Home
ಮೊಬೈಲ್

ಶೀಘ್ರದಲ್ಲೇ Xiaomi 15 ಲಾಂಚ್: ಇದಕ್ಕೆ ಸರಿ ಸಾಟಿಯೇ ಇಲ್ಲ, ಫೀಚರ್ಸ್‌ ಲೀಕ್!

ಚೀನಾದ ಸ್ಮಾರ್ಟ್‌ಫೋನ್ ತಯಾರಕ Xiaomi ಕಂಪನಿಯು ಭಾರತದಲ್ಲಿ ಮತ್ತೊಂದು ಹೊಸ ಮೊಬೈಲ್ ಬಿಡುಗಡೆ ಮಾಡಲಿದೆ. Xiaomi ಈ ವರ್ಷದ ಕೊನೆಯಲ್ಲಿ Xiaomi 15 ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಕಲ ಸಿದ್ಧತೆ ನಡೆಸಿದೆ. ಈ ಫೋನ್‌ನ ಫೀಚರ್‌ಗಳು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಲೀಕ್ ಆಗಿವೆ. ಇತ್ತೀಚೆಗೆ, ಡಿಜಿಟಲ್ ಚಾಟ್ ಸೆಷನ್ Xiaomi 15 ಮತ್ತು 15 Pro ಫೋನ್ ಬಗ್ಗೆ ಮಾಹಿತಿಯನ್ನು ಸೋರಿಕೆ ಮಾಡಿತ್ತು. ಇದೀಗ ಲೀಕರ್ Xiaomi 15 ಸರಣಿಯ ಫೋನ್ ಕೆಲವು ಹೊಸ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದೆ. ಹಾಗಿದ್ರೆ, ಈ ಮೊಬೈಲ್‌ ಏನೆಲ್ಲಾ ಫೀಚರ್‌ ಹೊಂದಿರಲಿದೆ ಅನ್ನೋದನ್ನು ತಿಳಿಯೋಣ ಬನ್ನಿ.

DCS Weibo ಪೋಸ್ಟ್ ಪ್ರಕಾರ, Xiaomi 15 civi ಫೋನ್‌ Snapdragon 8 Gen 4 ಪ್ರೊಸೆಸರ್‌ ಪವರ್‌ ಅನ್ನು ಪಡೆದುಕೊಂಡಿದೆ. ಇದು ಫ್ಲಾಟ್ OLED LTPO ಡಿಸ್ಲ್ಪೇ ಅನ್ನು ಹೊಂದಿರುತ್ತದೆ. 4,800mAh ನಿಂದ 5,000mAh ಬ್ಯಾಟರಿ ಬ್ಯಾಕಪ್ ಹೊಂದಿರಬಹುದು. ಶಿಯೋಮಿ ಕಂಪನಿಯು ತನ್ನ ಹೊಸ Xiaomi 15 civi ಫೋನ್‌ ಅನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ಲೀಕ್‌ ಆಗಿರುವ ಫೀಚರ್ಸ್‌ ಮೊಬೈಲ್‌ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ.

ಶೀಘ್ರದಲ್ಲೇ Xiaomi 15 ಲಾಂಚ್: ಇದಕ್ಕೆ ಸರಿ ಸಾಟಿಯೇ ಇಲ್ಲ, ಫೀಚರ್ಸ್‌ ಲೀಕ್

Xiaomi 15 ಮೊಬೈಲ್ ವೈಶಿಷ್ಟ್ಯಗಳು

ಇದು 50 ಮೆಗಾಪಿಕ್ಸೆಲ್ ಓಮ್ನಿವಿಷನ್ ಪ್ರಾಥಮಿಕ ಕ್ಯಾಮೆರಾ ಹೊಂದಿರಲಿದೆ. 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ 3.x ಟೆಲಿಫೋಟೋ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಬಹು ದ್ಯುತಿರಂಧ್ರಗಳೊಂದಿಗೆ ಫೋನ್‌ನಲ್ಲಿ ಹಲವಾರು ಫೋಟೋಗ್ರಫಿ ಮಾದರಿಗಳು ಲಭ್ಯವಿದೆ. ಅಲ್ಲದೆ, Xiaomi 15 ಫೋನ್ 16GB RAM + 1TB ವರೆಗಿನ ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬರಲಿದೆ. ಇದು ಸಿಂಗಲ್ ಪಾಯಿಂಟ್ ಅಲ್ಟ್ರಾಸಾನಿಕ್ ಅಂಡರ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿರಲಿದೆ.

ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿನ DCS Weibo ಪೋಸ್ಟ್ ಪ್ರಕಾರ, ಈ ಮೊಬೈಲ್ Snapdragon 8 Gen 4 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. Xiaomi 15 ಮೊಬೈಲ್ ಫ್ಲಾಟ್ OLED LTPO ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು 1.5K ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಡಿಸ್ಪ್ಲೇ ಗಾತ್ರದ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. Xiaomi 15 ಫೋನ್ 6.36-ಇಂಚಿನ ಡಿಸ್ಪ್ಲೇ ಬೆಂಬಲದೊಂದಿಗೆ Xiaomi 14 ನಂತಹ ಕಾಂಪ್ಯಾಕ್ಟ್ ಫ್ಲ್ಯಾಗ್‌ಶಿಪ್ ಆಗಿರಬಹುದು ಎನ್ನಲಾಗಿದೆ.

Xiaomi 15 ಬ್ಯಾಟರಿ ಬ್ಯಾಕಪ್ ಹೇಗಿದೆ?

Xiaomi 15 ಮೊಬೈಲ್ ವೈಶಿಷ್ಟ್ಯಗಳುXiaomi 15 ಸ್ಮಾರ್ಟ್‌ಫೋನ್ ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇದಲ್ಲದೆ, ಫೋನ್ ಶಕ್ತಿಯುತ ಬ್ಯಾಟರಿಯನ್ನು ಹೊಂದಿದೆ. ಸೋರಿಕೆಯಾದ ಮಾಹಿತಿಗಳಲ್ಲಿ ಬ್ಯಾಟರಿ ಸಾಮರ್ಥ್ಯ, ಚಾರ್ಜಿಂಗ್ ವೇಗ ತಿಳಿದಿಲ್ಲ. ಆದರೆ, ಬ್ಯಾಟರಿ ಸೆಲ್ ವಸ್ತುವು ಹಗುರವಾದ, ತೆಳುವಾದ ವಿನ್ಯಾಸವನ್ನು ಹೊಂದಿದೆ. ಅದರಂತೆ ಇದು ದೊಡ್ಡ ಬ್ಯಾಟರಿಯನ್ನು ಹೊಂದಿದೆ.

Xiaomi 14 4, 610mAh ಬ್ಯಾಟರಿಯಿಂದ 90W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. Xiaomi 15 ಫೋನ್ 4,800mAh ನಿಂದ 5,000mAh ಬ್ಯಾಟರಿಯನ್ನು ಹೊಂದಿರಬಹುದು. ಹೆಚ್ಚುವರಿಯಾಗಿ ಈ ಸ್ಮಾರ್ಟ್‌ಫೋನ್ ಗ್ಲಾಸ್, ವೆಗಾನ್ ಲೆದರ್, ವೆಗಾನ್ ಲೆದರ್ ಸ್ಪ್ಲೈಸಿಂಗ್ ಆಯ್ಕೆಗಳನ್ನು ಒಳಗೊಂಡಂತೆ ಕಪ್ಪು ಮತ್ತು ಬಿಳಿ ಬಣ್ಣದ ರೂಪಾಂತರಗಳೊಂದಿಗೆ ಉತ್ತಮ ವಿನ್ಯಾಸವನ್ನು ಹೊಂದಿದೆ ಎಂದು ತಿಳಿದುಬಂದಿದೆ.

Xiaomi 15 ಫೋನ್ ಲಾಂಚ್ ಯಾವಾಗ?

ವರದಿಯ ಪ್ರಕಾರ Xiaomi 15 ಈ ವರ್ಷದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. Oppo Find X8 ಮತ್ತು Vivo X200 ನಂತಹ ಹಲವಾರು ಸ್ಪರ್ಧಾತ್ಮಕ ಸ್ಮಾರ್ಟ್‌ಫೋನ್‌ಗಳು ಸಹ ಅದೇ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. Xiaomi 15 ಫೋನ್ ಅನ್ನು Xiaomi 14 ನಂತೆಯೇ ಭಾರತದಲ್ಲಿಯೂ ಪ್ರಾರಂಭಿಸುವ ನಿರೀಕ್ಷೆಯಿದೆ. ಇದೀಗ ಲೀಕ್ ಆಗಿರುವ ಫೀಚರ್‌ಗಳು ಕೇವಲ ಊಹಾಪೋಹಗಳಷ್ಟೇ ಆಗಿರಲಿವೆ. ಶಿಯೋಮಿ ಅಧಿಕೃತವಾಗಿ Xiaomi 15 ಬಗ್ಗೆ ಮಾಹಿತಿ ಪ್ರಕಟಿಸುವವರೆಗೆ ನೀವು ಕಾಯಲೇಬೇಕು.

Best Mobiles in India

English summary
Xiaomi 15 is expected to launch later this year as part of the purported Xiaomi 15 series of smartphones. The Xiaomi 15 lineup is likely to come with considerable upgrades over the current handsets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+