ಮೊಬೈಲ್‌ನಿಂದಾಗಿ ನಾವಿಂದು ಎಲ್ಲಿಗೆ ಬಂದು ನಿಂತಿದ್ದೇವೆ ಗೊತ್ತಾ?!

|

ಇಂದಿನ ದಿನಗಳಲ್ಲಿ ಮೊಬೈಲ್ ಎಂಬ ಮಾಂತ್ರಿಕನನ್ನು ಬಿಟ್ಟು ನಮ್ಮಿಂದ ಬದುಕಲು ಸಾಧ್ಯವೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುತ್ತಿರುತ್ತೇವೆ. ಹೀಗೆ ಪ್ರಶ್ನಿಸಿಕೊಂಡ ನಂತರ ಮೊಬೈಲ್ ಅನ್ನು ಯಾವುದೇ ಕಾರಣಕ್ಕೂ ಬಿಟ್ಟಿರಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ನಾವು ಬರುತ್ತೇವೆ. ಈ ನಿರ್ಧಾರ ಖಂಡಿತವಾಗಿಯೂ ಸರಿಯಾಗಿಯೇ ಇದೆ ಮತ್ತು ಅದು ಸಮಂಜಸ ಕೂಡ.

ಖಂಡಿತವಾಗಿಯೂ ಇಂದಿನ ದಿನಗಳಲ್ಲಿ ಮೊಬೈಲ್ ಫೋನನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲದಂತಾಗಿದೆ. ಡಿಜಿಟಲ್ ಮಾನವನ ಪ್ರತಿದಿನದ ಬಹುತೇಕ ಕಾರ್ಯಗಳನ್ನು ನಿರ್ವಹಿಸುವ ಮೊಬೈಲ್ ಒಂದು ಕ್ಷಣವಿಲ್ಲದಿದ್ದರೂ ಈಗ ಕಷ್ಟವಾಗುತ್ತದೆ. ಆದರೆ, 'ಮೊಬೈಲ್ ನಮ್ಮ ಉಪಯೋಗಕ್ಕೆ ಆಗಬೇಕೆ ಹೊರತು ಮೊಬೈಲೇ ನಮ್ಮ ಉಪಯೋಗವಲ್ಲ ಎಂಬುದನ್ನು ಮರೆತಿದ್ದೇವೆ'.

ಮೊಬೈಲ್‌ನಿಂದಾಗಿ ನಾವಿಂದು ಎಲ್ಲಿಗೆ ಬಂದು ನಿಂತಿದ್ದೇವೆ ಗೊತ್ತಾ?!

ಹೌದು, ಮೊಬೈಲ್ ಮಾನವನನ್ನು ಹೇಗೆಲ್ಲಾ ಬದಲಾಯಿಸಿದೆ ಎಂಬ ರಿಪೋರ್ಟ್ ಒಂದು ಹೇಳುವ ಹಾಗೆ ನಾವಿಂದು ಉಹಿಸಲಾಗದಷ್ಟು ಬದಲಾಗಿದ್ದೇವೆ. ಕೇವಲ ಎರಡರಿಂದ ಮೂರು ದಶಕಗಳಲ್ಲಿ ನಾವು ಬಹಳಷ್ಟು ದೂರವನ್ನು ಕ್ರಮಿಸಿದ್ದೇವೆ. ಮೊಬೈಲ್ ಇಂದು ಮಾನವನನ್ನು ಎಲ್ಲಿಗೆ ತಂದು ನಿಲ್ಲಿಸಿದೆ ಎಂಬುದರ ಈ ರಿಪೋರ್ಟ್ ನಿಜವಾಗಿಯೂ ಆಶ್ಚರ್ಯವಾಗಿದೆ.

