ಭಾರತದಲ್ಲಿ ಥಾಮ್ಸನ್ ಸ್ಮಾರ್ಟ್‌ಟಿವಿಗಳು ನಿಮಿಷದಲ್ಲಿ ಸೋಲ್ಡ್‌ಔಟ್ ಆಗುತ್ತಿರುವುದೇಕೆ ಗೊತ್ತಾ?

  ಶಿಯೋಮಿ ಟಿವಿಗಳು ಭಾರದ ಟಿವಿ ಮಾರುಕಟ್ಟೆಗೆ ಎಂಟ್ರಿ ನೀಡಿದ ನಂತರ ಭಾರತದ ಟಿವಿ ಮಾರುಕಟ್ಟೆಯಲ್ಲಿ ಭಾರೀ ತಲ್ಲಣವೇ ಶುರುವಾಗಿದೆ. ಬಹುತೇಕ ಎಲ್ಲಾ ಟಿವಿ ತಯಾರಕ ಕಂಪನಿಗಳು ಸಹ ಸ್ಮಾರ್ಟ್‌ಫೋನ್‌ಗಳಂತೆ ಅಪ್ಡೇಟ್ ವರ್ಶನ್ ಟಿವಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಪೈಪೋಟಿಗಿಳಿದಿವೆ. ಆದರೆ, ಬಹುಬೇಗ ಯಶಸ್ಸು ಕಂಡಿರುವುದು ಥಾಮ್ಸನ್ ಕಂಪೆನಿ ಮಾತ್ರ.!

  ಹೌದು, ಪ್ರಖ್ಯಾತ ಎಲೆಕ್ಟ್ರಾನಿಕ್ ಉಪಕರಣಗಳ ಹೆಸರಾಂತ ಉತ್ಪಾದನಾ ಕಂಪೆನಿಯಾದ ಥಾಮ್ಸನ್, ತನ್ನ ಹೊಚ್ಚಹೊಸ ಎಲ್ಇಡಿ ಸ್ಮಾರ್ಟ್ ಟಿ.ವಿ.ಗಳ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಹೆಸರುಗಳಿಸುತ್ತಿದೆ. ಜಾಗತಿಕವಾಗಿ ಹೆಚ್ಚು ಗ್ರಾಹಕರನ್ನು ಒಳಗೊಂಡಿರುವ ಥಾಮ್ಸನ್ ದೇಶೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಗುಣಮಟ್ಟದ ಟಿ.ವಿಗಳನ್ನು ಬಿಡುಗಡೆ ಪರಿಚಯಿಸಿದೆ.

  ಥಾಮ್ಸನ್ ಸ್ಮಾರ್ಟ್‌ಟಿವಿಗಳು ನಿಮಿಷದಲ್ಲಿ ಸೋಲ್ಡ್‌ಔಟ್ ಆಗುತ್ತಿರುವುದೇಕೆ ಗೊತ್ತಾ?

  ಥಾಮ್ಸನ್ ಕಂಪೆನಿ ತನ್ನ ಹೊಚ್ಚ ಹೊಸ ಮೂರು ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದ ಕೇವಲ ಮೂರು ತಿಂಗಳಿನಲ್ಲಿಯೇ ಅತ್ಯಧಿಕ ಮಾರಾಟವಾಗುತ್ತಿರುವ ಸ್ಮಾರ್ಟ್‌ಟಿವಿಗಳ ಪಟ್ಟಿಗೆ ಈ ಟಿವಿಗಳು ಸೇರಿಕೊಂಡಿವೆ. ಹಾಗಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಥಾಮ್ಸನ್ ಸ್ಮಾರ್ಟ್‌ಟಿವಿಗಳು ಯಾವುವು? ಫೀಚರ್ಸ್ ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಥಾಮ್ಸನ್ ಕಂಪನಿ ಪರಿಚಯ!

  125 ಇತಿಹಾಸ ಇರುವ ಫ್ರಾನ್ಸ್ ಮೂಲದ ಥಾಮ್ಸನ್ ಕಂಪನಿ 1983 ರಲ್ಲಿ ಸ್ಥಾಪನೆಯಾಗಿದೆ. ಇದುವರೆಗೂ ಒಂದಿಲ್ಲೊಂದು ನವನವೀನತೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಗ್ರಾಹಕರಿಗೆ ನೀಡುವಲ್ಲಿ ಯಶಸ್ವಿಯಾಗಿರುವ ಥಾಮ್ಸನ್ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಾಷ್ಟ್ರದ ನೊಯ್ಡಾ, ಊನಾ ಮತ್ತು ಜಮ್ಮು ನಗರಗಳಲ್ಲಿ ಉತ್ಪಾದನಾ ಘಟಕ ಆರಂಭಿಸಿದೆ.

