Home
ಮೊಬೈಲ್

ಐಫೋನ್ Xs ಬೆಲೆ ಯಾಕೆ ದುಬಾರಿ...? ಆಪಲ್ ಹೇಳಿದ ಕಾರಣ ಇದು..!

ಮಾರುಕಟ್ಟೆಯಲ್ಲಿ ಬುಧವಾರ ಲಾಂಚ್ ಆದ ಐಫೋನ್ Xs, ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಅತೀ ದುಬಾರಿ ಬೆಲೆಯ ಐಫೋನ್ ಎನ್ನುವ ಪಟ್ಟವನ್ನು ಪಡೆದುಕೊಂಡಿದೆ. ಅಲ್ಲದೇ ಐಫೋನ್ Xs ಮ್ಯಾಕ್ಸ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಅತೀ ದೊಡ್ಡ ಡಿಸ್‌ಪ್ಲೇಯನ್ನು ಹೊಂದಿರುವ ಐಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ.

ಐಫೋನ್ Xs ಬೆಲೆ ಯಾಕೆ ದುಬಾರಿ...? ಆಪಲ್ ಹೇಳಿದ ಕಾರಣ ಇದು..!

ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಅತೀ ದುಬಾರಿಯಾಗಿರುವ ಐಫೋನ್ Xs ವಿಶೇಷತೆಗಳೇನು..? ಯಾವ ಕಾರಣಕ್ಕೆ ದುಬಾರಿ ಬೆಲೆಯಾದರು ಈ ಐಫೋನ್ ಅನ್ನು ಖರೀದಿಸಬೇಕು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೊದಲಿಗೆ ಎನ್ನುವ ಹಲವು ಆಯ್ಕೆಗಳನ್ನು ಐಫೋನ್ Xsನಲ್ಲಿ ಕಾಣಬಹುದಾಗಿದೆ. ಈ ಆಯ್ಕೆಗಳು ಆಂಡ್ರಾಯ್ಡ್‌ನಲ್ಲಿ ಈಗಾಗಲೇ ಇದೇ ಎನ್ನಬಹುದು. ಆದರೆ ಆಪಲ್ ಗುಣಮಟ್ಟದಲ್ಲಿ ಸೇವೆಯನ್ನು ಬೇರೆ ಯಾರಿಂದಲೂ ನೀಡಲು ಸಾಧ್ಯವೇ ಇಲ್ಲ ಎನ್ನಬಹುದಾಗಿದೆ.

ಡ್ಯುಯಲ್ ಸಿಮ್:

ಡ್ಯುಯಲ್ ಸಿಮ್:

ಡ್ಯುಯಲ್ ಸಿಮ್ ಮತ್ತು ಡ್ಯುಯಲ್ ಸ್ಟಾಂಡ್‌ ಬೈ ಆಯ್ಕೆಯನ್ನು ಹೊಂದಿದೆ. ಇದಕ್ಕಾಗಿಯೇ ಆಪಲ್ ಸ್ಮಾರ್ಟ್‌ಫೋನಿನಲ್ಲಿ ಮೊದಲ ಬಾರಿಗೆ ಎನ್ನುವ e ಸಿಮ್ ಟೆಕ್ನಲಾಜಿಯನ್ನು ಬಳಕೆ ಮಾಡಿಕೊಂಡಿದೆ. ಇದು ಬಳಕೆದಾರರಿಗೆ ಹೊಸ ಮಾದರಿಯ ಡ್ಯುಯಲ್ ಸಿಮ್ ಸಪೋರ್ಟ್ ಅನ್ನು ಮಾಡಿಸಲಿದೆ. ಒಂದು ಫಿಜಿಕಲ್ ಸಿಮ್ ಮತ್ತೊಂದು e ಸಿಮ್ ಹೊಂದಿರಲಿದೆ. ಮಾರುಕಟ್ಟೆಯಲ್ಲಿ ಇದು ಹೊಸ ಮಾದರಿಯ ಅನುಭವನ್ನು ನೀಡಲಿದೆ.

ಎಲ್ಲಾ ಆಪಲ್‌ನದ್ದು:

ಎಲ್ಲಾ ಆಪಲ್‌ನದ್ದು:

ಐಫೋನ್ Xs ಸ್ಮಾರ್ಟ್‌ಫೋನಿನಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವಿಶೇಷತೆಗಳು, ಮಾತ್ರವಲ್ಲದೇ ಇದರಲ್ಲಿ ಪ್ರೋಸೆಸರ್, OS, ಸಾಫ್ಟ್‌ವೇರ್‌ಗಳು ಆಪ್‌ಗಳು ಸೇರಿದಂತೆ ಎಲ್ಲಾ ವಿಶೇಷತೆಗಳು ಆಪಲ್‌ ಮಾತ್ರವೇ ಅಭಿವೃದ್ಧಿ ಪಡಿಸಿರುವುದು. ಬೇರೆ ಯಾವುದೇ ಫೋನ್‌ಗಳಲ್ಲಿ ಈ ಮಾದರಿಯ ಆಯ್ಕೆಗಳನ್ನು ಕಾಣಲು ಸಾಧ್ಯವಿಲ್ಲ. ಕಾರಣ ಇದನ್ನು ಆಪಲ್ ಬೇರೆ ಯಾರಿಗೂ ನೀಡುವುದೇ ಇಲ್ಲ.

