ಬಿಸಿಯಾಗುವ ಸ್ಮಾರ್ಟ್ ಫೋನ್ ಅನ್ನು ತಣಿಸುವುದು ಹೇಗೆ..?
ಸ್ಮಾರ್ಟ್ ಫೋನ್ ಗೇಮ್ ಆಡುವ ವೇಳೆಯಲ್ಲಿ, ವಿಡಿಯೋ ನೋಡುವ ಸಂದರ್ಭದಲ್ಲಿ ಮತ್ತು ಚಾರ್ಜಿಗೆ ಹಾಕುವ ಸಂದರ್ಭದಲ್ಲಿ ಮೊಬೈಲ್ ಬಿಸಿಯಾಗಲಿದೆ ಎನ್ನಲಾಗಿದೆ.
ಇಂದು ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗುತ್ತಿರುವಂತೆ ಅವುಗಳನ್ನು ಬಳಕೆ ಮಾಡುತ್ತಿದ್ದಂತೆ ಬಿಸಿಯಾಗುತ್ತವೆ ಎನ್ನುವ ಮಾತೊಂದು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಈ ಸ್ಮಾರ್ಟ್ ಫೋನ್ ಗಳು ಏಕೆ ಬಿಸಿಯಾಗುತ್ತದೆ. ಅದನ್ನು ಕಂಟ್ರೋಲ್ ಮಾಡುವುದು ಹೇಗೆ ಎಂಬುದನ್ನು ನಾವು ನೋಡುವ.

ಸ್ಮಾರ್ಟ್ ಫೋನ್ ಗೇಮ್ ಆಡುವ ವೇಳೆಯಲ್ಲಿ, ವಿಡಿಯೋ ನೋಡುವ ಸಂದರ್ಭದಲ್ಲಿ ಮತ್ತು ಚಾರ್ಜಿಗೆ ಹಾಕುವ ಸಂದರ್ಭದಲ್ಲಿ ಬಿಸಿಯಾಗಲಿದೆ ಎನ್ನಲಾಗಿದೆ. ಇದಕ್ಕೆ ಕಾರಣ ಪ್ರೋಸೆಸರ್ ಇರಬಹುದು, ಇಲ್ಲವೇ ಬ್ಯಾಟರಿ ಸಮಸ್ಯೆಯೂ ಇರಬಹುದಾಗಿದೆ. ಟಾಪ್ ಎಂಡ್ ಫೋನ್ ಗಳಿಂದ ಹಿಡಿದು ಬಜೆಟ್ ಫೋನಿನಲ್ಲಿಯೂ ಈ ಸಮಸ್ಯೆಯನ್ನು ನಾವು ಕಾಣಬಹುದಾಗಿದೆ. ಇದರಿಂದ ಪರಿಹಾರ ಹೇಗೆ..?

ಬೇಡಿದಿರುವ ಕಾರ್ಯಗಳನ್ನು ನಿಲ್ಲಿಸಿ:
ನಿಮ್ಮ ಸ್ಮಾರ್ಟ್ ಫೋನಿನಲ್ಲಿ 4G ಡೇಟಾ ಸೇರಿದಂತೆ ಹಲವು ಕಾರ್ಯಗಳನ್ನು ಆನ್ ಮಾಡಿಯೇ ಇಟ್ಟಿರುವುದರಿಂದ ಫೋನ್ ಬಿಸಿಯಾಗಲಿದೆ. ಇದೊಂದೆ ಅಲ್ಲ, GPS, ಬ್ಲೂಟೂತ್, Wi-Fi ಸೇರಿದಂತೆ ಹಲವು ಆಯ್ಕೆಗಳನ್ನು ಆನ್ ಮಾಡಿಟ್ಟಿರುವುದು ಸ್ಮಾರ್ಟ್ ಫೋನ್ ಬಿಸಿ ಹೆಚ್ಚಾಗಲು ಕಾರಣವಾಗಲಿದೆ.

ಹೆಚ್ಚಿನ ಆಪ್ ಗಳನ್ನು ಕಿತ್ತು ಹಾಕಿ:
ಸ್ಮಾರ್ಟ್ ಫೋನಿನಲ್ಲಿ ಹೆಚ್ಚು ಆಪ್ ಗಳನ್ನು ರನ್ ಮಾಡುವುದರಿಂದಲೂ ಫೋನ್ ಬಿಸಿಯಾಗಲಿದೆ. ಆಪ್ ಕ್ಲಿನರ್. ಕ್ಲಿನ್ ಮಾಸ್ಟರ್ ನಂತಹ ಆಪ್ ಗಳ ಬಳಕೆಯಿಂದ ಹಿಂಬದಿಯಲ್ಲಿ ರನ್ ಆಗುತ್ತಿರುವ ಆಪ್ ಗಳನ್ನು ನಿಲ್ಲಿಸಬಹುದಾಗಿದೆ.

ಅಪ್ ಡೇಟ್ ಮಾಡಿ:
ನಿಮ್ಮ ಸ್ಮಾರ್ಟ್ ಫೋನ್ ಮತ್ತು ಆಪ್ ಗಳನ್ನು ಸರಿಯಾದ ಸಮಯಕ್ಕೆ ಅಪ್ ಡೇಟ್ ಮಾಡಿರಿ. ಕಾರಣ ನಿಮ್ಮ ಫೋನಿನ ಬಿಸಿಗೆ ಕಾರಣವಾಗುವಂತಹ ಬಗ್ ಗಳನ್ನು ತೆಗೆಯಲು ಅಪ್ ಡೇಟ್ ನೆರವಾಗಲಿದೆ.

ಹೆಚ್ಚು ಬಳಸದಿರುವ ಆಪ್ ಇನ್ ಸ್ಟಾಲ್ ಮಾಡಬೇಡಿ:
ನೀವು ನಿತ್ಯ ಬಳಸಿದರುವ ಆಪ್ ಗಳನ್ನು ಇನ್ ಸ್ಟಾಲ್ ಮಾಡಬೇಡಿ. ನೀವು ಬಳಸುವ ಆಪ್ ಗಳನ್ನು ಮಾತ್ರವೇ ಬಳಸಿಕೊಳ್ಳಿ. ಇದರಿಂದಾಗಿ ನಿಮ್ಮ ಪ್ರೋಸೆಸರ್ ಹೆಚ್ಚು ಕಾರ್ಯನಿರ್ವಹಿಸದೆ ಇರುವುದರಿಂದ ಬಿಸಿಯಾಗುವುದಿಲ್ಲ.

ಚಾರ್ಜಿಂಗ್ ಸಮಯದಲ್ಲಿ:
ನಿಮ್ಮ ಸ್ಮಾರ್ಟ್ ಫೋನ್ ಅನ್ನು ಓರ್ಜಿನಲ್ ಚಾರ್ಜರ್ ನಿಂದಲೇ ಚಾರ್ಜ್ ಮಾಡಿರಿ. ನಕಲಿ ಚಾರ್ಜರ್ ಗಳನ್ನು ಬಳಕೆ ಮಾಡಿಕೊಂಡರೆ ಅಪಾಯ ತಪ್ಪಿದ್ದಲ್ಲ. ಚಾರ್ಜಿಂಗ್ ಸಮಯದಲ್ಲಿ ಗೇಮ್ ಮತ್ತು ವಿಡಿಯೋವನ್ನು ಪ್ಲೇ ಮಾಡಿದರೆ ಮೊಬೈಲ್ ಬೇಗನೇ ಬಿಸಿಯಾಗಲಿದೆ.


Click it and Unblock the Notifications








