Xiaomi 17 Pro Max: ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿರುವುದೇಕೆ?
ಸ್ಮಾರ್ಟ್‌ಫೋನ್ ಲೋಕದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿರುವ Xiaomi, ಇತ್ತೀಚೆಗೆ ತನ್ನ ಬಹು ನಿರೀಕ್ಷಿತ ಫ್ಲಾಗ್‌ಶಿಪ್ ಸರಣಿಯಾದ Xiaomi 17 ಅನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ, ಎಲ್ಲರ ಗಮನ ಸೆಳೆಯುತ್ತಿರುವುದು Xiaomi 17 Pro Max.! ಈ ಹೊಸ ಮಾದರಿಯು ಅದರ ವಿಶಿಷ್ಟ ಫೀಚರ್‌ಗಳು ಮತ್ತು ಅಬ್ಬರದ ಪವರ್‌ನಿಂದಾಗಿ ತಂತ್ರಜ್ಞಾನ ಪ್ರೇಮಿಗಳಲ್ಲಿ ದೊಡ್ಡ ಹೈಪ್ ಸೃಷ್ಟಿಸಿದೆ.'
ಮಾರುಕಟ್ಟೆಯಲ್ಲಿ ಐಫೋನ್ 17 ಪ್ರೊ ಮ್ಯಾಕ್ಸ್‌ನಂತಹ ಫ್ಲಾಗ್‌ಶಿಪ್‌ಗಳಿಗೆ ನೇರ ಪೈಪೋಟಿ ನೀಡಲು Xiaomi ಇದನ್ನು ವಿನ್ಯಾಸಗೊಳಿಸಿರುವುದು ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಹಾಗಾದರೆ, ಹೊಸ Xiaomi 17 Pro Max ಫೋನ್ ಹೇಗಿದೆ?, ಸಂಪೂರ್ಣ ಫೀಚರ್ಸ್ ಯಾವುವು ಮತ್ತು ಬೆಲೆ ಎಷ್ಟು ಹಾಗೂ ಭಾರತದ ಮಾರುಕಟ್ಟೆಗೆ ಯಾವಾಗ ಆಗಮಿಸಲಿದೆ ಎಂಬುದನ್ನು ನೋಡೋಣ ಬನ್ನಿ.
Xiaomi 17 Pro Max: ಸಂಪೂರ್ಣ ವೈಶಿಷ್ಟ್ಯಗಳು
ಡಿಸ್‌ಪ್ಲೇ : ಈ ಫೋನ್ ಒಂದು ದೊಡ್ಡ 6.9-ಇಂಚಿನ LTPO AMOLED ಡಿಸ್‌ಪ್ಲೇ ಹೊಂದಿದೆ. ಇದು 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಮತ್ತು 3,500 ನಿಟ್ಸ್‌ನಷ್ಟು ಗರಿಷ್ಠ ಪ್ರಖರತೆಯನ್ನು ಹೊಂದಿದೆ. ಇದರ ಜೊತೆಗೆ, ಕ್ಯಾಮೆರಾ ಮಾಡ್ಯೂಲ್ ಬಳಿ ಒಂದು ವಿಶಿಷ್ಟವಾದ ಸೆಕೆಂಡರಿ 2.9-ಇಂಚಿನ ಡಿಸ್‌ಪ್ಲೇ ನೀಡಲಾಗಿದೆ. ಇದು ನೋಟಿಫಿಕೇಶನ್‌ಗಳು, ಸೆಲ್ಫಿ ವೀಕ್ಷಣೆ ಮತ್ತು ಕಂಟ್ರೋಲ್‌ಗಳಿಗೆ ಬಳಕೆಯಾಗುತ್ತದೆ.
ಕಾರ್ಯಕ್ಷಮತೆ : ಈ ಫೋನ್‌ಗೆ ಕ್ವಾಲ್ಕಾಮ್‌ನ ಅತ್ಯಾಧುನಿಕ Snapdragon 8 Elite Gen 5 ಪ್ರೊಸೆಸರ್ ಹೊಂದಿದೆ. ಇದು 16GB ವರೆಗಿನ RAM ಮತ್ತು 1TB ವರೆಗಿನ ಸ್ಟೋರೇಜ್ ಆಯ್ಕೆಗಳೊಂದಿಗೆ ಜೋಡಿಸಲ್ಪಟ್ಟಿದೆ. ಇದು ಆಂಡ್ರಾಯ್ಡ್ 16 ಆಧಾರಿತ HyperOS 3 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ: ಈ ಫೋನಿನಲ್ಲಿ ಲೈಕಾ ಜೊತೆಗೂಡಿ ಮಾಡಿದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. ಇದು 50-ಮೆಗಾಪಿಕ್ಸೆಲ್ ಮುಖ್ಯ ಸೆನ್ಸಾರ್, 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 5x ಆಪ್ಟಿಕಲ್ ಜೂಮ್ ಹೊಂದಿರುವ 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್: ಈ ಫೋನ್ ಒಂದು ಬೃಹತ್ 7,500mAh ಬ್ಯಾಟರಿ ಹೊಂದಿದೆ. ಇದು 100W ವೇಗದ ವೈರ್ಡ್ ಚಾರ್ಜಿಂಗ್ ಮತ್ತು 50W ವೇಗದ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Xiaomi 17 Pro Max ಫೋನ್ ಇಷ್ಟೊಂದು ಸದ್ದು ಮಾಡಲು ಪ್ರಮುಖ ಕಾರಣಗಳು,
ಐಫೋನ್‌ಗೆ ನೇರ ಸ್ಪರ್ಧೆ: ಮೊದಲೇ ಹೇಳಿದಂತೆ ಮಾರುಕಟ್ಟೆಯಲ್ಲಿ ಐಫೋನ್ 17 ಪ್ರೊ ಮ್ಯಾಕ್ಸ್‌ನಂತಹ ಫ್ಲಾಗ್‌ಶಿಪ್‌ಗಳಿಗೆ ನೇರ ಪೈಪೋಟಿ ನೀಡಲು Xiaomi ಇದನ್ನು ವಿನ್ಯಾಸಗೊಳಿಸಿರುವುದು ಗ್ರಾಹಕರಲ್ಲಿ ಕುತೂಹಲ ಮೂಡಿಸಿದೆ. ಈ ಫೋನಿನ ಡಿಸೈನ್ ಹೆಚ್ಚು ಆಕರ್ಷಕವಾಗಿ ಕಾಣುತ್ತಿದೆ.