ಮುಂದಿನ ಹಂತದ ಐಫೋನ್:

ಮುಂದಿನ ಹಂತದ ಐಫೋನ್:

ಆಪಲ್ ಇದುವೆರೆಗೂ ಕ್ರಿಯೇಟ್ ಮಾಡದ ಐಫೋನ್ ಇದಾಗದೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಗೊಲ್ಡ್ ಬಣ್ಣದಲ್ಲಿ ದೊರೆಯುತ್ತಿದೆ. ಐಫೋನ್ Xs ಮೋಸ್ಟ್ ಆಡ್ವನ್ಸ್ ಐಫೋನ್ ಎನ್ನಿಸಿಕೊಂಡಿದೆ. ಸ್ಟೇನೆಸ್ ಸ್ಟೀಲ್ ನಲ್ಲಿ ಮಾಡಲಾಗಿರುವ ಐಫೋನ್, ಎಡ್ಜ್ ಟು ಎಡ್ಜ್ ವಿನ್ಯಾಸವನ್ನು ಹೊಂದಿದೆ. ಅಲ್ಲದೇ ಇದರ ಸ್ಕ್ರಿನ್ ನಲ್ಲಿ ಒಡೆಯದ ಗ್ಲಾಸ್ ಅನ್ನು ಇದರಲ್ಲಿ ನೀಡಲಾಗಿದೆ.

ನೀರಿನಲ್ಲಿ ಇದ್ದರು ಎನಾಗುವುದಿಲ್ಲ:

ನೀರಿನಲ್ಲಿ ಇದ್ದರು ಎನಾಗುವುದಿಲ್ಲ:

ನೀರಿನಲ್ಲಿ 2 ಗಂಟೆ 30 ನಿಮಿಷಗಳ ಕಾಲ ಬಿಟ್ಟರು ಯಾವುದೇ ರೀತಿಯಲ್ಲಿಯೂ ಐಫೋನ್ Xs ತೊಂದರೆಯಾಗುವುದಿಲ್ಲ ಎನ್ನಲಾಗಿದೆ. ಧೂಳು ಬಿದ್ದರು ಹಾಳಾಗುವುದಿಲ್ಲ. ಅಲ್ಲದೇ ಮಾರುಕಟ್ಟೆಯಲ್ಲಿಯೇ ಅತೀ ಹೆಚ್ಚಿನ ಗುಣಮಟ್ಟದ ಡಿಸ್‌ಪ್ಲೇ ರೆಸಲ್ಯೂಷನ್ ಅನ್ನು ಐಫೋನ್ Xs ನಲ್ಲಿ ಆಪಲ್ ನೀಡಿದೆ. ಇದರೊಂದಿಗೆ HDR 10 ಅನ್ನು ಕಾಣಬಹುದಾಗಿದೆ. ಇದಕ್ಕಾಗಿಯೇ ಸೂಪರ್ ರೆಟಿನಾ ಡಿಸ್‌ಪ್ಲೇಯನ್ನು ನೀಡಲಾಗಿದೆ.

ಬೇರೆ ಮಾದರಿಯ ಅನುಭವ:

ಬೇರೆ ಮಾದರಿಯ ಅನುಭವ:

ಮಾರುಕಟ್ಟೆಯಲ್ಲಿ ಐಫೋನ್ Xs ನಲ್ಲಿ ನೋಡುವ ವಿಡಿಯೋಗಳು ಸಿನಿಮಾ ಮಂದಿರದ ಅನುಭವನ್ನು ನೀಡಲಿದೆ. ಇದಲ್ಲದೇ ಇದರಲ್ಲಿ ವೆಬ್ ಬ್ರೌಸ್ ಮಾಡುವುದು ಅತ್ಯಂತ ಉತ್ತಮ ಅನುಭವನ್ನು ಕೊಡಲಿದೆ. ಅಲ್ಲದೇ ಗೇಮಿಂಗ್ ಅನುಭವನ್ನು ಬೇರೆ ಯಾವುದೇ ಸ್ಮಾರ್ಟ್‌ಫೋನ್ ಅನ್ನು ನೀಡಲಾದಷ್ಟು ಉತ್ತಮವಾಗಿ ಇರಲಿದೆ. ಅಲ್ಲದೇ ಸೌಂಡ್ ಸಹ ಉತ್ತಮವಾಗಿರಲಿದೆ. ಇದಕ್ಕಾಗಿ ದೊಡ್ಡ ಡಿಸ್‌ಪ್ಲೇ ಮತ್ತು ಡಾಲ್ಬಿ ಸೌಂಡ್ ಅನ್ನು ನೀಡಲಿದೆ.