  3 ಸ್ಮಾರ್ಟ್‌ ಟಿ.ವಿಗಳ ಅನಾವರಣ!

  ಭಾರರದಲ್ಲಿ SPPL (ಸೂಪರ್ ಪ್ಲ್ಯಾಸ್ಟ್ರೊನಿಕ್ಸ್ ಪ್ರೈವೇಟ್ ಲಿಮಿಟೆಡ್) ನೊಂದಿಗೆ ವಿಶೇಷವಾದ ಪರವಾನಗಿ ಒಪ್ಪಂದ ಮಾಡಿಕೊಂಡಿರುವ ಥಾಮ್ಸನ್ ಕಂಪೆನಿಯು 43 UHD 4K, 40 INCH B9, 32 INCH B9 ಎಂಬ ಸ್ಮಾರ್ಟ್ ಟಿ.ವಿ.ಗಳನ್ನು ಅನಾವರಣಗೊಳಿಸಿದೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಿಂದ ನೊಯ್ಡಾ, ಊನಾ ಮತ್ತು ಜಮ್ಮು ನಗರಗಳಲ್ಲಿ ಉತ್ಪಾದನಾ ಘಟಕ ಆರಂಭಿಸಿದೆ.

  32 inch B9 series

  ಥಾಮ್ಸನ್‌ನ 32 ಇಂಚಿನ ಬಿ9 ಸರಣಿ ಸ್ಮಾರ್ಟ್ ಟಿ.ವಿ.ಯು ಯುಟ್ಯೂಬ್, ಫೈಲ್ ಯುಎಸ್‌ಬಿ, ಕಿವಿಗಡಚಿಕ್ಕುವ ಸೌಂಡ್ ಕ್ವಾಲಿಟಿ, 80 ಸೆಂ.ಮೀ ಡಿಸ್‌ಪ್ಲೇ, 1366*768 ರೆಸಲ್ಯೂಶನ್, 250 nits ಬ್ರೈಟ್‌ನೆಸ್, 8 ಜಿಬಿ ಫ್ಲ್ಯಾಶ್ ಸ್ಟೋರೇಜ್, 1 ಜಿಬಿ ರ್ಯಾಮ್, ವೆಬ್ ಬ್ರೌಸಿಂಗ್, ಆ್ಯಪ್ ಸ್ಟೋರ್ ಸೇರಿದಂತೆ ಹತ್ತು ಹಲವು ಇಂಟೆಲಿಜೆಂಟ್ ಫೀಚರ್‌ಸ್ಗಳನ್ನು ಒಳಗೊಂಡಿರುವ ಈ ಟಿವಿಯ ಬೆಲೆ ಕೇವಲ 13,490 ರುಪಾಯಿಗಳಾಗಿವೆ.

  How to send WhatsApp Payments invitation to others - GIZBOT KANNADA
  40 inch B9 series

  40 inch B9 series

  102 ಸೆಂ.ಮೀ ಸ್ಯಾಮ್‌ಸಂಗ್ ಡಿಸ್‌ಪ್ಲೇ ಹೊಂದಿರುವ 40 ಇಂಚಿನ ಬಿ9 ಸರಣಿ ಎಲ್‌ಇಡಿ ಟಿ.ವಿ.ಯು 1920*1080 ರೆಸಲ್ಯೂಶನ್, 300 nits ಬ್ರೈಟ್‌ನೆಸ್, ವೈಫೈ ಕನೆಕ್ಟಿವಿಟಿ, ಲ್ಯಾನ್ ಕನೆಕ್ಟಿವಿಟಿ, ವೆಬ್ ಬ್ರೌಸಿಂಗ್ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತದೆ. ಜತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಪ್ರಾದೇಶಿಕ ಭಾಷೆಯ ಕಾರ್ಯಕ್ರಮಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವೂ ಇದರಲ್ಲಿ ಲಭ್ಯ. ಇದರ ಬೆಲೆ 19,990 ರುಪಾಯಿಗಳಾಗಿವೆ.

