ವಿನ್ ಕಾಂ ನಿಂದ ಸರಣಿ ಮೊಬೈಲ್ ಗಳು ಮಾರುಕಟ್ಟೆಗೆ ಲಗ್ಗೆ

ವಿನ್ ಕಾಂ ಕಂಪನಿ ಇತ್ತೀಚೆಗಷ್ಟೆ ಆರು ಮೊಬೈಲ್ ಫೋನ್ ಗಳನ್ನು ಬಿಡುಗಡೆಗೊಳಿಸಿದೆ. ಕಡಿಮೆ ಬೆಲೆಯ ಈ ಮೊಬೈಲ್ ಗಳು ಅನೇಕ ಆಯ್ಕೆಗಳನ್ನು ಗ್ರಾಹಕರಿಗೆ ಹೊತ್ತು ತರಲಿದೆ.
ಕಡಿಮೆ ಬೆಲೆಗೆ ಉನ್ನತ ಮೊಬೈಲನ್ನು ನೀವು ಬಯಸುವುದಾದರೆ ಇಲ್ಲಿ ನಿಮಗೆಂದೇ ಆರು ಮೊಬೈಲ್ ಗಳು ಲಭ್ಯವಿದೆ. W401, W403, W257, W259, W352 and W355 ಎಂಬ W ಸಿರೀಸ್ ಮೊಬೈಲ್ ಗಳು ಗ್ರಾಹಕರಿಗೆ ತೃಪ್ತಿ ನೀಡುವುದರಲ್ಲಿ ಎರಡು ಮಾತಿಲ್ಲ ಎಂಬುದು ಕಂಪನಿ ಮಾತು.
ಎಲ್ಲಾ ಮೊಬೈಲ್ ಗಳಲ್ಲಿಯೂ ಬ್ಲೂಟೂಥ್, MP3 ಪ್ಲೇಯರ್ ನೀಡಲಾಗಿದೆ. ವಿನ್ ಕಾಂ ನೀಡಿರುವ W401 ಮತ್ತು W403 ಮೊಬೈಲ್ ಗಳು ಲೀಥಿಯಂ ಪಾಲಿಮರ್ ಬ್ಯಾಟರಿ ಪಡೆದುಕೊಂಡಿದ್ದು, 55 ದಿನಗಳ ಸ್ಟ್ಯಾಂಡ್ ಬೈ ಟೈಂ ಮತ್ತು 35 ಗಂಟೆ ಟಾಕ್ ಟೈಂ ನೀಡುತ್ತದೆ. W401 ಮೊಬೈಲ್ 2ಜಿ ನೆಟ್ ವರ್ಕ್ ನೊಂದಿಗೆ ಅನೇಕ ಫ್ರಿಕ್ವೆನ್ಸಿಗಳನ್ನು ಬೆಂಬಲಿಸುತ್ತದೆ. 2.4 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಮೊಬೈಲಿನಲ್ಲಿ GPRS ಸೌಲಭ್ಯ, ಬ್ಲೂಟೂಥ್ ಮತ್ತು USB ನೀಡಲಾಗಿದೆ. ಅಷ್ಟೇ ಅಲ್ಲ, 4ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಇಲ್ಲಿ ಅವಕಾಶವಿದೆ. T-Flash ರೀತಿಯ ಮೆಮೊರಿ ಕಾರ್ಡನ್ನು ಈ ಮೊಬೈಲಿಗೆ ಬಳಸಬಹುದು.
W403 ಮೊಬೈಲ್ ನಲ್ಲಿಯೂ W401 ನಂತೆಯೇ ಎಲ್ಲಾ ಆಯ್ಕೆಗಳಿದ್ದು, ಜೊತೆಗೆ 1.3 ಮೆಗಾ ಪಿಕ್ಸಲ್ ಕ್ಯಾಮೆರಾವನ್ನು ಮೊಬೈಲ್ ಹೊಂದಿದೆ. ಈ W403 ಮೊಬೈಲ್ 2.6 ಇಂಚಿನ ಡಿಸ್ಪ್ಲೇ ಪಡೆದುಕೊಂಡಿದ್ದು, ಮನರಂಜನೆಗೂ ಹಲವು ಆಯ್ಕೆಗಳಿದೆ. W403 ಮೊಬೈಲ್ ಬೆಲೆ 2599 ರೂ ಆಗಿದ್ದರೆ W401 ಮೊಬೈಲ್ ಬೆಲೆ 2399 ರು ಎಂದು ತಿಳಿದುಬಂದಿದೆ.
ಇನ್ನು ಇದೇ ಸಿರೀಸ್ ನ W257 ಮೊಬೈಲ್ 2 ಇಂಚಿನ ಡಿಸ್ಪ್ಲೇ ಹೊಂದಿದ್ದು, ಇದರಲ್ಲಿ ಮೊಬೈಲ್ ಟ್ರ್ಯಾಕರ್ ಇದೆ. 1500mAh ಬ್ಯಾಟರಿ ಹೊಂದಿರುವ ಈ ಮೊಬೈಲ್ 22 ದಿನಗಳ ಸ್ಟ್ಯಾಂಡ್ ಬೈ ಟೈಂ ಮತ್ತು 12 ಗಂಟೆಗಳ ಟಾಕ್ ಟೈಂ ನೀಡುತ್ತದೆ. W257 ಮೊಬೈಲ್ ಬೆಲೆ 1890 ರು ಎನ್ನಲಾಗಿದೆ. ಅದೇ ರೀತಿ W259 ಮೊಬೈಲ್ 1949ರು ಗೆ ನಿಮಗೆ ಲಭ್ಯವಾಗಲಿದೆ.
ಇದೀಗ ಕೊನೆಯ ಎರಡು ಮೊಬೈಲ್ ಗಳು ಇಲ್ಲಿವೆ. W352 ಮತ್ತು W355 ಮೊಬೈಲ್ ಗಳ ಬ್ಯಾಟರಿಯಲ್ಲಿ ಸ್ವಲ್ಪ ವಿಭಿನ್ನತೆಯಿದೆ. W352 ಮೊಬೈಲ್ ಬೆಲೆ 2145ರು ಆಗಿದ್ದರೆ W355 ಬೆಲೆ 2075 ರು ಎನ್ನಲಾಗಿದೆ.


Click it and Unblock the Notifications