ವಿಶಿಷ್ಟ ಡ್ಯುಯಲ್-ಸ್ಕ್ರೀನ್ ವಿನ್ಯಾಸ: Xiaomi 17 ಪ್ರೊ ಮ್ಯಾಕ್ಸ್ ಫೋನಿನ ಹಿಂಭಾಗದಲ್ಲಿ ನೀಡಲಾದ ಸಣ್ಣ ಸ್ಕ್ರೀನ್ ಹೊಸ ಟ್ರೆಂಡ್ ಸೃಷ್ಟಿಸಿದೆ. ನೋಟಿಫಿಕೇಶನ್‌ಗಳು, ಸೆಲ್ಫಿಗಳನ್ನು ಸುಲಭವಾಗಿ ತೆಗೆದುಕೊಳ್ಳಲು ಮತ್ತು ಕಂಟ್ರೋಲ್‌ಗಳಿಗೆ ಬಳಕೆಯಾಗುತ್ತಿರುವುದು ಒಂದು
ಗೇಮಿಂಗ್ ಕನ್ಸೋಲ್: ಶಿಯೋಮಿಯ ಮಾಹಿತಿಯ ಪ್ರಕಾರ, ಒಂದು ವಿಶೇಷವಾದ ಕೇಸ್ ಅನ್ನು ಬಳಸಿದಾಗ, ಫೋನಿನಲ್ಲಿರುವ ಸೆಕೆಂಡರಿ ಡಿಸ್‌ಪ್ಲೇಯನ್ನು ಹಿಡಿದಿಡುವ ಗೇಮಿಂಗ್ ಕನ್ಸೋಲ್‌ನ ಪರದೆಯಾಗಿ ಸಹ ಬಳಸಬಹುದು.
ಹೆಚ್ಚು ಪವರ್: Snapdragon 8 Elite Gen 5 ಪ್ರೊಸೆಸರ್ ಮತ್ತು 16GB RAM ಸಂಯೋಜನೆಯು ಅಸಾಧಾರಣ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ.
ದೊಡ್ಡ ಬ್ಯಾಟರಿ: 7,500mAh ನಷ್ಟು ದೊಡ್ಡ ಬ್ಯಾಟರಿಯು ಪ್ರೀಮಿಯಂ ವಿಭಾಗದಲ್ಲಿ ದೀರ್ಘ ಬಾಳಿಕೆಯ ಭರವಸೆ ನೀಡಿದೆ.

ಬೆಲೆ ಎಷ್ಟು?..ಭಾರತಕ್ಕೆ ಯಾವಾಗ?
ಚೀನಾ ಮಾರುಕಟ್ಟೆಯಲ್ಲಿ Xiaomi 17 Pro Max ಫೋನಿನ ಆರಂಭಿಕ ಬೆಲೆ ಸುಮಾರು CNY 5,999 ಇದೆ, ಇದು ಭಾರತೀಯ ರೂಪಾಯಿಗಳಲ್ಲಿ ಅಂದಾಜು ₹ 74,700 ರಿಂದ ಪ್ರಾರಂಭವಾಗುತ್ತದೆ (12GB RAM + 512GB ಸ್ಟೋರೇಜ್ ಮಾದರಿಗೆ). ಈ ಫೋನ್ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಭಾರತದಲ್ಲಿ ಇದರ ಅಧಿಕೃತ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಘೋಷಿಸಿಲ್ಲ.
ಆದಾಗ್ಯೂ, ಮಾರುಕಟ್ಟೆ ವರದಿಗಳ ಪ್ರಕಾರ, ಶಿಯೋಮಿಯ ಈ ಪ್ರಮುಖ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಮುಂದಿನ ವರ್ಷದ (2026) ಆರಂಭದಲ್ಲಿ, ಅಂದರೆ ಫೆಬ್ರವರಿಯಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಭಾರತದಲ್ಲಿ ಬಿಡುಗಡೆಯಾದಾಗ, ಇದರ ಬೆಲೆ ₹ 99,900 ರ ಆಸುಪಾಸಿನಲ್ಲಿ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.


Click it and Unblock the Notifications








