ಪ್ರೀಮಿಯಂ ಕ್ಯಾಮೆರಾ ಫೀಚರ್ಸ್ ಜೊತೆಗೆ Xiaomi 15T ಫೋನ್ ಸರಣಿ ರಿಲೀಸ್!
ಟೆಕ್ ದೈತ್ಯ Xiaomi ತನ್ನ ಇತ್ತೀಚಿನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಾದ Xiaomi 15T ಮತ್ತು Xiaomi 15T Pro ಅನ್ನು ಸೆಪ್ಟೆಂಬರ್ 24, ಬುಧವಾರದಂದು ಮ್ಯೂನಿಚ್‌ನಲ್ಲಿ ನಡೆದ ಜಾಗತಿಕ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದೆ. ಈ ಹೊಸ ಫೋನ್‌ಗಳು ಶಕ್ತಿಯುತ ಮೀಡಿಯಾಟೆಕ್ ಡೈಮೆನ್ಸಿಟಿ ಪ್ರೊಸೆಸರ್‌ಗಳು ಮತ್ತು ಲೈಕಾ (Leica) ಸಹ-ವಿನ್ಯಾಸಗೊಳಿಸಿದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬಂದಿವೆ. ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿರುವ ಈ ಫೋನ್‌ಗಳು ಮೊಬೈಲ್ ಪೋಟೋಗ್ರಫಿ ಪ್ರಿಯರಿಗೆ ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ.
ಇದರ ಜೊತೆಗೆ, ಈ ಹೊಸ Xiaomi 15T ಸರಣಿಯ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಪ್ರೊಸೆಸರ್. Xiaomi 15T Pro 3nm ಆಕ್ಟಾ-ಕೋರ್ MediaTek Dimensity 9400+ ಚಿಪ್‌ಸೆಟ್ ಅನ್ನು ಹೊಂದಿದ್ದರೆ, Xiaomi 15T ಮಾದರಿಯು Dimensity 8400 Ultra SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಎರಡೂ ಫೋನ್‌ಗಳು ದೀರ್ಘಕಾಲದ ಬಳಕೆಗೆ ಮತ್ತು ಉಷ್ಣ ನಿರ್ವಹಣೆಗಾಗಿ 5,500mAh ಬ್ಯಾಟರಿ ಮತ್ತು Xiaomi ಯ 3D ಐಸ್‌ಲೂಪ್ (IceLoop) ಸಿಸ್ಟಮ್ ಅನ್ನು ಒಳಗೊಂಡಿವೆ. ಈ ಎರಡೂ ಫೋನ್‌ಗಳ ಸಂಪೂರ್ಣ ಫೀಚರ್ಸ್ ಮತ್ತು ಬೆಲೆ ಮಾಹಿತಿಯು ಈ ಕೆಳಕಂಡಂತಿದೆ.
Xiaomi 15T Pro ವೈಶಿಷ್ಟ್ಯಗಳು
ಪ್ರೊಸೆಸರ್: 3nm ಆಕ್ಟಾ-ಕೋರ್ MediaTek Dimensity 9400+ ಚಿಪ್‌ಸೆಟ್
ಡಿಸ್ಪ್ಲೇ: 6.83-ಇಂಚಿನ 1.5K (1,280x2,772 ಪಿಕ್ಸೆಲ್‌ಗಳು) AMOLED LIPO ಪರದೆ 144Hz ರಿಫ್ರೆಶ್ ದರದೊಂದಿಗೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಹೊಂದಿದೆ.
ಕ್ಯಾಮೆರಾ: ಲೈಕಾ ಸಮ್ಮಿಲಕ್ಸ್ ಆಪ್ಟಿಕಲ್ ಲೆನ್ಸ್‌ನೊಂದಿಗೆ 50MP ಮುಖ್ಯ (OIS), 50MP ಟೆಲಿಫೋಟೋ (5X ಆಪ್ಟಿಕಲ್ ಜೂಮ್, OIS) ಮತ್ತು 12MP ಅಲ್ಟ್ರಾ ವೈಡ್-ಆಂಗಲ್ ಸೆನ್ಸರ್. ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ.
ಬ್ಯಾಟರಿ: 5,500mAh ಬ್ಯಾಟರಿ 90W ವೈರ್ಡ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ.
ಮೆಮೊರಿ: 12GB ವರೆಗೆ LPDDR5X RAM ಮತ್ತು 1TB ವರೆಗೆ UFS 4.1 ಸ್ಟೋರೇಜ್.

