೆ ದರದ ಟೆಲಿಕಾಂ ಪ್ಲಾನ್ ಗಳೇ ಈ ಸಮಸ್ಯೆಗೆ ಪ್ರಮುಖ ಕಾರಣ. ವಾಯ್ಸ್ ಕಾಲಿಂಗ್ ನ ಉಚಿತ ಸೇವೆಯು ನೆಟ್ ವರ್ಕ್ ಗಳನ್ನು ಆಯಾಸಗೊಳಿಸುತ್ತಿದೆ. ನೆಟ್ ವರ್ಕ್ ಗಳು ಬಿಡುವಿಲ್ಲದಂತೆ ಕಾರ್ಯ ನಿರ್ವಹಿಸುತ್ತಿದೆ ಮತ್ತು ಅವುಗಳಿಗೆ ವಿರಾಮವೇ ಇಲ್ಲ. ಹಾಗಾಗಿ ಅವುಗಳ ಎಂಜಿನ್ ಗಳ ದುರಸ್ತಿಗೂ ಸರಿಯಾದ ಆದಾಯ ಲಭ್ಯವಾಗುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಿಲಯನ್ಸ್ ಜಿಯೋ ಪ್ರಮುಖ ಕಾರಣ:
ಏರ್ ಟೆಲ್ ಮತ್ತು ವಡಾಫೋನ್ ಗಳು ರಿಲಯನ್ಸ್ ಜಿಯೋ ಯಿಂದ ಎದುರಾಗುವ ಸ್ಪರ್ಧೆಯನ್ನು ನಿಭಾಯಿಸುವ ಕಾರಣದಿಂದಾಗಿ ಕಡಿಮೆ ದರವನ್ನು ಅನಿವಾರ್ಯವಾಗಿ ಬಿಡುಗಡೆಗೊಳಿಸಬೇಕಾಯಿತು. ಮುಖೇಶ್ ಅಂಬಾನಿ ಮಾಲೀಕತ್ವದ ಜಿಯೋ ಕಳೆದೆರಡು ವರ್ಷಗಳಲ್ಲಿ ಮಾರುಕಟ್ಟೆಯ ಮೌಲ್ಯವನ್ನೇ ಬದಲಿಸಿಬಿಟ್ಟಿದೆ. ಗ್ರಾಹಕರಿಗೆ ಉಚಿತ ವಾಯ್ಸ್ ಕಾಲ್ ಸೌಲಭ್ಯ ನೀಡಿದ್ದರ ಪರಿಣಾಮ ಮತ್ತು ಹೆಚ್ಚು ಡಾಟಾವನ್ನು ಕಡಿಮೆ ಬೆಲೆಯನ್ನು ನೀಡಿದ ಕಾರಣದಿಂದ ಇತರರು ಕೂಡ ಇದಕ್ಕೆ ಒಪ್ಪಿಕೊಳ್ಳುವಂತಾಯಿತು. ಇಲ್ಲದಿದ್ದರೆ ಅವರ ಅಸ್ತಿತ್ವಕ್ಕೆ ಪೆಟ್ಟು ಬೀಳುವಂತಾಯಿತು.

VoLTE ನಲ್ಲಿ ಖರ್ಚು ಕಡಿಮೆ:
ಕೆಲವು ವಿಶ್ಲೇಷಣಾಕಾರರು ಅಭಿಪ್ರಾಯ ಪಡುವಂತೆ ವಾಯ್ಸ್ ಓವರ್ (Voice over LTE ಅಥವಾ VoLTE) ಸೇವೆಯನ್ನು ಕಡಿಮೆ ಖರ್ಚಿನಲ್ಲಿ ಗ್ರಾಹಕರಿಗೆ ನೀಡಲು ಸಾಧ್ಯವಾಗುತ್ತದೆ. ಅದು ತನ್ನ ಹೈಬ್ರಿಡ್ ನೆಟ್ ವರ್ಕ್ ಗಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಸರ್ಕ್ಯೂಟ್ ಸ್ವಿಚ್, ಅಥವಾ ಹಳೆಯ ನೆಟ್ ವರ್ಕ್ ಆಪರೇಟರ್ ಅಥವಾ ಹೈಬ್ರಿಟ್ ತಂತ್ರಗಾರಿಕೆಯಲ್ಲಿ ಹೆಚ್ಚು ಖರ್ಚಿದೆ.

