Home
ಮೊಬೈಲ್

ಬಹುನಿರೀಕ್ಷಿತ Xiaomi 15 ಬಿಡುಗಡೆ; 50MP ಟ್ರಿಪಲ್ ಕ್ಯಾಮೆರಾ.. ಬಿಗ್ ಬ್ಯಾಟರಿ.. ಬೆಲೆ ಎಷ್ಟು, ಸೇಲ್ ಯಾವಾಗ?

ಕೊನೆಗೂ ಬಹುನಿರೀಕ್ಷಿತ ಶಿಯೋಮಿ 15 (Xiaomi 15) ಮೊಬೈಲ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಫೋನನ್ನು ಮೊದಲು ಚೀನಾದಲ್ಲಿ ಪರಿಚಯಿಸಲಾಗಿತ್ತು. ಅಂದಿನಿಂದ ಭಾರತೀಯ ಗ್ರಾಹಕರು, ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂದು ಕಾಯುತ್ತಿದ್ದರು. ಹೌದು, ಶಿಯೋಮಿ ಪ್ರಿಯರ ಕಾಯುವಿಕೆ ಮುಗಿದಿದೆ. ಭಾರತದಲ್ಲಿ ಶಿಯೋಮಿ 15 (Xiaomi 15) ಅಧಿಕೃತವಾಗಿ ಲಾಂಚ್ ಆಗಿದೆ. ಇದು ಪ್ರೀಮಿಯಂ ಲುಕ್ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಬನ್ನಿ, ಈ ಫೋನಿನ ಬೆಲೆ, ಲಭ್ಯತೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಕಂಪನಿಯು ಇದೇ ಸರಣಿಯ Xiaomi 15 Ultra ಅನ್ನು ಜಾಗತಿಕವಾಗಿ ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಶಿಯೋಮಿ 15 ಫೋನಿನೊಂದಿಗೆ ಗ್ರಾಹಕರ ಗಮನ ಸೆಳೆದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಇದು ಶಕ್ತಿಶಾಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಮೊಬೈಲ್ 6.36 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ 5,240mAh ಬ್ಯಾಟರಿ, 90W ವೈರ್ಡ್ ಹೈಪರ್‌ಚಾರ್ಜ್ ಮತ್ತು 50W ವೈರ್‌ಲೆಸ್ ಹೈಪರ್‌ಚಾರ್ಜ್ ಒಳಗೊಂಡಿದೆ.

ಹೊಸ Xiaomi 15 ಲಾಂಚ್; 50MP ಟ್ರಿಪಲ್ ಕ್ಯಾಮೆರಾ, ಬಿಗ್ ಬ್ಯಾಟರಿ; ಬೆಲೆ ಎಷ್ಟು?

ಶಿಯೋಮಿ 15 5G ಬೆಲೆ ಮತ್ತು ಲಭ್ಯತೆ

ಶಿಯೋಮಿ 15 5G ಫೋನ್ ಒಂದೇ ಸ್ಟೊರೇಜ್ ಆಯ್ಕೆಯಲ್ಲಿ ಲಾಂಚ್ ಆಗಿದೆ. ನೀವು 12GB RAM + 256GB ಸ್ಟೊರೇಜ್ ರೂಪಾಂತರದಲ್ಲಿ ಈ ಫೋನನ್ನು ಖರೀದಿಸಬಹುದು. ಜಾಗತಿಕ ಮಾರುಕಟ್ಟೆಯಲ್ಲಿ 999 ಯುರೋಗಳ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಭಾರತೀಯ ಕರೆನ್ಸಿ ಪ್ರಕಾರ, ಈ ಫೋನಿನ ಬೆಲೆ 90,500 ರೂ. ಆಗಿದೆ. ಕಂಪನಿಯು ಇದೇ ಮಾರ್ಚ್ 11 ರಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ದರವನ್ನು ಘೋಷಿಸಲಿದೆ.

ಶಿಯೋಮಿ 15 5G ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಶಿಯೋಮಿ 15 5G ಮೊಬೈಲ್ 6.36 ಇಂಚಿನ OLED ಡಿಸ್ಪ್ಲೇ ಹೊಂದಿದೆ. ಇದು 2670 × 1200 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯ, 120Hz ರಿಫ್ರೆಶ್ ದರ ಮತ್ತು 3,200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲದೊಂದಿಗೆ ಬರುತ್ತದೆ. ಈ ಫೋನಿನ ಬೆಜೆಲ್‌ಗಳು ಈ ಹಿಂದಿನ ಮಾದರಿಗಿಂತ ಸ್ವಲ್ಪ (ಕೇವಲ 1.38mm) ತೆಳ್ಳಗಿವೆ.

ಪ್ರೊಸೆಸರ್ ಸಾಮರ್ಥ್ಯ

ನೂತನ ಶಿಯೋಮಿ 15 ಫೋನ್ ಶಕ್ತಿಶಾಲಿ ಸ್ನಾಪ್‌ಡ್ರಾಗನ್ 8 ಎಲೈಟ್ ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಇದು ಫೋನ್ ಕಾರ್ಯಕ್ಷಮತೆಯನ್ನು ಶೇ.45 ವರೆಗೆ ಹೆಚ್ಚಿಸುತ್ತದೆ. ಈ ಮೊಬೈಲ್ 12GB RAM ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 256GB ಸ್ಟೊರೇಜ್ ಆಯ್ಕೆ ಲಭ್ಯವಿದೆ.

ಹೊಸ Xiaomi 15 ಲಾಂಚ್; 50MP ಟ್ರಿಪಲ್ ಕ್ಯಾಮೆರಾ, ಬಿಗ್ ಬ್ಯಾಟರಿ; ಬೆಲೆ ಎಷ್ಟು?

ಕ್ಯಾಮೆರಾ ಸೆಟಪ್

ಶಿಯೋಮಿ 15 5G ಸ್ಮಾರ್ಟ್‌ಫೋನ್ ಅದ್ಭುತ ಕ್ಯಾಮೆರಾಗಳನ್ನು ಹೊಂದಿದೆ. ಇದು ಟ್ರಿಪಲ್ ಲೈಕಾ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಹೊಸ ಶಿಯೋಮಿ 15 5G ಮೊಬೈಲ್ 5,240mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 90W ವೈರ್ಡ್ ಚಾರ್ಜಿಂಗ್ ತಂತ್ರಜ್ಞಾನ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮೊಬೈಲ್ 5G SA/NSA, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್ ಸಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Xiaomi 15 with Snapdragon 8 Elite SoC Launched: check price in india, specifications and sale details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+