Appleಗಿಂತ ದುಬಾರಿ ಈ ಫೋನು! ಜೂ.30ರಿಂದ ಸೇಲ್, ಬೆಲೆ ಎಷ್ಟು ಗೊತ್ತಾ?
ಶಿಯೋಮಿ (Xiaomi) ಕಂಪನಿಯು, ತನ್ನ ವಿಭಿನ್ನ ಫೀಚರ್ಸ್ ಮೂಲಕ ಹೆಚ್ಚು ಗ್ರಾಹಕರ ಬಳಗವನ್ನು ಹೊಂದಿದೆ. ಮೊಬೈಲ್ ಪ್ರಿಯರಿಗಾಗಿ ಹೊಸ ಹೊಸ ವಿನ್ಯಾಸ, ಅಪ್ಡೇಟೆಡ್ ಫೀಚರ್ಸ್ ಹೊಂದಿರುವ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಬೆಲೆಗೆ ತಕ್ಕನಾದ ಫೋನ್ ಒದಗಿಸುವಲ್ಲಿಯೂ ಶಿಯೋಮಿ ಸಕ್ಸಸ್ ಆಗಿದೆ. ಇದೀಗ, Civi ಸರಣಿಯ Xiaomi 14 Civi ಮತ್ತೊಂದು ಮೊಬೈಲ್ ಅನ್ನು ಇಂದು ಬಿಡುಗಡೆ ಮಾಡಿದೆ. ಇದು ಸ್ನಾಪ್‌ಡ್ರಾಗನ್ 8s Gen 3 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಇದರ ಬೆಲೆ 42,999 ರೂ.ನಿಂದ ಪ್ರಾರಂಭವಾಗುತ್ತದೆ. ಈ ಮೊಬೈಲ್‌ನ ಕ್ಯಾಮೆರಾ, ಬ್ಯಾಟರಿ ಬ್ಯಾಕಪ್ ಸೇರಿದಂತೆ ಏನೆಲ್ಲಾ ಫೀಚರ್ಸ್ ಇದೆ ಎಂಬುದನ್ನು ತಿಳಿಯೋಣ ಬನ್ನಿ.
Xiaomi 14 Civi ಮೊಬೈಲ್ Xiaomi 14 ಸರಣಿಯಲ್ಲಿನ ಇತರ ಫೋನ್‌ಗಳಿಗೆ ಹೋಲುವ ಲೈಕಾ-ಬ್ರಾಂಡ್ 50-ಮೆಗಾಪಿಕ್ಸೆಲ್ ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. Xiaomi 14 Civi 3,000 nitsನ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ ಬಾಗಿದ AMOLED ಡಿಸ್ಪ್ಲೇಯನ್ನು ಒಳಗೊಂಡಿದೆ. ಇದು 67W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,700mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಹೊಂದಿದೆ. ಇದು Xiaomi Civi 4 Proನ ರೀಬ್ರಾಂಡ್ ಆಗಿದೆ.

ಭಾರತದಲ್ಲಿ Xiaomi 14 ಸಿವಿ ಬೆಲೆ, ಲಭ್ಯತೆ
Xiaomi 14 Civi ಮೊಬೈಲ್‌ನ 8GB+256GB ಸ್ಟೋರೇಜ್ ವೇರಿಯಂಟ್ 42,999 ರೂ. ಬೆಲೆಯೊಂದಿಗೆ ಆರಂಭವಾಗುತ್ತದೆ. 12GB+512GB ವೇರಿಯಂಟ್ ಬೆಲೆ 47,999 ರೂ. ಇದು Cruise Blue, Matcha Green ಮತ್ತು Shadow Black ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇನ್ನೂ, Flipkart, Mi.com, Mi Home ಸ್ಟೋರ್‌ಗಳು ಮತ್ತು Xiaomiನ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಗೆ ಲಭ್ಯವಿರಲಿದೆ. ಇದೇ, ಜೂನ್ 20 ರಂದು (ಮಧ್ಯಾಹ್ನ 12) ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ.
3,000 ಡಿಸ್ಕೌಂಟ್, Redmi 3 ಆಕ್ಟಿವ್ ಫ್ರೀ
Xiaomi 14 Civi ಫೋನ್‌ಗಾಗಿ ಮುಂಗಡ ಬುಕಿಂಗ್ ಇಂದು (ಜೂ.12) ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾಗಿದೆ. ಮುಂಗಡ ಬುಕಿಂಗ್ ಮಾಡುವ ಗ್ರಾಹಕರು ಉಚಿತವಾಗಿ Redmi 3 ಆಕ್ಟಿವ್ ಅನ್ನು ಪಡೆಯಬಹುದು. ICICI ಬ್ಯಾಂಕ್ ಗ್ರಾಹಕರು ತಮ್ಮ ಕಾರ್ಡ್‌ಗಳ ಮೂಲಕ ಪಾವತಿಗಳನ್ನು ಮಾಡಿದರೆ 3,000 ರೂ. ಡಿಸ್ಕೌಂಟ್ ಆಫರ್ ಪಡೆಯಬಹುದು. ಇದಲ್ಲದೆ, ಮೂರು ತಿಂಗಳ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯೊಂದಿಗೆ ಮತ್ತು ಆರು ತಿಂಗಳ ಕಾಲ 100GB Google Oneನೊಂದಿಗೆ ಲಭ್ಯವಾಗಲಿದೆ.
