Home
ಮೊಬೈಲ್

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್ ಅಭಿಮಾನಿಗಳಿಗೆ ಈ ಸುದ್ದಿ..!

By Srinidhi

ಮಾರುಕಟ್ಟೆಯಲ್ಲಿ ಇದುವರೆಗೂ ಕಾಣಿಸಿಕೊಂಡಿರುವ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ಯಾವುದೇ ರೀತಿಯಲ್ಲಿಯೂ ಮೋಸ ಮಾಡಿಲ್ಲ, ಬದಲಾಗಿ ನೀಡುವ ಹಣಕ್ಕೆ ಹೆಚ್ಚಿನದನ್ನೇ ಬಳಕಗೆ ನೀಡಿದೆ ಎನ್ನುವ ಮಾತು ಬಳಕೆದಾರರಿಂದಲೇ ಕೇಳಿ ಬಂದಿದೆ. ಪ್ರತಿ ಬಾರಿ ಬಿಡುಗಡೆಯಾಗುವ ಹೊಸ ಸ್ಮಾರ್ಟ್‌ಫೋನ್ ತನ್ನದೇ ವಿಶೇಷತೆಯನ್ನು ಹೊಂದಿರಲಿದ್ದು, ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್ ವಿಭಾಗದಲ್ಲಿ ಸಾಕಷ್ಟು ಶ್ರೇಷ್ಠತೆಯನ್ನು ಹೊಂದಿರಲಿವೆ.

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್ ಅಭಿಮಾನಿಗಳಿಗೆ ಈ ಸುದ್ದಿ..!

ತನ್ನ ಬಳಕೆದಾರರಿಗೆ ಉತ್ತಮವಾದ್ದದನ್ನು ನೀಡುವ ಒನ್‌ಪ್ಲಸ್, ಬ್ಯಾಟರಿ ಮತ್ತು ಕ್ಯಾಮೆರಾ ವಿಭಾಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಿದೆ. ಅಲ್ಲದೇ ಗೇಮಿಂಗ್ ಮತ್ತು ವಿಡಿಯೋ ನೋಡುವ ಸಲುವಾಗಿ ಉತ್ತಮ ಡಿಸ್‌ಪ್ಲೇಯನ್ನು ತನ್ನ ಫೋನ್‌ಗಳಲ್ಲಿ ನೀಡಲಿದೆ. ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನುವ ವಿನ್ಯಾಸ, ವಿಶೇಷೆತೆಗಳನ್ನು ಕಾಲಕಾಲಕ್ಕೆ ಬಿಡುಗಡೆಯಾದ ಒನ್‌ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಮುಂದಿನ ಸ್ಮಾರ್ಟ್‌ಫೋನ್ ಸಹ ಶ್ರೇಷ್ಠ ವಿಶೇಷತೆಗಳಿಂದ ಕಾಣಿಸಿಕೊಳ್ಳಲಿದೆ.

ವಾಲ್‌ಪೇಪರ್ ನಿಂದಲೇ ಸದ್ದು:

ವಾಲ್‌ಪೇಪರ್ ನಿಂದಲೇ ಸದ್ದು:

ಪ್ರತಿ ಬಾರಿ ತನ್ನ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸುವ ವಾಲ್‌ಪೇಪರ್ ನಿಂದಲೇ ಒನ್ ಪ್ಲಸ್ ಸದ್ದು ಮಾಡುತ್ತದೆ ಎಂದರೆ ತಪ್ಪಾಗುವುದಿಲ್ಲ. ಒನ್‌ಪ್ಲಸ್ ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಎಷ್ಟು ಪ್ರಮುಖ್ಯತೆಯನ್ನು ನೀಡಲಿದೆಯೋ ಅದೇ ಮಾದರಿಯಲ್ಲಿ ತನ್ನ ನೂತನ ಸ್ಮಾರ್ಟ್‌ಫೋನಿನಲ್ಲಿ ನೀಡುವ ವಾಲ್‌ಪೇಪರ್ ಬಗ್ಗೆಯೂ ಹೆಚ್ಚಿನ ತಲೆಕೆಡಿಸಿಕೊಳ್ಳಲಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ.

