Home
ಮೊಬೈಲ್

Xiaomi 17 ಮತ್ತು 17 Ultra ಭಾರತದಲ್ಲಿ ಬಿಡುಗಡೆ ದಿನಾಂಕ ಫಿಕ್ಸ್!

ಭಾರತೀಯ ಸ್ಮಾರ್ಟ್‌ಫೋನ್ ಪ್ರಿಯರು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Xiaomi 17 ಸ್ಮಾರ್ಟ್‌ಫೋನ್ ಸರಣಿಯು ಬಿಡುಗಡೆಯಾಗುವ ಅಧಿಕೃತ ದಿನಾಂಕ ಹೊರಬಿದ್ದಿದೆ. ಕಳೆದ ಫೆಬ್ರವರಿ ಅಂತ್ಯದಲ್ಲಿ ಜಾಗತಿಕವಾಗಿ ಅನಾವರಣಗೊಂಡ Xiaomi 17 ಸರಣಿಯು ಭಾರತದಲ್ಲಿ ಇದೇ ಮಾರ್ಚ್ ತಿಂಗಳಿನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿವೆ ಎಂದು ಕಂಪೆನಿ ತಿಳಿಸಿದೆ. ಈ ಸರಣಿಯಲ್ಲಿ Xiaomi 17 Ultra, Xiaomi 17 ಮತ್ತು Xiaomi Pad 8 ಮೂರು ಸಾಧನಗಳು ಬಿಡುಗಡೆಯಾವುದು ಖಚಿತವಾಗಿದ್ದು, ಇವುಗಳಲ್ಲಿ Xiaomi 17 Ultra ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳನ್ನು ಸಹ ಬಹಿರಂಗಪಡಿಸಲಾಗಿದೆ. ಹಾಗಾದರೆ, ಭಾರತಕ್ಕೆ ಆಗಮನಿಸುತ್ತಿರುವ Xiaomi 17 Ultra ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು ಹೇಗಿರಲಿದೆ ಮತ್ತು ಬೆಲೆ ಎಷ್ಟಿರಬಹುದು ಎಂಬುದನ್ನು ನೋಡೋಣ ಬನ್ನಿ.

ಮಾರ್ಚ್ 11ರಂದು ಭಾರತದಲ್ಲಿ ಲಾಂಚ್
Xiaomi ತನ್ನ ಅಧಿಕೃತ ಘೋಷಣೆಯಲ್ಲಿ, ಭಾರತೀಯ ಗ್ರಾಹಕರಿಗೆ ಇದೇ ಮಾರ್ಚ್ 11ರಂದು Xiaomi 17 ಮತ್ತು Xiaomi 17 Ultra ಸ್ಮಾರ್ಟ್‌ಫೋನ್‌ಗಳನ್ನು ಹಾಗೂ Xiaomi Pad 8 ಸಾಧನವನ್ನು ಪರಿಚಯಿಸುವುದಾಗಿ ತಿಳಿಸಿದೆ. ಬಿಡುಗಡೆ ನಂತರ Amazon ಮತ್ತು Xiaomi India ಆನ್‌ಲೈನ್ ಸ್ಟೋರ್‌ ಗಳಲ್ಲಿ ಫೋನ್‌ಗಳು ಲಭ್ಯವಾಗುತ್ತವೆ. ಈಗ, Xiaomi 17 Ultra ಗಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ನವೀಕರಿಸಲಾಗಿದ್ದು, ಇದು ಫೋನಿನ ವಿವಿಧ ವಿವರಗಳನ್ನು ಬಹಿರಂಗಪಡಿಸಿದೆ. ಜಾಗತಿಕ ಲಾಂಚ್ ನಂತರ ಅಲ್ಪಾವಧಿಯಲ್ಲೇ ಭಾರತಕ್ಕೆ ತರುವ ಮೂಲಕ, ಕಂಪನಿ ಭಾರತೀಯ ಮಾರುಕಟ್ಟೆಗೆ ನೀಡುತ್ತಿರುವ ಮಹತ್ವ ಸ್ಪಷ್ಟವಾಗಿದೆ.

ಭಾರತದಲ್ಲಿ Xiaomi 17 Ultra : ಪ್ರಮುಖ ವೈಶಿಷ್ಟ್ಯಗಳು
Xiaomi 17 Ultra ಬಹುತೇಕ ಜಾಗತಿಕ ಪ್ರತಿರೂಪಕ್ಕೆ ಹೋಲುತ್ತದೆ. ಈ ಫೋನ್ 3nm ಪ್ರಕ್ರಿಯೆಯಲ್ಲಿ ನಿರ್ಮಿಸಲಾದ ಕ್ವಾಲ್ಕಾಮ್‌ನ Snapdragon 8 Elite Gen 5 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಎಂದು ದೃಢಪಡಿಸಲಾಗಿದೆ.ಹೆಚ್ಚುವರಿಯಾಗಿ, ಫೋನ್ UPFS 4.1 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾದ LPDDR5x RAM ಅನ್ನು ಹೊಂದಿರುತ್ತದೆ. ಇನ್ನು ಈ ಸರಣಿಯ ಸಾಧನಗಳು Android 16 ಆಧಾರಿತ HyperOS 3 ಮೇಲೆ ಕಾರ್ಯನಿರ್ವಹಿಸಲಿವೆ.