Xiaomi 14 Civi ಫೀಚರ್‌ಗಳು
ಡ್ಯುಯಲ್ ಸಿಮ್ Xiaomi 14 Civi Android 14 ಆಧಾರಿತ HyperOS ಇಂಟರ್ಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 6.55-ಇಂಚಿನ 1.5K ಕರ್ವ್ಡ್ AMOLED ಡಿಸ್ಪ್ಲೇ ಹೊದಿದೆ. ಜೊತೆಗೆ, 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ದರ, 446ppi ಪಿಕ್ಸೆಲ್ ಸಾಂದ್ರತೆ ಮತ್ತು 3,000 ನೀಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿದೆ. ಡಿಸ್ಪ್ಲೇ HDR10+, Dolby Vision ಅನ್ನು ಬೆಂಬಲಿಸುತ್ತದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.
Xiaomi 14 Civi ಪ್ರೊಸೆಸರ್ ಏನಿರಲಿದೆ?
Xiaomi 14 Civi ಫೋನ್ ಅಡ್ರಿನೋ 735 ಜಿಪಿಯು ಬಲದೊಂದಿಗೆ 4nm ಸ್ನಾಪ್‌ಡ್ರಾಗನ್ 8s Gen 3 SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. 12GBಯ LPDDR5 RAM ಮತ್ತು 512GB ವರೆಗಿನ UFS 4.0 ಸ್ಟೋರೇಜ್ ಇರಲಿದೆ. ಡೌನ್‌ಲೋಡ್ ವೇಗ ಮತ್ತು ಕಿಕ್ಕಿರಿದ ಸ್ಥಳಗಳಲ್ಲಿ ನೆಟ್‌ವರ್ಕ್ ವ್ಯಾಪ್ತಿಯನ್ನು ಸುಧಾರಿಸಲು ಆಂತರಿಕ T1 ಸಿಗ್ನಲ್ ವರ್ಧನೆ ಚಿಪ್ ಒಳಗೊಂಡಿದೆ. ಇದು IceLoop ಕೂಲಿಂಗ್ ಸಿಸ್ಟಮ್ ಹೊಂದಿದ್ದು, ಸಾಂಪ್ರದಾಯಿಕ ಆವಿ ಕೂಲಿಂಗ್ ವ್ಯವಸ್ಥೆಗಳಿಗಿಂತ ಮೂರು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಶಿಯೋಮಿ 14 ಸಿವಿ ಕ್ಯಾಮೆರಾ ಸೆಟಪ್
Xiaomi 14 ನಂತೆಯೇ, Xiaomi 14 Civi ಟ್ರಿಪಲ್ ಹಿಂಬದಿಯ ಕ್ಯಾಮೆರಾವು ಲೈಕಾ ಸಮ್ಮಿಲಕ್ಸ್ ಲೆನ್ಸ್ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಲೈಟ್ ಫ್ಯೂಷನ್ 800 ಇಮೇಜ್ ಸೆನ್ಸಾರ್ ಅನ್ನು ಹೊಂದಿದೆ. ಇದರೊಂದಿಗೆ ಈ ಫೋನ್ ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ (120 ಡಿಗ್ರಿ ವೀಕ್ಷಣೆ) ಡ್ಯುಯಲ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳನ್ನು ಒಳಗೊಂಡಿದೆ.
ಬ್ಯಾಟರಿ ಬ್ಯಾಕಪ್ ಹೇಗಿರಲಿದೆ?
ಇದು ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ ಮತ್ತು AI ಬೆಂಬಲಿತ ಫೇಸ್ ಅನ್‌ಲಾಕ್ ವ್ಯವಸ್ಥೆಯನ್ನು ಒಳಗೊಂಡಿದೆ. ಇನ್ನೂ Xiaomi 14 Civi ಸ್ಮಾರ್ಟ್‌ಫೋನ್ ಬ್ಯಾಟರಿ ಬಗ್ಗೆ ಹೇಳುವುದಾದರೆ, 4,700mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ. ಇದಕ್ಕೆ ಪೂರಕವಾಗಿ 67W ವೇಗದ ಚಾರ್ಜಿಂಗ್ ಸಪೋರ್ಟ್ ಇರಲಿದೆ. ಜೊತೆಗೆ, ಆಂಡ್ರಾಯ್ಡ್ 14 ನೊಂದಿಗೆ ಶಿಯೋಮಿ ಹೈಪರ್ ಓಎಸ್ ಅನ್ನು ರನ್ ಮಾಡುತ್ತದೆ.
Xiaomi 14 Civi ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳು
ಈ ಫೋನ್ 5G, Wi-Fi 6, NFC, ಬ್ಲೂಟೂತ್ 5.4, GPS, ಗೆಲಿಲಿಯೋ, ಗ್ಲೋನಾಸ್, ಬೀಡೌ, NFC, ಮತ್ತು USB ಟೈಪ್-C ಪೋರ್ಟ್ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ. ಬೋರ್ಡ್‌ನಲ್ಲಿರುವ ಸಂವೇದಕಗಳು ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ, ಸಾಮೀಪ್ಯ ಸಂವೇದಕ ಮತ್ತು ಐಆರ್ ಬ್ಲಾಸ್ಟರ್ ಅನ್ನು ಒಳಗೊಂಡಿವೆ. ಇದು ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಸ್ಟಿರಿಯೊ ಸ್ಪೀಕರ್‌ಗಳನ್ನು ಪ್ಯಾಕ್ ಮಾಡುತ್ತದೆ.


Click it and Unblock the Notifications








