Home
ಮೊಬೈಲ್

Xiaomi 15S Pro ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಮತ್ತು ಫೀಚರ್ಸ್ ನೋಡಿ!

ವಿಶ್ಬದಾದ್ಯಂತ ಮೊಬೈಲ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Xiaomi 15S Pro ಸ್ಮಾರ್ಟ್‌ಫೋನ್ ಚೀನಾದಲ್ಲಿ ಭರ್ಜರಿಯಾಗಿ ಅನಾವರಣಗೊಂಡಿದೆ. ನಿರೀಕ್ಷೆಯಂತೆಯೇ, ಇದು ಶಿಯೋಮಿ ಕಂಪನಿಯ 3nm 10-ಕೋರ್ XRING 01 ಚಿಪ್‌ಸೆಟ್ ಹೊಂದಿದ ಮೊದಲ ಸ್ಮಾರ್ಟ್‌ಫೋನ್ ಆಗಿದ್ದು, ಈ ಪ್ರೀಮಿಯಂ ಹ್ಯಾಂಡ್‌ಸೆಟ್ 16GB LPDDR5X RAM ಮತ್ತು 1TB ವರೆಗಿನ UFS 4.0 ಆನ್‌ಬೋರ್ಡ್ ಸ್ಟೋರೇಜ್‌ ಅನ್ನು ಬೆಂಬಲಿಸುತ್ತದೆ. ಮತ್ತು Android 15-ಆಧಾರಿತ HyperOS 2.0 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕ್ಯಾಮೆರಾ ವಿಭಾಗದಲ್ಲಿ, Xiaomi 15s Pro 50-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಶೂಟರ್ ಸೇರಿದಂತೆ, ಲೈಕಾ-ಬೆಂಬಲಿತ 50-ಮೆಗಾಪಿಕ್ಸೆಲ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ದೀರ್ಘಕಾಲದ ಬಳಕೆಗೆ ಅನುಕೂಲವಾಗುವಂತೆ, ಫೋನ್ ವೈರ್ಡ್ ಮತ್ತು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,100mAh ಬ್ಯಾಟರಿಯನ್ನು ಹೊಂದಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳು
Xiaomi 15S Pro ಸ್ಮಾರ್ಟ್‌ಫೋನ್ 6.73-ಇಂಚಿನ 2K (3,100×1,440 ಪಿಕ್ಸೆಲ್‌ಗಳು) OLED LTPO ಡಿಸ್ಪ್ಲೇ ಅನ್ನು ಹೊಂದಿದೆ. ಈ ಡಿಸ್ಪ್ಲೇ 120Hz ವರೆಗೆ ರಿಫ್ರೆಶ್ ದರ, 3,200 ನಿಟ್ಸ್ ವರೆಗೆ ಗರಿಷ್ಠ ಬ್ರೈಟ್‌ನೆಸ್ ಮಟ್ಟ, 1,920Hz PWM ಡಿಮ್ಮಿಂಗ್ ದರ ಮತ್ತು ಶಿಯೋಮಿಯ ಸೆರಾಮಿಕ್ ಗ್ಲಾಸ್ 2.0 ರಕ್ಷಣೆಯನ್ನು ಒಳಗೊಂಡಿದೆ. ಇದು HDR10+ ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್ ಕಂಪನಿಯ ಹೊಸ 3nm 10-ಕೋರ್ XRING 01 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, Immortalis-G925 GPU, 16GB LPDDR5X RAM ಮತ್ತು 1TB ವರೆಗಿನ UFS 4.0 ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು Android 15 ಆಧಾರಿತ ಶಿಯೋಮಿಯ HyperOS 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, Xiaomi 15S Pro ಸ್ಮಾರ್ಟ್‌ಫೋನ್ ಲೈಕಾ-ಬೆಂಬಲಿತ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ 1/1.31-ಇಂಚಿನ ಲೈಟ್ ಫ್ಯೂಷನ್ 900 ಪ್ರಾಥಮಿಕ ಸೆನ್ಸರ್ f/1.44 ಅಪರ್ಚರ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಬರುತ್ತದೆ. ಕ್ಯಾಮೆರಾ ಸೆಟಪ್ 50-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ S5KJN1 ಸೆನ್ಸರ್ ಅನ್ನು ಹೊಂದಿದ್ದು, 115-ಡಿಗ್ರಿ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಜೊತೆಗೆ f/2.2 ಅಪರ್ಚರ್ ಮತ್ತು ಮ್ಯಾಕ್ರೋ ಕಾರ್ಯನಿರ್ವಹಣೆಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, 50-ಮೆಗಾಪಿಕ್ಸೆಲ್ ಸೋನಿ IMX858 ಪೆರಿಸ್ಕೋಪ್ ಟೆಲಿಫೋಟೋ ಶೂಟರ್ 5x ಆಪ್ಟಿಕಲ್ ಜೂಮ್, 10x ಇನ್-ಸೆನ್ಸರ್ ಲಾಸ್‌ಲೆಸ್ ಜೂಮ್, f/2.5 ಅಪರ್ಚರ್ ಮತ್ತು OIS ಬೆಂಬಲವನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, f/2.0 ಅಪರ್ಚರ್ ಹೊಂದಿರುವ 32-ಮೆಗಾಪಿಕ್ಸೆಲ್ OV32B40 ಮುಂಭಾಗದ ಕ್ಯಾಮೆರಾ ನೀಡಲಾಗಿದೆ.

Xiaomi 15S Pro ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಮತ್ತು ಫೀಚರ್ಸ್ ನೋಡಿ!

ಬೆಲೆ ಮತ್ತು ಲಭ್ಯತೆ
ಚೀನಾದಲ್ಲಿ Xiaomi 15S Pro ಬೆಲೆ 16GB RAM ಮತ್ತು 512GB ಸ್ಟೋರೇಜ್ ಆಯ್ಕೆಗೆ CNY 5,499 (ಸರಿಸುಮಾರು ₹65,500) ರಿಂದ ಪ್ರಾರಂಭವಾಗುತ್ತದೆ. 16GB RAM ಮತ್ತು 1TB ಸ್ಟೋರೇಜ್ ಹೊಂದಿರುವ ಉನ್ನತ ಮಾದರಿಯ ಬೆಲೆ CNY 5,999 (ಸರಿಸುಮಾರು ₹71,500) ಆಗಿದೆ. ಈ ಫೋನ್ ಡ್ರ್ಯಾಗನ್ ಸ್ಕೇಲ್ ಫೈಬರ್ ಆವೃತ್ತಿ ಮತ್ತು ಫಾರ್ ಸ್ಕೈ ಬ್ಲೂ ಫಿನಿಶ್‌ಗಳಲ್ಲಿ ಲಭ್ಯವಿದೆ. ಸದ್ಯಕ್ಕೆ, ಹ್ಯಾಂಡ್‌ಸೆಟ್ ಚೀನಾದಲ್ಲಿ ಅಧಿಕೃತ ಇ-ಸ್ಟೋರ್ ಮೂಲಕ ಖರೀದಿಗೆ ಲಭ್ಯವಿದೆ. ಈ ಫೋನ್ ಭಾರತಕ್ಕೆ ಯಾವಾಗ ಬರಲಿದೆ ಎಂಬುದರ ಕುರಿತು ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Xiaomi 15S Pro features a Leica-supported triple rear camera system, which includes a 50-megapixel Light Fusion 900 primary sensor measuring 1/1.31 inches. This sensor has an f/1.44 aperture and supports optical image stabilization (OIS).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+