Home
ಮೊಬೈಲ್

Xiaomi 14 Civi ಬಿಡುಗಡೆಗೆ ಡೇಟ್ ಫಿಕ್ಸ್! : Samsung, OnePlusನೊಂದಿಗೆ ಪೈಪೋಟಿಗೆ ಸಜ್ಜು

ಶೀಘ್ರದಲ್ಲೇ ಭಾರತದಲ್ಲಿ Xiaomi ಸ್ಮಾರ್ಟ್‌ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ ಮೊಬೈಲ್‌ ಅನ್ನು ಲಾಂಚ್ ಮಾಡಲಿದೆ. ಈ ಮೊಬೈಲ್‌ಗೆ Xiaomi 14 Civi ಎಂದು ಹೆಸರಿಟ್ಟಿದ್ದು, ರಿಲೀಸ್‌ಗೂ ಮೊದಲೇ ಇದರ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಕಂಪನಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಚೀನಾದ ಸ್ಮಾರ್ಟ್‌ಫೋನ್ ಉತ್ಪಾದಕರು, ಭಾರತದಲ್ಲಿ ಈ ಮೊಬೈಲ್‌ ಬಿಡುಗಡೆ ಡೇಟ್‌ ಅನ್ನು ಖಚಿತಪಡಿಸಿದ್ದಾರೆ. ಇದೇ ಜೂನ್ 12ರಂದು Xiaomi 14 Civi ಗ್ರ್ಯಾಂಡ್‌ ಆಗಿ ಲೋಕಾರ್ಪಣೆಯಾಗಲಿದೆ.

Xiaomi 14 Civi ಮೊಬೈಲ್‌ನ ಕ್ಯಾಮೆರಾ ಅದ್ಭುತವಾಗಿದೆ. ಸಿನಿಮ್ಯಾಟಿಕ್ ಲುಕ್ ಅನುಭವವನ್ನು ನೀಡುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ನೀಡಲಾಗಿದ್ದು, ಅದರೊಳಗೆ ಲೈಕಾ ಆಪ್ಟಿಕ್ಸ್ (Leica Optics) ಅನ್ನು ಕಾಣಬಹುದು. ಕ್ರೂಸ್ ಬ್ಲೂ, ಮ್ಯಾಚಾ ಗ್ರೀನ್ ಮತ್ತು ಶ್ಯಾಡೋ ಬ್ಲ್ಯಾಕ್ ಎಂಬ ಮೂರು ಬಣ್ಣಗಳ ರೂಪಾಂತರಗಗಳಲ್ಲಿ ಈ ಮೊಬೈಲ್‌ ಪರಿಚಯವಾಗಲಿದೆ. Samsung, OnePlus ಸೇರಿದಂತೆ ಇತರೆ ಕಂಪನಿಗಳ ಸ್ಮಾರ್ಟ್‌ಫೋನ್‌ಗಳೊಂದಿಗೆ ಪ್ರತಿಸ್ಪರ್ಧಿಯಾಗಲಿದೆ.

ಪ್ರಮುಖ ಅಂಶಗಳು

  • ಭಾರತದಲ್ಲಿ Xiaomi ಸ್ಮಾರ್ಟ್‌ಫೋನ್‌ ಬ್ರಾಂಡ್ ತನ್ನ ಲೇಟೆಸ್ಟ್ ಮೊಬೈಲ್‌ ಬಿಡುಗಡೆಗೊಳಿಸಲು ಸಜ್ಜಾಗಿದೆ.
  • Xiaomi 14 Civi ಸ್ಮಾರ್ಟ್‌ಫೋನ್ ಜೂನ್ 12, 2024 ರಂದು ಗ್ರ್ಯಾಂಡ್‌ ಆಗಿ ಲಾಂಚ್ ಆಗಲಿದೆ.
  • 120Hz ರಿಫ್ರೆಶ್ ದರದೊಂದಿಗೆ ಮೊಬೈಲ್‌ ಕ್ವಾಡ್-ಕರ್ವ್ಡ್ 1.5K AMOLED 120Hz ಡಿಸ್ಪ್ಲೇಯನ್ನು ಹೊಂದಿರಲಿದೆ.
Xiaomi 14 Civi ಬಿಡುಗಡೆಗೆ ಡೇಟ್ ಫಿಕ್ಸ್! ನಿರೀಕ್ಷಿತ ಫೀಚರ್‌ಗಳೇನು?