Xiaomi 15T ವೈಶಿಷ್ಟ್ಯಗಳು
ಪ್ರೊಸೆಸರ್: MediaTek Dimensity 8400 Ultra SoC.
ಡಿಸ್ಪ್ಲೇ: Xiaomi 15T Pro ನಂತೆಯೇ 83-ಇಂಚಿನ ಡಿಸ್‌ಪ್ಲೆಯನ್ನು ಹೊಂದಿದೆ. ಆದರೆ 120Hz ವರೆಗೆ ರಿಫ್ರೆಶ್ ದರವನ್ನು ನೀಡುತ್ತದೆ.
ಕ್ಯಾಮೆರಾ: ಲೈಕಾ-ಟ್ಯೂನ್ ಮಾಡಿದ ಟ್ರಿಪಲ್ ರಿಯರ್ ಕ್ಯಾಮೆರಾ - 50MP ಮುಖ್ಯ, 50MP ಟೆಲಿಫೋಟೋ ಮತ್ತು 12MP ಅಲ್ಟ್ರಾ ವೈಡ್-ಆಂಗಲ್ ಸೆನ್ಸರ್.
ಬ್ಯಾಟರಿ: 5,500mAh ಬ್ಯಾಟರಿ 67W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ (ವೈರ್‌ಲೆಸ್ ಚಾರ್ಜಿಂಗ್ ಲಭ್ಯವಿಲ್ಲ).
ಇತರೆ: 12GB ವರೆಗೆ LPDDR5X RAM ಮತ್ತು 512GB ವರೆಗೆ UFS 4.0 ಸ್ಟೋರೇಜ್.
ಈ ಎರಡೂ ಫೋನ್‌ಗಳು Xiaomi HyperOS 2 ನಲ್ಲಿ ಕಾರ್ಯನಿರ್ವಹಿಸುತ್ತವೆ. ಅಲ್ಲದೆ, ಫೋನ್‌ಗಳು Xiaomi ಆಸ್ಟ್ರಲ್ ಕಮ್ಯುನಿಕೇಷನ್ಸ್ ವೈಶಿಷ್ಟ್ಯವನ್ನು ನೀಡುತ್ತವೆ, ಇದು ಸೆಲ್ಯುಲಾರ್ ಅಥವಾ ವೈ-ಫೈ ನೆಟ್‌ವರ್ಕ್ ಇಲ್ಲದೆ ಧ್ವನಿ ಕರೆಗಳನ್ನು ಮಾಡಲು ಅನುಮತಿಸುತ್ತವೆ.
Xiaomi 15T ಸರಣಿ: ಬೆಲೆ ಮತ್ತು ಲಭ್ಯತೆ
Xiaomi 15T Pro ಫೋನ್ ಬೆಲೆ 12GB RAM + 256GB ಸ್ಟೋರೇಜ್ ಮಾದರಿಗೆ GBP 649 (ಸುಮಾರು ₹77,000) ರಿಂದ ಪ್ರಾರಂಭವಾಗುತ್ತದೆ. Xiaomi 15T ಮಾದರಿಯು 12GB RAM + 256GB ಸ್ಟೋರೇಜ್‌ಗೆ GBP 549 (ಸುಮಾರು ₹65,000) ಬೆಲೆಯನ್ನು ಹೊಂದಿದೆ. ಭಾರತದಲ್ಲಿ ಈ ಪೋನ್‌ಗಳು ಯಾವಾಗ ಬಿಡುಗಡೆಯಾಗಲಿದೆ ಎಂಬ ಕುರಿತಂತೆ ಕಂಪೆನಿಯಿಂದ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ, ಶೀಘ್ರದಲ್ಲೇ ಆಗಮನವನ್ನು ನಿರೀಕ್ಷಿಸಬಹುದು. ಒಟ್ಟಾರೆಯಾಗಿ, ಈ ಹೊಸ Xiaomi 15T ಸರಣಿಯು ಶಕ್ತಿಶಾಲಿ ಕಾರ್ಯಕ್ಷಮತೆ ಮತ್ತು ಪ್ರೀಮಿಯಂ ಕ್ಯಾಮೆರಾ ವೈಶಿಷ್ಟ್ಯಗಳನ್ನು ಬಯಸುವ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಲಿದೆ.


Click it and Unblock the Notifications