  43 UHD 4K

  ಥಾಮ್ಸನ್ ಬಿಡುಗಡೆಗೊಳಿಸಿರುವ ಎಲ್‌ಇಡಿ ಟಿ.ವಿ. ಸರಣಿಗಳಲ್ಲಿ ಇದು ಅತಿ ದೊಡ್ಡ ಅಳತೆಯ ಸ್ಮಾರ್ಟ್ ಟಿ.ವಿ ಆಗಿದೆ. ಇದರಲ್ಲಿ 600 nits 3840*2160 ರೆಸಲ್ಯೂಶನ್ ಇರುವುದರಿಂದ ಗುಣಮಟ್ಟದ ಬಗ್ಗೆ ಮಾತನಾಡುವಂತಿಲ್ಲ. ಡೀಫಾಲ್ಟ್ APK ಜಿಮೇಲ್, ಯೂಟ್ಯೂಬ್, ಟ್ವಿಟರ್, ಫೇಸ್ ಬುಕ್ ಮತ್ತು ನೆಟ್‌ಫ್ಲಿಕ್ಸ್ ಹೊಂದಿದೆ. ಅಲ್ಲದೇ ಇದರಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದಾಗಿದೆ.

  ಸ್ಪರ್ಧಾತ್ಮಕ ಬೆಲೆಯಲ್ಲಿ ಅತ್ಯುತ್ತಮ ಟಿವಿಗಳು!

  ಜಾಗತಿಕವಾಗಿ ಅಧಿಕ ಸಂಖ್ಯೆಯ ಗ್ರಾಹಕರನ್ನು ಒಳಗೊಂಡಿರುವ ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ, ಉತ್ತಮ ಗುಣಮಟ್ಟದ ಟಿ.ವಿ.ಯನ್ನು ಥಾಮ್ಸನ್ ಪರಿಚಯಿಸಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಜಾಗತಿಕ ಮಾನದಂಡಗಳಾದ ಗುಣಮಟ್ಟ, ನಾವೀನ್ಯತೆ ಮತ್ತು ಫೀಚರ್ಸ್ ಹೊತ್ತಿರುವ ಈ ಟಿವಿಗಳು ಖರೀದಿಸಲು ಯೋಗ್ಯ ಟಿವಿಗಳು ಎನ್ನಬಹುದು.

  ಮೊಬೈಲ್ ಬ್ಯಾಟರಿ ಸುರಕ್ಷತೆಗಾಗಿ ನೀವು ತಿಳಿಯಲೇಬೇಕಾದ 8 ವಿಷಯಗಳಿವು!!

  ಸ್ಮಾರ್ಟ್‌ಪೋನ್ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತಿಲ್ಲ ಎಂಬ ಚಿಂತೆ ನಿಮಗೆ ಕಾಡುತ್ತಿದ್ದರೆ ಅದಕ್ಕೆ ನಿಮ್ಮ ತಪ್ಪುಗಳೇ ಕಾರಣವಾಗಿರುತ್ತದೆ. ಸ್ಮಾರ್ಟ್‌ಪೋನ್‌ಗಳ ಬ್ಯಾಟರಿ ಬಾಳಿಕೆ ನೀವದನ್ನು ಹೇಗೆ ಬಳಸುತ್ತೀರಿ ಎಂಬುವುದರ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ, ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ನಿರ್ವಹಣೆ ಬಹಳ ಮುಖ್ಯ.!

  ಕೆಲವರು ತಾನು ಉತ್ತಮವಾಗಿಯೇ ಸ್ಮಾರ್ಟ್‌ಪೋನ್ ಬ್ಯಾಟರಿಯನ್ನು ನಿರ್ವಹಣೆ ಮಾಡುತ್ತೇನೆ ಎಂದು ಹೇಳುತ್ತಾರೆ. ಆದರೆ, ಬ್ಯಾಟರಿ ನಿರ್ವಹಣೆ ಹೇಗೆ ಎಂಬುದನ್ನು ಅವರು ಸ್ಪಷ್ಟವಾಗಿ ತಿಳಿದಿರುವುದಿಲ್ಲ. ಆದುದರಿಂದ ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬಗ್ಗೆ ಕೆಲವೊಂದು ವಿಷಯಗಳನ್ನು ನೀವು ತಿಳಿಯಬೇಕಿದೆ. ಈ 8 ಸಲಹೆಗಳು ಖಂಡಿತವಾಗಿಯೂ ನಿಮ್ಮ ಬ್ಯಾಟರಿಯನ್ನು ಹೆಚ್ಚು ಸುರಕ್ಷಿತವಾಗಿರುವಂತೆ ಮಾಡಲಿವೆ.

