ಬರಲಿದೆ ಪರಿಷ್ಕ್ರತ ವಿಂಡೋಸ್ ಫೋನ್ 7.1 ಟ್ಯಾಂಗೊ ಆಪರೇಟಿಂಗ್ ಸಿಸ್ಟಮ್

Posted By: Staff
ಬರಲಿದೆ ಪರಿಷ್ಕ್ರತ ವಿಂಡೋಸ್ ಫೋನ್ 7.1 ಟ್ಯಾಂಗೊ ಆಪರೇಟಿಂಗ್ ಸಿಸ್ಟಮ್
 

ಮೈಕ್ರೊ ಸಾಫ್ಟ್ ನ ವಿಂಡೋಸ್ ಫೋನ್ 7.5 ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್ ಗಳು ಹೆಚ್ಚು ಖ್ಯಾತಿ ಗಳಿಸಿದೆ. ಈ ಆಪರೇಟಿಂಗ್ ಸಿಸ್ಟಮ್ ಬಳಕೆದಾರರಿಗೆ ಅನುಕೂಲವಾಗುವಂತಹ ಅನೇಕ ಆಯ್ಕೆಗಳನ್ನು ನೀಡಿದ್ದು, ಎಚ್ ಟಿಸಿ ಮತ್ತು ನೋಕಿಯಾ ಮುಂತಾದ ಪ್ರತಿಷ್ಟಿತ ಕಂಪನಿಗಳು ತಮ್ಮ ಮೊಬೈಲ್ ಗಳಿಗೆ ಹೆಚ್ಚಾಗಿ ಈ ಆಪರೇಟಿಂಗ್ ಸಿಸ್ಟಮನ್ನು ಬಳಸಿಕೊಂಡಿವೆ.

ಈ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಸಾಧನಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖ್ಯಾತಿ ಗಳಿಸಿರುವುದು ಮೈಕ್ರೊ ಸಾಫ್ಟ್ ಗೆ ಇನ್ನಷ್ಟು ಬೆಂಬಲ ಸಿಕ್ಕಂತಾಗಿದೆ.

ಇದೀಗ ಮೈಕ್ರೊಸಾಫ್ಟ್ ವಿಂಡೋಸ್ ಫೋನ್ 7.5 ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ನ ಪರಿಷ್ಕ್ರತ ರೂಪ ವಿಂಡೋಸ್ ಫೋನ್ 7.1 ಆಪರೇಟಿಂಗ್ ಸಿಸ್ಟಮ್ ಅನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಇದು ಮ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಗಿಂತ ಸ್ವಲ್ಪ ಕಡಿಮೆ ಗುಣಮಟ್ಟದ್ದಾಗಿದೆ ಎಂದು ತಿಳಿದುಬಂದಿದೆ.

ಈ ನೂತನ ಆಪರೇಟಿಂಗ್ ಸಿಸ್ಟಮ್ ಮತ್ತು ಅದರ ಆಯ್ಕೆ ಕುರಿತು ಅಧೀಕೃತ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಆದರೆ ಈ ಆಪರೇಟಿಂಗ್ ಸಿಸ್ಟಮನ್ನು ಸ್ಮಾರ್ಟ್ ಫೋನ್ ತಯಾರಕರು ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಇದರ ಬೆಳವಣಿಗೆ ಅವಲಂಬಿತವಾಗಿದೆ.

ಕಡಿಮೆ ಆಯ್ಕೆಗಳನ್ನು ಹೊಂದಿರುವ ಮೊಬೈಲ್ ಗಳನ್ನು ಉದ್ದೇಶವಾಗಿಟ್ಟುಕೊಂಡು ಈ ವಿಂಡೋಸ್ ಫೋನ್ 7.1 ಟ್ಯಾಂಗೊ ಆಪರೇಟಿಂಗ್ ಸಿಸ್ಟಮನ್ನು ಹೊರತರಲಾಗಿದೆ. ಈ ಆಪರೇಟಿಂಗ್ ಸಿಸ್ಟಮನ್ನು ಅಳವಡಿಸುವುದರಿಂದ ಸ್ಮಾರ್ಟ್ ಫೋನ್ ತಯಾರಕರು ಕಡಿಮೆ ಬೆಲೆಗೆ ಮೊಬೈಲ್ ಗಳನ್ನು ಮಾರಾಟ ಮಾಡಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಅವಕಾಶವಿದೆ.

ಪ್ರಸ್ತುತ ಲಭ್ಯವಿರುವ ವಿಂಡೋಸ್ ಫೋನ್ 7.5 ಮ್ಯಾಂಗೊ ಆಯಾಮಕ್ಕೆ ಹೋಲಿಸಿದರೆ ಟ್ಯಾಂಗೊ ಸಿಸ್ಟಮ್ ಇಮೇಜ್, ಕ್ಲಾಕ್ ಪ್ರೊಸೆಸರ್ ಮತ್ತು ಮೆಮೊರಿಯಲ್ಲಿ ಕಡಿಮೆ ಸಾಮರ್ಥ್ಯ ಹೊಂದಿರುತ್ತದೆ ಎನ್ನಲಾಗಿದೆ.

ಬೆಳೆಯುತ್ತಿರುವ ಭಾರತ ಮತ್ತು ಚೈನಾ ಮಾರುಕಟ್ಟೆಯನ್ನು ಉದ್ದೇಶವಾಗಿಟ್ಟುಕೊಂಡೇ ಈ ವಿಂಡೋಸ್ ಫೋನ್ 7.1 ಟ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಹೊರತರುವುದಾಗಿ ಸುದ್ದಿಯಿದೆ. ಅಂತೆಯೇ ಈ ಆಪರೇಟಿಂಗ್ ಬಳಸಿಕೊಳ್ಳವು ಮೊಬೈಲ್ ಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ ಎನ್ನಲಾಗಿದೆ. ಇದೀಗ ನೋಕಿಯಾದಿಂದ ಹೊರಬರುತ್ತಿರುವ ಶಾಂಪೇನ್ ಮೊಬೈಲ್ ಕೂಡ ಈ ಟ್ಯಾಂಗೊ ಆಪರೇಟಿಂಗ್ ಸಿಸ್ಟಮ್ ಬಳಸಿಕೊಳ್ಳಲಿದೆ ಎಂಬ ಸುದ್ದಿಯಿದೆ. 2012 ರ ಆರಂಭದಲ್ಲಿ ಈ ಟ್ಯಾಂಗೊ ಆಪರೇಟಿಂಗ್ ಸಿಸ್ಟಮನ್ನು ಪರಿಚಯಿಸುವ ಸೂಚನೆಯನ್ನು ಮೈಕ್ರೊ ಸಾಫ್ಟ್ ನೀಡಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot