Home
ಮೊಬೈಲ್

ಇಂದಿನಿಂದ Xiaomi 14 Civi ಫಸ್ಟ್‌‌ ಸೇಲ್ ಆರಂಭ: ಭರಪೂರ ಆಫರ್, ಬೆಲೆ ಎಷ್ಟು?

ಶಿಯೋಮಿ (Xiaomi) ಕಂಪನಿ Xiaomi 14 Civi ಮೊಬೈಲ್ ಇತ್ತೀಚೆಗೆ ತನ್ನ ಸ್ಟೈಲಿಶ್‌ ಲುಕ್ ಮತ್ತು ಅಪ್ಡೇಟೆಡ್‌ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿತ್ತು. ಶಿಯೋಮಿ ಸಂಸ್ಥೆಯ ಈ ಫೋನ್ ಬೆಲೆ, ಡಿಸೈನ್‌ ಹಾಗೂ ಅದ್ಭುತ ಫೀಚರ್ಸ್‌ಗಳಿಂದ ಮೊಬೈಲ್ ಪ್ರಿಯರ ಗಮನ ಸೆಳೆದಿತ್ತು. ಈ ಮೊಬೈಲ್ ಇಂದು (ಜೂನ್ 20) ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಅಧಿಕೃತವಾಗಿ ಮಾರಾಟ ಪ್ರಾರಂಭಿಸಲಿದೆ. ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಸಿದ್ದವಾಗಿದ್ದು, ಈ ಫೋನ್ ಖರೀದಿಸಲು ಮೊಬೈಲ್‌ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ ಬೆಲೆ, ಫೀಚರ್ಸ್‌ ಹಾಗೂ ಇದರ ಲಭ್ಯತೆ ಬಗ್ಗೆ ತಿಳಿಯೋಣ ಬನ್ನಿ.

ಶಿಯೋಮಿ 14 CIVI ಕಳೆದ ವಾರ ಭಾರತದಲ್ಲಿ ಮೊದಲ 'CIVI' ಬ್ರಾಂಡ್ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಯಿತು. ಇದು ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್ ಹೊಂದಿರುವ ಎರಡನೆಯ ಫೋನ್‌. ಇದು Samsung Galaxy S23 FE ಮತ್ತು Vivo V30 Pro ನಂತಹ ಮೊಬೈಲ್‌ಗಳೊಂದಿಗೆ ಸ್ಪರ್ಧಿಸಲು ಸಿದ್ಧವಾಗಿದೆ. ಶಿಯೋಮಿ 14 CIVI ಇಂದು ಭಾರತದಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ. ಶಿಯೋಮಿ 14 CIVI ಸ್ಮಾರ್ಟ್‌ಫೋನ್‌ ಸಂಪೂರ್ಣ ವೈಶಿಷ್ಟ್ಯಗಳ ವಿವರಗಳು ಇಲ್ಲಿವೆ.

ಇಂದಿನಿಂದ Xiaomi 14 Civi ಫಸ್ಟ್‌‌ ಸೇಲ್ ಆರಂಭ: ಭರಪೂರ ಆಫರ್, ಬೆಲೆ ಎಷ್ಟು?

ಶಿಯೋಮಿ 14 CIVI ಮಾರಾಟ, ಬೆಲೆ, ಕೊಡುಗೆಗಳು

ಶಿಯೋಮಿ 14 CIVI ಭಾರತದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ Flipkart, mi.com ಮತ್ತು Xiaomi ರಿಟೇಲ್ ಮೂಲಕ ಮಾರಾಟವಾಗುತ್ತಿದೆ. ಈ ಮೊಬೈಲ್‌ನ 8GB+256GB ಸ್ಟೋರೇಜ್ ವೇರಿಯಂಟ್‌ 42,999 ರೂ. ಬೆಲೆಯೊಂದಿಗೆ ಆರಂಭವಾಗುತ್ತದೆ. ಇದಲ್ಲದೆ, 12GB+512GB ಸ್ಟೋರೇಜ್‌ ಮಾದರಿಯು ಲಭ್ಯವಿದೆ. ಇದು 47,999 ರೂ. ನೊಂದಿಗೆ ಮಾರಾಟವಾಗುತ್ತಿದೆ.

