Home
ಮೊಬೈಲ್

ಪ್ರಪಂಚದ ಮೊದಲ ಸ್ಮೊಕೆಬಲ್‌ ಸ್ಮಾರ್ಟ್‌ಫೋನ್‌ : ಜುಪಿಟರ್ ಐಓ 3

By Suneel

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ದಿನನಿತ್ಯ ಕರೆಗಳು(calls) , ಇಮೇಲ್‌ಗಳು ಎಸ್‌ಎಂಎಸ್‌ಗಳು, ಚಾಟ್‌ಗಳು, ಮಿತಿಯೇ ಇಲ್ಲದ ಫೇಸ್‌ಬುಕ್‌ ಪೋಸ್ಟ್‌ಗಳು, ಇತ್ಯಾದಿ ಇತ್ಯಾದಿ ಬೋರುಗಳು ಅಂದ್ರೆ ಬೇಸರಗಳು ಬಹುಶಃ ಬಹುಸಂಖ್ಯಾತರಿಗೆ ಆಗಿಬಿಟ್ಟಿದೆ. ಆದ್ರೆ ಈಗ ಸ್ಮಾರ್ಟ್‌ಫೋನ್‌ನಲ್ಲೇ ಸಿಗರೇಟ್‌ಸ್ಮೋಕ್‌ ಮಾಡಬಹುದು ಎಂದರೆ ಬಹುಶಃ ಪ್ರಪಂಚಕ್ಕೆ ಆಶ್ಚರ್ಯ ಹಾಗೂ ಅಚ್ಚರಿಯನ್ನು ತರುವಲ್ಲಿ ಸಂಶಯವಿಲ್ಲ. ಆದರೆ ಸಂಶಯ ಪಡಬೇಡಿ ಇ-ಸಿಗರೇಟ್‌ ನಂತೆ ಇರುವ ಸ್ಮಾರ್ಟ್‌ಫೋನ್‌ ಒಂದು ನಿಮ್ಮ ಕೈಗೆ ಸಿಗಲಿದೆ.

ಓದಿರಿ: ಮೆಮೊರಿ ಕಾರ್ಡ್‌ನಲ್ಲಿ ಡಿಲೀಟ್‌ ಡಾಕುಮೆಂಟ್ಸ್‌ ರಿಕವರಿ ಹೇಗೆ

ಸಿಗರೇಟ್‌ ಪಫ್‌ ಮಾಡಬಹುದಾದಂತಹ ಒಂದು ಮ್ಯಾಜಿಕಲ್‌ ಸ್ಮಾರ್ಟ್‌ಫೋನ್‌ ಅನ್ನು ಅಮೇರಿಕ ಮೂಲದ ಕಂಪನಿಯೊಂದು ತಯಾರಿಸಿದೆ. ಈ ಸ್ಮಾರ್ಟ್‌ಫೋನ್‌ ಹೆಸರು "ಜುಪಿಟರ್‌ ಐಒ 3. ಇದು ಸಿಗರೇಟ್‌ ಸೇವನೆ ಬಿಡಲು ಸಹ ಸಹಾಯಕವಾಗಲಿದೆ. ಹಾಗಾದರೆ ಇದರ ಬೆಲೆ, ಫೀಚರ್‌ಗಳು, ಅನುಕೂಲಗಳ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ಗಳಲ್ಲಿ ತಿಳಿಯಿರಿ..

ಸ್ಮೊಕೆಬಲ್‌  ಸ್ಮಾರ್ಟ್‌ಫೋನ್‌

ಸ್ಮೊಕೆಬಲ್‌ ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌ಗಳಲ್ಲೇ ಅತ್ಯಂತ ಬುದ್ಧಿವಂತ ಮೊಬೈಲ್‌ ಅಂತಲು ಹೇಳಿ. ಪ್ರಪಂಚದ ಮೊಟ್ಟ ಮೊದಲ ಸ್ಮೊಕೆಬಲ್‌ ಸ್ಮಾರ್ಟ್‌ಫೋನ್‌ ಈಗ ತಯಾರಾಗಿದೆ.

ಅಮೇರಿಕ ಕಂಪನಿ

ಅಮೇರಿಕ ಕಂಪನಿ "ವಪೊರ್‌ಕೇಡ್‌

ಅಮೇರಿಕ ಮೂಲದ "ವಪೊರ್‌ಕೇಡ್‌" ಎಂಬ ಕಂಪನಿ ಸ್ಮೊಕೆಬಲ್‌ ಸ್ಮಾರ್ಟ್‌ಫೋನ್‌ ಮೊಬೈಲ್‌ ಮಾರುಕಟ್ಟೆಗೆ ತರುತ್ತಿದ್ದು, ಇದರಲ್ಲಿ ಕರೆ ಮಾಡಬಹುದು, ಎಸ್‌ಎಂಎಸ್‌ ಕಳುಹಿಸಬಹುದು ಹಾಗೆಯೇ ನಿಮ್ಮ ನೆಚ್ಚಿನ ಇ-ಸುವಾಸನೆ (ಇ-ಪ್ಲೇವರ್‌) ಅನ್ನು ಸ್ಮೋಕ್‌ ಮಾಡಬಹುದು. ಅಲ್ಲದೇ ಈ ಸ್ಮಾರ್ಟ್‌ಫೋನ್‌ ನಿಮಗೆ ಧೂಮಪಾನ ತ್ಯಜಿಸಲು ಸಹಾಯಕವು ಆಗುತ್ತದೆ ಎಂದು ಅಮೇರಿಕ ಟೆಕ್‌ ವೈಬ್‌ಸೈಟ್‌ "ದಿ ವರ್ಜ್‌ "ವರದಿ ಮಾಡಿದೆ.

ಜುಪಿಟರ್ ಐಓ 3

ಜುಪಿಟರ್ ಐಓ 3

ಪ್ರಪಂಚದ ಮೊಟ್ಟ ಮೊದಲ ವಿದ್ಯುನ್ಮಾನ ಸ್ಮೊಕೆಬಲ್‌ ಸ್ಮಾರ್ಟ್‌ಫೋನ್‌ ಇದಾಗಿದ್ದು, ಇದರ ಹೆಸರು "ಜುಪಿಟರ್ ಐಓ 3"

ಜುಪಿಟರ್ ಐಓ 3 ಫೋನ್‌ ವಿಶೇಷತೆ

ಜುಪಿಟರ್ ಐಓ 3 ಫೋನ್‌ ವಿಶೇಷತೆ

'ಜುಪಿಟರ್ ಐಓ 3' 3G ಸ್ಮಾರ್ಟ್‌ಫೋನ್‌ ಆಗಿದ್ದು, ಇದರ ಬೆಲೆ ಭಾರತೀಯ ರೂಪಾಯಿಯಲ್ಲಿ 20,000 ಆಗಲಿದ್ದು, ಅಮೇರಿಕ ಡಾಲರ್‌ನಲ್ಲಿ $299. ಹಾಗೂ ಇದು ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ 4.4 ಆಪರೇಟಿಂಗ್‌ ವ್ಯವಸ್ಥೆ ಹೊಂದಿದೆ.

2 ಬ್ಯಾಟರಿಗಳು

2 ಬ್ಯಾಟರಿಗಳು

'ಜುಪಿಟರ್ ಐಓ 3' ನಲ್ಲರುವ 2 ಬ್ಯಾಟರಿಗಳಲ್ಲಿ ಒಂದು ಫೋನ್‌ಗೆ ಪವರ್‌ ನೀಡಲಿದ್ದು, ಇನ್ನೊಂದು ಬ್ಯಾಟರಿ ಇ-ಸಿಗರೇಟ್‌ಗೆ ಪವರ್‌ ನೀಡಲಿದೆ. ಸ್ಮೋಕ್‌ ಮಾಡದಿದ್ದಲ್ಲಿ ದೀರ್ಘಕಾಲ ಬ್ಯಾಟರಿ ಬಾಳಿಕೆ ಬರುತ್ತದೆ.

ವಿಶೇಷತೆಗಳು

ವಿಶೇಷತೆಗಳು

'ಜುಪಿಟರ್ ಐಓ 3' ಸಿಗರೇಟ್‌ ಶಾಖವನ್ನು ನಿಯಂತ್ರಿಸಲು ಹಾಗೂ ಪ್ರಬಲವಾಗಿ ಪುಲ್‌ ಮಾಡಲು ಬಟನ್‌ ಹೊಂದಿದೆ.

 ಸ್ಮೋಕ್‌ ವಿಶೇಷತೆಗಳು

ಸ್ಮೋಕ್‌ ವಿಶೇಷತೆಗಳು

ಸ್ಮೋಕ್‌ ಮಾಡಲು ಲಿಕ್ವಿಡ್‌ ಕಾರ್ಟ್ರಿಜ್ಗಳ ಬೆಲೆ $15 (ರೂಪಾಯಿ ಸುಮಾರು 1,000)ಆಗಲಿದೆ. ಇದರಲ್ಲಿ ಪುದೀನ, ಪೀಚ್‌, ಕಾಫಿ ಸುವಾಸನೆ ನೀಡಲಿದ್ದು, ಪ್ರತಿಯೊಂದು ಸಹ 800 ಪಫ್‌ಗಳನ್ನು ನೀಡಲಿವೆ. ಅಂದರೆ ನಾಲ್ಕು ಪ್ಯಾಕ್‌ ಸಿಗರೇಟ್‌ನಷ್ಟು.

ವಪೊರ್‌ಕೇಡ್ ಅಪ್ಲಿಕೇಶನ್‌

ವಪೊರ್‌ಕೇಡ್ ಅಪ್ಲಿಕೇಶನ್‌

ಸ್ಮಾರ್ಟ್‌ಫೋನ್‌ನಲ್ಲಿನ ಆಪ್‌ ಬ್ಯಾಟರಿ ಬಳಕೆ, ಲಿಕ್ವಿಡ್‌ ಎಷ್ಟು ಖಾಲಿಯಾಗಿದೆ, ಯಾವ ಪ್ಲೇವರ್‌ ಅನ್ನು ಕಾರ್ಟ್ರೆಜ್‌ಗಳಲ್ಲಿ ತುಂಬಲಾಗಿದೆ ಹಾಗೂ ಎಷ್ಟು ಪಫ್‌ಗಳನ್ನು ಬಳಕೆದಾರ ತೆಗೆದುಕೊಂಡಿದ್ದಾನೆ ಎಂದು ಟ್ರ್ಯಾಕ್‌ ಮಾಡುತ್ತದೆ.

 ಸಿಗರೇಟ್‌ ತ್ಯಜಿಸಲು ಸಹಾಯ

ಸಿಗರೇಟ್‌ ತ್ಯಜಿಸಲು ಸಹಾಯ

'ಜುಪಿಟರ್ ಐಓ 3' ಸಿಗರೇಟ್‌ ಅನ್ನು ತ್ಯಜಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇದರಲ್ಲಿರುವ ಆಪ್‌ ಪಫ್‌ಗಳನ್ನು ಮೀರಿದರೆ ಎಚ್ಚರಿಕೆ ನೀಡುತ್ತದೆ.

 ಅನುಮತಿ

ಅನುಮತಿ

ಸ್ಮೊಕೆಬಲ್‌ ಸ್ಮಾರ್ಟ್‌ಫೋನ್‌ಗೆ ಅಮೇರಿಕ ಕಮ್ಯುನಿಕೇಷನ್‌ ಕಮಿಷನ್‌ ಅನುಮೋದನೆ ನೀಡಿದೆ. ಆದರೆ ಸಾಂಪ್ರದಾಯಿಕ ಧೂಮಪಾನಕ್ಕೆ ಹೋಲಿಸಿದರೆ ಸ್ಮೊಕೇಬಲ್‌ ಡಿವೈಸ್‌ನಿಂದ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಆಗುತ್ತದೆ ಎಂಬುದು ಇದುವರೆಗೆ ತಿಳಿದಿಲ್ಲ. ಕಂಪನಿಯು ಮುಂದಿನ ಕೆಲವು ತಿಂಗಳಲ್ಲೇ 4G ಸ್ಮಾರ್ಟ್‌ಫೋನ್‌ ಅನ್ನು ಅಭಿವೃದ್ದಿಗೊಳಿಸಿ ಲಾಂಚ್‌ ಮಾಡುವ ಬಗ್ಗೆ ಹೇಳಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
World's first smokeable smartphone Jupiter IO 3. Read more about this mobile in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+