Xiaomi 17 ಮತ್ತು 17 Ultra ಭಾರತದಲ್ಲಿ ಬಿಡುಗಡೆ ದಿನಾಂಕ ಫಿಕ್ಸ್!

6,000mAh ಬ್ಯಾಟರಿ + 90W ಫಾಸ್ಟ್ ಚಾರ್ಜಿಂಗ್
ಭಾರತೀಯ ಬಳಕೆದಾರರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು Xiaomi 17 Ultra ದಲ್ಲಿ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ನೀಡಲಾಗಿದೆ. ಇದಕ್ಕೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವೂ ಇದೆ. ಕಂಪನಿಯ ಪ್ರಕಾರ, ಈ ಫೋನ್ ಒಂದೇ ಚಾರ್ಜ್‌ನಲ್ಲಿ 1.5 ದಿನಗಳವರೆಗೆ ಬಳಕೆಯನ್ನು ಒದಗಿಸುತ್ತದೆ ಮತ್ತು 1,600 ಚಾರ್ಜಿಂಗ್ ಸೈಕಲ್‌ಗಳ ನಂತರ ಅದರ ಮೂಲ ಬ್ಯಾಟರಿ ಸಾಮರ್ಥ್ಯದ ಸುಮಾರು 80 ಪ್ರತಿಶತವನ್ನು ಉಳಿಸಿಕೊಳ್ಳುತ್ತದೆ.

ಜಾಗತಿಕ ಬೆಲೆ - ಭಾರತದಲ್ಲಿ ಎಷ್ಟು ನಿರೀಕ್ಷೆ?
ಭಾರತದಲ್ಲಿ ಮುಂಬರುವ Xiaomi 17 ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಜಾಗತಿಕ ಮಾರುಕಟ್ಟೆಯಲ್ಲಿ Xiaomi 17 ಫೋನ್‌ನ ಪ್ರಾರಂಭಿಕ ಬೆಲೆ EUR 999 ರಿಂದ (ಸರಿಸುಮಾರು ರೂ. 1,07,449) ಆರಂಭವಾಗುತ್ತದೆ. ಇನ್ನು Xiaomi 17 Ultra ಉನ್ನತ ಮಾದರಿ EUR 1,499 ದರ (ಸರಿಸುಮಾರು ರೂ. 1,61,264) ಹೊಂದಿದೆ. Xiaomi Pad 8 ಟ್ಯಾಬ್ಲೆಟ್ EUR 449.9 (ಸರಿಸುಮಾರು ರೂ. 48,397) ದಲ್ಲಿ ಲಭ್ಯವಾಗಿದೆ. ಆದರೆ, ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆ ನಿಗದಿಯಾಗುವ ಸಾಧ್ಯತೆ ಇದ್ದು, ಅಧಿಕೃತ ಘೋಷಣೆಗಾಗಿ ಕಾಯಬೇಕಿದೆ.

ಒಟ್ಟಾರೆಯಾಗಿ, ಪ್ರೀಮಿಯಂ ಸ್ಮಾರ್ಟ್‌ಫೋನ್ ಹುಡುಕುತ್ತಿರುವ ಗೇಮರ್‌ಗಳು, ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಹೆಚ್ಚು ಬ್ಯಾಟರಿ ಬ್ಯಾಕಪ್ ಬೇಕಿರುವ ಬಳಕೆದಾರರಿಗೆ ಈ ಸರಣಿ ಆಕರ್ಷಕ ಆಯ್ಕೆಯಾಗಬಹುದು. ದೊಡ್ಡ ಬ್ಯಾಟರಿ, ಶಕ್ತಿಶಾಲಿ ಪ್ರೊಸೆಸರ್ ಮತ್ತು ವೇಗದ ಸ್ಟೋರೇಜ್ ವ್ಯವಸ್ಥೆ ಇದನ್ನು ಹೈ-ಎಂಡ್ ಸೆಗ್ಮೆಂಟ್‌ನಲ್ಲಿ ಬಲಿಷ್ಠ ಸ್ಪರ್ಧಿಯಾಗಿ ಮಾಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ವಿಭಾಗದಲ್ಲಿ ತೀವ್ರ ಸ್ಪರ್ಧೆ ನಡೆಯುತ್ತಿರುವ ಸಮಯದಲ್ಲಿ ಈ ಹೊಸ ಲಾಂಚ್ ಮಹತ್ವದ್ದಾಗಿದೆ. ಮಾರ್ಚ್ 11ರಂದು ಅಧಿಕೃತ ಲಾಂಚ್ ನಂತರ ಬೆಲೆ ಮತ್ತು ಆಫರ್ ವಿವರಗಳು ಸ್ಪಷ್ಟವಾಗಲಿವೆ.

Best Mobiles in India

English summary
Xiaomi 17 Ultra India Launch Confirmed for March 11: Features and Expected Price Revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+