ವಾಲ್‌ಪೇಪರ್‌ನಿಂದಲೇ ಗುರುತು:

ವಾಲ್‌ಪೇಪರ್‌ನಿಂದಲೇ ಗುರುತು:

ಒನ್‌ಪ್ಲಸ್ ಅಭಿಮಾನಿಗಳು ವಾಲ್‌ಪೇಪರ್‌ನಿಂದಲೇ ಇದು ಯಾವ ಸರಣಿಯ ಸ್ಮಾರ್ಟ್‌ಫೋನ್‌ ಎನ್ನುವುದನ್ನು ಕಂಡುಹಿಡಿಯಲಿದ್ದಾರೆ. ಇದನ್ನು ಸಾಧ್ಯವಾಗುವಂತೆ ಮಾಡಿರುವುದ ಒನ್‌ಪ್ಲಸ್. ತನ್ನ ಪ್ರತಿ ಸ್ಮಾರ್ಟ್‌ಫೋನಿನಲ್ಲಿಯೂ ಒಂದೊಂದು ಮಾದರಿಯ ಆರ್ಟಿಸ್ಟಿಕ್ ಸಿಗ್ನೇಚರ್ ವಾಲ್‌ಪೇಪರ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಹಿಂದಿರುವ ಸೂತ್ರಧಾರ:

ಹಿಂದಿರುವ ಸೂತ್ರಧಾರ:

ಉತ್ತಮ ವಾಲ್‌ಪೇಪರ್ ವಿನ್ಯಾಸಕ್ಕಾಗಿಯೇ ಎಕ್ಸ್‌ಪರ್ಟ್ ಆರ್ಟಿಸಿಸ್ಟ್ ನ್ವೀಡಿನ ಹ್ಯಾಂಪಸ್ ಓಲ್ಸನ್ ಅವರಿಂದ ವಾಲ್‌ಪೇಪರ್‌ಗಳನ್ನು ಒನ್‌ಪ್ಲಸ್ ವಿನ್ಯಾಸವನ್ನು ಮಾಡಿಸುತ್ತಿದೆ. ಹೀಗಾಗಿಯೇ ವಾಲ್‌ಪೇಪರ್‌ಗಳು ಐಕಾನಿಕ್ ಆಗಿರಲಿದ್ದು, ಮಾರುಕಟ್ಟೆಯಲ್ಲಿ ಹೊಸ ಐಡೆಂಟಿಟಿಯನ್ನು ಹುಟ್ಟಿಹಾಕಲಿದೆ ಎಂದರೆ ತಪ್ಪಾಗುವುದಿಲ್ಲ.

ಎಲ್ಲಾ ಸ್ಮಾರ್ಟ್‌ಫೋನಿಗೂ ಇವರೇ ವಿನ್ಯಾಸಕರು:

ಎಲ್ಲಾ ಸ್ಮಾರ್ಟ್‌ಫೋನಿಗೂ ಇವರೇ ವಿನ್ಯಾಸಕರು:

ಈಗಾಗಲೇ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ ಇವರೇ ವಾಲ್‌ಪೇಪರ್ ವಿನ್ಯಾಸ ವನ್ನು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಗೋವಾದಲ್ಲಿ ಉಳಿದುಕೊಂಡಿರುವ ಹ್ಯಾಂಪಸ್ ಓಲ್ಸನ್, ಇಲ್ಲಯೇ ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನ ವಾಲ್‌ಪೇಪರ್ ಅನ್ನು ವಿನ್ಯಾಸ ಮಾಡಿದ್ದಾರೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಹಿಟ್:

ಮಾರುಕಟ್ಟೆಯಲ್ಲಿ ಹಿಟ್:

ಪ್ರತಿ ಬಾರಿಯೂ ಹೊಸ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಲಾಂಚ್ ಆದ ಸಂದರ್ಭದಲ್ಲಿಯೂ ಹ್ಯಾಂಪಸ್ ಓಲ್ಸನ್ ಒಂದಲ್ಲ ಒಂದು ಮಾದರಿಯಲ್ಲಿ ಉತ್ತಮ ವಿನ್ಯಾಸದ ವಾಲ್‌ಪೇಪರ್ ಗಳನ್ನು ರಚಿಸಿದ್ದಾರೆ. ಅಲ್ಲದೇ ಅದು ಮಾರುಕಟ್ಟೆಯಲ್ಲಿ ಹಿಟ್ ಸಹ ಆಗಿದೆ.

Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!
ಒನ್‌ಪ್ಲಸ್‌ 6 ನಲ್ಲಿಯೂ ಉತ್ತಮ ವಾಲ್‌ಪೇಪರ್:

ಒನ್‌ಪ್ಲಸ್‌ 6 ನಲ್ಲಿಯೂ ಉತ್ತಮ ವಾಲ್‌ಪೇಪರ್:

ಇದೇ ಮಾದರಿಯಲ್ಲಿ ಈ ಬಾರಿಯೂ ಹೊಸ ಮಾದರಿಯ ವಾಲ್‌ ಪೇಪರ್ ವೊಂದನ್ನು ರಚಿಸಿದ್ದು, ಒನ್‌ಪ್ಲಸ್ 6 ಆಗುವ ವರೆಗೂ ಅವರ ಹೊಸ ವಿನ್ಯಾಸವನ್ನು ನೋಡಲು ಕಾಯಬೇಕಾಗಿದೆ. ಇದು ಸಹ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ ಎನ್ನಲಾಗಿದೆ.

Best Mobiles in India

English summary
Why OnePlus wallpapers make lasting impressions on us every time. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+