ನಾಳೆ ಮಹಿಳೆಯರ ದಿನ. ಈ ಸ್ಮಾರ್ಟ್ ಫೋನ್ ಕೊಡಿಸುತ್ತೀರಾ?

Posted By: Varun
ನಾಳೆ ಮಹಿಳೆಯರ ದಿನ. ಈ ಸ್ಮಾರ್ಟ್ ಫೋನ್ ಕೊಡಿಸುತ್ತೀರಾ?

ಪ್ರತೀ ವರ್ಷ ಮಾರ್ಚ್- 8 ಕ್ಕೆ ವಿಶ್ವದೆಲ್ಲೆಡೆ ಮಹಿಳಾ ದಿನವನ್ನಾಗಿ ಆಚರಿಸುತ್ತಾರೆ. ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವ ರಾಜಕೀಯ ಕ್ಷೇತ್ರವಾಗಲಿ, ತಮ್ಮದೇ ಛಾಪನ್ನು ಮೂಡಿಸಿರುವ ಮಹಿಳೆಯರ ಈ ಸಾಧನೆಯನ್ನು ಗೌರವಿಸಲು ಆ ದಿನವನ್ನು ಅವರಿಗೆ ಅರ್ಪಿಸಲಾಗಿದೆ.

ನಿಮ್ಮ ತಾಯಿ, ತಂಗಿ, ಮಡದಿ ಇಲ್ಲವೆ ಯಾವುದೇ ಹೆಣ್ಣು ಮಗಳು ನಿಮ್ಮ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಪ್ರೇರಣೆಯಾಗಿರುತ್ತಾರೆ. ಅವರಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಒಂದು ಉಡುಗೊರೆಯನ್ನು ಕೊಡಬಹುದು. ಮೊಬೈಲ್ ಫೋನ್ ಗಳಿಗಿಂತ ಉತ್ತಮವಾದ ಉಡುಗೊರೆ ಮತ್ತೊಂದಿಲ್ಲ.

ಸ್ಯಾಮ್ಸಂಗ್ ನ ಗ್ಯಾಲಕ್ಸಿ Y ಕಲರ್ ಪ್ಲಸ್ ಮಧ್ಯಮ ಶ್ರೇಣಿಯ ಸ್ಮಾರ್ಟ್ ಫೋನ್ ಆಗಿದ್ದು ಆಂಡ್ರಾಯ್ಡ್ ತಂತ್ರಾಂಶ ವಿರುವ ಉತ್ತಮ ಮೊಬೈಲ್ ಆಗಿದೆ. 7,900 ರೂಪಾಯಿ ಬೆಲೆಯ ಈ ಫೋನ್, ಆಂಡ್ರಾಯ್ಡ್ ನ ಜಿಂಜರ್ ಬರ್ಡ್ 2.3 ಒ.ಎಸ್ ಹೊಂದಿದ್ದು, 832 ಮೆಗಾಹರ್ಟ್ಝ್ ಅಪ್ಲಿಕೇಶನ್ ಪ್ರೊಸೆಸರ್, 240 X 320 ಪಿಕ್ಸೆಲ್ ಡಿಸ್ಪ್ಲೇ ಯ ಎಲ್ಸಿಡಿ ಟಚ್ ಸ್ಕ್ರೀನ್ ನೊಂದಿಗೆ ಬರಲಿದೆ.

ಹಗುರವಾದ ಈ ಸೆಟ್ ನ 1200 mAh ಬ್ಯಾಟರಿ, 2 ದಿನಗಳಿಗಾಗುವಷ್ಟು ಪವರ್ ಹಿಡಿದಿಡಬಲ್ಲದು. 2 ಮೆಗಾ ಪಿಕ್ಸೆಲ್ ಕ್ಯಾಮರಾದಿಂದ ಉತ್ತಮ ಕ್ಷಣಗಳನ್ನು ಸೆರೆ ಹಿಡಿಯಬಹುದು. 4 ಹೆಚ್ಚುವರಿ ಪ್ಯಾನೆಲ್ ಗಳು ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಹೊಸ ಫೋನ್ ನೊಂದಿಗೆ ವುಮೆನ್ಸ್ ಡೇ ಆಚರಿಸಿ.

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot