ಬೆಲೆ ಇಳಿಕೆಯಿಂದ ಒನ್‌ಪ್ಲಸ್ 6 ಹಾಗೂ ಸ್ಯಾಮ್‌ಸಂಗ್‌ಗೆ ನೇರ ಸ್ಪರ್ಧೆ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 8+ ಸ್ಮಾರ್ಟ್ ಫೋನಿನ ಬೆಲೆಯು ಈ ವರ್ಷದಲ್ಲಿ ಎರಡನೇ ಬಾರಿಗೆ ಇಳಿಕೆಯಾಗಿದೆ. 64,900 ರುಪಾಯಿ ಬೆಲೆಗೆ ಬಿಡುಗಡೆಯಾಗಿದ್ದ ಈ ಫೋನಿನ ಬೆಲೆ ಈ ವರ್ಷದ ಎಪ್ರಿಲ್ ನಲ್ಲಿ 11,000 ರುಪಾಯಿ ಇಳಿಕೆ ಕಂಡು 53,900 ರುಪಾಯಿ ಬೆಲೆಗೆ ಮಾರಾಟವಾಗಲು ಪ್ರಾರಂಭವಾಗಿತ್ತು. ಇದೀಗ ಪುನಃ ಎರಡನೇ ಬಾರಿಗೆ ಇದರ ಬೆಲೆ ಇಳಿಕೆಯಾಗಿದೆ ಎಂದು ಮುಂಬೈ ಮೂಲಕ ರೀಟೈಲರ್ ಆಗಿರುವ ಮಹೇಶ್ ಟೆಲಿಕಾಂ ಸ್ಪಷ್ಟಪಡಿಸಿದೆ.
ಎರಡನೇ ಬಾರಿಗೆ ಇಳಿಕೆಯಾದ ಬೆಲೆ ಎಷ್ಟು?
ಖಂಡಿತ ಇದು ಸ್ಯಾಮ್ ಸಂಗ್ ಪ್ರಿಯರಿಗೆ ಸಿಹಿಸುದ್ದಿ. ಹೌದು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್8+ ಎರಡನೇ ಬಾರಿಗೆ ತನ್ನ ಬೆಲೆಯನ್ನು 14,000 ರುಪಾಯಿ ಇಳಿಸಿಕೊಂಡಿದ್ದು ಇದೀಗ ಕೇವಲ 39,990 ರುಪಾಯಿ ಬೆಲೆಗೆ ಮಾರಾಟವಾಗುತ್ತಿದೆ. ಈ ಬೆಲೆ ಇಳಿಕೆಯ ಕಾರಣದಿಂದಾಗಿ ಒನ್ ಪ್ಲಸ್ 6 ನೊಂದಿಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್8+ ನೇರವಾಗಿ ಸ್ಪರ್ಧೆಗೆ ಇಳಿದಿದೆ.8ಜಿಬಿ RAM ವರ್ಷನ್ ನ ಒನ್ ಪ್ಲಸ್ ನ ಮಾರಾಟದ ಬೆಲೆಯೂ ಕೂಡ 39,999 ರುಪಾಯಿಗಳಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 8+ 6.2 ಇಂಚಿನ ಇನ್ಫಿನಿಟಿ ಎಡ್ಜ್ ಡಿಸ್ಪ್ಲೇಯನ್ನು ಹೊಂದಿದೆ. ಇದರ ರೆಸಲ್ಯೂಷನ್ 1440 x 2960 ಪಿಕ್ಸಲ್ ಆಗಿದ್ದು ಮೇಲ್ಬಾಗಲ್ಲಿ Corning ಗೋರಿಲ್ಲಾ ಗ್ಲಾಸ್ ನಿಂದ ಯಾವುದೇ ಸ್ಕ್ರಾಚ್ ಗಳು ಆಗದಂತ ರಕ್ಷಣೆಯನ್ನು ಡಿಸ್ಪ್ಲೇಗೆ ನೀಡಲಾಗಿದೆ. ಕಂಪೆನಿಯ ಸ್ವಂತ Exynos 8895 ಪ್ರೊಸೆಸರ್ ನ್ನೇ ಇದು ಹೊಂದಿದೆ ಮತ್ತು ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತದೆ.
ಇದು 4ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯೊಂದಿಗೆ ಬರುತ್ತದೆ. ಮೈಕ್ರೋ ಎಸ್ ಡಿ ಕಾರ್ಡ್ ಬಳಸಲು ಗ್ರಾಹಕರಿಗೆ ಅವಕಾಶವಿದೆ. 12ಎಂಪಿ ಹಿಂಭಾಗದ ಡುಯಲ್ ಪಿಕ್ಸಲ್ ಕ್ಯಾಮರಾ ಅಳವಡಿಸಲಾಗಿದ್ದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಷೇನ್ ಇದೆ. LED ಫ್ಲ್ಯಾಶ್ ಮತ್ತು f/1.7 ಅಪರ್ಚರ್ ಹೊಂದಿದೆ. ಸ್ಮಾರ್ಟ್ ಫೋನ್ ನ ಮುಂಭಾಗದಲ್ಲಿ 8MP ಸೆಲ್ಫೀ ಕ್ಯಾಮರಾವಿದ್ದು ಅದರ ಅಪರ್ಚರ್ f/1.7 ಆಗಿದೆ.
3,500 mAh ಬ್ಯಾಟರಿಯನ್ನು ಇದು ಒಳಗೊಂಡಿದ್ದು ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ. ಕನೆಕ್ಟಿವಿಟಿ ವಿಚಾರದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್8+ 4G, VoLTE, 3G, ವೈ-ಫೈ, ಬ್ಲೂಟೂತ್, GPS, USB ಟೈಪ್ C, NFC ಮತ್ತು GPS ನ್ನು ಬೆಂಬಲಿಸುತ್ತದೆ. ಸ್ಯಾಮ್ ಸಂಗ್ ಪೇ, ಐರಿಸ್ ಸ್ಕ್ಯಾನರ್, ಫಿಂಗರ್ ಪ್ರಿಂಟ್ ಸ್ಕ್ಯಾನರ್, ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಒಳಗೊಂಡಿದೆ.
ಹೆಚ್ಚು ಕಡಿಮೆ ಇದೇ ಎಲ್ಲಾ ವೈಶಿಷ್ಟ್ಯತೆಗಳು ಒನ್ ಪ್ಲಸ್ ನಲ್ಲೂ ಇರುವುದರಿಂದಾಗಿ, ಡಿಸೈನ್ ವಿಚಾರದಲ್ಲೂ ಎರಡೂ ಮೊಬೈಲ್ ಗಳೂ ಆಕರ್ಷೀಯವಾಗಿದೆ. ಹಾಗಾಗಿ ಯಾವ ಮೊಬೈಲಿಗೆ ಆಸಕ್ತಿ ತೋರಿಸುತ್ತಾನೆ ಕಾದುನೋಡಬೇಕು. ಆದರೆ ಗೆಜೆಟ್ ಮಾರುಕಟ್ಟೆಯಲ್ಲಿ ಈ ಎರಡೂ ಮೊಬೈಲ್ ಗಳ ನಡುವೆ ನೇರ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.


Click it and Unblock the Notifications








