Subscribe to Gizbot

ಜಗತ್ತಿನ ಅತ್ಯಂತ ತೆಳುವಾದ ಸ್ಮಾರ್ಟ್‌ಫೋನ್ ಬಗ್ಗೆ ಗೊತ್ತೇ?

Written By:

ಸ್ಲಿಮ್ ಆಗಿರುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಇನ್ನು ಫೋನ್ ವಿಷಯದಲ್ಲೂ ಈ ಸ್ಲಿಮ್ ಪ್ಯಾಕೇಜ್ ಬಂದಿತೆಂದರೆ ಅದಕ್ಕಿಂತ ಉತ್ತಮ ಅನುಭವ ಇನ್ನೊಂದಿರಲಿಕ್ಕಿಲ್ಲ. ನಿಜಕ್ಕೂ ಈ ಸ್ಲಿಮ್ ಫೋನ್‌ಗಳು ಅತ್ಯಾಕರ್ಷಕ ದೇಹವನ್ನು ಹೊಂದಿ ನಿಜಕ್ಕೂ ಸುಂದರವಾಗಿವೆ.

ಫೋನ್ ಅನ್ನು ಖರೀದಿಸುವ ಗ್ರಾಹಕ ಫೋನ್‌ನ ಫೀಚರ್‌ಗಳಿಗೆ ಗಮನ ನೀಡುವಂತೆಯೇ ಫೋನ್‌ನ ಸುಂದರತೆಗೆ ಮಹತ್ವವನ್ನು ನೀಡುತ್ತಾನೆ. ಸ್ಲಿಮ್ ಆಗಿರುವ ಡಿವೈಸ್‌ಗಳು ನಿಜಕ್ಕೂ ಮನದಲ್ಲಿ ಪುಳಕದ ಅಲೆಯನ್ನು ಎಬ್ಬಿಸುತ್ತವೆ.

ಇಂದಿನ ಲೇಖನದಲ್ಲಿ ಕೂಡ ಜಗತ್ತಿನ ಅತ್ಯಂತ ಸ್ಲಿಮ್ ಫೋನ್‌ಗಳ ಕುರಿತಾದ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದು ನಿಜಕ್ಕೂ ಇದು ಅದ್ಭುತವಾಗಿದೆ. ಇಂದಿನ ಲೇಖನದಲ್ಲಿ ನಾವು ನೀಡಿರುವ ಈ ಹತ್ತು ಫೋನ್‌ಗಳು ನಿಜಕ್ಕೂ ಅತ್ಯದ್ಭುತವಾಗಿದ್ದು ನಿಮ್ಮಲ್ಲಿ ಖರೀದಿಯ ಮೋಹವನ್ನು ಹೆಚ್ಚಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

#1

ಜಿಯೋನಿ ಇಲೈಫ್ S5.5 ನಿಜಕ್ಕೂ ವಿನ್ಯಾಸದಲ್ಲಿ ಅದ್ಭುತವನ್ನುಂಟು ಮಾಡುವ ಹ್ಯಾಂಡ್‌ಸೆಟ್ ಆಗಿದೆ. ಇದರ ಅಳತೆ 5.5mm ಆಗಿದ್ದು 50% ದಪ್ಪನಾಗಿದೆ. ಇದನ್ನು ಗ್ಲಾಸ್‌ನಲ್ಲಿ ತಯಾರಿಸಿದ್ದು ಇದರ ಅಂಚುಗಳನ್ನು ಮೆಟಲ್‌ನಿಂದ ತಯಾರಿಸಲಾಗಿದೆ. ನಿಜಕ್ಕೂ ಇದು ಸ್ಲಿಮ್ ಆಗಿರುವ ಅದ್ಭುತ ಫೋನ್ ಆಗಿದೆ.

#2

ಇದನ್ನು BLU ಬ್ರ್ಯಾಂಡ್ ಫ್ಲೋರಿಡಾದಿಂದ ಬಂದಿದೆ. ಇದನ್ನು ನೀವು ಅಮೆಜಾನ್‌ನಲ್ಲಿ $300 ಗೆ ಆರ್ಡರ್ ಮಾಡಬಹುದು. ಇದು 5" 1080p ಸ್ಕ್ರೀನ್ ಅನ್ನು ಹೊಂದಿದ್ದು ಓಕ್ಟಾ ಕೋರ್ ಸಿಪಿಯು ಮತ್ತು 13 MP ಕ್ಯಾಮೆರಾವನ್ನು ಹಿಂಭಾಗದಲ್ಲಿ ಹೊಂದಿದೆ.

ವಿವೋ X3

#3

ವಿವೋ X3 0.26" (5.75mm) ದಪ್ಪನೆಯ ರಚನೆಯನ್ನು ಹೊಂದಿದ್ದು 5" HD ಡಿಸ್‌ಪ್ಲೇ ಇದರಲ್ಲಿದೆ. ಇದರಲ್ಲಿ ಗುಣಮಟ್ಟದ ಧ್ವನಿ ಪ್ರೊಸೆಸರ್ ಅನ್ನು ನಿಮಗೆ ಕಾಣಬಹುದು

ಹುವಾಯಿ ಅಸ್ಕೆಂಡ್ P6

#4

ಹುವಾಯಿ ಅಸ್ಕೆಂಡ್ P6 0.24" (6.18mm) ನ ಅಳತೆ ಫೋನ್‌ಗಿದ್ದು ಅಮೆಜಾನ್‌ನಲ್ಲಿ ಈ ಫೋನ್ ಅನ್ನು ನಿಮಗೆ ಖರೀದಿಸಬಹುದಾಗಿದೆ. ಇದು 4.7" ಪ್ಯಾನಲ್‌ನಲ್ಲಿ 8 MP ಕ್ಯಾಮೆರಾದೊಂದಿಗೆ ಬಂದಿದೆ.

