ವಿಶ್ವದ ಮೊದಲ ಏಳು ಕ್ಯಾಮರಾವಿರುವ ಸ್ಮಾರ್ಟ್ ಫೋನ್
ಚಿತ್ರಗಳು ಮತ್ತು ವೀಡಿಯೋಗಳ ರೂಪದಲ್ಲಿ ಈಗಾಗಲೇ ಅಂತರ್ಜಾಲದಲ್ಲಿ ಹಲವಾರು ಬಾರಿ ಸುದ್ದಿ ಮಾಡುತ್ತಿರುವ HMD’s ನ 'ನೋಕಿಯಾ 9 ಪ್ಯೂರ್ ವ್ಯೂ’ ಸ್ಮಾರ್ಟ್ ಫೋನ್ ಬಗ್ಗೆ ಮತ್ತಷ್ಟು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿದೆ. ಇದರಲ್ಲಿ ಪೆಂಟಾ ಕ್ಯಾಮರಾವಿರುತ್ತದೆ ಎಂಬ ಸುದ್ದಿಯೊಂದು ಗ್ರಾಹಕರ ಕಿವಿಯನ್ನು ನೆಟ್ಟಗೆ ಮಾಡುತ್ತಿದೆ.

ಜೊತೆಗೆ ಡುಯಲ್ ಸೆಲ್ಫೀ ಕ್ಯಾಮರಾವೂ ಕೂಡ ಇದರಲ್ಲಿ ಇರಲಿದೆ ಎಂಬ ಸುದ್ದಿಗೆ ಸ್ಮಾರ್ಟ್ ಫೋನ್ ಕ್ಯಾಮರಾ ಪ್ರಿಯರಿಗೆ ಅತ್ಯಂತ ಆಪ್ತವೆನಿಸಿದೆ. ಇದೀಗ ಮತ್ತಷ್ಟು ವೈಶಿಷ್ಟ್ಯತೆಗಳ ಅನಾವರಣವಾಗಿದೆ. ಹಾಗಾದ್ರೆ ವಿಶ್ವದ ಏಳು ಕ್ಯಾಮರಾವಿರುವ ಫೋನಿನ ಬಗೆಗಿನ ಮತ್ತಷ್ಟು ಸುದ್ದಿಗಳು ಏನು ಎಂಬುದು ಮುಂದೆ ಇದೆ. ಓದಿ.

ಐದು ಹಿಂಭಾಗದ ಕ್ಯಾಮರಾ
ಬಹುಶ್ಯಃ ಈ ಫೋನ್ ಮಾರಾಟವಾಗುವುದಕ್ಕೆ ಇರುವ ಪ್ರಮುಖ ಕಾರಣವೇ ಇದಾಗಿರುತ್ತದೆ. ಎಷ್ಟು ಮೆಗಾಪಿಕ್ಸಲ್ ನ ಕ್ಯಾಮರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿರುತ್ತದೆ ಎಂಬ ಬಗ್ಗೆ ಇನ್ನೂ ಖಾತ್ರಿ ಇಲ್ಲ ಆದರೆ ಖಂಡಿತ ಹುವಾಯಿ ಮೇಟ್ 20 ಪ್ರೋ ಮತ್ತು ಪಿ20 ಪ್ರೋ ಗೆ ಸರಿಸಮನಾಗಿರುವ ಲೆನ್ಸ್ ಗಳನ್ನು ಅಳವಡಿಸಲಾಗಿರುತ್ತದೆ ಎಂದು ಅಂದಾಜಿಸಲಾಗುತ್ತಿದೆ.ಈಗಾಗಲೇ ಬಿಡುಗಡೆಗೊಳಿಸಿರುವ ಪ್ರೋಮೋ ವೀಡಿಯೋದಲ್ಲಿ ಪ್ರೊಸೆಸಿಂಗ್ ಫೀಚರ್ ಗಳ ಬಗ್ಗೆಯೂ ಕೂಡ ಕೆಲವು ಮಾಹಿತಿಗಳು ಲಭ್ಯವಾಗುತ್ತಿದೆ.

ಡುಯಲ್ ಮುಂಭಾಗದ ಕ್ಯಾಮರಾ
ಮುಂಭಾಗದಲ್ಲಿ ಎರಡು ಕ್ಯಾಮರಾಗಳು ಸೆಲ್ಫೀ ಅನುಭವವನ್ನು ನೀಡುವ ಸಾಧ್ಯತೆ ಇದೆ. ಗಾಳಿಸುದ್ಧಿಗಳು ಹೇಳುವಂತೆ ಇನ್ನೂ ಅತ್ಯುತ್ತಮವಾಗಿರುವ ಪೊಟ್ರೈಟ್ ಮೋಡ್ ಮತ್ತು ಬೂತಿ ಫರ್ಫಾಮೆನ್ಸ್ ಇರುವ ಸಾಧ್ಯತೆ ಇದೆ. ಫೇಸ್ ರೆಕಗ್ನಿಷನ್ ತಂತ್ರಜ್ಞಾನವಿರುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಸಂಪೂರ್ಣ ಖಾತ್ರಿ ಇಲ್ಲ.