ಫೇಸ್‌ ID:

ಫೇಸ್‌ ID:

ಐಫೋನ್ Xs ನಲ್ಲಿ ಹೊಸ ಮಾದರಿಯ ಟ್ರೂಡೆಪ್ತ್ ಕ್ಯಾಮರಾವನ್ನು ನೀಡಲಾಗಿದೆ. ಇದಕ್ಕದಾಗಿ ಹಲವು ಮಾದರಿಯ ಸೆನ್ಸಾರ್‌ಗಳು ಸೇರಿದಂತೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿಯೇ ಬೆಸ್ಟ್ ಎನ್ನು ಫೇಸ್‌ ID ಸೇವೆಯನ್ನು ಆಪಲ್‌ನಲ್ಲಿ ಮಾತ್ರವೇ ಕಾಣಲು ಸಾಧ್ಯ.

A12 ಬಯೋನಿಕ್:

A12 ಬಯೋನಿಕ್:

ಐಫೋನ್ Xs ಅನ್ನು ಸೂಪರ್ ಸ್ಮಾರ್ಟ್‌ಫೋನ್ ಎನ್ನಲು ಕಾರಣ A12 ಬಯೋನಿಕ್ ಚಿಪ್ ಅನ್ನು ನೀಡಲಾಗಿದೆ. 4 ಕೋರ್ GPU ಮತ್ತು 6 ಕೋರ್ CPUವನ್ನು ಇದು ಹೊಂದಿದೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿಯೇ ಅತ್ಯಂತ ವೇಗದ ಸೇವೆಯನ್ನು ಐಫೋನ್ Xsನಲ್ಲಿ ಪಡೆಯಬಹುದಾಗಿದೆ. ಅಲ್ಲದೇ ಗ್ರಾಫೀಕ್ಸ್ ಸಹ ಉತ್ತಮವಾಗಿ ಇರಲಿದೆ. ಇದು ಒಂದು ಸೆಕೆಂಡ್‌ನಲ್ಲಿ 5 ಟ್ರಿಲಿಯನ್ ಆಪರೇಷನ್‌ಗಳನ್ನು ಮಾಡಲು ಈ ಪ್ರೋಸೆಸರ್ ಶಕ್ತವಾಗಿದೆ. ಅಲ್ಲದೇ ಬ್ಯಾಟರಿ ಬ್ಯಾಕಪ್ ಅನ್ನು ಇದು ಹೆಚ್ಚು ಈ ಹಿಂದಿನ ಐಫೋನ್‌ಗಳಿಗಿಂತ ಹೆಚ್ಚು ಹೊಂದಿದೆ.

ಮಿಷಿನ್ ಲರ್ನಿಂಗ್:

ಮಿಷಿನ್ ಲರ್ನಿಂಗ್:

ಐಫೋನ್ Xs ನಲ್ಲಿ ಅಳವಡಿಸಿರುವ A12 ಬಯೋನಿಕ್ ಚಿಪ್ ಮಿಷಿನ್ ಲರ್ನಿಂಗ್ ಅನ್ನು ಹೊಂದಿದ್ದು, ಇದರಿಂದಾಗಿ ನೀವು ಐಫೋನ್ ಬಳಕೆ ಮಾಡುವ ಅನುಭವ ಬೇರೆ ಮಾದರಿಯಲ್ಲಿ ಇರಲಿದೆ. ಇದಲ್ಲದೇ ಬಳಕೆದಾರರಿಗೆ ಅತ್ಯುತ್ತಮವಾದ ಫೋಟೋಗಳನ್ನು ಮತ್ತು ಎನಿಮೋಜಿಗಳನ್ನು ಮಾಡಲು ಇದರಲ್ಲಿ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ಇದರಲ್ಲಿ AR ಬಳಕೆಯನ್ನು ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಹೈಎಂಡ್ ಗೇಮ್ ಅನುಭವ:

ಹೈಎಂಡ್ ಗೇಮ್ ಅನುಭವ:

ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಹೈಎಂಡ್ ಗೇಮ್ ಗಳನ್ನು ಆಡುವ ಅನುಭವು A12 ಬಯೋನಿಕ್ ಚಿಪ್ ಹೊಂದಿರುವ ಐಫೋನ್ Xs ನಲ್ಲಿ ವಿಶೇಷವಾಗಿರಲಿದೆ ಎನ್ನಲಾಗಿದೆ. ಗೇಮಿಂಗ್ ಕನ್ಸೋಲ್‌ನಲ್ಲಿ ನೀಡುವ ಅನುಭವಕ್ಕಿಂತ ಐಫೋನ್ Xs ನಲ್ಲಿ ಅತ್ಯತ್ತಮವಾಗಿರಲಿದೆ ಎನ್ನಲಾಗಿದೆ.

