ಇಂದು Xiaomi 17 Ultra ಆಗಮನ: ಕ್ಯಾಮೆರಾ ಫ್ಲ್ಯಾಗ್‌ಶಿಪ್ ಎಂದರೆ ಇದು!
ಡಿಸೆಂಬರ್ 25 ರಂದು. ಅಂದರೆ, ಇಂದು ಚೀನಾದಲ್ಲಿ ಶಿಯೋಮಿ ತನ್ನ ಮುಂದಿನ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ Xiaomi 17 Ultra ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುತ್ತಿದೆ. ಇದುವರೆಗೆ ಹಂತ ಹಂತವಾಗಿ ಟೀಸರ್‌ಗಳನ್ನು ಹಂಚಿಕೊಂಡಿದ್ದ ಶಿಯೋಮಿ, ಈಗ Leica Edition ಬ್ರಾಂಡಿಂಗ್ ಮೂಲಕ ಈ ಬಾರಿ Xiaomi 17 Ultra ದಲ್ಲಿ ಕ್ಯಾಮೆರಾ ಅನುಭವವೇ ಪ್ರಮುಖ ಅಸ್ತ್ರ ಎಂಬುದನ್ನು ಸ್ಪಷ್ಟಪಡಿಸಿದೆ. ರಿಟೇಲ್ ಬಾಕ್ಸ್ ಮೇಲೆ ಶಿಯೋಮಿ ಮತ್ತು ಲೈಕಾ ಲೋಗೋಗಳು ಕಾಣಿಸಿಕೊಳ್ಳುತ್ತಿದ್ದು, "Strategic Cooperation Upgrade" ಎಂಬ ಉಲ್ಲೇಖವೂ ಇದೆ. ಇದು ಕೇವಲ ಹೆಸರಿನ ಮಟ್ಟಕ್ಕೆ ಸೀಮಿತವಾಗದೆ, ಇಮೇಜಿಂಗ್ ತಂತ್ರಜ್ಞಾನದಲ್ಲೇ ಆಳವಾದ ಸಹಕಾರವಿದೆ ಎಂಬ ಸಂದೇಶವನ್ನು ನೀಡುತ್ತದೆ. ಈ ಕುರಿತಂತೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
ಕ್ಯಾಮೆರಾ ಮೇಲಿನ ಸಂಪೂರ್ಣ ಗಮನ
Xiaomi 17 Ultra ಅನ್ನು ಶಿಯೋಮಿ ತನ್ನ ಅತ್ಯಂತ ಕ್ಯಾಮೆರಾ-ಕೇಂದ್ರಿತ ಸ್ಮಾರ್ಟ್‌ಫೋನ್ ಎಂದು ಬಿಂಬಿಸುತ್ತಿದೆ. ಇದರ ಪ್ರಮುಖ ಆಕರ್ಷಣೆ ಲೈಕಾ ಟ್ಯೂನ್ ಮಾಡಿದ 200MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ. ಈ ಕ್ಯಾಮೆರಾ 75mm ರಿಂದ 100mm ವರೆಗೆ ನಿರಂತರ ಫೋಕಲ್ ಲೆಂಗ್ತ್ ಅನ್ನು ಬೆಂಬಲಿಸುತ್ತದೆ, ಇದು ಸುಮಾರು 3x ರಿಂದ 4.3x ಆಪ್ಟಿಕಲ್ ಜೂಮ್ ಅನುಭವವನ್ನು ನೀಡುತ್ತದೆ.
ಈ ವ್ಯವಸ್ಥೆಯಲ್ಲಿ 3G + 5P ಡ್ಯುಯಲ್ ಫ್ಲೋಟಿಂಗ್ ಲೆನ್ಸ್ ಡಿಸೈನ್ ಬಳಸಲಾಗಿದ್ದು, ಇದು ವೃತ್ತಿಪರ ಕ್ಯಾಮೆರಾ ಜೂಮ್ ಲೆನ್ಸ್ ತಂತ್ರಜ್ಞಾನಕ್ಕೆ ಹೆಚ್ಚು ಹತ್ತಿರವಾಗಿದೆ. ಜೊತೆಗೆ, ಲೈಕಾದ Apochromatic Optical Certification ಈ ಕ್ಯಾಮೆರಾಗೆ ದೊರೆತಿದ್ದು, ಜೂಮ್ ವೇಳೆ ಬಣ್ಣದ ವಿಕೃತಿ ಕಡಿಮೆಯಾಗಲು ಮತ್ತು ಚಿತ್ರಗಳ ಸ್ಪಷ್ಟತೆ ಉಳಿಯಲು ಸಹಾಯ ಮಾಡುತ್ತದೆ.
ಶಿಯೋಮಿ 75mm, 85mm, 90mm ಮತ್ತು 100mm ಫೋಕಲ್ ಲೆಂಗ್ತ್‌ನಲ್ಲಿ ತೆಗೆದ ಮಾದರಿ ಚಿತ್ರಗಳನ್ನು ಹಂಚಿಕೊಂಡಿದ್ದು, ಸ್ಪರ್ಧಿ ಫ್ಲ್ಯಾಗ್‌ಶಿಪ್ ಫೋನ್‌ಗಳೊಂದಿಗೆ ಹೋಲಿಕೆ ಮಾಡಿದೆ. ಕಂಪನಿಯ ಹೇಳಿಕೆಯಂತೆ, ಈ ಫೋನ್ ಹೆಚ್ಚು ಶಾರ್ಪ್ನೆಸ್, ಸೂಕ್ಷ್ಮ ವಿವರಗಳು ಮತ್ತು ನೈಸರ್ಗಿಕ ಬಣ್ಣಗಳನ್ನು ನೀಡುತ್ತದೆ. ಆದರೆ ನೈಜ ಬಳಕೆಯಲ್ಲಿ ಇದರ ಪ್ರಭಾವ ಎಷ್ಟಿದೆ ಎಂಬುದು ಲಾಂಚ್ ನಂತರ ಸ್ಪಷ್ಟವಾಗಲಿದೆ.

