ವಿಕ್ಕೆಡ್‌ಲೀಕ್‌ನಿಂದ ವಾಮ್ಮಿ ಟೈಟಾನ್‌ಗೆ ಕೊಡುಗೆ

Written By:

ತಮ್ಮ ಸ್ಮಾರ್ಟ್‌ಫೋನ್‌ಗೆ ಕಿಟ್‌ಕ್ಯಾಟ್ 4.4 ಅನ್ನು ಏಕೆ ಅಪ್‌ಡೇಟ್ ಮಾಡಿಲ್ಲವೆಂದು ವಿಕ್ಕೆಡ್‌ಲೀಕ್ ಬಳಕೆದಾರರು ಅಂದುಕೊಂಡಿದ್ದರೆ ಚಿಂತಿಸಬೇಕಾಗಿಲ್ಲ. ಕಂಪೆನಿಯು ಈ ಫರ್ಮ್‌ವೇರ್ ಆವೃತ್ತಿಯನ್ನು ತನ್ನ ವಾಮ್ಮಿ ಟೈಟಾನ್ 3 ಓಕ್ಟಾಗೆ ತರುವುದಾಗಿ ಶುಕ್ರವಾರ ತಿಳಿಸಿದೆ.

ಈ ಡೊಮೆಸ್ಟಿಕ್ ವೆಂಡೋರ್ ಇದು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ನವೀಕರಣವನ್ನು ಆಗಸ್ಟ್ 1 ರಿಂದ ಹೊರತರುತ್ತಿದ್ದು ಈ ನವೀಕರಣ ಸ್ಮಾರ್ಟ್‌ಫೋನ್ ಮಾಲೀಕರಿಗೆ ದೊರೆಯಲಿದೆ.

ವಾಮ್ಮಿ ಟೈಟಾನ್‌ಗೆ ಆಂಡ್ರಾಯ್ಡ್ ಕಿಟ್‌ಕ್ಯಾಟ್

ಇದು ಆಗಸ್ಟ್ 1 ರಂದು ಬಿಡುಗಡೆಯಾಗುತ್ತಿದ್ದು ಬಳಕೆದಾರರಿಗೆ ಲಭ್ಯವಾಗುತ್ತಿದೆ. ಎಲ್ಲಾ ಹೊಸ ಆರ್ಡರ್‌ಗಳು ಮತ್ತು ವಾಮ್ಮಿ ಟೈಟಾನ್ 3 ಓಕ್ಟಾ ಸ್ಮಾರ್ಟ್‌ಫೋನ್ 18 ಡಿಸೆಂಬರ್‌ನಿಂದ ಆರಂಭವಾಗಿತ್ತು ಇದು ಇನ್ನು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಆವೃತ್ತಿಯೊಂದಿಗೆ ಬರಲಿದೆ ಎಂದು ಕಂಪೆನಿ ಅಧಿಕೃತವಾಗಿ ತಿಳಿಸಿದೆ.

ವಾಮ್ಮಿ ಟೈಟಾನ್ 3 ಮಾಸ್ಸೀವ್ 5.7 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದ್ದು 1280 x 720 ಪಿಕ್ಸೆಲ್‌ಗಳ ರೆಸಲ್ಯುಶನ್‌ನಲ್ಲಿ ಬಂದಿದೆ. ಇದರಲ್ಲಿ 1.7GHz ಓಕ್ಟಾ ಕೋರ್ ಪ್ರೊಸೆಸರ್ ಇದ್ದು MediaTek MT6592 ಚಿಪ್‌ಸೆಟ್ ಫೋನ್‌ನಲ್ಲಿದೆ. ಫೋನ್‌ನ 2 ಜಿಬಿ RAM ಅನ್ನು ಒಳಗೊಂಡಿದ್ದು 16 ಜಿಬಿ ಆಂತರಿಕ ಮೆಮೊರಿಯೊಂದಿಗೆ ಬಂದಿದೆ. ಇದನ್ನು 64 ಜಿಬಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ.

Read more about:
English summary
Wickedleak android kitkat update for wammy titan 3 octa.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot