ಡಿಸೈರ್ ಮೊಬೈಲ್ ನ ಹೊಸ ಡಿಸೈನ್ ನೋಡಿ

Posted By: Staff
ಡಿಸೈರ್ ಮೊಬೈಲ್ ನ ಹೊಸ ಡಿಸೈನ್ ನೋಡಿ
ಎಕ್ಸೇಜ್ ಕಮ್ಯುನಿಕೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಭಾರತದಲ್ಲಿ ಹಲವು ಕಡಿಮೆ ಬೆಲೆಯ ಮೊಬೈಲ್ ಗಳನ್ನು ಬಿಡುಗಡೆಗೊಳಿಸಿದೆ. ಭಾರತದ ಜನಸಂಖ್ಯೆಯನ್ನು ಉದ್ದೇಶವಾಗಿಟ್ಟುಕೊಂಡು ತರುವ ಎಕ್ಸೇಜ್ ಮೊಬೈಲ್ ಗಳಿಗೆ ಉತ್ತಮ ಪ್ರತಿಕ್ರಿಯೆಯೂ ಲಭಿಸಿದೆ.

ಇತ್ತೀಚೆಗಷ್ಟೆ ಕಂಪನಿ ಎಕ್ಸೇಜ್ M522 ಅಥವಾ ಡಿಸೈರ್ ಎಂಬ ಹ್ಯಾಂಡ್ ಸೆಟ್ಟನ್ನು ಬಿಡುಗಡೆಗೊಳಿಸಿದೆ.

ಎಕ್ಸೇಜ್ M522 ಮೊಬೈಲ್ ವಿಶೇಷತೆ:

* 2.4 ಇಂಚಿನ ಡಿಸ್ಪ್ಲೇ

* 1.3 ಮೆಗಾ ಪಿಕ್ಸಲ್ ಕ್ಯಾಮೆರಾ

* 8 ಜಿಬಿವರೆಗೂ ಮೆಮೊರಿ ವಿಸ್ತರಣಾ ಸಾಮರ್ಥ್ಯ

* ಹೈ ಡೆಫನಿಷನ್ Mp4 ಪ್ಲೇಯರ್

* Mp3 ಆಡಿಯೋ ಪ್ಲೇಯರ್

* WAP, GPRS

* ಬಹುಭಾಷಾ ಬೆಂಬಲಿತ

ಅನೇಕ ರೆಟ್ರೊ ಬಣ್ಣಗಳ ಮಿಶ್ರಣದಲ್ಲಿ ಎಕ್ಸೇಜ್ ಮೊಬೈಲ್ ಲಭ್ಯವಿದೆ. ಬಿಳಿ ಮತ್ತು ನೀಲಿ, ಕಪ್ಪು ಮತ್ತು ಕೇಸರಿ, ಕಪ್ಪು-ನೀಲಿ ಮತ್ತು ಕೆಂಪು-ಕಪ್ಪು ಬಣ್ಣಗಳ ಮಿಶ್ರಣದಲ್ಲಿ ಮೊಬೈಲ್ ಮೂಡಿಬಂದಿದೆ. ಈ ಎರಡು ಬಣ್ಣಗಳ ಮಿಶ್ರಣದೊಂದಿಗೆ ಕ್ಯಾಂಡಿ ಬಾರ್ ವಿನ್ಯಾಸದಲ್ಲಿರುವುದು ಮೊಬೈಲನ್ನು ಆಕರ್ಷಿತವಾಗಿ ಕಾಣುವಂತೆ ಮಾಡುತ್ತದೆ.

ಸಂಗೀತ ಮತ್ತು ಗೇಮ್ ಗೆಂದು ಪ್ರತ್ಯೇಕ ಕೀಗಳು ಮೊಬೈಲ್ ನಲ್ಲಿದೆ. ಸುಮಾರು 250 ಗೇಮ್ ಗಳು ಇದರಲ್ಲಿದೆ. ಫೇಸ್ ಬುಕ್ ಮುಂತಾದ ಸಾಮಾಜಿಕ ತಾಣಗಳ ಆಯ್ಕೆಯೂ ಮೊಬೈಲ್ ನಲ್ಲಿ ಲಭ್ಯ.

ಕೇವಲ 2500ರೂ ಗೆ ಲಭ್ಯವಿರುವ ಎಕ್ಸೇಜ್ ಮೊಬೈಲ್ ನಿಮಗೆ ಉತ್ತಮ ಆಯ್ಕೆಯಾಗುವುದರಲ್ಲಿ ಸಂಶಯವಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot