Home
ಮೊಬೈಲ್

ಶಿಯೋಮಿ ತಾಕತ್ತು.. 5,400mAh ಬ್ಯಾಟರಿ, 100W ಚಾರ್ಜಿಂಗ್: ಯಾವ ಫೋನ್? ಬೆಲೆ ಎಷ್ಟು?

ಶಿಯೋಮಿ 15 ಸರಣಿಯನ್ನು (Xiaomi Mi Series 15) ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದರಲ್ಲಿ Xiaomi 15 ಮತ್ತು Xiaomi 15 Pro ಸ್ಮಾರ್ಟ್‌ಫೋನ್‌ಗಳು ಮೊದಲು ಚೀನಾ ಮಾರುಕಟ್ಟೆಗೆ ಎಂಟ್ರಿ ಕೊಡಬಹುದು. ಈ ಫೋನ್‌ಗಳು Qualcomm Snapdragon 8 Gen 4 ಪ್ರೊಸೆಸರ್ ಹೊಂದಿರುವ ಮೊದಲ ಫೋನ್ ಆಗಿರಬಹುದು. ಇತ್ತೀಚಿನ ಸೋರಿಕೆಯಾದ ಮಾಹಿತಿಯಲ್ಲಿ ಶಿಯೋಮಿ ಪ್ರೊ ಮಾದರಿಯ ಪ್ರಮುಖ ವಿಶೇಷತೆಗಳನ್ನು ಬಹಿರಂಗಪಡಿಸಲಾಗಿದೆ. ಇದರಲ್ಲಿ ಬ್ಯಾಟರಿ ಮತ್ತು ಚಾರ್ಜಿಂಗ್‌ಗೆ ಸಂಬಂಧಿಸಿದ ವಿವರಗಳು ಕಂಡುಬಂದಿವೆ. ಬನ್ನಿ, ಇದರ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿದುಕೊಳ್ಳೋಣ.

ಮುಖ್ಯಾಂಶಗಳು

  • Xiaomi 15 Pro ಸ್ಮಾರ್ಟ್‌ಫೋನ್ 5,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ.
  • ಇದು Xiaomi 14 Pro ನಲ್ಲಿನ 4,800mAh ಸಾಮರ್ಥ್ಯದಿಂದ ಅಪ್‌ಗ್ರೇಡ್ ಆಗಿದೆ.
  • ಫೋನ್ 100W ವೈರ್ಡ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಪಡೆಯುವ ನಿರೀಕ್ಷೆಯಿದೆ.
ಶಿಯೋಮಿ ತಾಕತ್ತು.. 5,400mAh ಬ್ಯಾಟರಿ, 100W ಚಾರ್ಜಿಂಗ್: ಯಾವ ಫೋನ್?

ಶಿಯೋಮಿ ಕಂಪನಿಯು, ತನ್ನ ವಿಭಿನ್ನ ಫೀಚರ್ಸ್‌ ಮೂಲಕ ಹೆಚ್ಚು ಗ್ರಾಹಕರ ಬಳಗವನ್ನು ಹೊಂದಿದೆ. ಮೊಬೈಲ್ ಪ್ರಿಯರಿಗಾಗಿ ಹೊಸ ಹೊಸ ವಿನ್ಯಾಸದ, ಅಪ್ಡೇಟೆಡ್ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಬೆಲೆಗೆ ತಕ್ಕನಾದ ಮೊಬೈಲ್ ಪರಿಚಯಿಸುವಲ್ಲಿಯೂ ಶಿಯೋಮಿ ಸಕ್ಸಸ್‌ ಆಗಿದೆ. ಕೆಲವೇ ದಿನಗಳಲ್ಲಿ ಶಿಯೋಮಿ 15 ಸರಣಿಯ ಮತ್ತೆರಡು ಮೊಬೈಲ್‌ಗಳು ಮಾರುಕಟ್ಟೆಗೆ ಬರಲಿವೆ. ಈ ಫೈಕಿ Xiaomi 15 Pro ಫೋನ್‌ನ ಬ್ಯಾಟರಿ ಮಾಹಿತಿಗಳು ಬಹಿರಂಗವಾಗಿದೆ.

Xiaomi 15 Proನ ಬ್ಯಾಟರಿ ಬ್ಯಾಕಪ್

  • Tipster ಡಿಜಿಟಲ್ ಚಾಟ್ ಸ್ಟೇಷನ್ ಮೈಕ್ರೋ ಬ್ಲಾಗಿಂಗ್ ಸೈಟ್ Weibo ನಲ್ಲಿ Xiaomi 15 Pro ಕುರಿತು ಪ್ರಸ್ತಾಪಿಸಿದೆ.
  • Xiaomi 15 Pro ಅನ್ನು 5,400mAh ಬ್ಯಾಟರಿಯೊಂದಿಗೆ ಒದಗಿಸಬಹುದು ಎಂದು ಸೋರಿಕೆಯಾಗಿರುವ ಚಿತ್ರದಲ್ಲಿ ನೋಡಬಹುದು. ಇದು Xiaomi 14 Proನ 4,800mAh ಸಾಮರ್ಥ್ಯಕ್ಕಿಂತ ದೊಡ್ಡದಾಗಿದೆ.
  • ಫೋನ್ ಅನ್ನು ತೆಳ್ಳಗೆ ಮತ್ತು ಹಗುರವಾಗಿಡಲು Xiaomi 5,400mAh ಬ್ಯಾಟರಿಯನ್ನು ಆರಿಸಿಕೊಂಡಿದೆ. ಆದಾಗ್ಯೂ, ಲಾಂಚ್ ಮಾಡಿದಾಗ ಫೋನ್ ಎಷ್ಟು ತೆಳ್ಳಗಿರುತ್ತದೆ ಎಂಬುದನ್ನು ನೋಡಬೇಕಾಗಿದೆ.
  • ಚಾರ್ಜಿಂಗ್ ವಿಷಯದಲ್ಲಿ, Xiaomi 15 Pro ಅನ್ನು 100W ವೈರ್ಡ್ ಚಾರ್ಜಿಂಗ್ ಬೆಂಬಲ ಮತ್ತು 100W ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ತರಬಹುದು.
  • Xiaomi 15 Pro ಫೋನ್‌ನಲ್ಲಿ ವೈರ್‌ಲೆಸ್ ಚಾರ್ಜಿಂಗ್ ಅನ್ನು Xiaomi 14 Pro ನಲ್ಲಿ ಲಭ್ಯವಿರುವ 50W ವೈರ್‌ಲೆಸ್ ಚಾರ್ಜಿಂಗ್‌ಗಿಂತ ಹೆಚ್ಚಿನದನ್ನು ಕಾಣಬಹುದು. ವೈರ್ಡ್ ಚಾರ್ಜಿಂಗ್ ಹಿಂದಿನ ಮಾದರಿಯ 120W ಗಿಂತ ಕಡಿಮೆ ಇರಬಹುದು.
  • ಸೋರಿಕೆಯ ಪ್ರಕಾರ, ಕಂಪನಿಯು 120W ವೈರ್ಡ್ + 100W ವೈರ್‌ಲೆಸ್ ಚಾರ್ಜಿಂಗ್ ಮೂಲಮಾದರಿಯನ್ನು ಪರೀಕ್ಷಿಸುತ್ತಿದೆ. ಆದರೆ, ಉಷ್ಣ ಸಮಸ್ಯೆಗಳಿಂದಾಗಿ 100W + 100W ಕಾಂಬೊ ಲಭ್ಯವಿರಬಹುದು.

Xiaomi 15 Proನ ವಿಶೇಷತೆಗಳು

  • Xiaomi 15 Pro ಫೋನ್ 2K ಮೈಕ್ರೋ-ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿರುವ ನಿರೀಕ್ಷೆಯಿದೆ. ಆದರೆ, ಡಿಸ್ಲ್ಪೇ ಗಾತ್ರದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
  • ಈ ಸ್ಮಾರ್ಟ್‌ಫೋನ್‌ Qualcomm Snapdragon 8 Gen 4 ಪ್ರೊಸೆಸರ್‌ ಅನ್ನು ಪಡೆದಿರಬಹುದು. ಈ ಚಿಪ್ ಅನ್ನು ಅಕ್ಟೋಬರ್‌ನಲ್ಲಿ ಪರಿಚಯಿಸಬಹುದು.
  • Xiaomi 15 Pro ಸ್ಮಾರ್ಟ್‌ಫೋನ್‌ಗೆ 50MP OV50K ಪ್ರಾಥಮಿಕ ಕ್ಯಾಮೆರಾ, 50MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 50MP IMX882 ಟೆಲಿಫೋಟೋ ಕ್ಯಾಮೆರಾ ಲೆನ್ಸ್ ಅನ್ನು ಒದಗಿಸಬಹುದು.
  • ಸಾಮಾನ್ಯ ಆಪ್ಟಿಕಲ್ ಸೆನ್ಸರ್‌ಗೆ ಹೋಲಿಸಿದರೆ ಇನ್-ಡಿಸ್ಪ್ಲೇ ಅಲ್ಟ್ರಾ-ಸೋನಿಕ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಫೋನ್‌ನಲ್ಲಿ ಭದ್ರತೆಗಾಗಿ ಸ್ಥಾಪಿಸಬಹುದು.

ಒಟ್ಟಾರೆ, ಶಿಯೋಮಿ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ಟೆಕ್‌ ವಲಯದಲ್ಲಿ ಉತ್ತಮ ಬೇಡಿಕೆಯಿದೆ. ತನ್ನ ಬಜೆಟ್‌ ಬೆಲೆಯ ಫೋನ್‌ಗಳಿಂದ ಗ್ರಾಹಕರನ್ನು ಆಕರ್ಷಿಸುವಲ್ಲಿ ಸಕ್ಸಸ್‌ ಕೂಡ ಆಗಿದೆ. ಶಿಯೋಮಿ 15 ಸರಣಿ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ, ಮಾರುಕಟ್ಟೆಯಲ್ಲಿ ಹೊಸದಾಗಿ Xiaomi 15 ಮತ್ತು Xiaomi 15 Pro ಸ್ಮಾರ್ಟ್‌ಫೋನ್ ಬಿಡುಗಡೆಗೆ ಸದ್ದಿಲ್ಲದೆ ತಯಾರಿ ನಡೆಯುತ್ತಿದೆ. ಶಿಯೋಮಿ ಮೊಬೈಲ್‌ ಪ್ರಿಯರು ಈ ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ದಿನಾಂಕವನ್ನು ಎದುರು ನೋಡುತ್ತಿದ್ದಾರೆ.

Best Mobiles in India

English summary
Xiaomi 15 Pro tipped to feature 5,400mAh battery, 100W fast charging support: Expected price, specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+