  1) ಕಳಪೆ ಚಾರ್ಜರ್

  ಹಣ ಉಳಿಸಲು ಕಳಪೆ ಚಾರ್ಜರ್'ಗಳನ್ನು ಬಳಸಬೇಡಿ. ಅವುಗಳು ವಿದ್ಯುತ್ ಪ್ರವಾಹದ ಏರಿಳಿತಗಳಿಂದ ಅಥವಾ ಚಾರ್ಜ್ ಸಂಪೂರ್ಣವಾದ ಬಳಿಕ ಆಗುವ ಹಾನಿಯಿಂದ ರಕ್ಷಿಸುವ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಅಂತಹ ಚಾರ್ಜರ್'ಗಳಿಂದ ನಿಮ್ಮ ಫೋನ್ ಶಾಶ್ವತವಾಗಿ ಹಾಳಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

  2) ರಕ್ಷಣಾ ಕವಚವನ್ನು ತೆಗೆಯಿರಿ

  ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ವೇಳೆ ಫೋನ್ ಮೇಲಿರುವ ರಕ್ಷಣಾ ಕವಚವನ್ನು ತೆಗೆಯಿರಿ. ಚಾರ್ಜ್ ಆಗುವ ಸಮಯದಲ್ಲಿ ಫೋನ್ ಬ್ಯಾಟರಿಗಳು ಬಿಸಿಯಾಗುವುದು ಸಾಮಾನ್ಯ. ಆ ಬಿಸಿ ಕಡಿಮೆಯಾಗಲು ನೀವು ಅಳವಡಿಸಿರುವ ರಕ್ಷಣಾ ಕವಚಗಳು ತಡೆಯಾಗಬಹುದು. ಹಾಗಾಗಿ, ಇದು ನಿಮ್ಮ ನೆನಪಿನಲ್ಲಿರಲಿ.

  3) ಅದರದ್ದೇ ಆದ ಚಾರ್ಜರ್

  ನಿಮ್ಮ ಫೋನನ್ನು ಅದರದ್ದೇ ಆದ ಚಾರ್ಜರ್'ನಿಂದ ಚಾರ್ಜ್ ಮಾಡಿ. ಮೊಬೈಲ್ ಫೋನ್'ಗಳು ಇತರ ಚಾರ್ಜರ್'ಗಳಿಂದ ಚಾರ್ಜ್ ಆಗುವುದಾದರೂ, ಅದು ಅಸಲಿ ಫೋನ್ ಚಾರ್ಜರ್‌ಗೆ ಹೋಲಿಕೆಯಾಗದಿದ್ದಲ್ಲಿ ನಿಮ್ಮ ಫೋನ್ ಬ್ಯಾಟರಿ ಸಾಮರ್ಥ್ಯದ ಮೇಲೆ ಅದು ದುಷ್ಪರಿಣಾಮ ಬೀಳುತ್ತದೆ. ಬಹುತೇಕ ಬೇರೆ ಯಾವ ಚಾರ್ಜರ್ ಕೂಡ ಸರಿಯಾಗಿ ಹೋಲಿಕೆಯಾಗುವುದಿಲ್ಲ.

  4) ಥರ್ಡ್ ಪಾರ್ಟಿ ಬ್ಯಾಟರಿ ಆಪ್‌

  ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳನ್ನು ಬಳಸದಿರುವುದು ಉತ್ತಮ. ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳೂ ಜಾಹೀರಾತುಗಳನ್ನು ನಿಮ್ಮ ಸ್ಮಾರ್ಟ್‌ಫೋನಿಗೆ ಲೋಡ್ ಮಾಡುವುದಲ್ಲದೇ, ಇತರ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ನಿಮಗಾಗಿ ಶಿಫಾರಸ್ಸು ಮಾಡುತ್ತಲೇ ಇರುತ್ತವೆ. ಜೊತೆಗೆ ಫೋನ್ ಬ್ಯಾಟರಿಯನ್ನು ತಾನು ಬಳಸಿಕೊಳ್ಳುತ್ತವೆ.