ಒಂದು ಇಂಚಿನ ಸೆನ್ಸರ್ ಮತ್ತು ಪ್ರೀಮಿಯಂ ವಿನ್ಯಾಸ
ಟೆಲಿಫೋಟೋ ಕ್ಯಾಮೆರಾ ಜೊತೆಗೆ, Xiaomi 17 Ultra ಯಲ್ಲಿ ಹೊಸ ಒಂದು ಇಂಚಿನ Omnivision OV50X ಪ್ರೈಮರಿ ಸೆನ್ಸರ್ ಇರಲಿದೆ. ಲೈಕಾ ಟ್ಯೂನಿಂಗ್ ಹೊಂದಿರುವ ಈ ಸೆನ್ಸರ್‌ನಲ್ಲಿ LOFIC ತಂತ್ರಜ್ಞಾನ ಬಳಕೆಯಾಗಿದ್ದು, ಕಡಿಮೆ ಬೆಳಕು ಅಥವಾ ಹೈ-ಕಾಂಟ್ರಾಸ್ಟ್ ಪರಿಸ್ಥಿತಿಗಳಲ್ಲೂ ಉತ್ತಮ ಡೈನಾಮಿಕ್ ರೇಂಜ್ ನೀಡಲು ಸಹಾಯಕವಾಗುತ್ತದೆ.
ವಿನ್ಯಾಸದ ವಿಷಯದಲ್ಲಿ, ಈ ಫೋನ್ Ultra ಸರಣಿಯ ಪರಿಚಿತ ಲುಕ್ ಅನ್ನು ಮುಂದುವರಿಸುತ್ತದೆ. ದೊಡ್ಡ ವೃತ್ತಾಕಾರದ ಕ್ಯಾಮೆರಾ ಐಲ್ಯಾಂಡ್, ಸ್ಪಷ್ಟ ಲೈಕಾ ಬ್ರಾಂಡಿಂಗ್ ಮತ್ತು ಪ್ರೀಮಿಯಂ ಫಿನಿಶ್ ಇದರಲ್ಲಿ ಪ್ರಮುಖ ಅಂಶಗಳು. Xiaomi 17 Ultra Black, White ಮತ್ತು Starry Sky Green ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ.
ಪರ್ಫಾರ್ಮೆನ್ಸ್, ಬ್ಯಾಟರಿ ಮತ್ತು ಸ್ಲಿಮ್ ಬಾಡಿ
ಕ್ಯಾಮೆರಾ ಹೊರತಾಗಿ, ಈ ಫೋನ್ ಹೈಎಂಡ್ ಪರ್ಫಾರ್ಮೆನ್ಸ್ ಮೇಲೆಯೂ ಗಮನ ಹರಿಸಿದೆ. Xiaomi 17 Ultra ಯಲ್ಲಿ ಹೊಸ ತಲೆಮಾರಿನ Snapdragon 8 Elite Gen 5 ಪ್ರೊಸೆಸರ್ ಇರಲಿದೆ. ಜೊತೆಗೆ, 6,800mAh ಬ್ಯಾಟರಿ ನೀಡಲಾಗಿದ್ದು, 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 80W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿದೆ.
ದೊಡ್ಡ ಬ್ಯಾಟರಿ ಮತ್ತು ಭಾರೀ ಕ್ಯಾಮೆರಾ ಸೆಟ್‌ಅಪ್ ಇದ್ದರೂ, Xiaomi 17 Ultra ಕಂಪನಿಯ ಇತಿಹಾಸದಲ್ಲೇ ಅತಿಸ್ಲಿಮ್ Ultra ಫೋನ್ ಆಗಿರಲಿದೆ ಎಂದು ಶಿಯೋಮಿ ಹೇಳಿದೆ. ಇದರ ದಪ್ಪ ಕೇವಲ 8.29mm, ಇದು ಪ್ರೀಮಿಯಂ ವಿನ್ಯಾಸ ಮತ್ತು ಶಕ್ತಿಶಾಲಿ ಹಾರ್ಡ್‌ವೇರ್ ನಡುವಿನ ಉತ್ತಮ ಸಮತೋಲನವನ್ನು ತೋರಿಸುತ್ತದೆ.
ಒಟ್ಟಾರೆಯಾಗಿ, Xiaomi 17 Ultra Leica Edition ಮೂಲಕ ಶಿಯೋಮಿ ಕ್ಯಾಮೆರಾ ಫ್ಲ್ಯಾಗ್‌ಶಿಪ್ ವಿಭಾಗದಲ್ಲಿ ಹೊಸ ಮಾನದಂಡ ಸ್ಥಾಪಿಸಲು ಮುಂದಾಗಿದೆ. ಇಂದು ಫೋನ್ ಲಾಂಚ್ ಆದ ಬಳಿಕ, ಬೆಲೆ ಮತ್ತು ಲಭ್ಯತೆ ಕುರಿತು ಹೆಚ್ಚಿನ ವಿವರಗಳು ಹೊರಬೀಳುತ್ತವೆ.


Click it and Unblock the Notifications








