ವಿಶ್ವದ ಅತ್ಯಂತ ದುಬಾರಿ ಮೊಬೈಲ್ ಬಿಡುಗಡೆ!! ಬೆಲೆ ಎಷ್ಟು? ಹೇಗಿದೆ ಮೊಬೈಲ್?
ವರ್ಚು ಎಂಬ ಐಶಾರಾಮಿ ಕಂಪೆನಿ ಈ ಮೊಬೈಲ್ ನಿರ್ಮಿಸಿದೆ.!!
ನಾವೆಲ್ಲರೂ ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಕಡಿಮೆ ಇದೆ ಎಂದು ಹುಡುಕುತ್ತಿದ್ದರೆ, ಕೆಲವು ಮೊಬೈಲ್‌ಕಂಪೆನಿಗಳು ಅತ್ಯಂತ ಹೆಚ್ಚು ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಾಗಿರುತ್ತಾರೆ.!! ಇದಕ್ಕೆ ಹೊಸ ಸೇರ್ಪಡೆ 'ವರ್ತು ಸಿಗ್ನೇಚರ್ ಕೋಬ್ರಾ' (Vertu Signature Cobra) ಎಂಬ ಮೂಬೈಲ್!!
ಹೌದು, ನೀವು ಈಗ ಕೇಳಿದ ಪದಗಳು ಒಂದು ಮೊಬೈಲ್ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ಚೀನಾದಲ್ಲಿ ಈ ಮೊಬೈಲ್ ಬಿಡುಗಡೆಯಾಗಿದ್ದು, ವರ್ಚು ಎಂಬ ಐಶಾರಾಮಿ ಕಂಪೆನಿ ಈ ಮೊಬೈಲ್ ನಿರ್ಮಿಸಿದೆ.!! ಹಾಗಾದರೆ, ಹಾವಿನ ರೂಪದಲ್ಲಿ ಬಿಡುಗಡೆಯಾಗಿರುವ ನೂತನ 'ವರ್ಚು ಸಿಗ್ನೇಚರ್ ಕೋಬ್ರಾ' ಮೊಬೈಲ್ ಹೇಗಿದೆ? ಅದರ ಬೆಲೆ ಎಷ್ಟು? ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

'ವರ್ಚು ಸಿಗ್ನೇಚರ್ ಕೋಬ್ರಾ' ಮೊಬೈಲ್!!
ವಿಶ್ವದಲ್ಲಿಯೇ ಅತಿ ದುಬಾರಿ ಮೊಬೈಲ್ 'ವರ್ಚು ಸಿಗ್ನೇಚರ್ ಕೋಬ್ರಾ' 2-ಇಂಚ್ ಡಿಸ್‌ಪ್ಲೇ ಹೊಂದಿದೆ. ಇನ್ನು 2GB RAM ಮತ್ತು 16GB ಮೆಮೊರಿಯನ್ನು ಹೊಂದಿದೆ.! ಎಲ್ಲಕ್ಕಿಂತ ಹೆಚ್ಚಾಗಿ ಈ ಫೋನ್ ಹಾವಿನ ರೂಪದಲ್ಲಿದೆ.!!

439 ಮಾಣಿಕ್ಯಗಳು ಬಳಕೆಯಾಗಿವೆ.!!
'ವರ್ತು ಸಿಗ್ನೇಚರ್ ಕೋಬ್ರಾ ತಯಾರಿಕೆಗೆ 238 ಬಿಡಿಬಾಗಗಳು ಮತ್ತು 439 ಮಾಣಿಕ್ಯಗಳು ಬಳಕೆಯಾಗಿವೆ. ಪ್ರತಿಯೊಂದು ಮಾಣಿಕ್ಯಗಳ ಬೆಲೆ ಲಕ್ಷಾಂತರ ರೂಪಾಯಿಗಳಾಗಿವೆ.!!

ಈ ಮೊಬೈಲ್ ಬೆಲೆ ಎಷ್ಟು ಗೊತ್ತಾ?
ಚೀನಾದ JD.COm ವೆಬ್‌ಸೈಟ್‌ನಲ್ಲಿ ಈ ಮೊಬೈಲ್ ಬುಕ್ ಮಾಡಬಹುದಾಗಿದ್ದು, ಮೊಬೈಲ್ ಬೆಲೆ ಬರೋಬ್ಬರಿ $3,60,000 ಡಾಲರ್‌ಗಳು. ಅಂದರೆ ರೂಪಾಯಿಗಳ ಲೆಕ್ಕದಲ್ಲಿ 2.3 ಕೋಟಿ ರೂಪಾಯಿಗಳು.!!

ಚಿನ್ನದ ಮೊಬೈಲ್.!!
ವರ್ಚು ಸಿಗ್ನೇಚರ್ ಕೋಬ್ರಾ ತಯಾರಿಕೆಗೆ 238 ಬಿಡಿಬಾಗಗಳು ಮತ್ತು 439 ಮಾಣಿಕ್ಯಗಳು ಬಳಕೆಯಾಗಿದ್ದು, ಮೊಬೈಲ್ ಕವರ್ ಪೂರ್ತಿಯಾಗಿ ಚಿನ್ನದ್ದೇ ಆಗಿದೆ. ಹಾಗಾಗಿ, ಚಿನ್ನದ ಒಲವಿದ್ದವರು ಇದನ್ನು ಖರೀದಿಸಲು ಟ್ರೈ ಮಾಡಿ.


Click it and Unblock the Notifications