ICICI ಬ್ಯಾಂಕ್ ಅಥವಾ HDFC ಬ್ಯಾಂಕ್ ಕಾರ್ಡ್‌ನೊಂದಿಗೆ ಶಿಯೋಮಿ 14 CIVI ಅನ್ನು ಖರೀದಿಸುವ ಗ್ರಾಹಕರು 3,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಗ್ರಾಹಕರು ತ್ವರಿತ ರಿಯಾಯಿತಿಯ ಬದಲಿಗೆ 3,000 ರೂ.ವರೆಗಿನ ವಿನಿಮಯ ಬೋನಸ್ ಅನ್ನು ಆಯ್ಕೆ ಮಾಡಬಹುದು. ಶಿಯೋಮಿ 14 CIVI ಅನ್ನು ಶ್ಯಾಡೋ ಬ್ಲ್ಯಾಕ್ (AG ಗ್ಲಾಸ್), ಮ್ಯಾಚಾ ಗ್ರೀನ್ (ವೆಗಾನ್ ಲೆದರ್) ಮತ್ತು ಕ್ರೂಸ್ ಬ್ಲೂ (AG ಗ್ಲಾಸ್) ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ಸ್ಯಾಮ್‌ಸಂಗ್ ಮತ್ತು ವಿವೋಗೆ ಸೆಡ್ಡೊಡೆಯುವ ಫೀಚರ್ಸ್‌

ಇದು ಡ್ಯುಯಲ್ ಸಿಮ್ ಶಿಯೋಮಿ 14 Civi Android 14 ಆಧಾರಿತ HyperOS ಇಂಟರ್ಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 6.55 ಇಂಚಿನ 1.5K ಕರ್ವ್ಡ್ AMOLED ಡಿಸ್ಪ್ಲೇ ಹೊದಿದೆ. 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ದರ, 446ppi ಪಿಕ್ಸೆಲ್ ಸಾಂದ್ರತೆ ಮತ್ತು 3,000 nits ಬ್ರೈಟ್‌ನೆಸ್‌ ಹೊಂದಿದೆ. ಡಿಸ್ಪ್ಲೇ HDR10+, Dolby Vision ಅನ್ನು ಬೆಂಬಲಿಸುತ್ತದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.

ಶಿಯೋಮಿ 14 Civi ಪ್ರೊಸೆಸರ್ ಏನಿರಲಿದೆ?

ಶಿಯೋಮಿ 14 Civi ಫೋನ್ ಅಡ್ರಿನೋ 735 ಜಿಪಿಯು ಬಲದೊಂದಿಗೆ 4nm ಸ್ನಾಪ್‌ಡ್ರಾಗನ್ 8s Gen 3 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. 12GBಯ LPDDR5 RAM ಮತ್ತು 512GB ವರೆಗಿನ UFS 4.0 ಸ್ಟೋರೇಜ್ ಇರಲಿದೆ. ಡೌನ್‌ಲೋಡ್ ವೇಗ ಮತ್ತು ಕಿಕ್ಕಿರಿದ ಸ್ಥಳಗಳಲ್ಲಿ ನೆಟ್‌ವರ್ಕ್ ವ್ಯಾಪ್ತಿಯನ್ನು ಸುಧಾರಿಸಲು ಆಂತರಿಕ T1 ಸಿಗ್ನಲ್ ವರ್ಧನೆ ಚಿಪ್ ಒಳಗೊಂಡಿದೆ. ಇದು IceLoop ಕೂಲಿಂಗ್ ಸಿಸ್ಟಮ್ ಹೊಂದಿದ್ದು, ಸಾಂಪ್ರದಾಯಿಕ ಆವಿ ಕೂಲಿಂಗ್ ವ್ಯವಸ್ಥೆಗಳಿಗಿಂತ ಮೂರು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಇಂದಿನಿಂದ Xiaomi 14 Civi ಫಸ್ಟ್‌‌ ಸೇಲ್ ಆರಂಭ: ಭರಪೂರ ಆಫರ್, ಬೆಲೆ ಎಷ್ಟು?

ಅತ್ಯಾಕರ್ಷಕ ಕ್ಯಾಮೆರಾ ಸೆಟಪ್

Xiaomi 14 ನಂತೆಯೇ, ಶಿಯೋಮಿ 14 Civi ಟ್ರಿಪಲ್ ಹಿಂಬದಿಯ ಕ್ಯಾಮೆರಾವು ಲೈಕಾ ಸಮ್ಮಿಲಕ್ಸ್ ಲೆನ್ಸ್ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ, 12 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್‌ ಲೈಟ್ ಫ್ಯೂಷನ್ 800 ಇಮೇಜ್ ಸೆನ್ಸಾರ್ ಅನ್ನು ಹೊಂದಿದೆ. ಇದರೊಂದಿಗೆ ಈ ಫೋನ್ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ (120 ಡಿಗ್ರಿ ವೀಕ್ಷಣೆ) ಡ್ಯುಯಲ್‌ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾಗಳನ್ನು ಒಳಗೊಂಡಿದೆ.

