Xiaomi 14T ಸರಣಿ ಬಿಡುಗಡೆಗೆ ಮುಹೂರ್ತ ಫಿಕ್ಸ್! ಬರ್ತಿವೆ 2 ರಗಡ್ ಫೋನ್, ಬೆಲೆ ಎಷ್ಟು?
ಸ್ಮಾರ್ಟ್‌ಫೋನ್ ಪ್ರಿಯರಿಗೆ ಸೆಪ್ಟೆಂಬರ್ ತಿಂಗಳು ಹಬ್ಬವೇ ಸರಿ. ಒಂದರ ಹಿಂದೆ ಒಂದರಂತೆ ಹಲವು ಕಂಪನಿಗಳ ಮೊಬೈಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ಪಟ್ಟಿಗೆ ಶಿಯೋಮಿ ಕೂಡ ಸೇರ್ಪಡೆಯಾಗಿದೆ. ಹೌದು, ಶಿಯೋಮಿ (Xiaomi) ಕಂಪನಿಯು ಶಿಯೋಮಿ 14T ಸರಣಿ (Xiaomi 14T Series) ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಸರಣಿಯಲ್ಲಿ ಶಿಯೋಮಿ 14T (Xiaomi 14T) ಮತ್ತು ಶಿಯೋಮಿ 14T ಪ್ರೊ (Xiaomi 14T Pro) ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ.
ಹೌದು, ಶಿಯೋಮಿ ತನ್ನ 14T ಸರಣಿಯ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ದಿನಾಂಕವನ್ನು ದೃಢಪಡಿಸಿದೆ. ಶಿಯೋಮಿ 14T ಮತ್ತು ಶಿಯೋಮಿ 14T ಪ್ರೊ ಅನ್ನು ಸೆಪ್ಟೆಂಬರ್ 26 ರಂದು ಜಾಗತಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದೆ. ಈ ಕಾರ್ಯಕ್ರಮ ಜರ್ಮನಿಯ ಬರ್ಲಿನ್‌ನಲ್ಲಿ ಸಂಜೆ 5.30 ಗಂಟೆಗೆ ನಡೆಯಲಿದೆ. ಆದರೆ, ಇದೇ ದಿನದಂದು ಈ ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗುತ್ತವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಶಿಯೋಮಿ 14T ಸರಣಿಯ ನಿರೀಕ್ಷಿತ ಬೆಲೆ
ಯುರೋಪ್‌ನಲ್ಲಿ ಶಿಯೋಮಿ 14T ಫೋನಿನ 12GB + 256GB ಸ್ಟೋರೇಜ್ ರೂಪಾಂತರವು ಸುಮಾರು 60,150 ರೂ.ಗಳ (€649) ಬೆಲೆಯೊಂದಿಗೆ ಬಿಡುಗಡೆಯಾಗಲಿದೆ. ಮತ್ತೊಂದೆಡೆ, ಶಿಯೋಮಿ 14T ಪ್ರೊ ಮೊಬೈಲ್‌ನ 12GB + 512GB ಸ್ಟೋರೇಜ್ ರೂಪಾಂತರವು ಸುಮಾರು 83,300 ರೂ.ಗಳ (€899) ಬೆಲೆಯೊಂದಿಗೆ ಪ್ರಾರಂಭವಾಗುವ ಸಾಧ್ಯತೆಯಿದೆ.
ಶಿಯೋಮಿ 14T ಸರಣಿಯ ವಿನ್ಯಾಸ
ಶಿಯೋಮಿ ಕಂಪನಿಯು ಹುವಾವೇ ಜೊತೆಗೆ ತನ್ನ ಪಾಲುದಾರಿಕೆಯನ್ನು ಮುಂದುವರೆಸುತ್ತಿದೆ. ಕಳೆದ ವರ್ಷದ ಶಿಯೋಮಿ 13T (Xiaomi 13T) ಸರಣಿಯ ಫೋನ್‌ಗಳನ್ನು ಪರಿಚಯಿಸಲಾಗಿತ್ತು. ಇವುಗಳಂತೆಯೇ ಎರಡೂ ಹೊಸ ಸ್ಮಾರ್ಟ್‌ಫೋನ್‌ಗಳು ಲೈಕಾ ಲೆನ್ಸ್‌ಗಳು ಮತ್ತು ಬಣ್ಣ ಆಪ್ಟಿಮೈಸೇಶನ್‌ನೊಂದಿಗೆ ಬರಲಿವೆ. ಶಿಯೋಮಿ ಸಿನಿಮೀಯ ಕಲಾತ್ಮಕತೆ ಮತ್ತು ಮಾನವೀಯ ಛಾಯಾಗ್ರಹಣವನ್ನು ದೃಢೀಕರಿಸಿದೆ. ಲೈಕಾ ಬಣ್ಣದ ಪ್ರೊಫೈಲ್‌ಗೆ ಹೊಸ ಬದಲಾವಣೆಗಳನ್ನು ಸೂಚಿಸುತ್ತದೆ.
