ಪೊಕೊ ಫೋನ್‌ಗಾಗಿ ಸುಳ್ಳು ಹೇಳಿದ ಶಿಯೋಮಿ: ಈ ಫೋಟೋ ಅದಕ್ಕೆ ಸಾಕ್ಷಿ..!
ಚೀನಾ ಮೂಲದ ಶಿಯೋಮಿ ತನ್ನ ಪೊಕೊ ಸಬ್ ಬ್ರಾಂಡಿನ ಮೂಲಕ ಲಾಂಚ್ ಮಾಡಿದ್ದ ಪೊಕೊ F1 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕಡಿಮೆ ಬೆಲೆಗೆ ಅತೀ ಹೆಚ್ಚಿನ ಪ್ರಮಾಣ ಆಯ್ಕೆಗಳನ್ನು ಹೊಂದುವ ಮೂಲಕ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳ ಅರ್ಧ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಈ ಸ್ಮಾರ್ಟ್‌ಫೋನಿನ ಕ್ಯಾಮೆರಾದಲ್ಲಿ ತೆಗೆಯಲಾಗಿದೆ ಎನ್ನುವ ಫೋಟೋವೊಂದು ಈಗ ವಿವಾದಕ್ಕೆ ಗುರಿಯಾಗಿದೆ.

ಈ ಹಿಂದೆ ಹುವಾವೆ ಸ್ಮಾರ್ಟ್‌ಫೋನ್ ನಲ್ಲಿ ತೆಗೆದ ಫೋಟೋ ಎಂದು DSLRನಲ್ಲಿ ತೆಗೆದ ಫೋಟೋವನ್ನು ಪ್ರದರ್ಶಿಸುವ ಮೂಲಕ ಜಾಗತಿಕವಾಗಿ ಸದ್ದು ಮಾಡಿತ್ತು. ಇದಾದ ನಂತರದಲ್ಲಿ ಪೊಕೊ ಸ್ಮಾರ್ಟ್‌ಫೋನ್ ಇದೇ ರೀತಿಯಲ್ಲಿ ಯಾಮಾರಿಸಿದೆ ಎನ್ನುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದೆ ಮತ್ತು ಇದಕ್ಕೆ ಸಾಕ್ಷಿಯನ್ನು ನೀಡಲಾಗುತ್ತದೆ. ಆ ಕುರಿತು ಮಾಹಿತಿಯೂ ಮುಂದಿದೆ.

Mi Mix 2S ನಲ್ಲಿ ತೆಗೆದ ಫೋಟೊ:
ಪೊಕೊ ಸ್ಮಾರ್ಟ್‌ಪೊನಿನಲ್ಲಿ ತೆಗೆದ ಫೋಟೊ ಎಂದು ಪ್ರದರ್ಶಿಸಿರುವ ಶಿಯೋಮಿ, ಅದೇ ಫೋಟೋವನ್ನು ಈ ಹಿಂದೆ Mi Mix 2S ನಲ್ಲಿ ತೆಗೆದ ಫೋಟೊವನ್ನು ಬಳಕೆ ಮಾಡಿಕೊಂಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ 'ಶೂಟ್ ಆನ್ Mi Mix 2S AI ಡ್ಯುಯಲ್ ಕ್ಯಾಮೆರಾ' ಎಂದು ಹಳೇಯ ಫೋಟೋ ಮೇಲೆ ಸ್ಟಾಂಪ್ ಇದೆ. ಇದೇ ಸ್ಪಾಂಪ್ ತೆಗೆದು ಪೊಕೊ ಫೋನ್ ಫೋಟೋ ಎಂದು ತೋರಿಸಿದೆ.

ಹಳೇ ಫೋಟೋ ಎಡಿಟ್:
'ಶೂಟ್ ಆನ್ Mi Mix 2S AI ಡ್ಯುಯಲ್ ಕ್ಯಾಮೆರಾ' ಎಂಬ ಸ್ಟಾಂಪ್ ಹೊಂದಿರುವ ಫೋಟೋವನ್ನು ಎಪ್ರಿಲ್ 22ನೇ ತಾರೀಕಿನಂದು ತೆಗೆಯಲಾಗಿದ್ದು, ಮತ್ತೆ ಅದೇ ಫೋಟೋವನ್ನು ಶಿಯೋಮಿ ಪೊಕೊ FIನಲ್ಲಿ ತೆಗೆದಿದ್ದು ಎಂದು ಬಿಂಬಿಸಲಾಗಿದೆ. ಈ ಮೂಲಕ ಮಾರ್ಕೆಟಿಂಗ್ ಮಾಡಲಾಗುತ್ತದೆ.

ಶಿಯೋಮಿ ಮುಖ್ಯಸ್ಥ:
ಈ ಎರಡು ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವುದು ಶಿಯೋಮಿ ಪ್ರಾಡೆಕ್ಟ್ ಮ್ಯಾನೆಜರ್ ಡೊನೊವಾನ್ ಸುಂಗ್ ಎನ್ನಲಾಗಿದೆ. ಎರಡು ಫೋಟೋಗಳನ್ನು ಹಲವು ದಿನಗಳ ನಂತರ ಪೋಸ್ಟ್ ಮಾಡಿದ್ದು, ಯಾರೋ ಎರಡು ಫೋಟೋಗಳನ್ನು ಒಂದಾಗಿ ಮಾಡಿ ಹಾಕಿದ್ದಾರೆ.

ಪೊಕೊ F1 ಕ್ಯಾಮೆರಾ:
ಪೊಕೊ F1 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12 MP + 5 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದರಲ್ಲಿ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಬಹುದು ಎಂಬುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ ಹಳೇ ಫೋಟೋವನ್ನು ಕೊಂಚ ಕಲರ್ ಬ್ರೈಟ್ ಮಾಡಿ ಪೋಸ್ಟ್ ಮಾಡಿದ್ದಾರೆ.

Mi Mix 2S ಕ್ಯಾಮೆರಾ:
ಶಿಯೋಮಿಯ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಎಂದು ಗುರುತಿಸಿಕೊಂಡಿರುವ Mi Mix 2S ಸ್ಮಾರ್ಟ್‌ಫೋನಿನಲ್ಲಿ 12 MP + 12 MP ಕ್ಯಾಂಎರಾವನ್ನು ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿ ಆಪ್ಟಿಕಲ್ ಇಮೇಜ್ ಸ್ಟಬೇಲೈಜೆಷನ್ ಆಯ್ಕೆಯನ್ನು ನೀಡಲಾಗಿದೆ. ಪೊಕೊ F1 ಸ್ಮಾರ್ಟ್‌ಫೋನಿನಲ್ಲಿ ಈ ಆಯ್ಕೆಯೂ ಇಲ್ಲ.


Click it and Unblock the Notifications