  5) ಪದೇ ಪದೇ ಮೊಬೈಲ್ ಚಾರ್ಜ್

  ಪದೇ ಪದೇ ಮೊಬೈಲ್ ಚಾರ್ಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ. ಮೊಬೈಲ್ ಬ್ಯಾಟರಿಯನ್ನು ಒಮ್ಮೆ ( 80%)ಪೂರ್ತಿಯಾಗುವವರೆಗೂ ಚಾರ್ಜ್ ಮಾಡಿ. ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸ್ಮಾರ್ಟ್‌ಫೋನಿನ ಬ್ಯಾಟರಿ ಚಾರ್ಜ್ ಪಿನ್ ಸಹ ಹಾಳಾಗಿಬಿಡುತ್ತದೆ.

  6) ಪವರ್ ಬ್ಯಾಂಕ್

  ಪವರ್ ಬ್ಯಾಂಕ್ ಬಳಸುವಾಗ ಎಚ್ಚರವಿರಲಿ. ನೀವು ಬಳಸುವ ಪವರ್ ಬ್ಯಾಂಕ್ ವಿದ್ಯುತ್ ಪ್ರವಾಹದ ಏರಿಳಿತ, ಶಾರ್ಟ್ ಸರ್ಕ್ಯೂಟ್, ದೀರ್ಘ ಚಾರ್ಜಿಂಗಳಿಂದಾಗುವ ಹಾಗೂ ಅತೀ ಬಿಸಿಯಾಗುವಿಕೆ ಸಮಸ್ಯೆಗಳಿಂದ ನಿಮ್ಮ ಸ್ಮಾರ್ಟ್‌ಫೋನಿನ ಸುರಕ್ಷತೆಯನ್ನೊದಗಿಸುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ. ಯುಎಸ್‌ಬಿ ಕೇಬಲ್ ಬಗ್ಗೆ ಜಾಗೃತವಾಗಿರಿ.

  7) ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್

  ರಾತ್ರಿಯಿಡೀ ಫೋನನ್ನು ಚಾರ್ಜ್‌ಗೆ ಇಡುವುದು ಕೂಡ ಒಳ್ಳೆಯ ಅಭ್ಯಾಸವೇನಲ್ಲ. ಮೊಬೈಲ್ ಚಾರ್ಜ್ ಮಾಡುವಾಗ ಹೆಚ್ಚೆಂದರೆ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಿ ಮತ್ತು ಕಡಿಮೆ ಎಂದರೂ 20 ಪರ್ಸೆಂಟ್ ಬ್ಯಾಟರಿ ಚಾರ್ಜ್ ಇರುವಂತೆ ನೋಡಿಕೊಳ್ಳಿ. ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್ ನಿಮ್ಮ ಫೋನ್ ಬ್ಯಾಟರಿಯ ಬಾಳಿಕೆಯನ್ನು ಕುಂಠಿತಗೊಳಿಸಬಹುದು.

  8) ಫಾಸ್ಟ್ ಚಾರ್ಜರ್

  ಫಾಸ್ಟ್ ಚಾರ್ಜರ್‌ಗಳನ್ನು ಆ ತಂತ್ರಜ್ಞಾನ ಅಳವಡಿಕೆಯಾಗಿಲ್ಲದ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆ ಮಾಡಬೇಡಿ. ಫಾಸ್ಟ್ ಚಾರ್ಜರ್‌ನಲ್ಲಿ ಹೈ ವೋಲ್ಟೇಜ್ ಸರಬರಾಜಾಗುವುದರಿಂದ ಬ್ಯಾಟರಿ ಬೇಗನೇ ಬಿಸಿಯಾಗುತ್ತದೆ. ಫಾಸ್ಟ್ ಚಾರ್ಜರ್ ತಂತ್ರಜ್ಞಾನವಿರುವ ಸ್ಮಾರ್ಟ್‌ಫೋನ್ ಆದರೂ ಯಾವಾಗಲೂ ತ್ವರಿತ ಚಾರ್ಜರ್‌ಗಳನ್ನು ಬಳಸುವುದು ಒಳ್ಳೆಯದಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Here’s why Europe’s favourite brand Thomson’s smart TV were sold out within minutes. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more