ಶಿಯೋಮಿ 14T ಮತ್ತು ಶಿಯೋಮಿ 14T ಪ್ರೊ ನಿರೀಕ್ಷಿತ ವೈಶಿಷ್ಟ್ಯಗಳು
ಶಿಯೋಮಿ 14T ಸರಣಿಯ ಫೋನ್‌ಗಳ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇಲ್ಲಿಯವರೆಗೆ ಅನೇಕ ಸೋರಿಕೆಗಳು ಬಂದಿವೆ. ಆದರೆ, ಕಂಪನಿಯು ಈವರೆಗೆ ಶಿಯೋಮಿ 14T ಸರಣಿಯ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಶಿಯೋಮಿ 14T ಪ್ರೊ ಮೊಬೈಲ್ ಬೂದು, ನೀಲಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರಬಹುದು. ಇನ್ನೂ, ಶಿಯೋಮಿ 14T ನಾಲ್ಕು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಬೂದು, ನೀಲಿ, ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ಬರುತ್ತದೆ. ಬನ್ನಿ, ಸೋರಿಕೆಯಾದ ವೈಶಿಷ್ಟ್ಯಗಳನ್ನು ನೋಡೋಣ.
ಡಿಸ್ಪ್ಲೇ: ಶಿಯೋಮಿ 14T ಸರಣಿಯ ಎರಡೂ ಫೋನ್‌ಗಳು 6.67 ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದೆ. ಈ ಫೋನ್ 1.5K AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಫೋನ್‌ನಲ್ಲಿ 144Hz ಸ್ಕ್ರೀನ್ ರಿಫ್ರೆಶ್ ರೇಟ್ ಬೆಂಬಲವನ್ನು ಕಾಣಬಹುದು. ಮಾಹಿತಿಯ ಪ್ರಕಾರ 4,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು HDR10, HDR10+ ಮತ್ತು ಡಾಲ್ಬಿ ವಿಷನ್‌ನಂತಹ ಆಯ್ಕೆಗಳನ್ನು ಒಳಗೊಂಡಿರುತ್ತದೆ.
ಪ್ರೊಸೆಸರ್: ಶಿಯೋಮಿ 14T ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ ಚಿಪ್‌ಸೆಟ್ ಅನ್ನು ಹೊಂದಿರುವ ಸಾಧ್ಯತೆಯಿದೆ. ಆದರೆ, ಶಿಯೋಮಿ 14T ಪ್ರೊ ಮೊಬೈಲ್ ಕಂಪನಿಯು ಮೀಡಿಯಾ ಟೆಕ್ ಡೈಮೆನ್ಸಿಟಿ 9300 ಅಲ್ಟ್ರಾ ಪ್ರೊಸೆಸರ್ ಅನ್ನು ಒಳಗೊಂಡಿರಲಿದೆ. ಈ ಫೋನ್ 12GB RAM ಜೊತೆಗೆ 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಒಳಗೊಂಡಿರಲಿದೆ. ಕಂಪನಿಯು ಇದನ್ನು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ 14 ನಲ್ಲಿ ಬಿಡುಗಡೆ ಮಾಡಬಹುದು.
ಕ್ಯಾಮೆರಾ: ಮುಂಬರುವ ಈ ಫೋನ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿರುತ್ತದೆ. ಇದಕ್ಕಾಗಿ ಕಂಪನಿಯು 1/1.56 ಇಂಚಿನ IMX906 ಸೋನಿ ಸಂವೇದಕವನ್ನು ಬಳಸಬಹುದು. ಇದರೊಂದಿಗೆ, 50 ಮೆಗಾಪಿಕ್ಸೆಲ್ ಲೈಕಾ ಟೆಲಿಫೋಟೋ ಲೆನ್ಸ್ ಮತ್ತು 12 ಮೆಗಾಪಿಕ್ಸೆಲ್ ಲೈಕಾ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಈ ಫೋನ್‌ನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ.


Click it and Unblock the Notifications