ಸಂಬಂಧಿಗಳಿಂದ ದೂರವಾಗಲು ಕಾರಣ

ಸಂಬಂಧಿಗಳಿಂದ ದೂರವಾಗಲು ಕಾರಣ

ಮೊಬೈಲ್ ಬಳಕೆಯಿಂದ ಈ ಕಾಲದಲ್ಲಿ ನಮ್ಮ ಸ್ನೇಹಿತರು, ಕುಟುಂಬ ಮತ್ತು ಇತರ ಸಂಬಂಧಿಗಳಿಂದ ನಾವು ಪರೋಕ್ಷವಾಗಿ ದೂರವಾಗಿದ್ದೇವೆ. ನಮ್ಮ ಕುಟುಂಬ ಮತ್ತು ಸ್ನೇಹಿತರ ಬಗ್ಗೆ ನಮಗೆ ವಿಷಯಗಳೇ ತಿಳಿಯುತ್ತಿಲ್ಲ. ಕೇವಲ ಮೊಬೈಲ್ ನಲ್ಲಿ ಮಾತ್ರ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದೇವೆ. ಇಂದು ಸಂಬಂಧಿಗಳ ಸಂಬಂಧ ಮೊಬೈಲ್ ನೆಟ್ ವರ್ಕ್ ಆಗೋಗಿದೆ.

ಮೊಬೈಲ್ ನಮ್ಮ ಸುಳ್ಳಿನ ಸ್ನೇಹಿತ

ಮೊಬೈಲ್ ನಮ್ಮ ಸುಳ್ಳಿನ ಸ್ನೇಹಿತ

ಮೊಬೈಲ್ ನಮ್ಮ ಸುಳ್ಳಿನ ಸ್ನೇಹಿತ, ಮೊಬೈಲ್ ಗೆ ಇನ್ನೊಂದು ಹೆಸರು ಸುಳ್ಳು ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಮೊಬೈಲ್‌ ಕಥೆ ಮುಗಿದು ಈಗಿನ ಸ್ಮಾರ್ಟ್‌ಫೋನ್ ಜಮಾನ ಕೂಡ ಸುಳ್ಳಿನ ಕಂತೆಯನ್ನೇ ಹೆಣೆಯುತ್ತಿದೆ. ಸ್ಮಾರ್ಟ್‌ಪೋನ್ ಕೂಡ ನಮ್ಮನ್ನು ವಂಚನೆ ಮತ್ತು ಸುಳ್ಳಿಗೆ ಹೆಚ್ಚು ಹೆಚ್ಚು ಪ್ರಚೋದಿಸುತ್ತದೆ ಎಂಬುದನ್ನು ಇತ್ತೀಚಿನ ರಿಪೋರ್ಟ್ ಒಂದು ಹೇಳಿದೆ.

ಸಮಯ ವ್ಯರ್ಥ ಮಾಡುವ ಸಾಧನ

ಸಮಯ ವ್ಯರ್ಥ ಮಾಡುವ ಸಾಧನ

ನಾನು ಸೇರಿದಂತೆ ಈಗಿನ ಯುವಕ ಯುವತಿಯರಿಗೆ ಸಮಯದ ಬೆಲೆ ತಿಳಿದಿಲ್ಲ ಎಂಬುದು ನಿಜ ಎನ್ನಬಹದು. ಏಕೆಂದರೆ, ಮೊಬೈಲ್‌ನಿಂದ ನಮ್ಮ ಅನೇಕ ಮದುರ ಕ್ಷಣಗಳು ಮತ್ತು ಅನೇಕ ಮುಖ್ಯ ಸಮಯವು ಈ ಮೊಬೈಲ್‌ನಿಂದ ವ್ಯರ್ಥವಾಗಿದೆ. ಹಾಗಾಗಿಯೇ, ಮೊಬೈಲ್ ನಮ್ಮ ಉಪಯೋಗಕ್ಕೆ ಆಗಬೇಕೆ ಹೊರತು ಮೊಬೈಲೇ ನಮ್ಮ ಉಪಯೋಗವಲ್ಲ ಎಂದು ಹೇಳಲಾಗಿದೆ.

