ಭಾರತದಲ್ಲಿ Xiaomi 17, Xiaomi 17 Ultra ಬೆಲೆ ಎಷ್ಟಿರಬಹುದು?..ಇಲ್ಲಿ ನೋಡಿ!
ಭಾರತೀಯರ ನೆಚ್ಚಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾದ Xiaomi ಕಂಪೆನಿಯ ಇತ್ತೀಚೆಗಷ್ಟೇ ತನ್ನ ಹೊಸ ಫ್ಲ್ಯಾಗ್‌ಶಿಪ್ Xiaomi 17 ಸ್ಮಾರ್ಟ್‌ಫೋನ್ ಸರಣಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು ಈಗ ಇದೇ ಸರಣಿ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಕಂಪನಿ ಮಾರ್ಚ್ 11ರಂದು ಲಾಂಚ್ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಬಿಡುಗಡೆ ನಂತರ ಳು ಮತ್ತು ಮೂಲಕ ಖರೀದಿಗೆ ಲಭ್ಯವಾಗಲಿವೆ. ಈಗಾಗಲೇ Amazon ಮತ್ತು mi.com ಎರಡು ವೇದಿಕೆಗಳಲ್ಲಿ ಫೋನ್‌ಗಳಿಗೆ ಸಂಬಂಧಿಸಿದ ವಿಶೇಷ ಮೈಕ್ರೋಸೈಟ್‌ಗಳು ಲೈವ್ ಆಗಿದ್ದು, ಬಳಕೆದಾರರ ಕುತೂಹಲ ಹೆಚ್ಚಿಸಿದೆ.
ಭಾರತದಲ್ಲಿ ಬಿಡುಗಡೆಯಿಗೆ ಇನ್ನೂ ಕೆಲವು ದಿನಗಳು ಬಾಕಿಯಿರುವಾಗಲೇ Xiaomi 17 ಮತ್ತು Xiaomi 17 Ultra ಸ್ಮಾರ್ಟ್‌ಫೋನ್‌ಗಳ ಸಾಧ್ಯವಿರುವ ಬೆಲೆ ವಿವರಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗವೆ. ಜನಪ್ರಿಯ ಟೆಕ್ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರು ತಮ್ಮ ಮೂಲಗಳಿಂದ ಪಡೆದ ಮಾಹಿತಿಯ ಆಧಾರದಲ್ಲಿ ಹೇಳುವಂತೆ, Xiaomi 17 ಭಾರತದಲ್ಲಿ ಸುಮಾರು ₹1,00,000 ಬೆಲೆಯಲ್ಲ ಬಿಡುಗಡೆಯಾಗುವ ಸಾಧ್ಯತೆ ಇದೆ. ಅದೇ ವೇಳೆ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿರುವ Xiaomi 17 Ultra ಸ್ಮಾರ್ಟ್‌ಫೋನ್ ಬೆಲೆ ಸುಮಾರು ₹1,40,000 ಇರಬಹುದು ಎಂದು ಹೇಳಲಾಗಿದೆ.!
ಇದಕ್ಕೂ ಮೊದಲು ಇದೇ ಟಿಪ್‌ಸ್ಟರ್ ಹೇಳಿದಂತೆ, ಸಾಮಾನ್ಯ ಮಾದರಿಯಾದ Xiaomi 17 ಫೋನ್ ₹80,000 ದರದಿಂದ ಆರಂಭವಾಗಬಹುದು ಮತ್ತು Xiaomi 17 Ultra ಸುಮಾರು ₹1,25,000 ದರದಲ್ಲಿ ಬಿಡುಗಡೆಯಾಗಬಹುದು ಎಂದು ತಿಳಿಸಲಾಗಿತ್ತು. ಆದರೆ ಇತ್ತೀಚಿನ ಮಾಹಿತಿ ಪ್ರಕಾರ, ಈ ಫೋನ್‌ಗಳ ಬೆಲೆ ಮೊದಲು ಅಂದಾಜಿಸಿದ್ದಕ್ಕಿಂತ ಹೆಚ್ಚು ಇರಬಹುದೆಂಬ ಸೂಚನೆಗಳು ದೊರಕುತ್ತಿವೆ. ಆದಾಗ್ಯೂ, ಕಂಪನಿಯಿಂದ ಇನ್ನೂ ಅಧಿಕೃತ ದೃಢೀಕರಣ ಹೊರಬಂದಿಲ್ಲ. ಆದ್ದರಿಂದ ಈ ಮಾಹಿತಿಯನ್ನು ತಾತ್ಕಾಲಿಕವಾಗಿ ಪರಿಗಣಿಸಿ, ಅಂತಿಮ ಬೆಲೆ ವಿವರಗಳಿಗಾಗಿ ಮಾರ್ಚ್ 11ರ ಅಧಿಕೃತ ಘೋಷಣೆಯನ್ನು ಕಾಯಬೇಕಾಗಿದೆ.

