Infinix Hot 50 Pro+ ಬಿಡುಗಡೆ; ಇದು ವಿಶ್ವದ ಅತ್ಯಂತ ತೆಳುವಾದ ಫೋನ್! ಬೆಲೆ ಎಷ್ಟು?
ಚೀನಾದ ಸ್ಮಾರ್ಟ್‌ಫೋನ್ ಬ್ರಾಂಡ್ ಇನ್ಫಿನಿಕ್ಸ್ (Infinix) ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು, ಇನ್ಫಿನಿಕ್ಸ್ ಹಾಟ್ 50 ಪ್ರೊ ಪ್ಲಸ್ (Infinix Hot 50 Pro+) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಮೂಲಕ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ 'ಹಾಟ್ 50' (Hot 50) ಸರಣಿಯನ್ನು ವಿಸ್ತರಿಸಿದೆ. ವಿಶೇಷವೆಂದರೆ, ಇದು ವಿಶ್ವದ ಅತ್ಯಂತ ತೆಳುವಾದ ಸ್ಮಾರ್ಟ್‌ಫೋನ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ಕಂಪನಿಯು ಇನ್ಫಿನಿಕ್ಸ್ ಹಾಟ್ 50 ಪ್ರೊ ಪ್ಲಸ್ ಅನ್ನು ತನ್ನ ವೆಬ್‌ಸೈಟ್ ಮೂಲಕ ಅಧಿಕೃತವಾಗಿ ಪರಿಚಯಿಸಿದೆ. ಹಲವು ಟೀಸರ್ ವಿಡಿಯೋಗಳ ಮೂಲಕ ನೂತನ ಫೋನಿನ ವಿಶೇಷತೆಗಳು ಮತ್ತು ಫೀಚರ್ಸ್‌ಗಳನ್ನು ಬಹಿರಂಗಪಡಿಸಿದೆ. ಈ ಫೋನ್ ಮೀಡಿಯಾ ಟೆಕ್ ಹೆಲಿಯೊ G100 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಇದು 15 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿದೆ. ಇದರಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ, 5000mAh ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಲಭ್ಯವಿದೆ.

ವಿಶ್ವದ ಅತ್ಯಂತ ತೆಳುವಾದ ಸ್ಮಾರ್ಟ್‌ಫೋನ್!
ಇನ್ಫಿನಿಕ್ಸ್ ಹಾಟ್ 50 ಪ್ರೊ ಪ್ಲಸ್ ಫೋನ್ 3D ಕರ್ವ್ಡ್ SlimEdge ವಿನ್ಯಾಸ ಹೊಂದಿದೆ. ಕಂಪನಿಯು ವಿಶ್ವದ ಅತ್ಯಂತ ತೆಳ್ಳಗಿನ ಫೋನ್ ಎಂದು ಕರೆದಿದೆ. ಈ ಫೋನಿನ ದಪ್ಪವು ಕೇವಲ 6.8 ಎಂಎಂ ಆಗಿದೆ. ಕೇವಲ 162 ಗ್ರಾಂ ತೂಕ ಇದೆ. ಇನ್ಫಿನಿಕ್ಸ್ ಪ್ರಕಾರ, ಇಲ್ಲಿಯವರೆಗೆ ಯಾವುದೇ ಮೊಬೈಲ್ ಕಂಪನಿ ಇಂತಹ ಫೋನನ್ನು ಬಿಡುಗಡೆ ಮಾಡಿಲ್ಲ. ಫೋನಿನ ದಪ್ಪವು ತುಂಬಾ ಕಡಿಮೆ ಇದೆ. ಮತ್ತು ಇದು ಕರ್ವ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ.
ಇನ್ಫಿನಿಕ್ಸ್ ಹಾಟ್ 50 ಪ್ರೊ ಪ್ಲಸ್ ಬೆಲೆ
ಇನ್ಫಿನಿಕ್ಸ್ ಹಾಟ್ 50 ಪ್ರೊ ಪ್ಲಸ್ ಅನ್ನು ಕೀನ್ಯಾದ ಶಾಪಿಂಗ್ ಸೈಟ್‌ನಲ್ಲಿ ಸುಮಾರು 16,900 ರೂ. ನಲ್ಲಿ (25,999 ಕೀನ್ಯಾದ ಶಿಲ್ಲಿಂಗ್ ಬೆಲೆ) ಪಟ್ಟಿ ಮಾಡಲಾಗಿದೆ. ಇದು ಫೋನಿನ 8GB + 256GB ಸ್ಟೋರೇಜ್ ರೂಪಾಂತರದ ಬೆಲೆಯಾಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ಈ ಮೊಬೈಲ್ ಅನ್ನು ಕಪ್ಪು, ನೇರಳೆ, ಬೂದು ಮತ್ತು ಹಸಿರು ಬಣ್ಣಗಳಲ್ಲಿ ಖರೀದಿಸಬಹುದು. ಭಾರತದಲ್ಲಿ ಇನ್ಫಿನಿಕ್ಸ್ ಹಾಟ್ 50 ಪ್ರೊ ಪ್ಲಸ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಕಂಪನಿ ಮಾಹಿತಿ ನೀಡಿಲ್ಲ.
ಇನ್ಫಿನಿಕ್ಸ್ ಹಾಟ್ 50 ಪ್ರೊ ಪ್ಲಸ್ ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಇನ್ಫಿನಿಕ್ಸ್ ಹಾಟ್ 50 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್ 15 ಇಂಚಿನ 3D ಕರ್ವ್ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಪಂಚ್ ಹೋಲ್ ಶೈಲಿಯ ಪ್ಯಾನೆಲ್ ಆಗಿದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 1300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಸಹ ಹೊಂದಿದೆ. ಜೊತೆಗೆ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ರಕ್ಷಣೆಯನ್ನು ಒದಗಿಸಲಾಗಿದೆ.
ಪ್ರೊಸೆಸರ್ ಸಾಮರ್ಥ್ಯ
ಇನ್ಫಿನಿಕ್ಸ್ ಹಾಟ್ 50 ಪ್ರೊ ಪ್ಲಸ್ ಮೊಬೈಲ್ ಮೀಡಿಯಾ ಟೆಕ್ ಹೆಲಿಯೊ G100 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 6ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ನಿರ್ಮಿಸಲಾಗಿದೆ. ಫೋನನ್ನು ಆಂಡ್ರಾಯ್ಡ್ 14 ನಲ್ಲಿ ಬಿಡುಗಡೆ ಮಾಡಲಾಗಿದೆ.
ಸ್ಟೋರೇಜ್ ಆಯ್ಕೆ
ಕಂಪನಿಯು ತನ್ನ ಹೊಸ ಫೋನನ್ನು ಕೇವಲ ಒಂದೇ ಸ್ಟೋರೇಜ್ ರೂಪಾಂತರದಲ್ಲಿ ಮಾತ್ರ ಪರಿಚಯಿಸಿದೆ. ಇದರಲ್ಲಿ 8GB RAM ಒದಗಿಸಲಾಗಿದೆ. ಈ ಸ್ಮಾರ್ಟ್‌ಫೋನ್ 8GB ವಿಸ್ತರಿಸಬಹುದಾದ RAM ತಂತ್ರಜ್ಞಾನವನ್ನು ಹೊಂದಿದೆ. ಇದು ಭೌತಿಕ RAM ಜೊತೆಗೆ 16GB RAM ಶಕ್ತಿಯನ್ನು ನೀಡುತ್ತದೆ. ಈ ಮೊಬೈಲ್ 256GB ಇಂಟರ್ನಲ್ ಸ್ಟೋರೇಜ್ ಮತ್ತು ಮೆಮೊರಿ ಕಾರ್ಡ್ ಬೆಂಬಲವನ್ನು ಹೊಂದಿದೆ.

ಕ್ಯಾಮೆರಾ ಸೆಟಪ್
ಇನ್ಫಿನಿಕ್ಸ್ ಹಾಟ್ 50 ಪ್ರೊ ಪ್ಲಸ್ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದ್ದು, ಪೋರ್ಟ್ರೇಟ್ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾದ ಬಳಿ ಎಲ್ಇಡಿ ಫ್ಲ್ಯಾಷ್ ಒದಗಿಸಲಾಗಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಹೊಸ ಸ್ಮಾರ್ಟ್‌ಫೋನ್ ಅನ್ನು 5,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 33W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡಲಾಗಿದೆ.
ಇತರೆ ವೈಶಿಷ್ಟ್ಯಗಳು
ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ ಹೊಂದಿದೆ. ನೀರು ಮತ್ತು ಧೂಳಿನಿಂದ ರಕ್ಷಣೆಗಾಗಿ IP54 ರೇಟಿಂಗ್ ಪಡೆದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ವೈ ಫೈ, ಬ್ಲೂಟೂತ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