ಈ ಫೋನ್‌ನ ಬ್ಯಾಟರಿ ಬ್ಯಾಕಪ್ ಬೊಂಬಾಟ್

ಇನ್ನೂ ಶಿಯೋಮಿ 14 Civi ಸ್ಮಾರ್ಟ್‌ಫೋನ್‌ ಬ್ಯಾಟರಿ ಬಗ್ಗೆ ಹೇಳುವುದಾದರೆ, 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್‌ ಹೊಂದಿದೆ. ಇದಕ್ಕೆ ಪೂರಕವಾಗಿ 67W ವೇಗದ ಚಾರ್ಜಿಂಗ್ ಸಪೋರ್ಟ್‌ ಇರಲಿದೆ. ಜೊತೆಗೆ, ಆಂಡ್ರಾಯ್ಡ್‌ 14 ನೊಂದಿಗೆ ಶಿಯೋಮಿ ಹೈಪರ್ ಓಎಸ್ ಅನ್ನು ರನ್ ಮಾಡುತ್ತದೆ. ಇದು ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ ಮತ್ತು AI ಬೆಂಬಲಿತ ಫೇಸ್ ಅನ್‌ಲಾಕ್ ವ್ಯವಸ್ಥೆಯನ್ನು ಒಳಗೊಂಡಿದೆ.

ಶಿಯೋಮಿ 14 Civi ಕನೆಕ್ಟಿವಿಟಿ ಆಯ್ಕೆಗಳು

ಈ ಮೊಬೈಲ್ 5G, Wi-Fi 6, NFC, ಬ್ಲೂಟೂತ್ 5.4, GPS, ಗೆಲಿಲಿಯೋ, ಗ್ಲೋನಾಸ್, ಬೀಡೌ, NFC, ಮತ್ತು USB ಟೈಪ್-C ಪೋರ್ಟ್ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದಿದೆ. ಬೋರ್ಡ್‌ನಲ್ಲಿರುವ ಸಂವೇದಕಗಳು ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ, ಸಾಮೀಪ್ಯ ಸಂವೇದಕ ಮತ್ತು ಐಆರ್ ಬ್ಲಾಸ್ಟರ್ ಅನ್ನು ಒಳಗೊಂಡಿವೆ. ಇದು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಸ್ಟಿರಿಯೊ ಸ್ಪೀಕರ್‌ಗಳನ್ನು ಪ್ಯಾಕ್ ಮಾಡುತ್ತದೆ.

ಒಟ್ನಲ್ಲಿ, ಶಿಯೋಮಿ ಕಂಪನಿಯು, ತನ್ನ ವಿಭಿನ್ನ ಫೀಚರ್ಸ್‌ ಮೂಲಕ ಹೆಚ್ಚು ಗ್ರಾಹಕರ ಬಳಗವನ್ನು ಸಂಪಾದಿಸಿದೆ. ಮೊಬೈಲ್ ಪ್ರಿಯರಿಗಾಗಿ ಹೊಸ ಹೊಸ ವಿನ್ಯಾಸ, ಅಪ್ಡೇಟೆಡ್ ಫೀಚರ್ಸ್‌ ಹೊಂದಿರುವ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಬೆಲೆಗೆ ತಕ್ಕನಾದ ಫೋನ್ ಒದಗಿಸುವಲ್ಲಿಯೂ ಶಿಯೋಮಿ ಸಕ್ಸಸ್‌ ಆಗಿದೆ. ಇದೀಗ, ಶಿಯೋಮಿ 14 Civi ಆ ಪಟ್ಟಿಗೆ ಸೇರಿದೆ. ಶಿಯೋಮಿ 14 Civi ಫೋನ್ Samsung ಮತ್ತು Vivoಗೆ ಸೆಡ್ಡೊಡೆಯುವ ಫೀಚರ್ಸ್‌ ಹೊಂದಿದೆ.

Best Mobiles in India

English summary
xiaomi 14 civi sale india today flipkart. Xiaomi 14 CIVI with Snapdragon 8s Gen 3 SoC, Five Cameras Launched in India: check Price, Specs and offers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+