ಸೋನಿ ಎಕ್ಸ್‌ಪೀರಿಯಾ Z ಅಲ್ಟ್ರಾ

#5

ಸೋನಿ ಎಕ್ಸ್‌ಪೀರಿಯಾ Z ಅಲ್ಟ್ರಾ 6.4 ಇಂಚಿನ ಈ ಸ್ಮಾರ್ಟ್‌ಫೋನ್ ಹೆಚ್ಚು ಹಗುರವಾಗಿದೆ ಇದು ಸೋನಿಯ ಗುಣಮಟ್ಟದ ಬಗೆಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಇದು 0.26 ಇಂಚಿನ (6.5mm) ಅಳತೆಯನ್ನು ಹೊಂದಿದ್ದು, 1080p ಡಿಸ್‌ಪ್ಲೇ ಇದರಲ್ಲಿದೆ. ಇದು ವೇಗವಾಗಿರುವ 800 ಪ್ರೊಸೆಸರ್ ಅನ್ನು ಕೂಡ ಹೊಂದಿದೆ.

 ಹುವಾಯಿ ಅಸ್ಕೆಂಡ್ P7

#6

ಹುವಾಯಿ ಅಸ್ಕೆಂಡ್ P7 0.26 ಇಂಚುಗಳ ಈ ಫೋನ್ ಅಸ್ಕೆಂಡ್ P7 ಹಿಂದಿನ P6 ಫೋನ್‌ಗಿಂತಲೂ ಹೆಚ್ಚು ಹಗುರ ಮತ್ತು ತೆಳುವಾಗಿದೆ. ಇದೊಂದು ಅತ್ಯಾಶ್ಚರ್ಯಕರವಾಗಿರುವ ಅದ್ಭುತಗಳಿರುವ ಫೋನ್ ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ

#7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಲ್ಫಾ ಇದೊಂದು ಮೆಟಲ್ ಹ್ಯಾಂಡ್‌ಸೆಟ್ ಆಗಿದ್ದು, ಗ್ಯಾಲಕ್ಸಿ ಆಲ್ಫಾ ಶೀರ್ಷಿಕೆಯಡಿಯಲ್ಲಿ, ಇದು 0.26" (6.7mm) ಅಳತೆಯನ್ನು ಹೊಂದಿದೆ. ಜಗತ್ತಿನ ಅತ್ಯಂತ ಹಗುರವಾಗಿರುವ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಲಾಕ್ಟೆಲ್ ಒನ್ ಟಚ್

#8

ಅಲಾಕ್ಟೆಲ್ ಒನ್ ಟಚ್ ಇದೊಂದು ಉತ್ತಮ ಫೋನ್ ಆಗಿದ್ದು 0.27" ಇದರಲ್ಲಿದೆ. 1080p ಡಿಸ್‌ಪ್ಲೇಯನ್ನು ಹೊಂದಿದ್ದು 13 MP ಕ್ಯಾಮೆರಾವನ್ನು ಹೊಂದಿದೆ. ಇದು ನಿಜಕ್ಕೂ ಅತ್ಯಂತ ಉತ್ತಮವಾಗಿರುವ ಅತ್ಯುಗ್ರ ಫೋನ್ ಆಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಲೆನೆವೊ ವೈಬ್ X

#9

ಲೆನೆವೊ ವೈಬ್ X ಇದನ್ನು ಕಳೆದ ವರ್ಷ ಲಾಂಚ್ ಮಾಡಲಾಗಿತ್ತು 6.9mm ಮತ್ತು 121g ಸ್ಲಿಮ್ ಆಗಿದೆ. ಇದು 5 ಇಂಚಿನ 1920x1080 ಡಿಸ್‌ಪ್ಲೇಯನ್ನು ಹೊಂದಿದ್ದು, ಕ್ವಾಡ್ ಕೋರ್ 1.5GHz ಮೀಡಿಯಾ ಟೆಕ್ MT6589T SoC, 2GB RAM ಫೋನ್ ಇದರಲ್ಲಿದೆ. ಇದು 13MP ರಿಯರ್ ಕ್ಯಾಮೆರಾವನ್ನು ಹೊಂದಿದ್ದು 5MP ಮುಂಭಾಗ ಕ್ಯಾಮೆರಾ ಇದರಲ್ಲಿದೆ.

ಸೋನಿ ಎಕ್ಸ್‌ಪೀರಿಯಾ T3

#10

ಸೋನಿ ಎಕ್ಸ್‌ಪೀರಿಯಾ T3 5.3 ಇಂಚಿನ ಡಿಸ್‌ಪ್ಲೇ ಇದರಲ್ಲಿದ್ದು 0.28" (7mm) ದಪ್ಪವನ್ನು ಇದು ಹೊಂದಿದೆ. ಇದು ಪ್ರಪಂಚದ ತೆಳು ಫೋನ್ ಎಂಬ ಖ್ಯಾತಿಗೆ ಭಾಜನವಾಗಿದೆ. ಇದು ಸ್ಟೈನ್‌ಲೆಸ್ ಸ್ಟೀಲ್ ಫ್ರೇಮ್ ಅನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Worlds great thin phones which is really good to see.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot