ದೀಪಾವಳಿ ಗಿಫ್ಟ್! ಒಂದೇ ದಿನ 2 ಹೊಸ Xiaomi ಫೋನ್ ಲಾಂಚ್; ಬೆಲೆ, ಫೀಚರ್ಸ್ ಲೀಕ್
ಮೊಬೈಲ್ ಪ್ರಿಯರಿಗೆ ಅಕ್ಟೋಬರ್ ತಿಂಗಳು ಹಬ್ಬವೇ ಸರಿ. ಇದೀಗ ತಾನೆ ದಸರಾ ಸಂಭ್ರಮ ಮುಗಿದಿದೆ. ಮತ್ತೊಂದೆಡೆ, ದೀಪಾವಳಿ ಕೂಡ ಬರುತ್ತಿದೆ. ಇತ್ತ, ಪ್ರಸಿದ್ಧ ಕಂಪನಿಗಳು ಒಂದರ ಹಿಂದೆ ಒಂದರಂತೆ ತನ್ನ ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಈ ಪಟ್ಟಿಗೆ ಶಿಯೋಮಿ ಕೂಡ ಸೇರ್ಪಡೆಯಾಗಿದೆ. ಹೌದು, ಶಿಯೋಮಿ (Xiaomi) ಕಂಪನಿಯು ಶಿಯೋಮಿ 15 ಸರಣಿ (Xiaomi 15 Series) ಬಿಡುಗಡೆ ಮಾಡಲು ಸಜ್ಜಾಗಿದೆ. ಎರಡು ಹೊಸ ಮೊಬೈಲ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಹೌದು, ಶಿಯೋಮಿ 15 ಸರಣಿಯಲ್ಲಿ ಶಿಯೋಮಿ 15 (Xiaomi 15) ಮತ್ತು ಶಿಯೋಮಿ 15 ಪ್ರೊ (Xiaomi 15 Pro) ಫೋನ್ ಲಾಂಚ್ ಆಗಲಿದೆ. ಕಂಪನಿಯು ಈಗಾಗಲೇ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಅದರಂತೆ, ಮುಂದಿನ ವಾರ (ಅಕ್ಟೋಬರ್ 23) ಶಿಯೋಮಿ 15 ಸರಣಿಯನ್ನು ಪ್ರಾರಂಭಿಸಲಾಗುವುದು. ಈ ಮಧ್ಯೆಯೇ, ಮುಂಬರುವ ಫೋನಿನ ಕ್ಯಾಮೆರಾ, ಚಿಪ್‌ಸೆಟ್, ಬ್ಯಾಟರಿ ಮತ್ತು ಮೂಲ ರೂಪಾಂತರದ ಹಲವು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಶಿಯೋಮಿ 15 ಫೋನಿನ ಬೆಲೆ (ನಿರೀಕ್ಷಿತ)
ಅಕ್ಟೋಬರ್ 22 ರಂದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ ಈವೆಂಟ್‌ನಲ್ಲಿ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಅನ್ನು ಬಿಡುಗಡೆ ಮಾಡಲಾಗುವುದು. ಬಳಿಕ, ಶಿಯೋಮಿ 15 ಸರಣಿಯು ಚೀನಾದಲ್ಲಿ ಬಿಡುಗಡೆಯಾಗಲಿದೆ. ಬೆಲೆಯ ಬಗ್ಗೆ ಹೇಳುವುದಾದರೆ, ವರದಿ ಪ್ರಕಾರ ಚೀನಾದಲ್ಲಿ ಶಿಯೋಮಿ 15 ಬೆಲೆ ಸುಮೂರು 54,400 ರೂ. ನಿಂದ (CNY 4,599) ಪ್ರಾರಂಭವಾಗುವ ನಿರೀಕ್ಷೆಯಿದೆ. ಶಿಯೋಮಿ 15 ಪ್ರೊ ಫೋನಿನ ಬೆಲೆ 62,700 ರೂ.ಗೆ (CNY 5,299) ಬಿಡುಗಡೆಯಾಗುವ ಸಾಧ್ಯತೆಯಿದೆ.
ಶಿಯೋಮಿ 15 ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಶಿಯೋಮಿ 15 ಸರಣಿಯು 6.36 ಇಂಚಿನ 1.5K LTPO OLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಇದು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಡಿಸ್ಪ್ಲೇಯು HDR10+ ಮತ್ತು ಡಾಲ್ಬಿ ವಿಷನ್ (Dolby Vision) ಅನ್ನು ಬೆಂಬಲಿಸುವ ಸಾಧ್ಯತೆಯಿದೆ.
ಪ್ರೊಸೆಸರ್ ಸಾಮರ್ಥ್ಯ
ಶಿಯೋಮಿ 15 ಸರಣಿಯು ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ (Snapdragon 8 Elite SoC) ಅನ್ನು ಹೊಂದಿರುವ ನಿರೀಕ್ಷೆಯಿದೆ. ಇದು 16GB ವರೆಗಿನ LPDDR5x RAM ಮತ್ತು 1TB ವರೆಗಿನ UFS 4.0 ಸ್ಟೋರೇಜ್‌ನೊಂದಿಗೆ ಬರುವ ಸಾಧ್ಯತೆಯಿದೆ.
ಕ್ಯಾಮೆರಾ ಸೆಟಪ್
ಪ್ರಸಿದ್ಧ ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಅವರು ಶಿಯೋಮಿ 15 ಫೋನಿನ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಶಿಯೋಮಿ 15 ಸರಣಿಯು ಫೋಟೋಗ್ರಫಿಗಾಗಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಓಮ್ನಿವಿಷನ್ OV50H ಕ್ಯಾಮೆರಾ ಲಭ್ಯವಿರುತ್ತದೆ. ಫೋನಿನಲ್ಲಿ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 3.2x ಆಪ್ಟಿಕಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಹೊಂದಿರಲಿದೆ. ಸೆಲ್ಫಿ ಪ್ರಿಯರಿಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ವರದಿಯ ಪ್ರಕಾರ, ಕಂಪನಿಯು ಶಿಯೋಮಿ 15 ಸರಣಿಯನ್ನು 5,500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಲಿದೆ. ಇದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ.
ಇತರೆ ವೈಶಿಷ್ಟ್ಯಗಳು
ಶಿಯೋಮಿ 15 ಸರಣಿಯ ಫೋನ್‌ಗಳು ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ IP68 ರೇಟಿಂಗ್ ಅನ್ನು ಪಡೆದಿವೆ ಎಂದು ಟಿಪ್‌ಸ್ಟರ್ ಬಹಿರಂಗಪಡಿಸಿದ್ದಾರೆ. ಶಿಯೋಮಿ 15 ಸರಣಿಯು ಈ ಹಿಂದೆ ಬಿಡುಗಡೆಯಾಗಿರುವ ಶಿಯೋಮಿ 14 (Xiaomi 14) ಅನ್ನು ಹೋಲುತ್ತದೆ. ಎರಡರ ನಡುವೆ ಕೆಲವು ಸಣ್ಣ ವ್ಯತ್ಯಾಸ ಕಾಣಬಹುದು.


Click it and Unblock the Notifications