ಫ್ಲ್ಯಾಗ್ ಶಿಪ್ ಪ್ರೊಸೆಸರ್
ಈಗಾಗಲೇ ಲೀಕ್ ಆಗಿರುವ ಪ್ರೋಮೋ ವೀಡಿಯೋ ಮತ್ತು ಈ ಹಿಂದಿನ ವರದಿಗಳ ಅನುಸಾರವೇ ಹೇಳುವುದಾದರೆ ನೋಕಿಯಾ 9 ಪ್ಯೂರ್ ವ್ಯೂ ನಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನ್ನು ಅಳವಡಿಸಲಾಗಿರುತ್ತದೆ

ಆಂಡ್ರಾಯ್ಡ್ ಒನ್ ಗೆ ನಿಗದಿಯಾದ ನೋಕಿಯಾ
ಮುಂಬರುವ ನೋಕಿಯಾ 9 ಪ್ಯೂರ್ ವ್ಯೂ ಹೆಚ್ಎಂಡಿ 2018 ರಲ್ಲಿ ಬಿಡುಗಡೆಗೊಳಿಸಿರುವ ಎಲ್ಲಾ ಸ್ಮಾರ್ಟ್ ಫೋನ್ ಗಳಂತೆ ಆಂಡ್ರಾಯ್ಡ್ ನ್ ಅಂಬ್ರೆಲ್ಲಾ ಗೆ ನಿಗದಿಯಾಗುತ್ತದೆ. ಹೆಚ್ ಎಂಡಿ ಗ್ಲೋಬಲ್ ನೂತನ ಆಂಡ್ರಾಯ್ಡ್ ಓಎಸ್ ವರ್,ನ್ ನ್ನು ತನ್ನ ಸ್ಮಾರ್ಟ್ ಫೋನ್ ಗೆ ಬಿಡುಗಡೆಗೊಳಿಸುವುದಕ್ಕೆ ಆಕ್ಟೀವ್ ಆಗಿರುವಂತೆ ಇದು ಕೂಡ ಆಂಡ್ರಾಯ್ಡ್ 9 ಪೈ ಹೊಂದಿರಲಿದೆ.

ಮೊದಲ ಬಾರಿಗೆ ಸಂಸ್ಥೆಯು HDR 10 QHD ಡಿಸ್ಪ್ಲೇ ಮತ್ತು ನಾಚ್ ನ್ನು ಹೊಂದಿರುತ್ತದೆ.
ಡಿಸ್ಪ್ಲೇಯನ್ನು ಪರಿಗಣಿಸಿದರೆ, ಈ ಹಿಂದೆ ನಾಚ್ ಹೊಂದಿರುತ್ತದೆ ಎಂದು ಗಾಸಿಪ್ ಆಗಿತ್ತು. ಇದೀಗ ಬಂದಿರುವ ವೆಬ್ ಮಾಹಿತಿಗಳ ಅನುಸಾರ ಇದರಲ್ಲಿ 19:9 ಅನುಪಾತ ಸ್ಕ್ರೀನ್ ಇರಲಿದ್ದು ಯಾವುದೇ ನಾಚ್ ಇರುವುದಿಲ್ಲ. ಇದು ಬೆಝಲ್-ಲೆಸ್ ಸ್ಕ್ರೀನ್ ಕೂಡ ಆಗಿರುವುದಿಲ್ಲ. ರೂಮರ್ ಗಳು ತಿಳಿಸುವಂತೆ 5.9-ಇಂಚಿನ QHD ಸ್ಕ್ರೀನ್ ಜೊತೆಗೆ HDR 10 ಬೆಂಬಲವಿರುತ್ತದೆ.

ಆನ್ ಬೋರ್ಡ್ ನಲ್ಲಿ 6GB RAM
ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ 6GB RAM ನ್ನು ಹೊಂದಿರುತ್ತದೆ. ಇದರಲ್ಲಿ ಇನ್ನೊಂದು ವೇರಿಯಂಟ್ ಕೂಡ ಇರುವ ಸಾಧ್ಯತೆ ಇದ್ದು ಅದುವೇ 8GB RAM ಆಗಿರಬಹುದು. ಯಾಕೆಂದರೆ ಇದು 2018 ರ ಟ್ರೆಂಡ್ ಆಗಿತ್ತು.

128GB ಬೇಸ್ ಮಾಡೆಲ್
ಈಗಾಗಲೇ ಲೀಕ್ ಆಗಿರುವ ಪ್ರೋಮೋ ವೀಡಿಯೋ ಅನುಸಾರ 6GB RAM ನ ವರ್ಷನ್ 128GB ಸ್ಟೋರೇಜ್ ವ್ಯವಸ್ಥೆಯನ್ನು ಮತ್ತು 8GB RAM ವರ್ಷನ್ 256GB ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿರುವ ಸಾಧ್ಯತೆ ಇದೆ.
ನೋಕಿಯಾ 9 ಪ್ಯೂರ್ ವ್ಯೂ ಯಾವಾಗ ಬಿಡುಗಡೆಗೊಳ್ಳುತ್ತದೆ?
ಯಾವಾಗ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಷಿಯನ್ ವೆಬ್ ಸೈಟ್ ವೊಂದರಲ್ಲಿ ತಿಳಿಸಲಾಗಿರುವ ಪ್ರಕಾರ 209 ರ ಜನವರಿಯ ಕೊನೆವಾರದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತಿಳಿಸಲಾಗುತ್ತಿದೆ. ಅಂದರೆ ಇದು CES 2019 ಅಥವಾ MWC 2019 ನಲ್ಲಿ ಬಿಡುಗಡೆಗೊಳ್ಳುವುದಿಲ್ಲ ಎಂಬುದು ಮಾತ್ರ ಸ್ಪಷ್ಟವಾಗಿದೆ.


Click it and Unblock the Notifications