ಮಾರ್ಚ್ 11ರಂದು Xiaomi 17 ಮತ್ತು Xiaomi 17 Ultra ಸ್ಮಾರ್ಟ್‌ಫೋನ್‌ಗಳ ಜೊತೆಗೆ ಹೊಸ Xiaomi Pad 8 ಟ್ಯಾಬ್ಲೆಟ್ ಕೂಡ ಬಿಡುಗಡೆಯಾಗುತ್ತಿದೆ. ಕಂಪನಿಯ ಪ್ರಕಾರ, ಇದು 2026ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಅತ್ಯಂತ ಸಣ್ಣ Android ಟ್ಯಾಬ್ಲೆಟ್‌ಗಳಲ್ಲಿ ಒಂದಾಗಿದ್ದು, ಇದರ ದಪ್ಪ ಕೇವಲ 5.75 ಮಿಮೀ ಮಾತ್ರವಾಗಿದೆ. ಮಾರ್ಚ್ 11ರಂದು ನಡೆಯಲಿರುವ ಅಧಿಕೃತ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಎಲ್ಲಾ ಸಾಧನಗಳ ಸಂಪೂರ್ಣ ವಿವರಗಳು ಬಹಿರಂಗವಾಗಲಿವೆ. ಆದರೆ, ಅದಕ್ಕೂ ಮೊದಲು Xiaomi 17 Ultra ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳು ಯಾವುವು ಎಂಬುದನ್ನು ಸಹ ತಿಳಿಸಲಾಗಿದೆ.
ಭಾರತದಲ್ಲಿ Xiaomi 17 Ultra : ಪ್ರಮುಖ ವೈಶಿಷ್ಟ್ಯಗಳು
Xiaomi 17 Ultra ಬಹುತೇಕ ಜಾಗತಿಕ ಪ್ರತಿರೂಪಕ್ಕೆ ಹೋಲುತ್ತದೆ. ಈ ಫೋನ್ 3nm ಪ್ರಕ್ರಿಯೆಯಲ್ಲಿ ನಿರ್ಮಿಸಲಾದ ಕ್ವಾಲ್ಕಾಮ್‌ನ Snapdragon 8 Elite Gen 5 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಎಂದು ದೃಢಪಡಿಸಲಾಗಿದೆ.ಹೆಚ್ಚುವರಿಯಾಗಿ, ಫೋನ್ UPFS 4.1 ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲಾದ LPDDR5x RAM ಅನ್ನು ಹೊಂದಿರುತ್ತದೆ. ಇನ್ನು ಈ ಸರಣಿಯ ಸಾಧನಗಳು Android 16 ಆಧಾರಿತ HyperOS 3 ಮೇಲೆ ಕಾರ್ಯನಿರ್ವಹಿಸಲಿವೆ.
6,000mAh ಬ್ಯಾಟರಿ + 90W ಫಾಸ್ಟ್ ಚಾರ್ಜಿಂಗ್
ಭಾರತೀಯ ಬಳಕೆದಾರರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು Xiaomi 17 Ultra ದಲ್ಲಿ 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ನೀಡಲಾಗಿದೆ. ಇದಕ್ಕೆ 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವೂ ಇದೆ. ಕಂಪನಿಯ ಪ್ರಕಾರ, ಈ ಫೋನ್ ಒಂದೇ ಚಾರ್ಜ್‌ನಲ್ಲಿ 1.5 ದಿನಗಳವರೆಗೆ ಬಳಕೆಯನ್ನು ಒದಗಿಸುತ್ತದೆ ಮತ್ತು 1,600 ಚಾರ್ಜಿಂಗ್ ಸೈಕಲ್‌ಗಳ ನಂತರ ಅದರ ಮೂಲ ಬ್ಯಾಟರಿ ಸಾಮರ್ಥ್ಯದ ಸುಮಾರು 80 ಪ್ರತಿಶತವನ್ನು ಉಳಿಸಿಕೊಳ್ಳುತ್ತದೆ.
ಒಟ್ಟಾರೆಯಾಗಿ, ಪ್ರೀಮಿಯಂ ಸ್ಮಾರ್ಟ್‌ಫೋನ್ ಹುಡುಕುತ್ತಿರುವ ಗೇಮರ್‌ಗಳು, ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಹೆಚ್ಚು ಬ್ಯಾಟರಿ ಬ್ಯಾಕಪ್ ಬೇಕಿರುವ ಬಳಕೆದಾರರಿಗೆ Xiaomi 17 ಸರಣಿ ಆಕರ್ಷಕ ಆಯ್ಕೆಯಾಗಬಹುದು. ದೊಡ್ಡ ಬ್ಯಾಟರಿ, ಶಕ್ತಿಶಾಲಿ ಪ್ರೊಸೆಸರ್ ಮತ್ತು ವೇಗದ ಸ್ಟೋರೇಜ್ ವ್ಯವಸ್ಥೆ ಇದನ್ನು ಹೈ-ಎಂಡ್ ಸೆಗ್ಮೆಂಟ್‌ನಲ್ಲಿ ಬಲಿಷ್ಠ ಸ್ಪರ್ಧಿಯಾಗಿ ಮಾಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ವಿಭಾಗದಲ್ಲಿ ತೀವ್ರ ಸ್ಪರ್ಧೆ ನಡೆಯುತ್ತಿರುವ ಸಮಯದಲ್ಲಿ ಈ ಹೊಸ ಲಾಂಚ್ ಮಹತ್ವದ್ದಾಗಿದೆ. ಮಾರ್ಚ್ 11ರಂದು ಅಧಿಕೃತ ಲಾಂಚ್ ನಂತರ ಬೆಲೆ ಮತ್ತು ಆಫರ್ ವಿವರಗಳು ಸ್ಪಷ್ಟವಾಗಲಿವೆ.


Click it and Unblock the Notifications