ಅಂತಿಮ ಪರಿಹಾರ ಏನು?
ಅನಾಲಿಸಿಸ್ ಮೇಸನ್ ನಲ್ಲಿ ಭಾರತ ಮತ್ತು ಮಧ್ಯಪ್ರಾಚ್ಯದ ಮುಖ್ಯಸ್ಥರು ಆಗಿರುವ ರೋಹನ್ ಧಾಮಿಜಾ ಅವರು ಅಭಿಪ್ರಾಯ ವ್ಯಕ್ತಪಡಿಸುವಂತೆ ಈ ಸಮಸ್ಯೆಗೆ ಅಂತಿಮ ಪರಿಹಾರ ಅಥವಾ ತತ್ ಕ್ಷಣದ ಪರಿಹಾರವೆಂದರೆ ಕಡಿಮೆ ವೆಚ್ಚದಲ್ಲಿ ನಿರ್ವಹಿಸಬಹುದು VoLTE ಮಾದರಿಯ 4ಜಿ ನೆಟ್ ವರ್ಕ್ ಸೇವೆಗಳಿಗೆ ಎಲ್ಲಾ ಟೆಲಿಕಾಂ ಆಪರೇಟರ್ ಗಳು ತಮ್ಮ ನೆಟ್ ವರ್ಕ್ ಗಳನ್ನು ಬದಲಾವಣೆ ಮಾಡಿಕೊಳ್ಳುವುದು." ಆದರೆ ಇದನ್ನು ಸಾಧಿಸುವುದಕ್ಕೂ ಹೆಚ್ಚಿನ ಬಂಡವಾಳ ಬೇಕಾಗುತ್ತದೆ ಎಂಬುದು ನೆನಪಿರಲಿ.

ನೆಟ್‌ವರ್ಕ್ ಉತ್ತಮವೇ ಪರಿಹಾರ
COAI ನ ಮ್ಯಾಥ್ಯೂಸ್ ಅವರು ಅಭಿಪ್ರಾಯದಂತೆ ಇನ್ನೊಂದು ಪರಿಹಾರವನ್ನೂ ಕಂಡುಕೊಳ್ಳಲು ಸಾಧ್ಯವಿದೆ. ವಾಯ್ಸ್ ಕರೆಗಳ ವೆಚ್ಚವನ್ನು ಅಲ್ಪಮಟ್ಟಿಗೆ ಹೆಚ್ಚುಗೊಳಿಸಿ 3ಜಿ ನೆಟ್ ವರ್ಕ್ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವುದು ಮತ್ತು 4ಜಿ ನೆಟ್ ವರ್ಕ್ ಸೇವೆಗೆ ಸರಿಸಮನಾಗುವಂತಹ ತಂತ್ರಗಾರಿಕೆಯನ್ನು ಅದರಲ್ಲಿ ಬಳಸಲು ಪ್ರಾರಂಭಿಸುವುದನ್ನು ಮಾಡಬೇಕು. ಹೀಗೆ ಮಾಡಿದರೆ ಸ್ವಲ್ಪಮಟ್ಟಿಗಾದರೂ ಈ ಸಮಸ್ಯೆಗೆ ಪರಿಹಾರ ಕಾಣಬಹುದು. ಇಲ್ಲದೇ ಇದ್ದಲ್ಲಿ ಪಿಎಂ ಕರೆ ಕೂಡ ಕಟ್ ಆಗುತ್ತದೆ ಎನ್ನುತ್ತಾರೆ ಅವರು.


Click it and Unblock the Notifications








