Xiaomi 17: ಭಾರತದಲ್ಲಿ ನಿರೀಕ್ಷೆಗೂ ಮೊದಲೇ ಬಿಡುಗಡೆಯಾಗುವ ಸಾಧ್ಯತೆ!
ಚೀನಾದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ Xiaomi ಕಂಪೆನಿಯ ಇತ್ತೀಚಿನ Xiaomi 17 ಸ್ಮಾರ್ಟ್‌ಫೋನ್ ಇದೀಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಪ್ರವೇಶಕ್ಕೆ ಸಿದ್ಧವಾಗುತ್ತಿದೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ, Xiaomi 17 ಫೋನ್ ಅನ್ನು ಭಾರತದಲ್ಲಿ ಮಾರ್ಚ್ 2026ರಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ, ಇದೀಗ ಹೊರಬಂದಿರುವ ಹೊಸ ಬೆಂಚ್ಮಾರ್ಕ್ ಲೀಕ್‌ಗಳು, Xiaomi 17 ಭಾರತದ ಬಿಡುಗಡೆ ದಿನಾಂಕವು ನಿರೀಕ್ಷೆಗಿಂತ ಬೇಗವಾಗಬಹುದು ಎಂಬುದನ್ನು ಸೂಚಿಸುತ್ತಿವೆ.! ಹಾಗಾದರೆ, ಭಾರತದಲ್ಲಿ Xiaomi 17 ಸ್ಮಾರ್ಟ್‌ಫೋನ್ ಬಿಡುಗಡೆ ಯಾವಾಗ?, ಇದರ ಕಾರ್ಯಕ್ಷಮತೆಯು ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.
Xiaomi 17: Geekbench ನಲ್ಲಿ ಕಾಣಿಸಿಕೊಂಡಿದೆ.
X ನಲ್ಲಿನ ಇತ್ತೀಚಿನ ಪೋಸ್ಟ್‌ನಲ್ಲಿ, ಜನಪ್ರಿಯ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಅವರು ಗ್ಲೋಬಲ್ Xiaomi 17 ಮಾದರಿಯನ್ನು Geekbench ನಲ್ಲಿ ಕಾಣಿಸಿಕೊಂಡಿರುವುದು ಗಮನಕ್ಕೆ ತಂದಿದ್ದಾರೆ. 25113PN0EG ಮಾಡೆಲ್ ನಂಬರ್ ಹೊಂದಿರುವ ಈ ಫೋನ್ 10.75GB RAM ಮತ್ತು Adreno 840 GPU ಜೊತೆಗೆ ಪಟ್ಟಿ ಮಾಡಲ್ಪಟ್ಟಿದೆ. ಇದರಿಂದ ಗ್ಲೋಬಲ್ ಆವೃತ್ತಿಯಲ್ಲಿ ಕನಿಷ್ಠ 12GB RAM ಇರಬಹುದು ಎಂಬುದು ಸ್ಪಷ್ಟ. ಜೊತೆಗೆ, ಫೋನ್ Android 16 ಮತ್ತು HyperOS 3 ಮೇಲೆ ಕಾರ್ಯನಿರ್ವಹಿಸಲಿದೆ.
Xiaomi 17: ಅತ್ಯಾಧುನಿಕ Snapdragon 8 Elite Gen 5 ಚಿಪ್‌ನ ಬಳಕೆ
ಗ್ಲೋಬಲ್ ಆವೃತ್ತಿಯ Xiaomi 17 ಫೋನ್ ಕೂಡ Qualcomm ನ 3nm ತಂತ್ರಜ್ಞಾನದ Snapdragon 8 Elite Gen 5 ಚಿಪ್‌ನಿಂದ ಚಾಲಿತವಾಗಲಿದೆ. ಈ ಪ್ರೊಸೆಸರ್‌ನಲ್ಲಿ ಎರಡು ಹೈ-ಪರ್ಫಾರ್ಮೆನ್ಸ್ ಕೋರ್‌ಗಳು (ಗರಿಷ್ಠ 4.61GHz ಸ್ಪೀಡ್) ಹಾಗೂ ಆರು ಎಫಿಷಿಯನ್ಸಿ ಕೋರ್‌ಗಳು (3.63GHz) ಸೇರಿವೆ. ಬೆಂಚ್ಮಾರ್ಕ್ ಫಲಿತಾಂಶಗಳಲ್ಲೂ AI ಸಂಬಂಧಿತ ಕಾರ್ಯಕ್ಷಮತೆಯಲ್ಲಿ ಫೋನ್ ಉತ್ತಮ ಅಂಕಗಳನ್ನು ಪಡೆದಿರುವುದು ಕಂಡುಬಂದಿದೆ. ಇದರಿಂದ ದೇಶದಲ್ಲಿ ಮತ್ತೊಂದು ಫ್ಲಾಗ್‌ಶಿಪ್ ಆಗಮನದ ಸುಳಿವು ಸಿಕ್ಕಂತಾಗಿದೆ.