AR ಗೇಮಿಂಗ್:

AR ಗೇಮಿಂಗ್:

ಲ್ಯಾನ್‌ ಕನೆಟ್ ಇಲ್ಲವೇ ಡೇಟಾ ಕನೆಟ್ಟ್ ಮಾಡಿಕೊಂಡು ಗೇಮ್ ಆಡಿದವರಿಗೆ ಹೊಸ ಮಾದರಿಯ AR ಗೇಮಿಂಗ್ ವಿಶೇಷ ಅನುಭವನ್ನು ನೀಡಲಿದೆ ಐಫೋನ್ Xs, ಇದು ನಿಮಗೆ ಹೊಸ ಮಾದರಿಯ ವರ್ಚುವಲ್ ಗೇಮಿಂಗ್ ಕ್ರಿಯೇಟ್ ಮಾಡಿಕೊಡಲಿದೆ. ನೀವು ನೋಡ ಲೋಕವನ್ನು ಮೊಬೈಲ್ ಇದಲ್ಲದೇ ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ.

ವರ್ಲ್ಡ್ ಬೆಸ್ಟ್ ಕ್ಯಾಮೆರಾ:

ವರ್ಲ್ಡ್ ಬೆಸ್ಟ್ ಕ್ಯಾಮೆರಾ:

ಐಫೋನ್ Xs ನಲ್ಲಿ ಅಳವಡಿಸಿರುವುದು ವರ್ಲ್ಡ್ ಬೆಸ್ಟ್ ಕ್ಯಾಮೆರಾ ಎನ್ನಲಾಗಿದೆ. ಇದರಲ್ಲಿ ಡ್ಯುಯಲ್ ಕ್ಯಾಮೆರಾ ವಿಶೇಷತೆ ಬೇರೆ ಯಾವುದೇ ಸ್ಮಾರ್ಟ್‌ಫೋನಿನಲ್ಲಿ ಕಾಣಲು ಸಾಧ್ಯವಾಗುವುದಿಲ್ಲ. ಇದನ್ನು ಆಪಲ್ ಅಭಿವೃದ್ಧಿಪಡಿಸಿದೆ. ಮುಂಭಾಗದಲ್ಲಿ ಎರಡು ಕ್ಯಾಮೆರಾ ಇದೆ. ಒಂದು RGB ಕ್ಯಾಮೆರಾ ಮತ್ತೊಂದು ಟ್ರೂಡೇಪ್ತ್ IR ಕ್ಯಾಮೆರಾವನ್ನು ಹೊಂದಿದೆ.

ಫೋಟೋ ತೆಗೆದ ಮೇಲೆ:

ಫೋಟೋ ತೆಗೆದ ಮೇಲೆ:

ಇದಲ್ಲದೇ ಐಫೋನ್ Xs ನಲ್ಲಿ ಅಳವಡಿಸಿರುವ ಕ್ಯಾಮೆರಾ ಮತ್ತು A12 ಬಯೋನಿಕ್ ಚಿಪ್ ನಿಂದಾಗಿ ಫೋಟೋ ತೆಗೆದ ಮೇಲೆ ನೀವು ಬೊಕ್ಕೆ ಎಫೆಕ್ಟ್ ಅನ್ನು ಬದಲಾವಣೆಯನ್ನು ಮಾಡಬಹುದಾಗಿದೆ, ಅಲ್ಲದೇ ವಿಡಿಯೋ ರೆಕಾರ್ಡಿಂಗ್ ಗಾಗಿ ನಾಲ್ಕು ಮೈಕ್ರೊ ಫೋನ್ ನೀಡಲಾಗಿದ್ದು, ಉತ್ತಮ ಗುಣಮಟ್ಟದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಡಲಿದೆ. 4K ಗುಣಮಟ್ಟವನ್ನು ಹೊಂದಿರಲಿದೆ. ಹೀಗಾಗಿ ಕೊಡುವ ಬೆಲೆಗೆ ಯಾವತ್ತೂ ಆಪಲ್ ಮೋಸವನ್ನು ಮಾಡಿಲ್ಲ.

Best Mobiles in India

English summary
why iphone xs is expensive, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+