Xiaomi 14 Civi ನಿರೀಕ್ಷಿತ ವೈಶಿಷ್ಟ್ಯಗಳು

ಈ ಮೊಬೈಲ್ ಕ್ವಾಡ್-ಕರ್ವ್ಡ್ 1.5K AMOLED 120Hz ಡಿಸ್ಪ್ಲೇಯನ್ನು ಹೊಂದಿರುತ್ತದೆ. ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಮತ್ತು 120Hz ರಿಫ್ರೆಶ್ ದರದೊಂದಿಗೆ ಲಭ್ಯವಾಗಲಿದೆ. Xiaomi 14 Civi ಮುಂಭಾಗದಲ್ಲಿ 32MP ಪ್ರೈಮರಿ + 32MP ಅಲ್ಟ್ರಾವೈಡ್ ಕ್ಯಾಮೆರಾ, ಡ್ಯುಯಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿದೆ. ಹ್ಯಾಂಡ್‌ಸೆಟ್ ಸ್ಟಿರಿಯೊ ಸ್ಪೀಕರ್‌ಗಳು, ಲೋಹದ ಚೌಕಟ್ಟನ್ನು ಹೊಂದಿದ್ದು, 7.6 ಎಂಎಂ ದಪ್ಪವಾಗಿರುತ್ತದೆ. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ Snapdragon 8s Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, Xiaomi Hyper OSನಲ್ಲಿ ರನ್ ಆಗುತ್ತದೆ.

12GB RAM, 4,700mAh ಬ್ಯಾಟರಿ ಬ್ಯಾಕಪ್

ಈ ಮೊಬೈಲ್ ತ್ರಿಬಲ್ ಕ್ಯಾಮೆರಾ ಸೆಟಪ್ ಜೊತೆಗೆ, 50MP ಪ್ರೈಮರಿ ಕ್ಯಾಮೆರಾದೊಂದಿಗೆ 50MP ಟೆಲಿಫೋಟೋ ಲೆನ್ಸ್ ಮತ್ತು 12MP ಅಲ್ಟ್ರಾವೈಡ್ ಲೆನ್ಸ್ ಅನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 32MP ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ನೀಡಲಾಗಿದೆ. ಅಲ್ಲದೆ ಮೊಬೈಲ್ 67W ಚಾರ್ಜಿಂಗ್‌ನೊಂದಿಗೆ 4,700mAh ಬ್ಯಾಟರಿ ಬ್ಯಾಕಪ್ ಪಡೆಯಬಹುದು. ಈ ಮೊಬೈಲ್ ಸಂಪರ್ಕಕ್ಕಾಗಿ ಹ್ಯಾಂಡ್‌ಸೆಟ್ Wi-Fi 6, ಬ್ಲೂಟೂತ್ 5.4, NFC ಮತ್ತು ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ USB ಟೈಪ್-C ಪೋರ್ಟ್ ಅನ್ನು ಪಡೆಯಬಹುದು. 12GB ವರೆಗೆ LPDDR5X RAM ಮತ್ತು 512GB UFS 4.0 ಸ್ಟೋರೇಜ್ ಹೊಂದಿದೆ.

ಭಾರತದಲ್ಲಿ Xiaomi 14 Civi ಬೆಲೆ ಎಷ್ಟು?

ಪ್ರಸ್ತುತ ತಿಳಿದುಬಂದಿರುವ ಮಾಹಿತಿ ಪ್ರಕಾರ, ಈ ಮೊಬೈಲ್‌ನ ಬೆಲೆ (2,999 ಯುವಾನ್) ಸುಮಾರು 35,000 ರೂ.ಗಳಿಗೆ ನಿರೀಕ್ಷಿಸಬಹುದು. ಮುಂದಿನ ತಿಂಗಳು ಅಂದ್ರೆ, ಜೂನ್‌ನಲ್ಲಿ ಬಿಡುಗಡೆಯಾಗಲಿರುವ Xiaomi 14 ಸರಣಿಯ ಎಲ್ಲಾ ಹ್ಯಾಂಡ್‌ಸೆಟ್‌ಗಳನ್ನು ಸುಮಾರು 50,000 ರೂ.ಗಳಿಗಿಂತ ಕಡಿಮೆ ಬೆಲೆಗೆ ಲಾಂಚ್ ಮಾಡಬಹುದು ಎಂದು ಹೇಳಲಾಗಿದೆ. Xiaomi ಕಂಪನಿಯ ಈ ನೂತನ ಮೊಬೈಲ್ ಈಗಾಗಲೇ ಭಾರತದ ಮರುಕಟ್ಟೆಯಲ್ಲಿರುವ Samsung Galaxy S23, iQOO 12 5G ಮತ್ತು OnePlus 12R ಸ್ಮಾರ್ಟ್‌ಫೋನ್‌ಗಳೊಂದಿಗೆ ಪೈಪೋಟಿ ನಡೆಸುವ ಸಾಧ್ಯತೆಗಳಿವೆ.

Best Mobiles in India

English summary
Xiaomi 14 Civi will be unveiled in India on June 12. The Xiaomi 14 Civi is said to be a rebranded version of the Civi 4 Pro, which was launched in the company's home turf China in March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+