Xiaomi 17:ಭಾರತದಲ್ಲಿ ನಿರೀಕ್ಷೆಗಿಂತ ಬೇಗ ಬಿಡುಗಡೆ?
ಹೊಸ ಲೀಕ್‌ಗಳ ಪ್ರಕಾರ, Xiaomi 17 ಜನವರಿ 2026ರಲ್ಲಿ ಕೆಲವು ಗ್ಲೋಬಲ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಬಹುದು. ಇದು ನಿಜವಾಗಿದ್ದರೆ, ಭಾರತದಲ್ಲಿ ಈ ಫೋನ್ ಜನವರಿ ಅಥವಾ ಫೆಬ್ರವರಿ 2026ರಲ್ಲೇ ಬಿಡುಗಡೆಗೊಳ್ಳುವ ಸಾಧ್ಯತೆಗಳನ್ನು ಟಿಪ್ಸ್ಟರ್‌ಗಳು ಸೂಚಿಸುತ್ತಿದ್ದಾರೆ. ಇದರಿಂದ ಹಿಂದಿನ "ಮಾರ್ಚ್ 2026" ಸಮಯಕ್ಕಿಂತ ಮೊದಲೇ Xiaomi 17 ಫೋನ್ ಭಾರತದಲ್ಲಿ ಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದೆ.
Xiaomi 17: ಭಾರತದಲ್ಲಿ ಬೆಲೆ ಎಷ್ಟಿರಬಹುದು?
ಚೀನಾ ಮಾರುಕಟ್ಟೆಯಲ್ಲಿ Xiaomi 17 ಸೆಪ್ಟೆಂಬರ್ 25ರಂದು ಬಿಡುಗಡೆಯಾಗಿತ್ತು. ಅಲ್ಲಿ ಈ ಮಾದರಿಯು 12GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಆರಂಭಿಕ ಬೆಲೆ CNY 4,499 (ಸುಮಾರು ₹56,000) ಬೆಲೆಯಲ್ಲಿ ಲಭ್ಯವಾಗಿತ್ತು. ಈ ಹಿಂದಿನ ಬಿಡುಗಡೆಗಳನ್ನು ಅಂದಾಜಿಸಿದರೆ, ಭಾರತದಲ್ಲಿ ಈ ಫೋನ್ ಬೆಲೆಗಳು ಮೂಲ ಮಾದರಿಗೆ (12GB/256GB) ಸುಮಾರು ₹56,000 - ₹57,000 ದಿಂದ ಪ್ರಾರಂಭವಾಗಬಹುದು. ಮತ್ತು ಇದರ Pro ಮತ್ತು Pro Max ರೂಪಾಂತರಗಳು ₹63,000 ರಿಂದ ₹80,000+ ಕ್ಕಿಂತ ಹೆಚ್ಚು ಬೆಲೆ ಹೊಂದಿರಬಹುದು.
ಚೀನಾ ಆವೃತ್ತಿಯ ಪ್ರಮುಖ ಸ್ಪೆಸಿಫಿಕೇಶನ್‌ಗಳು
ಚೀನಾದಲ್ಲಿ ಬಿಡುಗಡೆಯಾಗಿರುವ Xiaomi 17 ಫೋನ್ ಈ ಕೆಳಗಿನ ಮುಖ್ಯ ವೈಶಿಷ್ಟ್ಯಗಳನ್ನು ಹೊಂದಿದೆ.
6.3-ಇಂಚಿನ 1.5K OLED ಡಿಸ್‌ಪ್ಲೇ
120Hz ರಿಫ್ರೆಶ್ ರೇಟ್, 300Hz ಟಚ್ ಸ್ಯಾಂಪ್ಲಿಂಗ್ ರೇಟ್, 3,500 ನಿಟ್ಸ್ ಪೀಕ್ ಬ್ರೈಟ್ನೆಸ್
LPDDR5x RAM ಗರಿಷ್ಠ 16GB ತನಕ
UFS 4.1 ಸ್ಟೋರೇಜ್ ಗರಿಷ್ಠ 1TB ತನಕ
50MP ಮುಖ್ಯ, 50MP ಟೆಲಿಫೋಟೋ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ ಸೆಟ್‌ಅಪ್


Click it and Unblock the Notifications








