ಭಾರತದಲ್ಲಿ Wobble One ಲಾಂಚ್!..ಹೊಸ ಬ್ರ್ಯಾಂಡ್‌ನ ಮೊದಲ ಫೋನ್ ಸಂಚಲನ!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೊಂದು ಹೊಸ ಮೊಬೈಲ್ ಬ್ರ್ಯಾಂಡ್ ಇಂದು ಅಧಿಕೃತವಾಗಿ ಕಾಲಿಟ್ಟಿದೆ.! ಇಷ್ಟು ಮಾತ್ರವಲ್ಲದೇ, ತನ್ನ ಮೊದಲನೇ ಸ್ಮಾರ್ಟ್‌ಫೋನ್ ಬಿಡುಗಡೆ ಮೂಲಕವೇ ದೇಶದ ಮಾರುಕಟ್ಟೆಯಲ್ಲಿ ಸಂಚಲನವನ್ನು ಮೂಡಿಸಿದೆ! ಹೌದು, ಇಂಡ್ಕಲ್ ಟೆಕ್ನಾಲಜೀಸ್ ಒಡೆತನದ Wobble ಕಂಪೆನಿಯು ದೇಶದಲ್ಲಿ ಇಂದು( 19,ಬುಧವಾರ) ತನ್ನ ಮೊದಲ ಫೋನ್ ಅನ್ನು ಲಾಂಚ್ ಮಾಡಿದ್ದು, 'Wobble One' ಹೆಸರಿನಲ್ಲಿ ಬಂದಿರುವ ಈ ಫೋನ್ ಮಧ್ಯಮ-ಪ್ರಿಮಿಯಂ ಸೆಗ್ಮೆಂಟ್‌ನಲ್ಲಿ ಗಮನ ಸೆಳೆಯುವಂತಿದೆ. ಇದರಲ್ಲಿ 120Hz AMOLED ಡಿಸ್‌ಪ್ಲೇ, ಶಕ್ತಿಯುತ MediaTek Dimensity 7400 ಪ್ರೊಸೆಸರ್, ಮತ್ತು AI-ಚಾಲಿತ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ಗಳಿವೆ. ಹಾಗಾದರೆ, ಹೊಸ Wobble One ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
Wobble One: ವಿನ್ಯಾಸ ಮತ್ತು ವೈಶಿಷ್ಟ್ಯಗಳು
ದೇಶಕ್ಕೆ ಎಂದು ಎಂಟ್ರಿ ನೀಡಿರುವ ಈ Wobble One ಸ್ಮಾರ್ಟ್‌ಫೋನ್ ಯುವ ಗ್ರಾಹಕರನ್ನು ಗುರಿಯಾಗಿಟ್ಟುಕೊಂಡು ಆಧುನಿಕ, ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ. ಈ ಸಾಧನವು ನಯವಾದ ಮತ್ತು ತೆಳುವಾದ ನಿರ್ಮಾಣವನ್ನು ಹೊಂದಿದ್ದು, ಕ್ಲೀನ್ ಹೋಲ್-ಪಂಚ್ ಲುಕ್ ಜೊತೆಗೆ ಫ್ಲಾಟ್ ಫ್ರೇಮ್ ವಿನ್ಯಾಸದಲ್ಲಿದೆ. ಹಿಂಭಾಗದಲ್ಲಿಚದರ ಆಕಾರದ ಕ್ಯಾಮೆರಾ ಮಾಡ್ಯೂಲ್ ಮತ್ತು LED ಫ್ಲ್ಯಾಷ್ ಅನ್ನು ಹೊಂದಿದೆ. ಜೊತೆಗೆ ಈ ಫೋನಿನಲ್ಲಿ ಫ್ಲಶ್-ಮೌಂಟೆಡ್ ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಇರುವುದನ್ನು ನಾವು ನೋಡಬಹುದು.
ಡಿಸ್‌ಪ್ಲೆ ವಿಭಾಗದಲ್ಲಿ, Wobble One ಸ್ಮಾರ್ಟ್‌ಫೋನ್ ಡಾಲ್ಬಿ ವಿಷನ್‌ನೊಂದಿಗೆ 6.67-ಇಂಚಿನ ಫುಲ್ HD+ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ಅನ್ನು ಬೆಂಬಲಿಸಲಿದೆ. ಕಾರ್ಯಕ್ಷಮತೆಗಾಗಿ, ಈ ಫೋನ್ 12GB ವರೆಗೆ RAM ಮತ್ತು 256GB ವರೆಗೆ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾದ 6GHz 4nm MediaTek Dimensity 7400 ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ 2.6GHz ಕ್ಲಾಕ್ ಸ್ಪೀಡ್ ನೀಡುತ್ತದೆ. ಇನ್ನು ಗೇಮಿಂಗ್‌ಗಾಗಿ ವಿಶೇಷವಾಗಿರುವ Epic HyperEngine ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.
ಕ್ಯಾಮೆರಾ ವಿಭಾಗದಲ್ಲಿ, obble One ಸ್ಮಾರ್ಟ್‌ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದು ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50-ಮೆಗಾಪಿಕ್ಸೆಲ್ ಸೋನಿ LYT-600 ಸಂವೇದಕ, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ + ಬೊಕೆ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಕಂಪನಿಯ ವಿಶೇಷ Wobble Mode ಫೋಟೋಗಳನ್ನು ಕ್ರಿಯೇಟಿವ್ ರೀತಿಯಲ್ಲಿ ಸೆರೆಹಿಡಿಯಲು ನೆರವಾಗುತ್ತದೆ.



Click it and Unblock the Notifications