ಓದಿನ ಮೇಲೆ ಮಾರಕ ಪರಿಣಾಮ

ಓದಿನ ಮೇಲೆ ಮಾರಕ ಪರಿಣಾಮ

ಯುವಕ ಯುವತಿಯರಿಗೆ ಸಮಯವನ್ನು ಪೋಲುಮಾಡುತ್ತಿರುವ ಮೊಬೈಲ್ ವಿದ್ಯಾರ್ಥಿಗಳ ಜೀವನವನ್ನು ಸಹ ನುಂಗುತ್ತಿದೆ. ಇತ್ತೀಚಿಗೆ ಮೊಬೈಲ್ ಬಳಸುವುದರ ಮೂಲಕ ವಿಧ್ಯಾರ್ಥಿಗಳು ಹೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ ಎಂದು ಹಲವು ವರದಿಗಳು ಹೇಳಿವೆ. ಇದು ವಿದ್ಯಾರ್ಥಿಗಳ ಅಧ್ಯಯನದ ಕೊನೆಯಲ್ಲಿ ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಮೊಬೈಲ್ ಅನಾರೋಗ್ಯಕ್ಕೂ ಕಾರಣ

ಮೊಬೈಲ್ ಅನಾರೋಗ್ಯಕ್ಕೂ ಕಾರಣ

ನಿಮಗೆ ಗೊತ್ತಾ?, ಈ ಮೊಬೈಲ್ ಎಂಬುದು ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಮತ್ತೊಂದು ದೊಡ್ಡ ಅಂಶವಾಗಿದೆ. ಮಾನವನ ಶಾರೀರಿಕ ಮಾತ್ರವಲ್ಲದೆ, ಮಾನಸಿಕವಾಗಿಯೂ ಗಾಢವಾದ ಪರಿಣಾಮವನ್ನು ಬೀರುತ್ತುರುವ ಈ ಮೊಬೈಲ್‌ ರೋಗಗಳನ್ನು ತರುವುದಲ್ಲದೆ, ನಮ್ಮ ಶಕ್ತಿ , ನೆಮ್ಮದಿ ಹಾಗೂ ತಾಳ್ಮೆಯನ್ನು ಸಹ ಕೆಡಿಸುತ್ತಿದೆ.

ಚರ್ಮರೋಗಗಳು ಬರುವ ಸಾಧ್ಯತೆ

ಚರ್ಮರೋಗಗಳು ಬರುವ ಸಾಧ್ಯತೆ

ಮೊಬೈಲ್ ಫೋನ್ ಚರ್ಮದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ವಿಶೇಷವಾಗಿ ಕೈ ಚರ್ಮ, ಕ್ಯಾನ್ಸರ್ ಮತ್ತು ಕಣ್ಣಿನ ಸಮಸ್ಯೆಗಳು ಇತ್ಯಾದಿ ಮೊಬೈಲ್‌ನನಿಂದಲೇ ಹೆಚ್ಚು ಹರಡುತ್ತವೆ. ಇತರ ರೋಗಗಳು ಕೂಡ ಮೊಬೈಲ್‌ನ ಬಳಕೆಯಿಂದಲೇ ಬರಬಹುದು ಎನ್ನಲಾಗುತ್ತದೆ. ಇದು ನಿಜವಾಗಿಯೂ ಅಪಾಯಕಾರಿಯಾಗಿದೆ.

ಮೊಬೈಲ್ ನಿಂದ ಸಾವು

ಮೊಬೈಲ್ ನಿಂದ ಸಾವು

ಮೊಬೈಲ್ ಪೋನ್ ಬಳಕೆಯಿಂದಾಗಿ ಸಾವಿಗೆ ತುತ್ತಾಗಿರುವ ನಿದರ್ಶನಗಳಿವೆ ಎಂಬುದು ನಿಮಗೀಗಾಗಲೇ ತಿಳಿದಿದೆ ಎನ್ನಬಹುದು. ಕೆಲವು ಜನರು ಚಾಲನೆ ಮಾಡುವಾಗ ಮೊಬೈಲ್ ಅನ್ನು ಅದನ್ನು ಬಳಸಿ ಅಪಘಾತಕ್ಕೊಳಗಾಗಿದ್ದಾರೆ. ಇನ್ನೂ ಕೆಲವರು ತಮ್ಮ ಸಾಹಸ ತೋರಿಸಲು ಸಾಹಸ ಭಂಗಿಗಳನ್ನು ಸೆಲ್ಫಿ ಮಾಡಿಕೊಳ್ಳುವಾಗ ಸತ್ತದನ್ನು ನಾವು ನೋಡಿಯೇ ಇರುತ್ತೇವೆ.

Best Mobiles in India

English summary
Are mobile phones bad for health? Are there any studies that confirm bad effects of mobile phones on the human body?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X